For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಆದಷ್ಟು ಬೀಟ್‌ರೂಟ್ ಸೇವಿಸಬೇಕು

|

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೊಂದು ವಿಶೇಷ ಅನುಭವ. ಅದರ ಬಗ್ಗೆ ಹೆಚ್ಚಿನ ಚಿಂತನೆ ಅಥವಾ ಬೇಸರದ ಸಂಗತಿಗಳೇನೂ ಇರುವದಿಲ್ಲ. ಚಿಂತಿಸಬೇಕಾದ ಸಂಗತಿಯೆಂದರೆ ಗರ್ಭಾವಸ್ಥೆಯಲ್ಲಿ ಇರುವಾಗ ಯಾವ ಆಹಾರವನ್ನು ತಿನ್ನಬೇಕು? ಹಾಗೂ ಯಾವ ಬಗೆಯ ಆರೈಕೆಗೆ ಒಳಗಾಗಬೇಕು ಎನ್ನುವುದು. ತಾಯಿಯ ಗರ್ಭದಲ್ಲಿ 9 ತಿಂಗಳ ಕಾಲ ಮಗು ಇರುತ್ತದೆ ನಿಜ. ಆ ಸಮಯದಲ್ಲಿಯೇ ಮಗುವಿನ ಆರೋಗ್ಯವು ನಿರ್ಧರಿತವಾಗಿರುತ್ತದೆ ಎನ್ನುವುದನ್ನು ನಾವು ತಿಳಿದಿರಬೇಕು. ಹಾಗಾಗಿ ಗರ್ಭಾವಸ್ಥೆಯಲ್ಲಿ ಇರುವವರು ತಮ್ಮ ಮಗುವಿನ ಉತ್ತಮ ಆರೋಗ್ಯಕ್ಕೆ ಸಹಕರಿಸುವ ಆಹಾರಗಳನ್ನು ಸೇವಿಸಬೇಕು.

ಹೌದು, ಗರ್ಭಿಣಿಯರ ಆಹಾರದಲ್ಲಿ ಅತ್ಯಂತ ಪೌಷ್ಟಿಕಾಂಶ ಹಾಗೂ ಶಕ್ತಿಯನ್ನು ನೀಡುವ ಪದಾರ್ಥಗಳಲ್ಲಿ ಬೀಟ್ರೂಟ್ ಸಹ ಒಂದು. ಕೆಂಪು ತರಕಾರಿ ಎಂದು ಕರೆಯಲ್ಪಡುವ ಬೀಟ್ರೂಟ್ ಅತ್ಯುತ್ತಮ ಪೌಷ್ಟಿಕಾಂಶದ ಶಕ್ತಿಯನ್ನು ಪಡೆದುಕೊಂಡಿದೆ. ಇದು ಗರ್ಭಿಣಿಯರ ಆರೋಗ್ಯ ಉತ್ತಮವಾಗಿರಲು ಸಹಕರಿಸುವುದು. ಜೊತೆಗೆ ಮಗುವಿನ ಉತ್ತಮ ಬೆಳವಣಿಗೆ ಹಾಗೂ ಆರೋಗ್ಯ ವೃದ್ಧಿಗೆ ಉತ್ತಮವಾದ ತರಕಾರಿ ಎಂದು ಹೇಳಲಾಗುವುದು.

ಈ ನಿಟ್ಟಿನಲ್ಲಿಯೇ ವೈದ್ಯರು ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ತಿನ್ನುವ ಆಹಾರದಲ್ಲಿ ಬೀಟ್ರೂಟ್ ಸೇರಿಸಲು ಸಲಹೆ ನೀಡುತ್ತಾರೆ. ಗರ್ಭಿಣಿಯರು ತಮ್ಮ ದೈನಂದಿನ ಆಹಾರದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸುತ್ತಾ ಬರಬೇಕು. ಬೀಟ್ರೂಟ್ ಸಲಾಡ್, ಸೂಪ್, ವಿವಿಧ ಪದಾರ್ಥಗಳ ರೂಪದಲ್ಲಿ ಸೇವಿಸಬಹುದು. ಜೊತೆಗೆ ಇತರ ತರಕಾರಿಯೊಂದಿಗೆ ಸೇರಿಸಿ ಸವಿಯಬಹುದು. ಗರ್ಭಾವಸ್ಥೆಯಲ್ಲಿ ಬೀಟ್ರೂಟ್ ಸೇವನೆ ಮಾಡಿದರೆ ಯಾವೆಲ್ಲಾ ಬಗೆಯ ಪ್ರಯೋನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ಸೂಕ್ತ ವಿವರಣೆಯೊಂದಿಗೆ ವಿವರಿಸಿದೆ...

ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ

ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಕಬ್ಬಿಣಾಂಶದ ಅಗತ್ಯವಿರುತ್ತದೆ. ಇದು ರಕ್ತದ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುವುದು. ಗರ್ಭಿಣಿಸಯರು ಗಣನೀಯವಾಗಿ ಬೀಟ್ರೂಟ್ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಉತ್ತಮ ಕಬ್ಬಿಣಾಂಶವನ್ನು ಹೊಂದಬಹುದು. ಜೊತೆಗೆ ರಕ್ತಹೀನತೆಯ ಸಮಸ್ಯೆಯಿಂದ ದೂರ ಇರಬಹುದು. ರಕ್ತ ಹೀನತೆ ಸಮಸ್ಯೆ ಇರುವವರು ಬೀಟ್ರೂಟ್ ರಸವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.

Most Read: ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್

ವಿಟಮಿನ್

ವಿಟಮಿನ್ "ಸಿ" ಅನ್ನು ಒಳಗೊಂಡಿದೆ

ಬೀಟ್ರೂಟ್‍ಅಲ್ಲಿ ಅತ್ಯುತ್ತಮವಾದ ವಿಟಮಿನ್ ಸಿ ಇರುತ್ತದೆ. ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ವಿಟಮಿನ್‍ಗಳು ಸಹಕರಿಸುತ್ತವೆ. ಗರ್ಭಿಣಿಯರು ಬೀಟ್ರೂಟ್ ರಸವನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಆರೋಗ್ಯಕರವಾದ ಮತ್ತು ಬಲವಾದ ಮಗುವಿಗೆ ಜನ್ಮನೀಡುವರು. ಈ ಕುರಿತು ಸ್ತ್ರೀರೋಗ ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಅತ್ಯುತ್ತಮ.

ಫೋಲಿಕ್ ಆಮ್ಲವನ್ನು ಒಳಗೊಂಡಿದೆ

ಫೋಲಿಕ್ ಆಮ್ಲವನ್ನು ಒಳಗೊಂಡಿದೆ

ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರ ನೀಡುವ ಪೋಲಿಕ್ ಆಮ್ಲವನ್ನು ಬೀಟ್ರೂಟ್ ನೀಡುವುದು. ಹಾಗಾಗಿ ಬೀಟ್ರೂಟ್ ಅನ್ನು ಕಚ್ಚಾ ಆಹಾರವಾಗಿ ಅಥವಾ ಬೇಯಿಸಿದ ಆಹಾರವಾಗಿಯೂ ಸೇವನೆ ಮಾಡಬಹುದು. ಅಲ್ಲದೆ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುವುದು.

Most Read: ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ- ಮದುವೆಯ ಸಂದರ್ಭದಲ್ಲಿ ಸಮಸ್ಯೆ ಬರಲಿದೆ!!

ರಕ್ತ ಶುದ್ಧೀಕರಣ ಮಾಡುವುದು

ರಕ್ತ ಶುದ್ಧೀಕರಣ ಮಾಡುವುದು

ಅತ್ಯುತ್ತಮ ಪೌಷ್ಟಿಕಾಂಶವನ್ನು ಹೊಂದಿರುವ ಈ ತರಕಾರಿಯು ರಕ್ತವನ್ನು ಶುದ್ಧೀಕರಿಸುವ ಸಾಮಥ್ರ್ಯವನ್ನು ಒಳಗೊಂಡಿದೆ. ಇದು ಮಗುವಿನ ಆರೋಗ್ಯದಲ್ಲಿ ಉಂಟಾಗುವ ಸಂಭವನೀಯ ಸಮಸ್ಯೆಗಳನ್ನು ನಿವಾರಿಸುವುದು. ಅಲ್ಲದೆ ಗರ್ಭಿಣಿಯರಿಗೆ ಭೌತಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಹೆರಿಗೆಯ ಸಂದರ್ಭದಲ್ಲಿ ಉತ್ತಮ ಸಹಕಾರ ನೀಡುವುದು. ಇದರಲ್ಲಿ ಕಾರ್ಬೋಹೈಡ್ರೇಟ್, ವಿಟಮಿನ್‍ಎ ಮತ್ತು ಬಿ, ಕರಗಬಲ್ಲ ನಾರಿನಂಶ, ಪ್ರೋಟೀನ್‍ಗಳು ಅತ್ಯುತ್ತಮವಾಗಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಗರ್ಭಾವಸ್ಥೆಯಲ್ಲಿ ಭೀಟ್ರೂಟ್ ಅನ್ನು ಹೇಗೆ ಸೇವಿಸಬೇಕು?

ಗರ್ಭಾವಸ್ಥೆಯಲ್ಲಿ ಭೀಟ್ರೂಟ್ ಅನ್ನು ಹೇಗೆ ಸೇವಿಸಬೇಕು?

ಬೀಟ್ರೂಟ್ ಅನ್ನು ಇತರ ಆಹಾರ ಪದಾರ್ಥಗಳೊಂದಿಗೆ ಸೇರಿಸಿ ಸೇವಿಸಬಹುದು. ಸಲಾಡ್ ರೂಪದಲ್ಲಿಯೂ ಸೇವಿಸಬಹುದು. ಇದು ಗರ್ಭಿಣಿಯರಿಗೆ ಒಂದು ಉತ್ತಮ ಆಯ್ಕೆಯಾಗಿರುತ್ತದೆ. ಇದನ್ನು ಹುರಿದು ಅಥವಾ ಇತರ ಹುರಿದ ತರಕಾರಿಗಳೊಂದಿಗೆ ಸೇರಿಸಿ ಸೇವಿಸಬಹುದು.ಬೇಯಿಸಿದ ಬೀಟ್ರೂಟ್ ಅನ್ನು ಗರ್ಭಾವಸ್ಥೆಯಲ್ಲಿ ಇರುವಾಗ ಲಘುವಾಗಿ ಸ್ವೀಕರಿಸಬಹುದು.

English summary

Benefits Of Beetroots During Pregnancy

Being pregnant is the most amazing experience! There is so much to worry about and one of the most common of worries is the diet to be adopted. After all, these 9 months dictate the health of the baby in the future. Caution and care take over everything else. Here is suggestion that can add a great deal to your nutrition chart – beetroots! Yes, know why beetroot during pregnancy is safe
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more