For Quick Alerts
ALLOW NOTIFICATIONS  
For Daily Alerts

ಮುಟ್ಟಿನ ವೇಳೆ ಸೆಕ್ಸ್ ನಡೆಸಿದರೆ ಗರ್ಭಧರಿಸುವ ಸಂಭವವಿದೆಯಂತೆ!

|

ಮಹಿಳೆಯರು ಗರ್ಭ ಧರಿಸುವ ವಿಚಾರದಲ್ಲಿ ಹಲವಾರು ಸತ್ಯಗಳು ಹಾಗೂ ಕಟ್ಟುಕಥೆಗಳು ಈಗಲೂ ಇದೆ. ಇಂಟರ್ನೆಟ್ ನಲ್ಲಿ ಹುಡುಕಿದರೂ ಹಲವಾರು ರೀತಿಯ ಕಟ್ಟು ಕಥೆಗಳು ನಿಮಗೆ ಸಿಗುವುದು. ಇದನ್ನು ನಂಬಲು ಸಾಧ್ಯವಿಲ್ಲ. ಆದರೆ ಹಿಂದಿನಿಂದಲೂ ನಂಬಿಕೊಂಡು ಬಂದಿರುವಂತೆ ಮಹಿಳೆಯರು ಋತುಚಕ್ರದ ವೇಳೆ ಗರ್ಭಧರಿಸುವುದಿಲ್ಲವೆಂದು.

Chances of Getting Pregnant during Periods!

ಇದು ನಿಜವೇ ಅಥವಾ ಸುಳ್ಳೇ ಎನ್ನುವ ವಾದವೂ ಈಗಲೂ ಇದೆ. ಋತುಚಕ್ರದ ವೇಳೆ ಮಹಿಳೆಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಕೆ ಗರ್ಭಿಣಿಯಾಗುವುದಿಲ್ಲ ಎನ್ನುವುದು ತಪ್ಪು ಕಲ್ಪನೆ. ಋತುಚಕ್ರದ ವೇಳೆ ಮಹಿಳೆಯು ಗರ್ಭ ಧರಿಸುವುದು ಸಾಧ್ಯವೇ ಇಲ್ಲ ಎನ್ನಲು ಸಾಧ್ಯವೇ ಇಲ್ಲ. ಯಾಕೆಂದರೆ ಆಕೆ ಗರ್ಭ ಧರಿಸುವಂತಹ ಸಾಧ್ಯತೆಗಳು ಇದ್ದೇ ಇರುತ್ತದೆ. ಈ ಲೇಖನದಲ್ಲಿ ನಿಮಗೆ ಅದನ್ನು ತುಂಬಾ ವಿಸ್ತಾರವಾಗಿ ತಿಳಿಸಲಾಗಿದೆ.

ಋತುಚಕ್ರದ ವಿವರಣೆ

ಋತುಚಕ್ರದ ವಿವರಣೆ

``ಅಂಡೋತ್ಪತ್ತಿ ಆವರ್ತನದ ಅಂತ್ಯದಲ್ಲಿ ಉಂಟಾಗುವಂತಹ ರಕ್ತಸ್ರಾವವನ್ನು ಋತುಚಕ್ರ ಎಂದು ಹೇಳಲಾಗುತ್ತದೆ. ಈ ವೇಳೆ ವೀರ್ಯವು ಅಂಡಾಣುವನ್ನು ಫಲವತ್ತತೆ ಮಾಡಲು ಸಾಧ್ಯವಾಗದೆ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ

ಫಲವತ್ತತೆಯು ಆಗದೆ ಇದ್ದರೆ

ಫಲವತ್ತತೆಯು ಆಗದೆ ಇದ್ದರೆ

ಪ್ರತೀ ತಿಂಗಳು ಮಹಿಳೆಯು ತನ್ನ ಆವರ್ತನದ 14ನೇ ದಿನದಂದು ಸರಿಯಾಗಿ ಅಂಡಾಣು ಉತ್ಪತ್ತಿ ಮಾಡುವಳು ಎಂದು ತಜ್ಞರು ಹೇಳುತ್ತಾರೆ. ಅಂಡಾಣು ಬಿಡುಗಡೆ ಮೊದಲಿಗೆ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳು ಹೆಚ್ಚಾಗುವುದು. ಇದರಿಂದ ಗರ್ಭಕೋಶದ ಪದರವು ದಪ್ಪವಾಗುವುದು ಮತ್ತು ಒಂದು ವೇಳೆ ಅಂಡಾಣು ಫಲವತ್ತೆಯಾಗಿ ಗರ್ಭ ನಿಂತರೆ ಇದು ಉಪಯೋಗಕ್ಕೆ ಬರುವುದು. ಫಲವತ್ತತೆಯು ಆಗದೆ ಇದ್ದರೆ ಆಗ ಗರ್ಭಕೋಶದ ಪದರವು 14 ದಿನಗಳ ಬಳಿಕ ತೆರೆದುಕೊಳ್ಳುವುದು. ಇದನ್ನು ಋತುಚಕ್ರವೆಂದು ಕರೆಯಲಾಗುತ್ತದೆ."

Most Read: ಇಂತಹ ಲಕ್ಷಣಗಳಿಂದ ಗರ್ಭಿಣಿಯಾಗಿದ್ದನ್ನು ಮುಟ್ಟು ನಿಲ್ಲುವ ಮುನ್ನವೇ ತಿಳಿಯಬಹುದು!

ಋತುಚಕ್ರವು ಎರಡು ದಿನದಿಂದ ಎಂಟು ದಿನಗಳ ತನಕ ಇರುವುದು

ಋತುಚಕ್ರವು ಎರಡು ದಿನದಿಂದ ಎಂಟು ದಿನಗಳ ತನಕ ಇರುವುದು

ಹೆಚ್ಚಾಗಿ ಮಹಿಳೆಯರಲ್ಲಿ ಋತುಚಕ್ರವು ಎರಡು ದಿನದಿಂದ ಎಂಟು ದಿನಗಳ ತನಕ ಇರುವುದು. ಇದು 26-34 ದಿನಗಳ ಅಂತದಲ್ಲಿ ನಡೆಯುವುದು. ಅಂಡೋತ್ಪತ್ತಿ(ಗರ್ಭಾಶಯದಿಂದ ಅಂಡಾಣುಗಳು ಬಿಡುಗಡೆಯಾಗುವುದು) ಈ ಆವರ್ತನದ ಮಧ್ಯೆ ನಡೆಯುವುದು ಮತ್ತು ಇದು ಋತುಚಕ್ರದ ತುಂಬಾ ಫಲವತ್ತತೆಯ ಸಮಯ ಎಂದು ಹೇಳಲಾಗುತ್ತದೆ. ಇದರಿಂದಾಗಿ ಈ ವೇಳೆ ಗರ್ಭ ಧರಿಸುವ ಸಾಧ್ಯತೆಯು ಹೆಚ್ಚಾಗಿರುವುದು.

ಋತುಚಕ್ರಕ್ಕೆ ಮೊದಲು ಗರ್ಭಧರಿಸುವುದು

ಋತುಚಕ್ರಕ್ಕೆ ಮೊದಲು ಗರ್ಭಧರಿಸುವುದು

"ಅಂಡೋತ್ಪತ್ತಿ ವೇಳೆ ಬಿಡುಗಡೆ ಆಗಿರುವತಹ ಅಂಡಾಣುಗಳು ಕೇವಲ 24 ಗಂಟೆಗಳ ಕಾಲ ಮಾತ್ರ ಬದುಕುವುದು" ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ``ಈ ಅವಧಿಯಲ್ಲಿ ವೀರ್ಯವು ಅಂಡಾಣುವನ್ನು ಫಲವತ್ತತೆ ಮಾಡದೆ ಇದ್ದರೆ ಅದು ಬದುಕುಳಿಯುವುದಿಲ್ಲ." ಋತುಚಕ್ರಕ್ಕೆ 12 ಅಥವಾ 16 ದಿನಗಳು ಇರುವಾಗ ಅಂಡೋತ್ಪತ್ತಿಯ ಬಳಿಕದ ಸಮಯ ಆರಂಭವಾಗುವುದು. ಈ ಸಮಯದಲ್ಲಿ ಹಾರ್ಮೋನು ಪ್ರೊಜೆಸ್ಟರಾನ್ ಹೆಚ್ಚಾಗುವ ಕಾರಣದಿಂದಾಗಿ ಗರ್ಭಧರಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಯಾಕೆಂದರೆ ಈ ವೇಳೆ ಅಂಡಾಣು ಬಿಡುಗಡೆಯಾಗದಂತೆ ಅದು ಗರ್ಭಕೋಶಕ್ಕೆ ಸೂಚಿಸುವುದು. ಗರ್ಭಕಂಠದ ಲೋಳೆಯು ಒಣಗುವುದು. ಇದರಿಂದಾಗಿ ವೀರ್ಯವು ಗರ್ಭಕೋಶವನ್ನು ತಲುಪುವುದು ತುಂಬಾ ಕಷ್ಟವಾಗುವುದು.

Most Read: ಗರ್ಭಾವಸ್ಥೆಯಲ್ಲಿ ಸೆಕ್ಸ್ ಹಾಗೂ ಪರಾಕಾಷ್ಠೆ ಕ್ರಿಯೆಯ ಸುಖ ಪಡೆಯಬಹುದಾ?

ಋತುಚಕ್ರದ ವೇಳೆ ಗರ್ಭ ಧರಿಸುವುದು

ಋತುಚಕ್ರದ ವೇಳೆ ಗರ್ಭ ಧರಿಸುವುದು

ಹೆಚ್ಚಿನ ಮಹಿಳೆಯರು 28-32 ದಿನಗಳ ಆವರ್ತನ ಹೊಂದಿರುವರು ಮತ್ತು ಈ ಆವರ್ತನ ಹೊಂದಿರುವ ಮಹಿಳೆಯರು ಎರಡರಿಂದ ಎಂಟು ದಿನಗಳ ಋತುಚಕ್ರವಿದ್ದರೆ ಆಗ ಇಂತವರು ಋತುಚಕ್ರದ ವೇಳೆ ಗರ್ಭಧಾರಣೆ ಮಾಡಲು ಸಾಧ್ಯವಿಲ್ಲ. ಅಂಡೋತ್ಪತ್ತಿ ವೇಳೆ ಅಂಡಾಣುವು ಬಿಡುಗಡೆಯಾಗುವುದು. ಆದರೆ ಇದು ಫಲವತ್ತತೆ ಹೊಂದಲ್ಲ. ಇದು ಋತುಚಕ್ರದ ರಕ್ತದೊಂದಿಗೆ ಬರುವುದು ಎಂದು ಡಾ. ಹಕಖಾ ಅವರು ವಿವರಿಸುವರು. ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ನೀವು ಗರ್ಭಧಾರಣೆ ಮಾಡಬಹುದು. ಆದರೆ ಇದರ ಅವಕಾಶ ಮಾತ್ರ ತುಂಬಾ ಕಡಿಮೆ ಎಂದು ಅವರು ಹೇಳುತ್ತಾರೆ.

ಗರ್ಭನಿರೋಧಕ ಮಾತ್ರೆಗಳು

ಗರ್ಭನಿರೋಧಕ ಮಾತ್ರೆಗಳು

ಗರ್ಭನಿರೋಧಕ ಮಾತ್ರೆಗಳನ್ನು ಸೇವನೆ ಮಾಡುತ್ತಿರುವ ವೇಳೆ ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಗರ್ಭ ನಿಲ್ಲುವಂತಹ ಸಾಧ್ಯತೆಯು ಇರುವುದೇ ಎಂದು ನೀವು ಕೇಳಬಹುದು. ಯಾಕೆಂದರೆ ಋತುಚಕ್ರದ ವೇಳೆ ಗರ್ಭನಿರೋಧಕ ಮಾತ್ರೆ ಸೇವಿಸುವುದನ್ನು ನಿಲ್ಲಿಸಲಾಗುತ್ತದೆ. ಇದಕ್ಕೆ ಉತ್ತರವೆಂದರೆ ಹೌದು, ಯಾಕೆಂದರೆ ಗರ್ಭ ನಿರೋಧಕ ಮಾತ್ರೆಗಳನ್ನು ನೀವು ಪರಿಪೂರ್ಣವಾಗಿ ಬಳಸಿಕೊಂಡರೂ ಅದು ಸಂಪೂರ್ಣವಾಗಿ ಕಾರ್ಯ ಮಾಡುವುದು ಎಂದು ಹೇಳಲು ಆಗದು. ಇದು ಕೇವಲ ಶೇ.91ರಷ್ಟು ಪರಿಣಾಮಕಾರಿಯಾಗುವುದು. ಅದಾಗ್ಯೂ, ಸರಿಯಾದ ಮತ್ತು ನಿರಂತರವಾಗಿ ಬಳಕೆ ಮಾಡುವುದರಿಂದ ಗರ್ಭಧಾರಣೆಯು ಇದು ತಡೆಯುವುದು ಮತ್ತು ತಿಂಗಳ ಬೇರೆ ಸಮಯದಲ್ಲಿ ಅಸಮರ್ಪಕ ಮಾತ್ರೆಗಳು ಮಾಡಿದಂತೆ ಇದು ತಡೆ ಹೇರುವುದು.

ಋತುಚಕ್ರದ ಬಳಿಕ ಗರ್ಭಧಾರಣೆ

ಋತುಚಕ್ರದ ಬಳಿಕ ಗರ್ಭಧಾರಣೆ

ನೀವು ಅಂಡೋತ್ಪತ್ತಿ ಮಾಡದೆ ಇದ್ದರೂ ಗರ್ಭಧಾರಣೆ ಮಾಡಬಹುದು. ಋತುಚಕ್ರದ ಆವರ್ತನದ ಮೂರನೇ ದಿದಿಂದ ಸಂತಾನೋತ್ಪತ್ತಿ ಹಾರ್ಮೋನುಗಳಾಗಿರುವಂತಹ ಪ್ರೊಜೆಸ್ಟ್ರೊನ್ ಮತ್ತು ಈಸ್ಟ್ರೋಜನ್ ಋತುಚಕ್ರದ ವೇಳೆ ತುಂಬಾ ದುರ್ಬಲವಾಗಿದ್ದರೂ ಇದರ ಬಳಿಕ ಗರ್ಭಕೋಶವು ತನ್ನ ಪದರವನ್ನು ಗಟ್ಟಿಯಾಗಿ ಮಾಡುವಂತೆ ನೆರವಾಗುವುದು. ಋತುಚಕ್ರವಾದ ತಕ್ಷಣವೇ ಅಂಡಾಣು ಬಿಡುಗಡೆಯಾಗದು. ಈ ಸಮಯವನ್ನು ಅಂಡೋತ್ಪತ್ತಿ ಪೂರ್ವ ಕಾಲವೆಂದು ಹೇಳಲಾಗುತ್ತದೆ. ಇಲ್ಲಿ ಕೂಡ ಗರ್ಭ ಧರಿಸುವ ಸಾಧ್ಯತೆಗಳು ಇವೆ. ಯಾಕೆಂದರೆ ವೀರ್ಯವು ನಿಮ್ಮ ಗರ್ಭಕಂಠದ ಲೋಳೆಯಲ್ಲಿ ಸುಮಾರು ಐದು ದಿನಗಳ ಕಾಲ ಉಳಿಯಬಲ್ಲದು. ಈ ಅವಧಿಯಲ್ಲಿ ಕೇವಲ ಒಂದು ದಿನ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವವರು ಕೂಡ ಗರ್ಭ ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ.

Most Read: ಮಹಿಳೆಯರು ಹೆರಿಗೆಯಾದ ಬಳಿಕ ಸೆಕ್ಸ್‌ಗಾಗಿ ಎಷ್ಟು ದಿನಗಳವರೆಗೆ ಕಾಯಬೇಕು?

ವೀರ್ಯವು ಮೂರರಿಂದ ಐದು ದಿನಗಳ ಕಾಲ ಬದುಕಬಲ್ಲವು

ವೀರ್ಯವು ಮೂರರಿಂದ ಐದು ದಿನಗಳ ಕಾಲ ಬದುಕಬಲ್ಲವು

ಎಲ್ಲಾ ಮಹಿಳೆಯರಿಗೆ ಕೂಡ 28-32 ದಿನಗಳ ಆವರ್ತನದಲ್ಲಿ ಋತುಚಕ್ರವು ಆಗಬೇಕೆಂದಿಲ್ಲ. ಕೆಲವು ಮಹಿಳೆಯರಿಗೆ ಉದಾಹರಣೆಯಾಗಿ 24 ದಿನಗಳಲ್ಲಿ ಋತುಚಕ್ರವು ಆಗಬಹುದು. ಈ ವೇಳೆ ಅವರಿಗೆ ಏಳು ದಿನಗಳ ಕಾಲ ರಕ್ತಸ್ರಾವ ಆಗಬಹುದು. ರಕ್ತಸ್ರಾವದ ಅಂತಿಮ ದಿನದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಮೂರು ದಿನಗಳ ಬಳಿಕ ಅಂಡಾಣು ಬಿಡುಗಡೆಯಾಗಬಹುದು ತಜ್ಞರು ಹೇಳುತ್ತಾರೆ. ಯಾಕೆಂದರೆ ವೀರ್ಯವು ಮೂರರಿಂದ ಐದು ದಿನಗಳ ಕಾಲ ಬದುಕುವುದು. ಇದರಿಂದ ಆಕೆ ಖಂಡಿತವಾಗಿಯೂ ಗರ್ಭ ಧರಿಸುವಳು.

ಋತುಚಕ್ರ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು!

ಋತುಚಕ್ರ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು!

ಇನ್ನು ಕೆಲವು ಮಹಿಳೆಯರಲ್ಲಿ ರಕ್ತದ ಕಲೆಗಳು ಮತ್ತು ರಕ್ತಸ್ರಾವು ಋತುಚಕ್ರದ ಮಧ್ಯೆ ಕಂಡು ಬರುವುದು. ಅಂಡೋತ್ಪತ್ತಿ ವೇಳೆ ಇದು ನಡೆಯುವುದು ಮತ್ತು ಇದನ್ನು ನೀವು ಋತುಚಕ್ರ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಇದರಿಂದಾಗಿ ಋತುಚಕ್ರದ ಸರಿಯಾದ ಆವರ್ತನ ತಿಳಿಯಲು ತುಂಬಾ ಕಷ್ಟವಾಗುವುದು.

ಋತುಚಕ್ರದ ವೇಳೆ ನೀವು ಅಸುರಕ್ಷಿತವಾಗಿರುವ ಸೆಕ್ಸ್ ನಲ್ಲಿ ಭಾಗಿಯಾದರೆ ಆಗ ನೀವು ಗರ್ಭ ಧರಿಸುವ ಸಾಧ್ಯತೆಯು ಹೆಚ್ಚಾಗಿರುವುದು. ಹೊಟ್ಟೆಯ ಕೆಳಭಾಗದಲ್ಲಿ ಲಘುವಾದ ಸೆಳೆತ, ರಕ್ತಕಲೆಗಳು(ಅಂಡಾಣುಗಳು ಫಲವತ್ತತೆಯಾದ ಬಳಿಕ ರಕ್ತದ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ), ಸ್ತನಗಳ ಮೃಧುತ್ವ ಮತ್ತು ಚಂಚಲತೆ. ಅಂಡೋತ್ಪತ್ತಿಯಾದ ಎರಡು ವಾರಗಳ ಬಳಿಕ ಇಂತಹ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುವುದು.

ಗರ್ಭಧಾರಣೆಯ ಇತರ ಕೆಲವೊಂದು ಲಕ್ಷಣಗಳು ಸಾಮಾನ್ಯವಾಗಿ ಆರರಿಂದ ಏಳು ವಾರಗಳಲ್ಲಿ ಕಂಡುಬರುವುದು. ಇದರಲ್ಲಿ ಪ್ರಮುಖವಾಗಿ ವಾಕರಿಕೆ, ವಾಂತಿ ಮತ್ತು ನಿಶ್ಯಕ್ತಿಯು ಕಾಣಿಸಿಕೊಳ್ಳುವುದು.

English summary

Chances of Getting Pregnant during Periods!

A definitive answer to the age-old question: Can you get pregnant on your period? It's a common misconception that if a woman has sex during her period she cannot become pregnant. While a woman is unlikely to get pregnant during her period, it is absolutely possible!
Story first published: Thursday, December 13, 2018, 13:31 [IST]
X
Desktop Bottom Promotion