For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ಬೆಕ್ಕಿನೊಂದಿಗೆ ಆಡಬೇಡಿ!, ಆದಷ್ಟು ಅದರಿಂದ ದೂರವಿರಿ...

By Arshad
|

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ಆಗುತ್ತಿರುವ ಬದಲಾವಣೆಯ ಮೂಲಕ ಈಕೆಯ ರೋಗ ನಿರೋಧಕ ಶಕ್ತಿ ಕೊಂಚ ಕುಂದಿರುತ್ತದೆ. ಇದಕ್ಕೆಲ್ಲಾ ಕಾರಣ ಗಾಳಿಯಲ್ಲಿರುವ ಹಲವಾರು ಬಗೆಯ ಕ್ರಿಮಿಗಳು ಉಸಿರಿನ ಮೂಲಕ ದೇಹ ಪ್ರವೇಶಿಸುತ್ತಲೇ ಇರುತ್ತವೆ ಅಲ್ಲದೆ ಎಷ್ಟೋ ಸೂಕ್ಷ್ಮಜೀವಿಗಳು ನಮ್ಮ ದೇಹದಲ್ಲಿಯೇ ಆಶ್ರಯ ಪಡೆದಿವೆ.

ಅಂತೆಯೇ ಪ್ರಾಣಿಗಳ ದೇಹದಲ್ಲಿಯೂ! ಬರಿಗಣ್ಣಿನಿಂದ ಇವುಗಳನ್ನು ನೋಡಲು ಸಾಧ್ಯವಿಲ್ಲ. ಆದರೆ ಈ ಪರಾವಲಂಬಿ ಜೀವಿಗಳ ಆಕ್ರಮಣ ಆಗಿದೆ ಎಂದು ತಿಳಿಯುವುದು ಆರೋಗ್ಯ ಕೆಟ್ಟಾಗಲೇ. ಗರ್ಭಾವಸ್ಥೆಯಲ್ಲಿ ಈಗಾಗಲೇ ಕುಂದಿರುವ ರೋಗ ನಿರೋಧಕ ಶಕ್ತಿಗೆ ಈ ಪರಾವಲಂಬಿ ಜೀವಿಗಳನ್ನು ಎದುರಿಸುವ ಶಕ್ತಿ ಸಾಲದೇ ಆರೋಗ್ಯ ಕೆಡಬಹುದು.

ಗರ್ಭಿಣಿಯರಿಗೆ ಸಡನ್ ಆಗಿ ಕಾಡುವ ಕೆಳಹೊಟ್ಟೆಯ ನೋವು! ನಿರ್ಲಕ್ಷಿಸ ಬೇಡಿ...

ವಿಶೇಷವಾಗಿ Toxoplasma-Gondii ಎಂಬ ಪರಾವಲಂಬಿ ಸೂಕ್ಷ್ಮಜೀವಿ ಗರ್ಭವತಿಯರಿಗೆ ಅತಿ ಅಪಾಯಕಾರಿಯಾಗಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಹಸಿಮಾಂಸದಲ್ಲಿರುವ ಈ ಪರಾವಲಂಬಿ ಕ್ರಿಮಿ ಮಾಂಸವನ್ನು ಬೇಯಿಸದೇ ತಿನ್ನುವ ಮೂಲಕ ದೇಹ ಪ್ರವೇಶಿಸಿ ಧಾಳಿ ಎಸಗುತ್ತದೆ.ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ....

ಗರ್ಭಾವಸ್ಥೆಯಲ್ಲಿ ಹಸಿಮಾಂಸವೇಕೆ ಬೇಡ?

ಗರ್ಭಾವಸ್ಥೆಯಲ್ಲಿ ಹಸಿಮಾಂಸವೇಕೆ ಬೇಡ?

ಗರ್ಭಾವಸ್ಥೆಯಲ್ಲ, ಯಾವುದೇ ಸಮಯದಲ್ಲಿಯೂ ಹಸಿಮಾಂಸ ಆರೋಗ್ಯಕರವಲ್ಲ. ಆದರೆ ಗರ್ಭವತಿಯರಿಗೆ ಇದು ತುಂಬಾ ಅಪಾಯಕಾರಿ. ಬೆಕ್ಕುಗಳೊಂದಿಗೆ ಆಡುವಾಗ ಅವುಗಳ ಕೂದಲು ಅಥವಾ ಮಲದ ಮೂಲಕವೂ ಸೋಂಕು ಉಂಟುಮಾಡುವ ಕ್ರಿಮಿಗಳು ಗರ್ಭಿಣಿಯ ದೇಹ ಸೇರಬಹುದು.

Toxoplasma-Gondii

Toxoplasma-Gondii

ಈ ಹೆಸರಿನ ಪರಾವಲಂಬಿ ಜೀವಿ ಗರ್ಭಿಣಿಯ ದೇಹ ಪ್ರವೇಶಿಸಿದರೆ ಗರ್ಭಾಶಯದ ಮೇಲೆ ಧಾಳಿ ಎಸಗಿ ಅವಧಿಗೂ ಮುನ್ನ ಹೆರಿಗೆಯಾಗುವ ಅಥವಾ ಕುಂದುಗಳೊಂದಿಗೆ ಮಗು ಹುಟ್ಟುವ ಸಾಧ್ಯತೆ ಇರುತ್ತದೆ. ಬೇಯಿಸದ ದನ, ಕೋಳಿ ಅಥವಾ ಹಂದಿ ಮಾಂಸದ ಮೂಲಕ ಈ ಜೀವಿ ದೇಹವನ್ನು ಪ್ರವೇಶಿಸುತ್ತದೆ. ಬೆಕ್ಕಿನ ಮಲ ಮನೆಯ ಸುತ್ತಮುತ್ತ ಇದ್ದರೂ ಈ ಜೀವಿ ನೀರಿನ ಮೂಲಕ ದೇಹವನ್ನು ಪ್ರವೇಶಿಸಬಹುದು ಹಾಗೂ ಸೋಂಕು ಉಂಟುಮಾಡಬಹುದು.

ಈ ಜೀವಿಯಿಂದ ಇನ್ನೇನು ಅಪಾಯಗಳಿವೆ?

ಈ ಜೀವಿಯಿಂದ ಇನ್ನೇನು ಅಪಾಯಗಳಿವೆ?

ಒಂದು ವೇಳೆ ಈ ಜೀವಿಯ ಇರುವಿಕೆಯನ್ನು ಕಂಡುಕೊಳ್ಳದೇ ಹೋದರೆ ಸೋಂಕು ವಿಪರೀತವಾಗಿ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಅಥವಾ ನ್ಯೂನ್ಯತೆಗಳನ್ನು ಹೊಂದಿರುವ ಮಗು ಹುಟ್ಟಬಹುದು. ಈ ನ್ಯೂನ್ಯತೆಗಳಲ್ಲಿ ಮೆದುಳು ಬೆಳೆದಿರದ, ಕುರುಡಾಗಿ ಹುಟ್ಟುವ ಸಾಧ್ಯತೆಗಳಿವೆ.

ಇವು ವಯಸ್ಕರನ್ನೂ ಬಾಧಿಸುತ್ತವೆಯೇ?

ಇವು ವಯಸ್ಕರನ್ನೂ ಬಾಧಿಸುತ್ತವೆಯೇ?

ಸಾಮಾನ್ಯವಾಗಿ ವಯಸ್ಕರ ರೋಗ ನಿರೋಧಕ ಶಕ್ತಿ ಬಲವಾಗಿಯೇ ಇರುವ ಕಾರಣ ಈ ಪರಾವಲಂಬಿ ಜೀವಿಯನ್ನೂ ಸಮರ್ಥವಾಗಿ ಎದುರಿಸುತ್ತದೆ. ಆದರೆ ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕುಂದಿರುವ ಕಾರಣ ಇವರು ಸುಲಭವಾಗಿ ಸೋಂಕಿಗೆ ತುತ್ತಾಗುತ್ತಾರೆ. ವಯಸ್ಕರಿಗೆ ಒಂದು ವೇಳೆ ಈ ಜೀವಿಯ ಸೋಂಕು ಎದುರಾದರೂ ರೋಗ ನಿರೋಧಕ ಶಕ್ತಿ ಜ್ವರದ ಮೂಲಕ ದೇಹದ ತಾಪಮಾನ ಹೆಚ್ಚಿಸಿ ಕೆಲವೇ ದಿನಗಳಲ್ಲಿ ಈ ಕ್ರಿಮಿಗಳನ್ನು ಕೊಂದು ಹೊರಗಟ್ಟುತ್ತವೆ.

ಸೋಂಕಿನ ಸೂಚನೆಗಳು

ಸೋಂಕಿನ ಸೂಚನೆಗಳು

ಸೋಂಕು ಎದುರಾದಾಗ ಜ್ವರ, ತಲೆನೋವು, ಹಸಿವಿಲ್ಲದಿರುವುದು, ಕುತ್ತಿಗೆ ಪೆಡಸಾಗುವುದು, ಗಂಟಲ ಬೇನೆ, ದ್ವಂದ್ವ, ಚರ್ಮದಲ್ಲಿ ಕೆಂಪು ಗೀರುಗಳು ಮೂಡುವುದು, ಕಿವಿನೋವು ಮತ್ತು ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಈ ಪರಾವಲಂಬಿಯ ಬಗ್ಗೆ ಇನ್ನಷ್ಟು

ಈ ಪರಾವಲಂಬಿಯ ಬಗ್ಗೆ ಇನ್ನಷ್ಟು

ಈ ಪರಾವಲಂಬಿ ಏಕಜೀವಕೋಶದ ಜೀವಿಯಾಗಿದ್ದು ನಮ್ಮ ಒಂದು ಜೀವಕೋಶದೊಳಕ್ಕೂ ಪ್ರವೇಶ ಪಡೆಯಬಹುದಾದ ಒಂದು ಬದಿ ಚೂಪಾಗಿರುವ ಅಕ್ಕಿಕಾಳಿನಂತಹ ರೂಪ ಪಡೆದಿದೆ. ಇದು ಪ್ರೋಟೋಜೋವಾ ಪಂಗಡದ ಏಕಜೀವಿ ವರ್ಗಕ್ಕೆ ಸೇರಿದೆ. ಒಂದು ಸಂಶೋಧನೆಯ ಪ್ರಕಾರ ಈ ವಿಶ್ವದಲ್ಲಿ ಅರ್ಧದಷ್ಟು ಜನರ ಜೀವಕೋಶಗಳಲ್ಲಿ ಈ ಕ್ರಿಮಿ ಈಗಾಗಲೇ ಪ್ರವೇಶ ಪಡೆದುಬಿಟ್ಟಿದೆ. ಅಷ್ಟೇ ಅಲ್ಲ, ಬೆಕ್ಕಿನ ದೇಹದ ತುಂಬಾ ಈ ಜೀವಿಯೇ ತುಂಬಿದೆ.

ಇದು ಮೆದುಳಿಗೆ ಹಾನಿ ಎಸಗುತ್ತದೆಯೇ?

ಇದು ಮೆದುಳಿಗೆ ಹಾನಿ ಎಸಗುತ್ತದೆಯೇ?

ಈ ಕ್ರಿಮಿಯಿಂದ ಮನುಷ್ಯರ ನಡವಳಿಕೆಯಲ್ಲಿ ಬದಲಾವಣೆ ಕಂಡುಬರುತ್ತದೆ ಎಂದು ಸಂಶೋಧನೆಯ ಸಾರ ತಿಳಿಸಿದರೂ ಇದನ್ನು ದೃಢೀಕರಿಸುವ ಅಧ್ಯಯನಗಳು ಇನ್ನಷ್ಟೇ ನಡೆಯಬೇಕಾಗಿವೆ. ಆದರೆ ಇವುಗಳು ಮನುಷ್ಯರ ಮೆದುಳಿನ ಮೇಲೆ ಪ್ರಭಾವ ಬೀರಬಲ್ಲವು ಹಾಗೂ ಹಠಾತ್ ಆಗಿ ಬದಲಾಗುವ ಪ್ರವೃತ್ತಿಯನ್ನೂ ವ್ಯಕ್ತಿಯಲ್ಲಿ ಮೂಡಿಸಬಲ್ಲವು ಎಂದು ಸಂಶೋಧನೆ ತಿಳಿಸುತ್ತದೆ. ಈ ಸೋಂಕಿನ ಪ್ರಭಾವದಿಂದ ಛಿದ್ರಮನಸ್ಕತೆ (schizophrenia) ಸಹಾ ಎದುರಾಗಬಹುದು. ಆದರೆ ತಜ್ಞರು ಈ ವಿಷಯಗಳನ್ನು ಹೆಚ್ಚಿನ ಪರೀಕ್ಷೆಗಳಿಂದ ದೃಢೀಕರಿಸುವವರೆಗೂ ಇವು ಕೇವಲ ಸಾಧ್ಯತೆಗಳಷ್ಟೇ ಆಗಿವೆ. ಆದರೆ ಯಾವುದೇ ಕಾರಣಕ್ಕೂ ಗರ್ಭಿಣಿಯರು ಮಾತ್ರ ಈ ಪರಾವಲಂಬಿ ಜೀವಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಗರ್ಭಾವಸ್ಥೆಯಲ್ಲಿ ಬೇಯಿಸದ ಮಾಂಸವನ್ನು ತಿನ್ನದೇ ಇರುವ ಹಾಗೂ ಮನೆಯಲ್ಲಿ ಬೆಕ್ಕೇ ಇರದಂತೆ ನೋಡಿಕೊಳ್ಳುವ ಮೂಲಕ ಹೆಚ್ಚಿನ ಕಾಳಜಿ ವಹಿಸಬಹುದು.

English summary

Why Avoid Raw Meat And Playing With Cats During Pregnancy?

The naked eyes can't see them and that is why you cannot even know that they are living on you. But one sign of parasites infecting you is illness. When you fall sick, it means those little devils are robbing your health. And during pregnancy, it is very important to keep some parasites away. Here is a new study that says that a parasite named Toxoplasma-Gondii is very dangerous for pregnant women.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more