For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ಪರೀಕ್ಷೆ ಕಿಟ್ ಎಷ್ಟು ನಿಖರವಾಗಿರುವುದು?

|

ಗರ್ಭ ಧರಿಸಿರುವ ಖುಷಿಯನ್ನು ಮನೆಯವರೊಂದಿಗೆ ಹಂಚಿಕೊಳ್ಳುವ ಸಂಭ್ರಮ ಒಂದು ಬಗೆಯದ್ದಾದರೆ, ಇಷ್ಟವಿಲ್ಲದೆ ಇದ್ದರೂ ಗರ್ಭ ಧರಿಸುವಂತಹ ಪರಿಸ್ಥಿತಿ ಎದುರಾದರೆ ಆಗ ಮತ್ತೊಂದು ರೀತಿಯ ಸಂಕಟ. ಎರಡು ಕಡೆಗಳಲ್ಲಿ ಭಾವನೆಗಳು ತಮ್ಮ ಮೇಲಾಟ ನಡೆಸುವುದಾರೂ ಎರಡೂ ತದ್ವಿರುದ್ಧವಾಗಿ. ಇಂತಹ ಸಮಯದಲ್ಲಿ ತಾಳ್ಮೆ ಎನ್ನುವುದು ತುಂಬಾ ಮುಖ್ಯ. ಕೆಲವು ಮಹಿಳೆಯರು ಮನೆಯಲ್ಲೇ ಗರ್ಭಧಾರಣೆ ಪರೀಕ್ಷೆ ಮಾಡಿಕೊಳ್ಳುವರು.

ಇಂದಿನ ದಿನಗಳಲ್ಲಿ ಇದು ಸಾಮಾನ್ಯ ಕೂಡ. ಇದಕ್ಕಾಗಿ ಕೆಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮೊದಲು ಮನೆಯಲ್ಲಿ ಪರೀಕ್ಷಿಸಿಕೊಂಡು ದೃಢಪಡಿಸಿಕೊಂಡ ಬಳಿಕ ವೈದ್ಯರ ಬಳಿಗೆ ತೆರಳುವುದು ಇಂದಿನ ಮಹಿಳೆಯರ ಅಭ್ಯಾಸ. ಆದರೆ ಇಂತಹ ಗರ್ಭನಿರ್ಧರಿಸುವಂತಹ ಸಾಧನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಅದನ್ನು ಬಳಸುವುದು ಮತ್ತು ಪರಿಣಾಮಕಾರಿ ಫಲಿತಾಂಶ ಪಡೆಯುವುದು ನಿಮಗೆ ನೆರವಾಗುವುದು.

pregnancy test

ಗರ್ಭಧಾರಣೆಯ ಪರೀಕ್ಷಾ ಕಿಟ್ ಗಳು ಹೇಗೆ ಕೆಲಸ ಮಾಡುವುದು?
ಋತುಚಕ್ರ ಆಗದೇ ಇದ್ದಾಗ ನಾಲ್ಕು ಅಥವಾ ಐದನೇ ದಿನದಲ್ಲಿ ಗರ್ಭಧಾರಣೆ ಪರೀಕ್ಷೆ ನಡೆಸುವುದು ಸರಿಯಾದ ವಿಧಾನ. ಆದರೆ ಋತುಚಕ್ರದಲ್ಲಿ ನಿಮಗೆ ಏರುಪೇರಾಗುತ್ತಿದ್ದರೆ ಪರೀಕ್ಷೆ ತುಂಬಾ ಕಠಿಣ. ಗರ್ಭ ನಿಂತ ಬಳಿಕ ಫಲವತ್ತಾದ ಮೊಟ್ಟೆಗಳು ಅಳವಡಿಸಲ್ಪಟ್ಟ ಬಳಿಕ ಜರಾಯು ರೂಪುಗೊಳ್ಳಲು ಮತ್ತು ಬೆಳೆಯಲು ಪ್ರಾರಂಭವಾಗುವುದು. ಹ್ಯೂಮನ್ ಕೊರಿಯಾನಿಕ್ ಗೋನಾಡೋಟ್ರೋಪಿನ್ (HCG) ಎಂಬ ಹಾರ್ಮೋನ್ ಈ ವೇಳೆ ಉತ್ಪತ್ತಿಯಾಗುವುದು. ಗರ್ಭಧಾರಣೆಯ ಪರೀಕ್ಷಾ ಕಿಟ್ ಈ ಹಾರ್ಮೋನ್ ನ್ನು ನೋಡಿಕೊಂಡು ನೀವು ಗರ್ಭಿಣಿಯಾ ಅಥವಾ ಅಲ್ಲವಾ ಎಂದು ಹೇಳುತ್ತದೆ.

ಪರೀಕ್ಷೆ ಮಾಡಲು ಸರಿಯಾದ ಸಮಯ
ಪರಿಣಾಮಕಾರಿ ಫಲಿತಾಂಶಕ್ಕಾಗಿ ನೀವು ಋತುಚಕ್ರ ತಪ್ಪಿಸಿಕೊಂಡ ಒಂದು ದಿನ ಬಿಟ್ಟು ಪರೀಕ್ಷಿಸಬೇಕು. ಈ ವೇಳೆ ಪರೀಕ್ಷೆ ಮಾಡಿದರೆ ಅದರಿಂದ ಸ್ಪಷ್ಟ ಮಾಹಿತಿ ಸಿಗುವುದು ತುಂಬಾ ಕಠಿಣ. ಯಾಕೆಂದರೆ ಈ ಸಮಯದಲ್ಲಿ ಎಚ್ ಸಿಜಿ ಮಟ್ಟವು ಹೆಚ್ಚಾಗಿರುವುದ ಮತ್ತು ಈ ಹಂತದಲ್ಲಿ ಗರ್ಭಧಾರಣೆ ಪರೀಕ್ಷಾ ಕಿಟ್ ಗೆ ಇದು ಸಿಗದೇ ಇರಬಹುದು. ಋತುಚಕ್ರ ತಪ್ಪಿಸಿಕೊಂಡು 7-10 ದಿನಗಳ ಬಳಿಕ ನೀವು ಗರ್ಭಧಾರಣೆ ಪರೀಕ್ಷಾ ಕಿಟ್ ನಿಂದ ಮೂತ್ರ ಪರೀಕ್ಷೆ ಮಾಡಿಕೊಂಡರೆ ಆಗ ನಿಮಗೆ ನಿಖರ ಫಲಿತಾಂಶ ಸಿಗುವುದು. ಈ ಕಿಟ್ ನ ಸಮಯ ಮೀರಿಲ್ಲವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ.

ಗರ್ಭಧಾರಣೆ ಪರೀಕ್ಷೆ ಕಿಟ್ ನಲ್ಲಿ ಋಣಾತ್ಮಕ ಫಲಿತಾಂಶ ಬಂದರೂ ನಿಮಗೆ ಋತುಚಕ್ರವಾಗದೇ ಇದ್ದರೆ...
ಋತುಚಕ್ರ ತಪ್ಪಿಸಿಕೊಳ್ಳಲು ಹಲವಾರು ರೀತಿಯ ಕಾರಣಗಳು ಇವೆ. ಕಳೆದ ಒಂದು ತಿಂಗಳಿಂದ ಲೈಂಗಿಕವಾಗಿ ನೀವು ತುಂಬಾ ಕ್ರಿಯಾಶೀಲರಾಗಿದ್ದರೆ ಆಗ ಗರ್ಭಿಣಿಯಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಅದಾಗ್ಯೂ, ಕೆಲವೊಂದು ಸಲ ಗರ್ಭಧಾರಣೆ ಪರೀಕ್ಷಾ ಕಿಟ್ ನಲ್ಲಿ ಋಣಾತ್ಮಕ ಹಾಗೂ ಧನಾತ್ಮಕವೆಂದು ತಪ್ಪಾಗಿ ತೋರಿಸಬಹುದು. ಇದರಿಂದ ಸಂಪೂರ್ಣವಾಗಿ ಗರ್ಭಧಾರಣೆ ಪರೀಕ್ಷಾ ಕಿಟ್ ಮೇಲೆ ಅವಲಂಬಿತವಾಗಿರುವುದು ತಪ್ಪು.

ಗರ್ಭಧಾರಣೆಯ ಪರೀಕ್ಷಾ ಕಿಟ್ ನಲ್ಲಿ ನಿಮಗೆ ಧನಾತ್ಮಕ ಫಲಿತಾಂಶ ತೋರಿಸುತ್ತಿದ್ದರೆ ಆಗ ನೀವು ವೈದ್ಯರಲ್ಲಿಗೆ ತೆರಳಿ ಪರೀಕ್ಷಿಸಿಕೊಳ್ಳಿ. ಅಲ್ಲಿ ರಕ್ತ ಪರೀಕ್ಷೆ ಮೂಲಕವಾಗಿ ನೀವು ಇದನ್ನು ದೃಢಪಡಿಸಿಕೊಳ್ಳಬಹುದು. ಗರ್ಭಿಣಿಯೆಂದು ತಿಳಿದ ಕೂಡಲೇ ನೀವು ವೈದ್ಯರನ್ನು ಸಂಪರ್ಕಿಸುವುದು ಅತೀ ಅಗತ್ಯ. ಈ ವೇಳೆ ನಿಮಗೆ ಫಾಲಿಕ್ ಆಮ್ಲದ ಮಾತ್ರೆಗಳನ್ನು ನೀಡಲಾಗುವುದು.

ಋತುಚಕ್ರದ ನಿಗದಿತ ದಿನಾಂಕದ ಹತ್ತು ದಿನದ ಬಳಿಕವೂ ನೀವು ಋತುಚಕ್ರಕ್ಕೆ ಒಳಗಾಗದೆ ಗರ್ಭಧಾರಣೆಯ ಪರೀಕ್ಷಾ ಕಿಟ್ ನಲ್ಲಿ ನಿಮಗೆ ಋಣಾತ್ಮಕ ಫಲಿತಾಂಶ ಬಂದರೆ ಆಗ ನೀವು ತಕ್ಷಣ ಪರೀಕ್ಷಿಸಿಕೊಳ್ಳಬೇಕು ಅಥವಾ ಕೆಲವು ದಿನ ಬಿಟ್ಟು ಮತ್ತೆ ಪರೀಕ್ಷೆ ನಡೆಸಬೇಕು. ಕೆಲವೊಂದು ಸಲ ಧನಾತ್ಮಕ ಗೆರೆಗಳು ಕಂಡುಬರುವುದು. ಹೀಗಿದ್ದರೆ ಇನ್ನು ಕೆಲವು ದಿನದ ಬಳಿಕ ನೀವು ಪರೀಕ್ಷೆ ಮಾಡಿಕೊಳ್ಳುವುದು ಒಲಿತು.

ಲೈಂಗಿಕ ಕ್ರಿಯೆಯ ಎಷ್ಟು ಸಮಯದ ಬಳಿಕ ಪರೀಕ್ಷೆ ಮಾಡಿಕೊಳ್ಳಬಹುದು?
ನಿಮ್ಮ ದೇಹದಲ್ಲಿ ಇರುವಂತಹ ಎಚ್ ಸಿಜಿ ಯನ್ನು ಅವಲಂಬಿಸಿಕೊಂಡು ಪರೀಕ್ಷೆಯು ನಿರ್ಬರವಾಗಿದೆ. ಮನೆಯಲ್ಲೇ ಪರೀಕ್ಷೆ ಮಾಡಿಕೊಳ್ಳುವಂತಹ ಗರ್ಭಧಾರಣೆ ಪರೀಕ್ಷಾ ಕಿಟ್ ನ್ನು ಎಚ್ ಸಿಜಿ ಒಂದು ಮಟ್ಟಕ್ಕೆ ತಲುಪಿದಾಗ ಪತ್ತೆ ಮಾಡುವಂತೆ ತಯಾರಿಸಿರಲಾಗುತ್ತದೆ.

ನಿಮಗೆ ಹೆಚ್ಚಿನ ತಾಳ್ಮೆ ಇಲ್ಲವೆಂದಾದರೆ ಆಗ ನೀವು ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ನೋಡಿ. ಇದಕ್ಕಾಗಿ ನೀವು ಋತುಚಕ್ರ ತಪ್ಪಿಸಿಕೊಳ್ಳುವ ತನಕ ಕಾಯಬೇಕಾಗುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ ಬಳಿಕ 10-15 ದಿನಗಳ ಬಳಿಕ ನೀವು ಮನೆಯಲ್ಲೇ ಗರ್ಭಧಾರಣೆ ಪರೀಕ್ಷಾ ಕಿಟ್ ನಿಂದ ಪರೀಕ್ಷಿಸಿಕೊಳ್ಳಬಹುದು. ಪರೀಕ್ಷಾ ಕಿಟ್ ಗಳ ಗುಣಮಟ್ಟವನ್ನು ಅವಲಂಬಿಸಿಕೊಂಡು ಹಾರ್ಮೋನು ಎಚ್ ಸಿಜಿ ಪತ್ತೆಯಾಗುವ ಸಾಧ್ಯತೆಗಳು ಭಿನ್ನವಾಗಿರುವುದು.

ಋತುಚಕ್ರದ ಕ್ರಮಬದ್ಧತೆ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯ 10 ದಿನಕ್ಕೆ ಮೊದಲು ನೀವು ಪರೀಕ್ಷೆ ಮಾಡಿಕೊಂಡರೆ ಆಗ ನಿಮಗೆ ನಿಖರವಾಗಿರುವ ಫಲಿತಾಂಶ ಸಿಗುವುದು ಕಷ್ಟ. ವೈದ್ಯಕೀಯ ತಜ್ಞೆಯಾಗಿರುವ ಹೊರತಾಗಿ ನೀವು ನಿಖರವಾಗಿ ಅದನ್ನು ಪತ್ತೆ ಮಾಡುವುದು ಕಷ್ಟಕರ. ದೇಹದಲ್ಲಿ ವೀರ್ಯವು ಐದು ದಿನಗಳ ಕಾಲ ಜೀವಂತವಾಗಿರುವ ಕಾರಣದಿಂದ ನೀವು ಯಾವಾಗ ಗರ್ಭಧರಿಸಿದ್ದೀರಿ ಎಂದು ಹೇಳುವುದು ಕಷ್ಟ.

ಅಂಡೋತ್ಪತ್ತಿಯ ಕೆಲವು ದಿನಗಳ ಮೊದಲು ಅಥವಾ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಗರ್ಭಧರಿಸುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಆದರೆ ಫಲವತ್ತಾದ ಮೊಟ್ಟೆಗಳು ಅಳವಡಿಕೆಗೊಂಡು ಸರಿಯಾಗಿ ಎಚ್ ಸಿಜಿ ಬಿಡುಗಡೆಯಾಗುವ ತನಕ ಫಲಿತಾಂಶ ಸಿಗುವುದು ಕಷ್ಟ.

ಗರ್ಭಧಾರಣೆ ಪರೀಕ್ಷೆ: ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು
ಮಗೆಲ್ಲಾ ಗೊತ್ತಿರುವ ಹಾಗೆ ಮದುವೆಯ ಬಳಿಕದ ಜೀವನ ಮುಂದೆ ಸಾಗಲು ಗರ್ಭಧಾರಣೆ, ಮಗು ಪ್ರಮುಖವಾಗಿರುತ್ತದೆ. ಮಗು ದಂಪತಿಗಳ ನಡುವಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಗರ್ಭಧಾರಣೆಯಾಗಲು ಮೊದಲು ಮಾಡಬೇಕಾದ ಕೆಲಸವೆಂದರೆ ಅಂಡೋತ್ಪತ್ತಿಯ ದಿನಗಳನ್ನು ಲೆಕ್ಕ ಹಾಕುವುದು. ಅಂಡೋತ್ಪತ್ತಿಯ ಕೆಲವು ದಿನಗಳ ಬಳಿಕ ನೀವು ಗರ್ಭಧಾರಣೆಯ ಪರೀಕ್ಷೆ ಮಾಡಿಕೊಂಡರೆ ಗರ್ಭಧರಿಸಿರುವುದು ನಿಮಗೆ ತಿಳಿಯುತ್ತದೆ. ಗರ್ಭ ಧರಿಸಿದ್ದೀರಾ ಎಂದು ತಿಳಿಯಲು ಇರುವಂತಹ ಇನ್ನು ಕೆಲವು ಮಾರ್ಗಗಳು ಯಾವುದು ಎಂದು ಇಲ್ಲಿ ತಿಳಿದುಕೊಳ್ಳುವ....

ರಕ್ತ ಪರೀಕ್ಷೆ
ಗರ್ಭಧಾರಣೆಯನ್ನು ತಿಳಿಯಲು ರಕ್ತ ಪರೀಕ್ಷೆಯು ಅತೀ ಉತ್ತಮ ವಿಧಾನವಾಗಿದೆ. ರಕ್ತಪರೀಕ್ಷೆಯಲ್ಲಿ ಎಚ್ ಸಿಜಿ ಮಟ್ಟವು ಕಂಡುಬಂದರೆ ಗರ್ಭಧರಿಸಿರುವುದನ್ನು ವೈದ್ಯರು ದೃಢಪಡಿಸುತ್ತಾರೆ. ಅಂಡೋತ್ಪತ್ತಿಯ 11 ದಿನಗಳ ಬಳಿಕ ರಕ್ತ ಪರೀಕ್ಷೆ ಮಾಡಿಕೊಂಡರೆ ನಿಮಗೆ ಫಲಿತಾಂಶ ಸಿಗುವುದು.

ಮೂತ್ರ ಪರೀಕ್ಷೆ
ಮೂತ್ರ ಪರೀಕ್ಷೆಯಲ್ಲಿ ಎಚ್ ಸಿಜಿ ಮಟ್ಟವು ಕಂಡುಬಂದರೆ ಗರ್ಭಧರಿಸಿರುವುದು ಸ್ಪಷ್ಟವಾಗುತ್ತದೆ. ಮೂತ್ರ ಪರೀಕ್ಷೆಯನ್ನು ಅಂಡೋತ್ಪತ್ತಿಯ 13ನೇ ದಿನದ ಬಳಿಕ ಮಾಡಿಕೊಳ್ಳಬಹುದಾಗಿದೆ.

ಕಿಟ್ ಬಳಕೆ
ಮನೆಯಲ್ಲಿಯೇ ಗರ್ಭಧಾರಣೆ ಪರೀಕ್ಷೆಯ ಕಿಟ್ ಬಳಕೆ ಮಾಡಿಕೊಂಡು ತಿಳಿಯಬಹುದಾಗಿದೆ. ಕಿಟ್ ಗೆ ಮೂತ್ರದ ಹನಿಗಳನ್ನು ಹಾಕಿದಾಗ ಗರ್ಭಧಾರಣೆಯಾಗಿದೆಯಾ? ಇಲ್ಲವಾ ಎಂದು ತಿಳಿಯುತ್ತದೆ. ಆದರೆ ಈ ಪರೀಕ್ಷೆ ನಿಖರ ಫಲಿತಾಂಶವನ್ನು ನೀಡುವುದಿಲ್ಲ.

ತಿಂಗಳ ಮುಟ್ಟು ಆಗದಿರುವುದು
ತಿಂಗಳ ಮುಟ್ಟು ಆಗದೆ ಇರುವುದು ಗರ್ಭಧರಿಸಿರುವುದನ್ನು ಪರೀಕ್ಷಿಸುವ ಮತ್ತೊಂದು ವಿಧಾನವಾಗಿದೆ. ಆದರೆ ಮುಟ್ಟು ಆಗದೆ ಇರಲು ಹಲವಾರು ಕಾರಣಗಳು ಇರಬಹುದು. ಇದರಿಂದ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯುತ್ತಮ ವಿಧಾನವಾಗಿದೆ.

English summary

Can I do pregnancy test 12 days after sex?

Pregnancy test kits, especially the ones that can be used by a woman at home, are a stress reliever for many, as they get an almost confirmed pregnancy information through these home pregnancy test kits. However, there are certain attributes and features that you need to be aware of, in order to understand when and how accurately a pregnancy test result can be relied upon.
X
Desktop Bottom Promotion