For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದುಗಳು...

By Sushma Charhra
|

ಸ್ಟ್ರೆಚ್ ಮಾರ್ಕ್ ಗಳು ಬಹಳ ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಸ್ಟ್ರೆಚ್ ಮಾರ್ಕ್ ಗಳು ಕಾಣಿಸಿಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ. ಇದು ಅನಿರೀಕ್ಷಿತವಾಗಿ ಹೆಚ್ಚಾಗುವ ನಿಮ್ಮ ದೇಹ ತೂಕದ ಕಾರಣದಿಂದಲೂ ಇರಬಹುದು ಅಥವಾ ಅತಿಯಾದ ಒತ್ತಡದ ಪರಿಣಾಮದಿಂದಲೂ ಇರಬಹುದು, ವಂಶಪಾರಂಪಾರಿಕ ಕಾರಣಗಳಿರಬಹುದು ಇತ್ಯಾದಿ. ಆದರೆ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ ಗಳು ಹೆಚ್ಚಿನ ಮಹಿಳೆಯರ ನಿದ್ದೆ ಕೆಡಿಸಿರಬಹುದು.. ಅಲ್ಲವೇ?

ಸ್ಟ್ರೆಚ್ ಮಾರ್ಕ್ ಗಳು ದೇಹತೂಕದಲ್ಲಿ ಆಗುವ ಅನಿರೀಕ್ಷಿತ ಬದಲಾವಣೆಯಿಂದ ಕಾಣಿಸಿಕೊಳ್ಳುವ ಸಾಧ್ಯತೆಗಳು ಗರ್ಭಿಣಿಯರಲ್ಲಿ ಅಧಿಕವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ, ಮಗುವು ಬೆಳವಣಿಗೆ ಹೊಂದುವುದರಿಂದಾಗಿ,ಚರ್ಮವು ತನ್ನ ತಾಕತ್ತಿಗಿಂತ ಹೆಚ್ಚಾಗಿ ಹಿಗ್ಗುತ್ತಾ ಸಾಗುವುದರಿಂದಾಗಿ ಸ್ಟ್ರೆಚ್ ಮಾರ್ಕ್ ಗಳು ಪ್ರತ್ಯಕ್ಷವಾಗುತ್ತದೆ.

pregnancy stretch marks in kannada

ಪ್ರಾರಂಭದಲ್ಲಿ ಸ್ಟ್ರೆಚ್ ಮಾರ್ಕ್ ಗಳು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ಅದು ಬೆಳ್ಳಿಯ ಬಣ್ಣಕ್ಕೆ ತಿರುಗುತ್ತದೆ. ಇಂದಿನ ದಿನಗಳಲ್ಲಿ, ಅನೇಕ ರಾಸಾಯನಿಕ ಚಿಕಿತ್ಸೆಗಳು ಲಭ್ಯವಿದ್ದು, ಅವು ನಿಮ್ಮ ಸ್ಟ್ರೆಚ್ ಮಾರ್ಕ್ ಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ ಲೇಸರ್ ಚಿಕಿತ್ಸೆ, ವಸ್ಕ್ಯುಲರ್ ಲೇಸರ್ ಚಿಕಿತ್ಸೆ ಇತ್ಯಾದಿ. ಆದರೆ ಇದರಿಂದ ತನ್ನದೇ ಆದ ಕೆಲವು ಅಡ್ಡಪರಿಣಾಮಗಳೂ ಕೂಡ ಆಗಬಹುದು. ಹಾಗಾಗಿ ಆದಷ್ಟು ನೈಸರ್ಗಿಕ ಚಿಕಿತ್ಸೆಗಳ ಮೊರೆ ಹೋದರೆ ಗರ್ಭಿಣಿಯರ ಸ್ಟ್ರೆಚ್ ಮಾರ್ಕ್ ನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಿದೆ. ಅದು ಸೇಫ್ ಕೂಡ ಹೌದು.

ಹಾಗಾದ್ರೆ ಸ್ಟ್ರೆಚ್ ಮಾರ್ಕ್ ಗಳ ನಿವಾರಣೆಗೆ ಮನೆಯಲ್ಲೇ ಮಾಡಬಹುದಾದ ಚಿಕಿತ್ಸೆಗಳು ಯಾವುದು ಇಲ್ಲಿದೆ ನೋಡಿ ಸಂಪೂರ್ಣ ವಿವರ .. ಮುಂದೆ ಓದಿ..

ಕೋಕೋ ಬಟರ್

ಕೋಕೋ ಬಟರ್ ನಿಮ್ಮ ಚರ್ಮವನ್ನು ಪುನರ್ ಭರ್ತಿ ಗೊಳಿಸಲು ನೆರವಾಗುತ್ತದೆ. ಯಾಕೆಂದರೆ ಇದರಲ್ಲಿ ಸ್ಯಾಚುರೇಟೆಡ್ ಮತ್ತು ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಗಳನ್ನು ಇವು ಒಳಗೊಂಡಿರುತ್ತದೆ. ವಿಟಮಿನ್ ಎ ಮತ್ತು ಇ ಗಳು ಕೂಡ ಕೋಕೋ ಬಟರ್ ನಲ್ಲಿ ಇರುತ್ತದೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ.. ನಿಮಗೆ ಸ್ಟ್ರೆಚ್ ಮಾರ್ಕ್ ಗಳು ಕಾಣಿಸಿಕೊಂಡಿರುವ ಜಾಗದಲ್ಲಿ ಕೋಕೋ ಬಟರ್ ನಿಂದ ಮಸಾಜ್ ಮಾಡಿಕೊಳ್ಳಿ. ದಿನಕ್ಕೆ ಎರಡು ಬಾರಿ ಇದನ್ನು ಅಪ್ಲೈ ಮಾಡಿದರೆ ವೇಗವಾದ ಮತ್ತು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.

ಅಲವೀರಾ

ಅಲವೀರಾ ಕೂಡ ಚರ್ಮದಲ್ಲಿ ಅಧ್ಬುತವಾಗಿ ಕೆಲಸ ಮಾಡುತ್ತದೆ..ಅಲವೀರಾದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಸ್ಟ್ರೆಚ್ ಮಾರ್ಕ್ ಗಳನ್ನು ಗುಣಪಡಿಸುವಲ್ಲಿ ವೇಗವಾಗಿ ಕಾರ್ಯಪ್ರವೃತ್ತವಾಗುತ್ತದೆ. ನಿಧಾನವಾಗಿ ತಾಜಾ ಅಲವೀರಾ ಜೆಲ್ ಬಳಸಿ 15 ನಿಮಿಷ ನಿಮ್ಮ ಸ್ಟ್ರೆಚ್ ಮಾರ್ಕ್ ಗಳ ಮೇಲೆ ಮಸಾಜ್ ಮಾಡಿ. 15 ನಿಮಿಷದ ನಂತರ ಹದವಾಗಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ...ನೀವು ಇನ್ನೊಂದು ವಿಧಾನವನ್ನೂ ಕೂಡ ಟ್ರೈ ಮಾಡಿ ನೋಡಬಹುದು. ಒಂದು ಬೌಲ್ ನಲ್ಲಿ ತಾಜಾ ಅಲವೀರಾ ಜೆಲ್ ತೆಗೆದುಕೊಳ್ಳ. ಅದಕ್ಕೆ ಎಣ್ಣೆ ಮತ್ತು ವಿಟಮಿನ್ ಇ ಕ್ಯಾಪ್ಸೂಲ್ ಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮಾರ್ಕ್ಸ್ ಗಳ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.. ಅದು ಚರ್ಮವು ಹೀರಿಕೊಳ್ಳುವವರೆಗೆ ಮಸಾಜ್ ಮಾಡುತ್ತಲೇ ಇರಿ. ನಂತರ 15 ನಿಮಿಷ ಹಾಗೇಯೇ ಬಿಡಿ.ಹದವಾಗಿ ಬೆಚ್ಚಗಿರುವ ನೀರಿನಿಂದ ಇದನ್ನು ತೊಳೆಯಿರಿ. ದಿನಕ್ಕೆ ಒಂದು ಅಥವಾ ಎರಡು ಬಾರಿ ಇದನ್ನು ಮಾಡಿ ನೋಡಿ ಮತ್ತು ಉತ್ತಮ ಫಲಿತಾಂಶವನ್ನು ಪಡೆಯಿರಿ.

. ಬ್ರಷ್ಶಿಂಗ್

ಗರ್ಭಿಣಿಯರಲ್ಲಿ ಡ್ರೈ ಬ್ರಶ್ಶಿಂಗ್ ಮಾಡುವುದು ಸ್ಟ್ರೆಚ್ ಮಾರ್ಕ್ ಗಳಿಂದ ಮುಕ್ತಿ ಪಡೆಯುವ ಮತ್ತೊಂದು ವಿಧಾನವಾಗಿದೆ. ಹೀಗೆ ಮಾಡುವುದರಿಂದಾಗಿ ರಕ್ತ ಸಂಚಾರ ಹೆಚ್ಚಳವಾಗುತ್ತೆ ಮತ್ತು ಅದು ಸಹಜವಾಗಿ ನಿಮ್ಮ ಚರ್ಮದ ಸತ್ತ ಜೀವಕೋಶಗಳ ನಿವಾರಣೆಗೆ ಸಹಕಾರಿಯಾಗಿರುತ್ತೆ ಜೊತೆಗೆ ಸ್ಟ್ರೆಚ್ ಮಾರ್ಕ್ ಗಳ ನಿವಾರಣೆಯೂ ಸಾಧ್ಯವಾಗುತ್ತೆ.

ನೀವು ಮಾಡಬೇಕಾಗಿರುವುದು ಇಷ್ಟೇ, ನೀವೊಂದು ಡ್ರೈ ಬ್ರಷ್ ತೆಗದುಕೊಳ್ಳಿ ಮತ್ತು ನಿಧಾವಾಗಿ ವೃತ್ತಾಕಾರದಲ್ಲಿ ನಿಮ್ಮ ಸ್ಟ್ರೆಚ್ ಗಳ ಮೇಲೆ ಸ್ಕ್ರಬ್ ಮಾಡಿ..ಸುಮಾರು 5 ನಿಮಿಷ ಹೀಗೆ ಮಾಡುತ್ತಲೇ ಇರಿ. ನಂತ್ರ ಸ್ನಾನ ಮಾಡಿ, ಎಫೆಕ್ಟ್ ಆಗಿರುವ ಜಾಗಕ್ಕೆ ಮಾಯ್ಚರೈಸರ್ ನ್ನು ಅಪ್ಲೈ ಮಾಡಿ. ನೀವು ಈ ಕೆಲಸವನ್ನು ಪ್ರತಿ ದಿನ ಸ್ನಾನಕ್ಕೂ ಮುನ್ನ ಪ್ರಯತ್ನಿಸಬಹುದು.

. ಹರಳೆಣ್ಣೆ

ಹರಳೆಣ್ಣೆಯು ನಿಮ್ಮ ಸ್ಟ್ರೆಚ್ ಮಾರ್ಕ್ ಗಳನ್ನು ಬೇಗನೆ ಗುಣಪಡಿಸುವ ಮತ್ತು ಪರಿಣಾಮಕಾರಿಯಾಗಿ ನಿವಾರಿಸುವ ತಾಕತ್ತನ್ನು ಹೊಂದಿದೆ. ಸ್ವಲ್ಪ ಹರಳೆಣ್ಣೆಯನ್ನು ಬಿಸಿ ಮಾಡಿ ಮತ್ತು ನಿಮ್ಮ ಸ್ಟ್ರೆಚ್ ಮಾರ್ಕ್ ನ ಮೇಲೆ ಅಪ್ಲೈ ಮಾಡಿ. ಇದನ್ನು 20 ನಿಮಿಷ ಹಾಗೆಯೇ ಬಿಡಿ ನಂತರ ಹದವಾಗಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ನೀವು ಮಲಗಲು ತೆರಳುವ ಮುನ್ನ ಪ್ರತಿದಿನ ಹೀಗೆ ಮಾಡಿದರೆ ಉತ್ತಮವಾದ, ವೇಗವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಿದೆ.

. ಬಾದಾಮಿ ಎಣ್ಣೆ

ವಿಟಮಿನ್ ಇ ಅಂಶವು ಬಾದಾಮಿ ಎಣ್ಣೆಯಲ್ಲಿದ್ದು, ಇದು ನಿಮ್ಮ ಚರ್ಮವನ್ನು ಅಂದಗಾಣಿಸಿ, ಚರ್ಮವನ್ನು ಹೊಳೆಯುವಂತೆ ಮಾಡಲು ನೆರವಾಗುತ್ತದೆ. ಇದು ನಿಮ್ಮ ಸ್ಟ್ರೆಚ್ ಮಾರ್ಕ್ ಗಳನ್ನು ತಿಳಿಗೊಳಿಸಲು ಮಾತ್ರವಲ್ಲ, ನಿಮ್ಮ ಸ್ಕಿನ್ ಟೋನ್ ನ್ನು ಹೆಚ್ಚಿಸಲು ಕೂಡ ನೆರವಿಗೆ ಬರುತ್ತದೆ.. ನಿಮ್ಮ ಇಷ್ಟದ ಎಸೆನ್ಶಿಯಲ್ ಎಣ್ಣೆಯೊಂದಿಗೆ ಬಾದಾಮಿ ಎಣ್ಣೆಯನ್ನು ಮಿಶ್ರಣಗೊಳಿಸಿ ಮತ್ತು ಅದನ್ನು ಎಫೆಕ್ಟ್ ಆದ ಜಾಗದಲ್ಲಿ ಅಪ್ಲೈ ಮಾಡಿ ಸುಮಾರು 5-10 ನಿಮಿಷ ಮಸಾಜ್ ಮಾಡಿ. ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ವಾಷ್ ಮಾಡಿ. ಪ್ರತಿದಿನ ಎರಡು ಬಾರಿ ನೀವು ಈ ರೆಮಿಡಿಯನ್ನು ಬಳಕೆ ಮಾಡಬಹುದು.

. ಆಲಿವ್ ಆಯಿಲ್

ಆಲಿವ್ ಆಯಿಲ್ ಹೆಚ್ಚಿನ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಪರಿಣಾಮಕಾರಿಯಾಗಿ ವರ್ತಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್, ನ್ಯೂಟ್ರಿಯಂಟ್ಸ್ ಮತ್ತು ವಿಟಮಿನ್ ಗಳು ಇದೆ. ಆಲಿವ್ ಎಣ್ಣೆಯನ್ನು ಹದವಾಗಿ ಬೆಚ್ಚಗೆ ಮಾಡಿ ಮತ್ತು ಎಫೆಕ್ಟ್ ಆಗಿರುವ ಜಾಗ್ಕ್ಕೆ ಅಪ್ಲೈ ಮಾಡಿ ಕೆಲವು ಮಸಾಜ್ ಮಾಡಿ. ಇದನ್ನು ನೀವು ತೊಳೆಯುವ ಅಗತ್ಯವಿಲ್ಲ. ದಿನಕ್ಕೆ ಎರಡು ಬಾರಿ ಇದನ್ನು ಬಳಕೆ ಮಾಡುವುದರಿಂದಾಗಿ ಉತ್ತಮವಾದ ಮತ್ತು ವೇಗವಾದ ಫಲಿತಾಂಶವನ್ನು ಪಡೆಯಬಹುದು.

. ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್ ನಲ್ಲಿ ಆಂಟಿ- ಇನ್ಫ್ಲಮೇಟರಿ ಗುಣಗಳಿವೆ. ಈ ಎಣ್ಣೆಯ ಲಾಭಗಳಲ್ಲಿ ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡುವ ಗುಣವೂ ಒಂದಾಗಿದೆ. ಯಾವುದಾದರೂ ಎಸೆನ್ಶಿಯಲ್ ಎಣ್ಣೆಯನ್ನು ಕೊಬ್ಬರಿ ಎಣ್ಣೆ/ಆಲಿವ್ ಆಯಿಲ್ ಜೊತೆಗೆ ಸೇರಿಸಿ ಸ್ಟ್ರೆಚ್ ಮಾರ್ಕ್ ಗಳ ಮೇಲೆ ಮಸಾಜ್ ಮಾಡಿ. ಇದನ್ನು ಚರ್ಮವು ಹೀರಿಕೊಳ್ಳಲು ಹಾಗೆಯೇ ಬಿಟ್ಟು ಬಿಡಿ.

. ಕಾಫಿ ಸ್ಕ್ರಬ್

ಎರಡು ಟೇಬಲ್ ಸ್ಪೂನ್ ಕಾಫಿಯನ್ನು ನೀರಿನ ಜೊತೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ಸ್ಟ್ರೆಚ್ ಮಾರ್ಕ್ ಗಳ ಮೇಲೆ ವೃತ್ತಾಕಾರದಲ್ಲಿ 3-5 ನಿಮಿಷ ಸ್ಕ್ರಬ್ ಮಾಡಿ. . 5 ನಿಮಿಷದ ನಂತರ, ಹದವಾಗಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಇದಾದ ನಂತರ ಯಾವುದಾದರೂ ಮಾಯ್ಚರೈಸರ್ ನ್ನು ಅಪ್ಲೈ ಮಾಡುವುದಕ್ಕೆ ಮರೆಯಬೇಡಿ.

. ಸಕ್ಕರೆ ಸ್ಕ್ರಬ್

ಸಕ್ಕರೆಯು ನಿಮ್ಮ ಚರ್ಮವನ್ನು ಪುನರ್ ಭರ್ತಿ ಮಾಡಲು ನೆರವಾಗುತ್ತದೆ ಮತ್ತು ಚರ್ಮದ ಸತ್ತ ಜೀವಕೋಶಗಳನ್ನು ತೆಗೆಯಲು ನೆರವಾಗುತ್ತದೆ. ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಸ್ಟ್ರೆಚ್ ಮಾರ್ಕ್ ಗಳ ನಿವಾರಣೆಗೆ ಸಹಕಾರಿಯಾಗಿದೆ. ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಎರಡು ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯೊಂದಿಗೆ ಸೇರಿಸಿ. ಇದರಿಂದ ಸ್ಟ್ರೆಚ್ ಮಾರ್ಕ್ ಗಳ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ತಣ್ಣನೆಯ ನೀರಿನಿಂದ ತೊಳೆಯಿರಿ.. ವಾರಕ್ಕೆ ಒಮ್ಮೆಯಾದರೂ ಇದನ್ನು ಬಳಸಿ ನೋಡಿ.

. ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ ಕೂಡ ತುಂಬಾ ಹಳೆಯ ಕಾಲದಿಂದ ಬಳಸುತ್ತಿರುವ ಒಂದು ಮದ್ದಾಗಿದೆ.ಇದು ಚರ್ಮದ ಡೆಡ್ ಸೆಲ್ ಗಳನ್ನು ತೆಗೆಯಲು ಮತ್ತು ಸ್ಟ್ರೆಚ್ ಮಾರ್ಕ್ ಗಳನ್ನು ತೆಗೆಯಲು ಸಹಕಾರಿಯಾಗಿದೆ.. 1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾಕ್ಕೆ ತಾಜಾವಾಗಿರುವ ನಿಂಬೆ ರಸವನ್ನು ಸೇರಿಸಿ. ಇದನ್ನು ಸ್ಟ್ರೆಚ್ ಮಾರ್ಕ್ ಗಳ ಮೇಲೆ ಅಪ್ಲೈ ಮಾಡಿ ಮತ್ತು 20-30 ನಿಮಿಷ ಹಾಗೆಯೇ ಬಿಡಿ.30 ನಿಮಿಷದ ನಂತರ, ಬಿಸಿಯಾದ ನೀರಿನಿಂದ ವಾಷ್ ತೊಳೆಯಿರಿ. ಪ್ರತಿದಿನವೂ ನೀವು ಈ ರೆಮಿಡಿಯನ್ನು ಟ್ರೈ ಮಾಡಬಹುದು...

Read more about: pregnancy
English summary

DIY Remedies For Pregnancy Stretch Marks

Stretch marks are very common among everyone. But the stretch marks that appear due to pregnancy can be a nightmare for most of you ladies out there. It is better to go for safer remedies to get rid of these pregnancy stretch marks rather than looking for chemical treatments. Some ingredients like almond oil, cocoa butter, aloe vera, etc., can work effectively.
Story first published: Thursday, June 21, 2018, 16:54 [IST]
X
Desktop Bottom Promotion