For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುವ ಅವಶ್ಯಕ ತೈಲಗಳು

|

ಒಂದು ವೇಳೆ ನೀವು ಗರ್ಭವತಿಯಾಗಬಯಸಿದರೆ ಹಾಗೂ ನೀವು ಇಚ್ಛಿಸಿದಷ್ಟು ಬೇಗನೇ ಇದು ಸಾಧ್ಯವಾಗದೇ ಹೋಗುತ್ತಿದ್ದರೆ ನಿಮ್ಮ ಕಾತುರ, ಉದ್ವೇಗಗಳೂ ಸಮಯದೊಂದಿಗೇ ಏರುತ್ತಾ ಹೋಗುತ್ತವೆ. ಪ್ರತಿ ಬಾರಿಯ ಅಸಫಲ ಪ್ರಯತ್ನ ನಿಮ್ಮಲ್ಲಿ ಹತಾಶೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಪರಿಣಾಮವಾಗಿ ನಿಮ್ಮ ದೇಹದ ರಸದೂತಗಳ ಪ್ರಮಾಣವೂ ಏರಿಳಿತಗೊಳ್ಳಬಹುದು ಹಾಗೂ ಇದು ನಿಮ್ಮ ಗರ್ಭವತಿಯಾಗುವ ಸಾಧ್ಯತೆಯನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ.

ಆದರೆ ನಿಮ್ಮ ಸ್ನಾನದ ನೀರಿನಲ್ಲಿ ಕೆಲವು ಅವಶ್ಯಕ ತೈಲಗಳನ್ನು ಬೆರೆಸುವ ಮೂಲಕ ನಿಮ್ಮ ಗರ್ಭವತಿಯಾಗುವ ಸಾದ್ಯತೆ ಹೆಚ್ಚುತ್ತದೆ ಎಂದರೆ ನಿಮಗೆ ನಂಬಲು ಸಾದ್ಯವೇ? ಹೌದು, ವೈಜ್ಞಾನಿಕವಾಗಿ ಈ ವಿಷಯ ಸಾಬೀತಾಗಿದ್ದು ಅವಶ್ಯಕ ತೈಲಗಳಲ್ಲಿರುವ ಶಮನಕಾರಿ ಗುಣ ನಿಮ್ಮ ಶರೀರ ಹಾಗೂ ಮನಸ್ಸುಗಳನ್ನು ನಿರಾಳವಾಗಿಸಿ ಅಸಮತೋಲನಗೊಂಡಿದ್ದ ರಸದೂತಗಳನ್ನು ಸರಿಪಡಿಸುವ ಮೂಲಕ ಸಂತಾನಾಭಿವೃದ್ಧಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನೂ ಉತ್ತಮಗೊಳಿಸುತ್ತದೆ. ಬನ್ನಿ, ಈ ಕ್ಷಮತೆ ಇರುವ ತೈಲಗಳು ಯಾವುವು ಎಂಬುದನ್ನು ನೋಡೋಣ:

ಲ್ಯಾವೆಂಡರ್

ಲ್ಯಾವೆಂಡರ್

ಈ ತೈಲಕ್ಕೆ ಮನಸ್ಸನ್ನು ನಿರಾಳಗೊಳಿಸಿ ಸಂತೈಸುವ ಗುಣವಿದೆ. ವಿಶೇಷವಾಗಿ ಎಂಡೋಕ್ರೈನ್ ಎಂಬ ಗ್ರಂಥಿಗಳ ವ್ಯವಸ್ಥೆಯನ್ನು ಸರಿಪಡಿಸಿ ಮಾಸಿಕ ಸ್ರಾವವನ್ನು ಸುಗಮಗೊಳಿಸುತ್ತದೆ. ಅತಿಯಾದ ಮಾನಸಿಕ ತೊಳಲಾಟದಿಂದ ತಮ್ಮ ಮಾಸಿಕ ದಿನಗಳಲ್ಲಿ ಏರುಪೇರು ಕಾಣುತ್ತಿರುವ ಮಹಿಳೆಯರಿಗೆ ಈ ತೈಲ ಅತ್ಯುತ್ತಮ ಆಯ್ಕೆಯಾಗಿದೆ. PregPrep's conception kitಎಂಬ ಗರ್ಭಾಂಕುರ ಪೂರಕ ವೈದ್ಯಕೀಯ ಉಪಕರಣದಲ್ಲಿ ಹಲವು ಅವಶ್ಯಕ ತೈಲಗಳ ಸಮತೋಲನವಿದೆ. ಇದರಲ್ಲಿ ಲಿಂಬೆ, ಚಕ್ಕೋತ, ಜುನಿಪರ್ (ಶಂಕುಫಲಿ ಸಸ್ಯವರ್ಗಕ್ಕೆ ಸೇರಿದ ನಿತ್ಯ ಹಸುರಿನ ಪೊದೆಗಳ ಜಾತಿ) ಹಾಗೂ ಲ್ಯಾವೆಂಡರ್ ತೈಲಗಳನ್ನು ಬಳಸಲಾಗಿದೆ. ಮಾನಸಿಕ ಒತ್ತಡ ಎದುರಿಸುತ್ತಿರುವ ಮಹಿಳೆಯರು ಖಂಡಿತವಾಗಿಯೂ ಸ್ನಾನದಲ್ಲಿ ಈ ತೈಲಗಳನ್ನು ಬಳಸುವ ಮೂಲಕ ಗರ್ಭಧರಿಸುವ ಕನಸಿಗೆ ಮುನ್ನುಡಿ ಬರೆಯಲು ಸಾಧ್ಯ ಎಂದು ನಾವು ಸಲಹೆ ಮಾಡುತ್ತಿದ್ದೇವೆ.

Most Read: ಗರ್ಭಿಣಿಯರ ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ರೇಖೆ! ಯಾಕೆ ಹೀಗೆ?

ಜೆರಾನಿಯಂ (Geranium)

ಜೆರಾನಿಯಂ (Geranium)

ಇದೊಂದು ಅದ್ಭುತ ಅವಶ್ಯಕ ತೈಲವಾಗಿದ್ದು ರಸದೂತಗಳ ಸಮತೋಲನ ಹಾಗೂ ಮಾಸಿಕ ಸ್ರಾವವನ್ನು ನಿಯಮಿತವಾಗಿಸಲು ನೆರವಾಗುತ್ತದೆ. ಅಲ್ಲದೇ ಮನಸ್ಸಿನ ಭಾವನೆಗಳನ್ನು ನಿಯಂತ್ರಣದಲ್ಲಿರಿಸಲು ಹಾಗೂ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ.

ಗುಲಾಬಿ ಅತ್ತರು (Rose Otto)

ಗುಲಾಬಿ ಅತ್ತರು (Rose Otto)

ಗರ್ಭಾಶಯವನ್ನು ಸಾಂತ್ವಾನಗೊಳಿಸುವ ಗುಣ ಈ ತೈಲಕ್ಕಿದ್ದು ಮಾಸಿಕ ಸ್ರಾವವನ್ನು ನಿಯಮಿತಗೊಳಿಸಲೂ ನೆರವಾಗುತ್ತದೆ. ಅಲ್ಲದೇ ಈ ತೈಲಕ್ಕೆ ಕಾಮೋತ್ತೇಜಕ ಗುಣವಿದ್ದು ಗರ್ಭಕಂಠದ ಸ್ನಾಯುಗಳನ್ನು ಬಿಗಿಗೊಳಿಸುವ ಗುಣವನ್ನೂ ಹೊಂದಿದೆ. ಆದರೆ ಇದರ ಬಳಕೆ ಗರ್ಭ ನಿಂತಿರುವ ಸೂಚನೆ ಸಿಕ್ಕುವವರೆಗೆ ಮಾತ್ರವೇ ಹೊರತು ಒಂದು ಬಾರಿ ಖಚಿತವಾದ ಬಳಿಕ ಇದರ ಬಳಕೆಯನ್ನು ನಿಲ್ಲಿಸಬೇಕು.

ಅಕಿಲಿ ಕುಲ ತೈಲ (Yarrow)

ಅಕಿಲಿ ಕುಲ ತೈಲ (Yarrow)

ಒಂದು ವೇಳೆ ಗರ್ಭಾಶಯದ ತಳಭಾಗದ ಸ್ನಾಯುಗಳು ತೀರಾ ಇಕ್ಕಟ್ಟಾಗಿದ್ದು ಕಿರಿದಾಗಿರುವ ಗರ್ಭನಾಳ ಗರ್ಭಾಂಕುರಕ್ಕೆ ತಡೆಯೊಡ್ಡುತ್ತಿದ್ದರೆ ಈ ಅವಶ್ಯಕ ತೈಲ ನೆರವಿಗೆ ಬರುತ್ತದೆ. ಈ ಭಾಗದ ಸ್ನಾಯುಗಳನ್ನು ನಿರಾಳಗೊಳಿಸಿ ಗರ್ಭನಾಳವನ್ನು ಹಿಗ್ಗಿಸುವುದು ಮಾತ್ರವಲ್ಲ, ಇಲ್ಲಿ ಎದುರಾಗಬಹುದಾಗಿದ್ದ ಸೋಂಕಿನಿಂದಲೂ ರಕ್ಷಣೆ ನೀಡುತ್ತದೆ. ಅಲ್ಲದೇ ಜೀರ್ಣವ್ಯವಸ್ಥೆ ಹಾಗೂ ಮೂತ್ರವ್ಯವಸ್ಥೆ ಸರಾಗವಾಗಿ ನಿರ್ವಹಿಸಲು ನೆರವು ನೀಡುತ್ತದೆ.

Most Read: ಬುದ್ಧಿವಂತ ಮಗು ಹುಟ್ಟಬೇಕೆ? ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರಗಳ ಡಯಟ್ ಹೀಗಿರಲಿ

ಕ್ಲಾರಿ ಸೇಜ್ (Clary Sage)

ಕ್ಲಾರಿ ಸೇಜ್ (Clary Sage)

ಈ ತೈಲ ದೇಹದಲ್ಲಿ ಈಸ್ಟ್ರೋಜೆನ್ ಎಂಬ ರಸದೂತದ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ ಹಾಗೂ ಈ ಮೂಲಕ ದೇಹದ ಎಲ್ಲಾ ರಸದೂತಗಳು ಸಮತೋಲನದಲ್ಲಿರಲು ನೆರವಾಗುತ್ತದೆ. ಪರಿಣಾಮವಾಗಿ ಲೈಂಗಿಕ ಆಸಕ್ತಿ ಅದ್ಭುತವಾಗಿ ಹೆಚ್ಚುತ್ತದೆ! ತನ್ಮೂಲಕ ಗರ್ಭಾಂಕುರಗೊಳ್ಳಲು ನಡೆಸುವ ಪ್ರಯತ್ನಗಳನ್ನು ಹೆಚ್ಚಿಸುವ ಮೂಲಕ ಸಾಧ್ಯತೆಯನ್ನೂ ದಟ್ಟಗೊಳಿಸುತ್ತದೆ. ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಲ್ಲಿಯೂ ಈ ತೈಲ ರಸದೂತಗಳ ಸಮತೋಲನವನ್ನು ಕಾಪಾಡುವ ಮೂಲಕ ನಪುಂಸಕತ್ವವನ್ನು ಹೋಗಲಾಡಿಸಲು ನೆರವಾಗುತ್ತದೆ.

ದೊಡ್ಡ ಜೀರಿಗೆ (Fennel)

ದೊಡ್ಡ ಜೀರಿಗೆ (Fennel)

ಭಾರತದಲ್ಲಿ ಮಹಿಳೆಯರಿಗೆ ಗರ್ಭಾಂಕುರದ ಸಾಧ್ಯತೆ ಹೆಚ್ಚಿಸಲು ಈ ತೈಲವನ್ನು ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಿದೆ. ವಿಶೇಷವಾಗಿ ನೋವಿನಿಂದ ಕೂಡಿರುವ ಮಾಸಿಕ ಸ್ರಾವ ಹಾಗೂ ಕ್ರಮಬದ್ದವಲ್ಲದ ಮಾಸಿಕ ದಿನಗಳ ತೊಂದರೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಈ ತೈಲ ಅತ್ಯುತ್ತಮವಾಗಿದೆ.

ಹಾಗಾಗಿ, ಮುಂದಿನ ಬಾರಿ ನೀವು ಸ್ನಾನಕ್ಕೆ ಹೊರಟಾಗ, ನಿಮ್ಮ ಸ್ನಾನದ ತೊಟ್ಟಿಯ ನೀರು ಆಹ್ಲಾದಕರವಾದಷ್ಟು ಬೆಚ್ಚಗಿದ್ದು ಇದರಲ್ಲಿ ನಿಮಗೆ ಸೂಕ್ತವಾದ ಅವಶ್ಯಕ ತೈಲವನ್ನು ಬೆರೆಸಲು ಮರೆಯದಿರಿ. ಈ ಮೂಲಕ ನಿಮ್ಮ ಗರ್ಭಧಾರಣೆಯ ಸಾಧ್ಯತೆ ಅಪಾರವಾಗಿ ಹೆಚ್ಚುವುದು ಖಚಿತ.

English summary

Essential Oils to Improve Your Chances of Getting Pregnant

When you are trying to conceive –and it is not happening as quickly as you hoped – you can become increasingly anxious, frustrated, and stressed. This can impede your hormonal balance, making it harder to become pregnant. But what if we told you that adding oils to your bath could improve your chances of getting pregnant? Essential oils have been shown to have a calming, yet revitalizing influence that may improve the functioning of the reproductive system.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more