Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮಹಿಳೆಯರೇ ನೆನಪಿರಲಿ-ತಡ ಮಾಡಿದಷ್ಟು ಗರ್ಭಧಾರಣೆಯ ಸಾಧ್ಯತೆ ಕಡಿಮೆ!
ಉನ್ನತ ಶಿಕ್ಷಣ, ಉದ್ಯೋಗ, ಬಳಿಕ ತನ್ನ ಜೀವನದಲ್ಲಿ ನೆಲೆಯೂರಬೇಕೆಂಬ ಕನಸಿನಿಂದಾಗಿ ಯುವ ಪೀಳಿಗೆಯು ಮದುವೆಯೆನ್ನುವ ಜೀವನದ ಪ್ರಮುಖ ಘಟ್ಟವನ್ನು ಮುಂದೂಡುತ್ತಾ ಹೋಗುತ್ತಾ ಇದೆ. ಜೀವನದಲ್ಲಿ ಯಶಸ್ಸು ಪಡೆಯಬೇಕೆನ್ನುವುದು ನಿಜ. ಆದರೆ ಮದುವೆ ಎನ್ನುವುದು ಮುಖ್ಯ. ಯಾವ್ಯಾವ ವಯಸ್ಸಿನಲ್ಲಿ ಯಾವುದ್ಯಾವುದು ಆಗಬೇಕೋ ಅದು ಆಗಲೇಬೇಕು. ಇಲ್ಲವೆಂದಾದರೆ ಅದು ಮುಂದೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.... ಇದಕ್ಕೆ ಮದುವೆ ಕೂಡ ಹೊರತಾಗಿಲ್ಲ!
ಅದೇ ರೀತಿ ಮದುವೆ ಬಳಿಕ ಮಗುವನ್ನು ಪಡೆಯಬೇಕೆನ್ನುವ ಹಂಬಲ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ ಇಂದಿನ ಯುವ ಪೀಳಿಗೆ 35ರ ಹರೆಯದ ತನಕ ಮಗು ಬೇಡ ಎನ್ನುವ ನಿರ್ಧಾರಕ್ಕೆ ಬರುತ್ತಾ ಇದೆ. ಇದು ತುಂಬಾ ಕೆಟ್ಟ ನಿರ್ಧಾರವೆಂದು ತಜ್ಞರು ಹೇಳುತ್ತಾರೆ. ಮಗು ಪಡೆಯಲು ವಿಳಂಬವಾದರೆ ಅದರಿಂದ ಆಗಬಹುದಾದ ಕೆಲವೊಂದು ಸಮಸ್ಯೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ... ಮುಂದೆ ಓದಿ..

ಅಂಡಾಣುಗಳು....
ವರ್ಷಗಳು ಉರುಳಿದಂತೆ ಮಹಿಳೆಯ ಗರ್ಭಕೋಶದಲ್ಲಿರುವ ಅಂಡಾಣುಗಳಲ್ಲಿ ಪ್ರತೀಬಾರಿ ಮುಟ್ಟಾದಾಗ ಎರಡು ಅಂಡಾಣುಗಳು ಸಾಯುತ್ತವೆ. ಇದರಿಂದ ಅಂಡಾಣುಗಳು ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಅಂಡಾಣುಗಳ ಸಂಖ್ಯೆ ಕಮ್ಮಿಯಾದರೆ ಗರ್ಭಧಾರಣೆಯ ಸಾಮರ್ಥ್ಯ ಕುಗ್ಗುವುದು.
ಗರ್ಭಕೋಶದಲ್ಲಿರುವ ಅಂಡಾಣುಗಳು ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ನೀವು ಬಯಸಿದಾಗ ಗರ್ಭ ಧರಿಸುವುದು ಕಷ್ಟವಾಗಬಹುದು.

ವಯಸ್ಸು ಮೂವತ್ತು ದಾಟಿದ ಬಳಿಕ...
30ರ ಬಳಿಕ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಕಡಿಮೆಯಾಗುವುದು. ಇದರಿಂದ ನಿಮಗೆ ಬೇಕಾದರೆ ಮಗು ಪಡೆಯುವ ಅವಕಾಶ ಕಡಿಮೆಯಾಗಬಹುದು.

ಇತರ ಕೆಲವೊಂದು ಸಮಸ್ಯೆಗಳು...
ವಯಸ್ಸಾಗುತ್ತಿರುವಂತೆ ಇತರ ಕೆಲವೊಂದು ಸಮಸ್ಯೆಗಳಾದ(ಫಾಲೋಪಿಯನ್ ಟ್ಯೂಬ್, ಎಂಡೋಮೆಟ್ರಸಿಸ್) ನಿಮ್ಮ ಗರ್ಭಧಾರಣೆಯನ್ನು ತಡೆಯಬಹುದು.

ವಯಸ್ಸಾದ ಬಳಿಕ ಗರ್ಭಧರಿಸಿದರೆ...
ಒಂದು ವೇಳೆ ವಯಸ್ಸಾದ ಬಳಿಕ ಗರ್ಭಧರಿಸಿದರೆ ಮಗುವಿನಲ್ಲಿ ಜನನದ ವೇಳೆ ಆಗುವಂತಹ ಅಂಗವೈಫಲ್ಯದ ಸಾಧ್ಯತೆಗಳು ಹೆಚ್ಚಿರುತ್ತದೆ. 45ರ ಬಳಿಕ ಗರ್ಭಧರಿಸಿದರೆ ಮಗು ಅಂಗವೈಫಲ್ಯಕ್ಕೆ ಒಳಗಾಗುವ ಸಾಧ್ಯತೆ 30 ರಲ್ಲಿ 1ರಷ್ಟಿದೆ. 30ರ ಹರೆಯದಲ್ಲಿ ಇದರ ಸಾಧ್ಯತೆ 1000ದಲ್ಲಿ ಒಂದು. ಹದಿಹರೆಯದಲ್ಲೇ ಗರ್ಭದರಿಸಿದರೆ ಆಗ ಆರೋಗ್ಯವಂತ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.

ಅಕಾಲಿಕ ಹೆರಿಗೆ..!
ವಯಸ್ಸಾದ ಬಳಿಕ ಗರ್ಭ ಧರಿಸಿದರೆ ಗರ್ಭಪಾತ ಮತ್ತು ಅಕಾಲಿಕ ಹೆರಿಗೆಯಾಗುವ ಸಾಧ್ಯತೆ ಹೆಚ್ಚಿದೆ.

ಆ ಸಮಯದಲ್ಲಿ ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ
ವಯಸ್ಸಾದ ಬಳಿಕ ಹೆರಿಗೆ ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ.

ಫಲವತ್ತತೆ ಸಮಸ್ಯೆಯೂ ಕಾಡಬಹುದು...
35ರ ಬಳಿಕ ಮಹಿಳೆಯರು ಹಾಗೂ ಪುರುಷರಲ್ಲಿ ಫಲವತ್ತತೆ ಸಮಸ್ಯೆ ಕಾಡಬಹುದು. ಇದರಿಂದ ನೀವು ಹಾಗೂ ನಿಮ್ಮ ಸಂಗಾತಿ ಹದಿಹರೆಯದಲ್ಲಿ ಇರುವಾಗಲೇ ಮಗು ಪಡೆಯಲು ನಿರ್ಧರಿಸಿ.
ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

ಮಗುವಿನ ಆರೈಕೆಯಲ್ಲಿ ಸಮಸ್ಯೆ
35ರ ಬಳಿಕ ಗರ್ಭಧಾರಣೆ ಮಾಡಿ ಮಗುವನ್ನು ಪಡೆದರೂ ಅದರಿಂದ ಮುಂದೆ ಮಗುವಿನ ಆರೈಕೆಯಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ.



Click it and Unblock the Notifications











