For Quick Alerts
ALLOW NOTIFICATIONS  
For Daily Alerts

ಮೊದಲ ಸಲ ಸೆಕ್ಸ್ ನಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವೇ?

|

ಗರ್ಭಧಾರಣೆಯಾಗಲು ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಈ ವೇಳೆ ಪುರುಷರು ಸ್ಖಲನಗೊಂಡರೆ ಆಗ ವೀರ್ಯವು ಯೋನಿಯೊಳಗೆ ಹೋಗಿ ಅಂಡಾಣುವನ್ನು ತಲುಪಿದ ಬಳಿಕ ಗರ್ಭ ಧರಿಸುವರು. ಆದರೆ ಇಂದು ಇಂಟರ್ನೆಟ್ ನಲ್ಲಿ ಹಲವಾರು ರೀತಿಯ ಮಾಹಿತಿಗಳು, ಅದರಲ್ಲಿ ಕೆಲವು ಸತ್ಯ ಹಾಗೂ ಇನ್ನು ಕೆಲವೊಂದು ಸುಳ್ಳು ಸುದ್ದಿಗಳು ಹರಡುತ್ತಿರುತ್ತದೆ. ಇಂತಹ ಸಾವಿರಾರು ಲೇಖನಗಳು ಇರುವ ಕಾರಣದಿಂದಾಗಿ ಯಾವುದನ್ನು ನಂಬುವುದು ಮತ್ತು ಯಾವುದನ್ನು ಬಿಡುವುದು ಎನ್ನುವ ಗೊಂದಲವು ಸಾಮಾನ್ಯವಾಗಿ ಕಾಡುವುದು. ಯಾಕೆಂದರೆ ಯಾವುದೇ ರೀತಿಯ ಗರ್ಭನಿರೋಧಕ ಅಥವಾ ಕಾಂಡೋಮ್ ಬಳಸದೆ ಇದ್ದರೆ ಆಗ ಗರ್ಭಧರಿಸುವುದು ಖಚಿತ.

ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಆದರೆ ಇಂದಿನ ಕೆಲವು ಹದಿಹರೆಯದ ಹುಡುಗಿಯರು ಮೊದಲ ಸಲ ಸೆಕ್ಸ್ ನಡೆಸಿದರೆ ಆಗ ಗರ್ಭ ಧರಿಸುವ ಸಾಧ್ಯತೆಯು ತುಂಬಾ ಕಡಿಮೆ ಇರುವುದು ಎಂದು ಭಾವಿಸುವರು. ಆದರೆ ಇದು ತಪ್ಪು. ಯಾಕೆಂದರೆ ಮೊದಲ ಸಲ ಸೆಕ್ಸ್ ನಡೆಸಿದರೂ ಅದರಿಂದ ಮಹಿಳೆಯು ಗರ್ಭ ಧರಿಸುವಂತಹ ಸಾಧ್ಯತೆಯು ಹೆಚ್ಚಾಗಿಯೇ ಇರುವುದು. ಇದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

ಮೊದಲ ಸಲ ಸೆಕ್ಸ್ ನಡೆಸಿದರೆ ಗರ್ಭ ಧರಿಸಬಹುದೇ?

ಮೊದಲ ಸಲ ಸೆಕ್ಸ್ ನಡೆಸಿದರೆ ಗರ್ಭ ಧರಿಸಬಹುದೇ?

ಮೊದಲ ಸಲ ಸೆಕ್ಸ್ ನಡೆಸುವುದರಿಂದ ಮಹಿಳೆಯರು ಗರ್ಭ ಧರಿಸುವುದಿಲ್ಲವೆಂದು ಹೆಚ್ಚಿನ ಜನರು ಭಾವಿಸಿದ್ದಾರೆ. ಆದರೆ ಇದರ ಸತ್ಯ ಬೇರೆಯೇ ಇದೆ. ಯಾವುದೇ ರೀತಿಯ ಗರ್ಭ ನಿರೋಧಕ ಅಥವಾ ಕಾಂಡೋಮ್ ಬಳಸದರೆ ಸೆಕ್ಸ್ ನಡೆಸಿದರೆ ಆಗ ಹುಡುಗಿಯು ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದು ಆಕೆ ಮೊದಲ ಸಲ ಅಥವಾ ಹಲವಾರು ಸಲ ಸೆಕ್ಸ್ ನಡೆಸಿದ್ದಾಳೆ ಎನ್ನುವುದರ ಮೇಲೆ ಅವಲಂಬಿತವಾಗಿರುವುದಿಲ್ಲ.

ಮೊದಲಸಲದ ಸೆಕ್ಸ್ ನಿಂದ ಗರ್ಭ ನಿಲ್ಲುವಂತಹ ಸಾಧ್ಯತೆಯು ಹೆಚ್ಚಾಗಿರುವುದು

ಮೊದಲಸಲದ ಸೆಕ್ಸ್ ನಿಂದ ಗರ್ಭ ನಿಲ್ಲುವಂತಹ ಸಾಧ್ಯತೆಯು ಹೆಚ್ಚಾಗಿರುವುದು

ಗರ್ಭಧಾರಣೆ ಎನ್ನುವುದು ಫಲವತ್ತತೆ ಮೇಲೆ ನಿರ್ಧಾರವಾಗುವುದು. ಇದು ಅನಿಯಮಿತ ಕ್ರಿಯೆಯಾಗಿದೆ. ಇದಕ್ಕೆ ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು. ಇದರಿಂದ ಕೆಲವು ಮಹಿಳೆಯರಿಗ ಗರ್ಭ ಧರಿಸಲು ವರ್ಷಗಳು ಬೇಕಾಗಬಹುದು. ಇನ್ನು ಕೆಲವು ಮಹಿಳೆಯರಿಗೆ ಗರ್ಭ ಧರಿಸಲು ಇಷ್ಟವಿಲ್ಲದೆ ಇದ್ದರೂ ಮೊದಲ ಸಲದ ಸೆಕ್ಸ್ ನಿಂದಲೇ ಗರ್ಭ ನಿಲ್ಲಬಹುದು.

ಮಹಿಳೆ ಮತ್ತು ಪುರುಷನು ಪ್ರತೀ ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ವೇಳೆ ಗರ್ಭಧಾರಣೆಯಾಗುವಂತಹ ಸಾಧ್ಯತೆಯು ಇರುವುದು. ಒಂದು ಮುಖ್ಯವಾಗಿರುವಂತಹ ಅಂಶವೆಂದರೆ ವೀರ್ಯವು ಅಂಡಾಣುವನ್ನು ತಲುಪಬೇಕಾಗಿದೆ. ಋತುಚಕ್ರಕ್ಕೆ ಒಳಗಾಗದೆ ಇರುವಂತಹ ಹುಡುಗಿಯರು ಅಂಡೋತ್ಪತ್ತಿ ಮೊದಲ ಸಲ ಮಾಡಿದ್ದರೆ ಆಗ ಅವರಿಗೆ ಮೊದಲ ಸಲದ ಸೆಕ್ಸ್ ನಿಂದಲೂ ಗರ್ಭ ನಿಲ್ಲುವಂತಹ ಸಾಧ್ಯತೆಯು ಹೆಚ್ಚಾಗಿರುವುದು.

Most Read: ಒಂದು ಗಂಟೆಯಲ್ಲಿ ಎರಡು ಬಾರಿ ಸೆಕ್ಸ್ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು!

ಅಪಾಯದ ಬಗ್ಗೆ ತಿಳಿಯಿರಿ ಮತ್ತು ಸಲಹೆ ಪಾಲಿಸಿ

ಅಪಾಯದ ಬಗ್ಗೆ ತಿಳಿಯಿರಿ ಮತ್ತು ಸಲಹೆ ಪಾಲಿಸಿ

ಗರ್ಭಧಾರಣೆಯ ಹೊರತಾಗಿ ಅಸುರಕ್ಷಿತವಾದ ಸೆಕ್ಸ್ ನಿಂದ ಎಸ್ ಐಟಿ ಅಥವಾ ಲೈಂಗಿಕವಾಗಿ ಹರಡುವ ಸೋಂಕುಗಳು ಬರಬಹುದು. ಪ್ರತೀ ಸಲ ಸೆಕ್ಸ್ ನಡೆಸುವಾಗ ಕಾಂಡೋಮ್ ಅಥವಾ ಗರ್ಭನಿರೋಧಕ ಬಳಸಿದರೆ ಲೈಂಗಿಕ ರೋಗ ಮತ್ತು ಗರ್ಭಧಾರಣೆ ತಡೆಯಬಹುದು.

ಕಾಂಡೋಮ್ ಬಳಸುವುದು ಉತ್ತಮ

ಕಾಂಡೋಮ್ ಬಳಸುವುದು ಉತ್ತಮ

ನಿಮಗೆ ಸೆಕ್ಸ್ ಮಾಡುವ ಬಯಕೆಯಿದೆ. ಆದರೆ ಗರ್ಭ ಧರಿಸುವುದು ಇಷ್ಟವಿಲ್ಲವೆಂದಾದರೆ ಆಗ ನೀವು ಕಾಂಡೋಮ್ ಬಳಸುವುದು ಉತ್ತಮ. ಯಾಕೆಂದರೆ ಇದರಿಂದ ಲೈಂಗಿಕ ರೋಗ ಮತ್ತು ಗರ್ಭಧಾರಣೆ ತಡೆಯಬಹುದು. ನೀವು ಗರ್ಭಧಾರಣೆ ತಡೆಯಲು ಪರ್ಯಾಯ ಕ್ರಮವನ್ನು ತೆಗೆದುಕೊಂಡಿದ್ದರೆ ಆಗ ನೀವು ಸಂಗಾತಿಗೆ ಹೇಳಿ ಕಾಂಡೋಮ್ ನ್ನು ಆಯ್ಕೆಯಾಗಿ ಬಳಸಿಕೊಳ್ಳಬಹುದು. ನಿಮ್ಮ ಪರ್ಸ್ ನಲ್ಲಿ ಒಂದು ಕಾಂಡೋಮ್ ಇರಲಿ. ಯಾಕೆಂದರೆ ಅವನಿಗೆ ಮರೆತು ಹೋದರೂ ನೀವು ಇದನ್ನು ಬಳಸಿಕೊಳ್ಳಬಹುದು. ಕೆಲವೊಂದು ತುರ್ತು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ನೀವು ಗರ್ಭಧಾರಣೆ ತಡೆಯಬಹುದು. ಆದರೆ ಇದರಿಂದಾಗಿ ಕೆಲವೊಂದು ಅಡ್ಡಪರಿಣಾಮಗಳು ಇದೆ ಎನ್ನುವುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು.

Most Read: ಮುಜುಗರ ಉಂಟು ಮಾಡುವ ಸಮಸ್ಯೆ-ಸೆಕ್ಸ್ ವೇಳೆ ಮೂತ್ರ ವಿಸರ್ಜನೆ!

ಗರ್ಭಧಾರಣೆಯ ಲಕ್ಷಣಗಳು ಯಾವುದು?

ಗರ್ಭಧಾರಣೆಯ ಲಕ್ಷಣಗಳು ಯಾವುದು?

ಅಸುರಕ್ಷಿತವಾಗಿರುವಂತಹ ಸೆಕ್ಸ್ ನಡೆಸಿದ ಬಳಿಕ ನಿಮಗೆ ಋತುಚಕ್ರವಾಗದೆ ಇರುವುದು ಗರ್ಭಧಾರಣೆಯ ಲಕ್ಷಣವಾಗಿದೆ. ಋತುಚಕ್ರವು ತುಂಬಾ ವಿಲಂಬವಾದರೆ ಆಗ ನೀವು ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು. ಗರ್ಭಧಾರಣೆಯ ಲಕ್ಷಣಗಳ ಬಗ್ಗೆ ನೀವು ತಿಳಿಯಿರಿ.

ಸೆಕ್ಸ್ ಮತ್ತು ಗರ್ಭಧಾರಣೆ

ಸೆಕ್ಸ್ ಮತ್ತು ಗರ್ಭಧಾರಣೆ

ಯಾವ ರೀತಿಯ ಸೆಕ್ಸ್ ನಿಂದ ಗರ್ಭಧಾರಣೆಯಾಗಬಹುದು?

ಕೆಲವೊಂದು ರೀತಿಯ ಸೆಕ್ಸ್ ನಿಂದಾಗಿ ಮಾತ್ರ ಗರ್ಭ ಧರಿಸುವರು. ಉದಾಹರಣೆಗೆ, ಯೋನಿಯ ಸೆಕ್ಸ್ ವೇಳೆ ವೀರ್ಯವು ಯೋನಿಯೊಳಗಡೆ ಹೋಗುವುದು ಅಥವಾ ಯಾವುದೇ ರೀತಿಯಿಂದಲೂ ಯೋನಿಯೊಳಗಡೆ ವೀರ್ಯವು ಸ್ಖಲನವಾಗುವುದು. ಇತರ ಕೆಲವೊಂದು ಲೈಂಗಿಕ ಕ್ರಿಯೆಗಳಾಗಿರುವಂತಹ ಚುಂಬನ, ಬಟ್ಟೆಗಳ ಮೇಲೆ ಸ್ಖಲನ, ಇಬ್ಬರ ಹಸ್ತಮೈಥುನ, ಬಾಯಿ ಅಥವಾ ಗುದ ಸೆಕ್ಸ್ ನಿಂದ ಮಹಿಳೆಯು ಗರ್ಭಧರಿಸುವ ಸಾಧ್ಯತೆ ಇಲ್ಲ. ಇದು ಮೊದಲ ಸಲ ಅಥವಾ ಹಲವಾರು ಸಲವಾಗಿರಬಹುದು. ನೀವು ಈಜುತ್ತಿರುವಂತಹ ಈಜುಕೊಳದಲ್ಲಿ ಸ್ಖಲನ ಮಾಡಿದರೆ ಅದರಿಂದ ಗರ್ಭ ಧರಿಸಲು ಸಾಧ್ಯವಿಲ್ಲ.

ಗರ್ಭ ನಿರೋಧಕ ಬಳಸುತ್ತಿದ್ದರೆ ಗರ್ಭ ಧರಿಸಲು ಸಾಧ್ಯವೇ?

ಗರ್ಭ ನಿರೋಧಕ ಬಳಸುತ್ತಿದ್ದರೆ ಗರ್ಭ ಧರಿಸಲು ಸಾಧ್ಯವೇ?

ಯಾವುದೇ ರೀತಿಯ ಗರ್ಭ ನಿರೋಧಕ ಬಳಸುತ್ತಾ ಇದ್ದರೂ ನೀವು ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದಕ್ಕೆ ಕಾರಣವೆಂದರೆ ಯಾವುದೇ ರೀತಿಯ ಗರ್ಭನಿರೋಧಕಗಳು ಫೂಲ್ ಪ್ರೂಫ್ ಅಲ್ಲ ಮತ್ತು ಯಾವುದೇ ಸಣ್ಣ ತಪ್ಪು ಅಥವಾ ದುರಾದೃಷ್ಟದಿಂದ ಏನಾದರೂ ಸಂಭವಿಸಿದರೆ ಆಗ ಅದು ವಿಫಲವಾಗಬಹುದು. ನೀವು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕ ಒಂದು ದಿನ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳದೆ ಇದ್ದರೂ ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಮೊದಲ ಸಲ ಸೆಕ್ಸ್ ನಡೆಸುವ ವೇಳೆ ಕಾಂಡೋಮ್ ಹರಿದು ಹೋದರೆ ಅದರಿಂದ ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು.

ಸ್ಖಲನದ ಮೊದಲೇ ಹೊರತೆಗೆದರೆ ಗರ್ಭ ಧರಿಸುವ ಸಾಧ್ಯತೆಯು ಇರುವುದೇ?

ಸ್ಖಲನದ ಮೊದಲೇ ಹೊರತೆಗೆದರೆ ಗರ್ಭ ಧರಿಸುವ ಸಾಧ್ಯತೆಯು ಇರುವುದೇ?

ಸ್ಖಲನದ ಮೊದಲು ನಿಮ್ಮ ಸಂಗಾತಿಯು ತನ್ನ ಶಿಶ್ನವನ್ನು ಹೊರಗೆ ತೆಗೆದರೂ ನೀವು ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಉದ್ರೇಕಗೊಂಡ ವೇಳೆ ಹುಡುಗರ ಶಿಶ್ನದಲ್ಲಿ ಸ್ಖಲನಕ್ಕೆ ಮೊದಲೇ ದ್ರವದಂತೆ ಬರುವುದು. ಸ್ಖಲನಕ್ಕೆ ಮೊದಲು ಬರುವಂತಹ ಈ ದ್ರವದಲ್ಲೂ ವೀರ್ಯವಿರುವುದು. ಇದರಿಂದ ಮಹಿಳೆಯು ಗರ್ಭ ಧರಿಸಬಹುದು. ಕೇವಲ ಒಂದು ವೀರ್ಯದಿಂದ ಮಹಿಳೆಯು ಗರ್ಭ ಧರಿಸಬಹುದು. ಸ್ಖಲನಕ್ಕೆ ಮೊದಲು ಬರುವಂತಹ ದ್ರವದಲ್ಲಿ ಎಸ್ ಟಿಐ ಇರುವುದು. ಇದರಿಂದ ಸ್ಖಲನಕ್ಕೆ ಮೊದಲೇ ನಿಮ್ಮ ಸಂಗಾತಿಯು ಹೊರಗೆ ತೆಗೆದರೂ ಅದರಿಂದ ಸೋಂಕು ಬರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಇದರಿಂದಾಗಿ ಗರ್ಭ ಧಾರಣೆಯಾಗದೆ ಇರಲು ನೀವು ಗರ್ಭ ನಿರೋಧಕ ಮಾತ್ರೆಗಳು ಅಥವಾ ಎಸ್ ಟಿಐ ಬರದಂತೆ ತಡೆಯಲು ಕಾಂಡೋಮ್ ಬಳಸುವುದು ಸೂಕ್ತವಾಗಿರುವುದು.

Most Read: ನಿಮಗೆ ಗೊತ್ತೇ? ಸೆಕ್ಸ್ ‌ನಿಂದ ಕೂಡ ದೇಹದ ತೂಕ ಇಳಿಸಿಕೊಳ್ಳಬಹುದಂತೆ!!

ಯೋನಿಯ ಒಳಗೆ ಹೋಗದೆ ಅದರ ಹತ್ತಿರಕ್ಕೆ ಬಂದರೆ ಗರ್ಭ ಧರಿಸುವಂತಹ ಸಾಧ್ಯತೆಯು ಇದೆಯಾ?

ಯೋನಿಯ ಒಳಗೆ ಹೋಗದೆ ಅದರ ಹತ್ತಿರಕ್ಕೆ ಬಂದರೆ ಗರ್ಭ ಧರಿಸುವಂತಹ ಸಾಧ್ಯತೆಯು ಇದೆಯಾ?

ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ವೇಳೆ ವೀರ್ಯವು ಯೋನಿಯ ಸಂಪರ್ಕಕ್ಕೆ ಬಂದಾಗ ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದರಿಂದ ನೀವು ಮೊದಲ ಸಲ ಸೆಕ್ಸ್ ನಡೆಸುತ್ತಾ ಇದ್ದರೂ ನಿಮ್ಮ ಸಂಗಾತಿಯ ಶಿಶ್ನವು ಯೋನಿಯ ಹತ್ತಿರಕ್ಕೆ ಬಂದರೂ ಅದರಿಂದ ವೀರ್ಯವು ಹೊರಬಂದಿದ್ದರೆ ಆಗ ಗರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಬಟ್ಟೆ ಧರಿಸದೆ ನೀವು ಯಾವುದೇ ರೀತಿಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಸ್ಖಲನಕ್ಕೆ ಮೊದಲು ಬರುವಂತಹ ದ್ರವದಲ್ಲಿ ವೀರ್ಯವು ಇರುವ ಪರಿಣಾಮವಾಗಿ ಮಹಿಳೆಯು ಇದರಿಂದ ಗರ್ಭ ಧರಿಸುವ ಸಾಧ್ಯತೆಯು ಇರುವುದು. ಇದಕ್ಕಾಗಿ ಯೋನಿಯೊಳಗಡೆ ಶಿಶ್ನವು ಹೋಗಬೇಕೆಂದಿಲ್ಲ. ಇದರಿಂದ ಮೊದಲ ಸಲ ಸೆಕ್ಸ್ ನಡೆಸುವ ವೇಳೆ ಬೇಡದ ಗರ್ಭ ಮತ್ತು ಲೈಂಗಿಕ ಸೋಂಕನ್ನು ತಡೆಯಲು ನೀವು ಗರ್ಭನಿರೋಧಕ ಅಥವಾ ಕಾಂಡೋಮ್ ನ್ನು ಬಳಸಲು ಮರೆಯದಿರಿ.

English summary

Can You Get Pregnant at First Sex?

It is thought by many people that sex for the first time is not going to get a girl pregnant. This is far from the truth though as having sex without the use of contraception can get a girl pregnant irrespective of whether she is having sex for the first time or has had it plenty of times before.Pregnancy depends on fertility which can be a very irregular thing. It might take months or even years of desperate trying for some women to conceive while others might conceive whenever they have sex even if it is their first time and they have no desire of getting pregnant either.
X
Desktop Bottom Promotion