ಗರ್ಭಧಾರಣೆಯ ಅವಧಿಯಲ್ಲಿ ಸೆಲೆಬ್ರಿಟಿಗಳ ಆಹಾರ ಪಥ್ಯ ಹೇಗಿರುತ್ತೆ ಗೊತ್ತೇ?

By: jaya subramanya
Subscribe to Boldsky

ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಕನಸು. ಆದರೆ ಗರ್ಭ ಧರಿಸಿದ ಬಳಿಕ ಎದುರಾಗುವ ಬದಲಾವಣೆಗಳಿಗೆ ದೇಹ ಮತ್ತು ಮನಸ್ಸು ತಕ್ಷಣವೇ ಸ್ಪಂದಿಸದ ಕಾರಣ ಕೆಲವರು ಹೆಚ್ಚೇ ಬಳಲುತ್ತಾರೆ. ಇದರಲ್ಲಿ ಪ್ರಮುಖವಾದುದು ವಾಕರಿಕೆ ಮತ್ತು ವಾಂತಿ. ಪ್ರತಿ ಹತ್ತು ಗರ್ಭಿಣಿಯರಲ್ಲಿ ಕನಿಷ್ಠ ಎಂಟು ಗರ್ಭಿಣಿಯರಾದರೂ ಈ ತೊಂದರೆಗಳಿಂದ ಬಳಲಿಯೇ ಇರುತ್ತಾರೆ. ಇದು ಆರು ವಾರಗಳಿಂದ ಪ್ರಾರಂಭವಾಗಿ ಎಂಟನೆಯ ಮತ್ತು ಒಂಬತ್ತನೆಯ ವಾರದಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ.

ಬಳಿಕ ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ. ಇದನ್ನು ಇಲ್ಲವಾಗಿಸಲು ಯಾವುದೇ ಮದ್ದು ಇಲ್ಲ ಮತ್ತು ಇಲ್ಲವಾಗಿಸಲೂ ಬಾರದು. ಮಹಿಳೆಯು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಿನ ಮಾನಸಿಕ ಮತ್ತು ದೈಹಿಕ ಸಂಕಟಗಳಿಗೆ ಒಳಗಾಗುವುದರಿಂದ ಈ ಸಮಯದಲ್ಲಿ ಹೆಚ್ಚಿನ ಅಸ್ಥೆಯನ್ನು ವಹಿಸಬೇಕಾಗುತ್ತದೆ. ನಿಮ್ಮ ವಾದ ವಿವಾದಗಳಿಂದ ನಿಮ್ಮ ಮಗುವಿಗೆ ಹಾನಿಯುಂಟಾಗುತ್ತದೆ. ನಿಮ್ಮ ಗರ್ಭದಲ್ಲಿರುವ ಮಗು ಮಾನಸಿಕ ದೈಹಿಕ ಆರೋಗ್ಯದಿಂದ ಇರಬೇಕು ಎಂದಾದಲ್ಲಿ ನೀವು ಗರ್ಭಾವಸ್ಥೆಯಲ್ಲಿ ಕೆಲವೊಂದು ಅಂಶಗಳ ಕಡೆಗೆ ಗಮನ ನೀಡಬೇಕು.

ಗರ್ಭಿಣಿಯಾಗಿರುವಾಗ ಯಾವ ಆಹಾರವನ್ನು ತೆಗೆದುಕೊಳ್ಳಬೇಕು, ತೆಗೆದುಕೊಳ್ಳಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಂದಿನ ಲೇಖನದಲ್ಲಿ ಸೆಲೆಬ್ರಿಟಿಗಳು ಯಾವ ಮಾದರಿಯ ಆಹಾರಗಳನ್ನು ಸೇವಿಸುತ್ತಿದ್ದಾರೆ ಎಂಬ ವಿವರ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಗರ್ಭಾವಸ್ಥೆಯಲ್ಲಿ ನೀವು ತಿನ್ನುವ ಆಹಾರವು ನಿಮಗಾಗಿ ಮಾತ್ರವಲ್ಲ, ಮಗುವಿನ ಆರೋಗ್ಯಕ್ಕೆ ಮಾತ್ರವಲ್ಲ. ಆದರೆ ಇದರರ್ಥ ನೀವು ಎರಡು ತಿನ್ನಲು ಅಗತ್ಯ ಎಂದು ಅರ್ಥವಲ್ಲ. ಇದು ಒಂದು ದೊಡ್ಡ ತಪ್ಪು ಕಲ್ಪನೆ. ನೀವು ಮಾಡಬೇಕಾಗಿರುವುದೆಲ್ಲವೂ ತಾಜಾ, ಆರೋಗ್ಯಕರವಾಗಿರಬೇಕು. 

ಸೆಲೆಬ್ರಿಟಿಗಳು ಬಹುತೇಕ ಸಂದರ್ಭದಲ್ಲಿ ಇತರೆ ಸಾಮಾನ್ಯ ಹೆಂಗಸರು ನೋಡಿ ಅಸೂಯೆಪಡುವ ಮಟ್ಟಿಗೆ ದೈಹಿಕವಾಗಿ ಫಿಟ್ ಆಗಿರುತ್ತಾರೆ. ಅದರಲ್ಲೂ ಗರ್ಭಿಣಿಯಾಗಿರುವ ಸೆಲೆಬ್ರಿಟಿಯು ಏನನ್ನು ತಿನ್ನುತ್ತಾರೆ ಎಂಬುದು, ಕೆಲವರ ಕುತೂಹಲವನ್ನು ಕೆರಳಿಸುವ ವಿಚಾರವಾಗಿರುತ್ತದೆ. ಮಗು ಹುಟ್ಟಿದ ಮೇಲೆ, ಕೆಲವೇ ತಿಂಗಳುಗಳಲ್ಲಿ ಅವರು ಹೇಗೆ ತಮ್ಮ ದೇಹದ ಆಕಾರವನ್ನು ಮತ್ತೆ ಪುನಃ ಸಂಪಾದಿಸುತ್ತಾರೆ, ಆ ಕೊಬ್ಬನ್ನು ಹೇಗೆ ಕರಗಿಸಿಕೊಳ್ಳುತ್ತಾರೆ ಎಂಬುದು ಸಹ ಚರ್ಚಾರ್ಹ ವಿಷಯವಾಗಿದೆ. ಬನ್ನಿ ಸೆಲೆಬ್ರಿಟಿಗಳು ಗರ್ಭಧಾರಣೆಯ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಹೇಗೆ ನಿಭಾಯಿಸುತ್ತಾರೆ ಬನ್ನಿ ನೋಡೋಣ...

ನೀವು ಗರ್ಭಿಣಿಯಾದಾಗ ಏನು ತಿನ್ನುತ್ತೀರಿ

ನೀವು ಗರ್ಭಿಣಿಯಾದಾಗ ಏನು ತಿನ್ನುತ್ತೀರಿ

ಗರ್ಭಿಣಿಯಾದಾಗ ನೀವು ನಿಮಗಾಗಿ ಮಾತ್ರವಲ್ಲದೆ, ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಾಗಿ ಸಹ ತಿನ್ನಬೇಕಾಗುತ್ತದೆ. ಆದರೆ ಇದು ಇಬ್ಬರಿಗಾಗಿ ತಿನ್ನುವುದು ಎಂದರ್ಥವಲ್ಲ. ಏಕೆಂದರೆ ಇದೊಂದು ದೊಡ್ಡ ತಪ್ಪುಕಲ್ಪನೆಯಾಗಿರುತ್ತದೆ. ಇರುವ ಆಹಾರದಲ್ಲಿಯೇ ತಾಜಾ ಆದ, ಆರೋಗ್ಯಕರವಾದ ಮತ್ತು ಪರಿಪೂರ್ಣವಾದ ಆಹಾರವನ್ನು ಸೇವಿಸಿ.

ನಾರಿನಂಶ

ನಾರಿನಂಶ

ನಿಮ್ಮ ಜೀರ್ಣಾಂಗ ವ್ಯೂಹವು ಆರೋಗ್ಯಕರವಾಗಿರಬೇಕೆಂದರೆ, ನೀವು ನಾರಿನಂಶವನ್ನು ಹೊಂದಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕಾಗುತ್ತದೆ. ಆಹಾರದಲ್ಲಿರುವ ನಾರಿನಂಶವು (ಪಾಲಕ್, ಸೊಪ್ಪು)ನಿಮ್ಮ ಜೀರ್ಣಾಂಗವ್ಯೂಹವನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಜೊತೆಗೆ ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತವಾಗಿ ಇಡುತ್ತದೆ.

ಕಬ್ಬಿಣಾಂಶ

ಕಬ್ಬಿಣಾಂಶ

ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಗರ್ಭಿಣಿಯರು ಹೆಚ್ಚಾಗಿ ಸೇವಿಸಬೇಕು. ಇದು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಷ್ಟೇ ಅಲ್ಲ, ನಿಮ್ಮ ಹಿಮೋಗ್ಲೋಬಿನ್ ಪ್ರಮಾಣವನ್ನು ಸಹ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಪ್ರೋಟೀನ್‍

ಪ್ರೋಟೀನ್‍

ಜೀವನದ ಎಲ್ಲಾ ಹಂತಗಳಲ್ಲಿಯೂ ಪ್ರೋಟೀನ್‍‌ಯುಕ್ತ ಆಹಾರ ಸೇವಿಸುವುದು ಅತ್ಯಗತ್ಯ. ಅದರಲ್ಲಿಯೂ ಗರ್ಭದಲ್ಲಿ ಬೆಳೆಯುವ ಮಗುವಿಗೆ ಪ್ರೋಟಿನ್ ಅತ್ಯಗತ್ಯ ಹೆಚ್ಚಾಗಿರುತ್ತದೆ. ಆದರೆ ಅದಕ್ಕಾಗಿ ನೀವು ಸರಿಯಾಗಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸುತ್ತಿದ್ದೀರಿ ಎಂದು ಖಾತ್ರಿಪಡಿಸಿಕೊಂಡು ನಂತರ ಸೇವಿಸಿ. ಅರೆಬೆಂದ ಆಹಾರವು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಲ್ಲ.

 ಹೈನು ಉತ್ಪನ್ನಗಳು

ಹೈನು ಉತ್ಪನ್ನಗಳು

ಗರ್ಭದಲ್ಲಿ ಬೆಳೆಯುವ ಮಗುವಿಗೆ ಕ್ಯಾಲ್ಸಿಯಂ ಅಧಿಕವಾಗಿ ಬೇಕಾಗುತ್ತದೆ. ಅದಕ್ಕಾಗಿ ಹಾಲು, ಚೀಸ್, ಮೊಸರು ಮತ್ತು ಮಜ್ಜಿಗೆ ಮುಂತಾದ ಆಹಾರ ಪದಾರ್ಥಗಳನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಿ.

ಎಳೆನೀರು

ಎಳೆನೀರು

ಸೆಲೆಬ್ರಿಟಿಗಳು ಗರ್ಭಿಣಿಯಾಗಿರುವಾಗ ಎಳೆ ನೀರನ್ನು ಸಹ ಸೇವಿಸುತ್ತಾರೆ. ಅದರಲ್ಲಿಯೂ ತಾಜಾ ಮತ್ತು ಆರೋಗ್ಯಕರವಾದ ಎಳೆ ನೀರು ತಾಯಿ ಮತ್ತು ಮಗು ಇಬ್ಬರಿಗೂ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಜೀರ್ಣಾಂಗವ್ಯೂಹಕ್ಕೆ ಒಳ್ಳೆಯದು ಅಲ್ಲದೆ ಇದು ಗರ್ಭಿಣಿಯರಿಗೆ ಚೇತೋಹಾರಿ ಪಾನೀಯವಾಗಿರುತ್ತದೆ.

ಮೊಟ್ಟೆ

ಮೊಟ್ಟೆ

ಹೆಚ್ಚಿನ ಸೆಲೆಬ್ರಿಟಿಗಳು ಮೊಟ್ಟೆಯನ್ನು ತಮ್ಮ ನಿತ್ಯದ ಆಹಾರದಲ್ಲಿ ಬಳಸಿಕೊಳ್ಳುತ್ತಾರೆ. ಮೊಟ್ಟೆಯ ಹಳದಿ ಭಾಗ ಮತ್ತು ಬಿಳಿ ಭಾಗ ಹೀಗೆ ಪ್ರತ್ಯೇಕವಾಗಿ ಮಾಡಿಕೊಂಡು ಮೊಟ್ಟೆಯನ್ನು ಸೇವಿಸುತ್ತಾರೆ.

ಹಣ್ಣುಗಳು

ಹಣ್ಣುಗಳು

ಹಣ್ಣುಗಳಲ್ಲಿ ಕೂಡ ನಿಮ್ಮ ಗರ್ಭಾವಸ್ಥೆಗೆ ಅತಿಮುಖ್ಯವಾಗಿ ಬೇಕಾಗಿರುವ ಪೋಷಕಾಂಶಗಳು ದೊರೆಯಲಿವೆ. ಗರ್ಭಿಣಿಯರು ಹೆಚ್ಚಿನ ಹಣ್ಣುಗಳನ್ನು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಸೇವಿಸಬೇಕು.

ತರಕಾರಿ ರಸ

ತರಕಾರಿ ರಸ

ಹಣ್ಣುಗಳಂತೆಯೇ ತರಕಾರಿಗಳನ್ನು ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ನೀವು ಹೆಚ್ಚು ತರಕಾರಿಗಳನ್ನು ಸೇವಿಸಿದಂತೆ ನಿಮ್ಮಲ್ಲಿ ರೋಗನಿರೋಧಕ ಅಂಶಗಳು ಹೆಚ್ಚಾಗಲಿವೆ.

ಬೀನ್ಸ್

ಬೀನ್ಸ್

ಮಗುವಿನ ಬೆಳವಣಿಗೆಗೆ ಬೀನ್ಸ್ ಹೆಚ್ಚು ಮುಖ್ಯವಾಗಿದ್ದು ಇದು ತಾಯಿ ಮತ್ತು ಮಗುವಿನ ಇಬ್ಬರ ಆರೋಗ್ಯವನ್ನು ನೋಡಬೇಕಾಗುತ್ತದೆ. ಬೀನ್ಸ್‌ನಲ್ಲಿರುವ ಹೆಚ್ಚಿನ ಪೋಷಕ ಅಂಶಗಳು ಮಗುವಿನ ಸಂಪೂರ್ಣ ಅಭಿವೃದ್ಧಿಗೆ ಸಹಾಯಕ ಎಂದೆನಿಸಲಿದೆ.

English summary

What a celebrity eats during pregnancy?

Pregnancy is a special phase in every woman’s life. Carrying a new being means taking extra care of oneself. After all, the baby’s health is directly related to the mother’s. During these months a lot of care is required and a proper diet very important. Celebrities are no exceptions and general pregnancy let us take a look at what a healthy pregnancy diet should include.
Subscribe Newsletter