ಎಲ್ಲದಕ್ಕೂ ಪತ್ನಿಯನ್ನು ದೂಷಿಸಬೇಡಿ! ನಿಮ್ಮಲ್ಲಿಯೂ ಸಮಸ್ಯೆ ಇರಬಹುದು!

Posted By: Arshad
Subscribe to Boldsky

ಒಂದು ಮಗುವಿನ ತಾಯಿಯಾಗುವುದು ಪ್ರತಿ ಹೆಣ್ಣಿನ ಕನಸಾಗಿದ್ದು ಇದನ್ನು ನನಸಾಗಿಸಲು ಪತಿಯ ಸಹಕಾರ ಅತ್ಯಗತ್ಯವಾಗಿದೆ. ಆದ್ದರಿಂದ ಈ ಪ್ರಯತ್ನ ಸಫಲವಾಗಬೇಕೆಂದರೆ ಪತಿಯಾಗಿ ನಿಮಗೆ ಕೆಲವು ಜವಾಬ್ದಾರಿಗಳಿವೆ. ತಾಯಿಯಾಗ ಬಯಸುವ ಮಹಿಳೆ ಈ ಅವಧಿಯಲ್ಲಿ ಅತಿ ಹೆಚ್ಚಿನ ಮಾನಸಿಕ ದುಗುಡ ಮತ್ತು ದೈಹಿಕವಾದ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.  ಮಕ್ಕಳಾಗದಿರಲು ಪ್ರಮುಖ ಕಾರಣಗಳು

ಸಂತಾನಫಲದ ಸಫಲತೆಗೆ ತಂದೆ ತಾಯಿ ಇಬ್ಬರದ್ದೂ ಸರಿಸಮನಾದ ಪಾತ್ರ ಇದೆ ಎಂದು ವಿಜ್ಞಾನ ಪುರಾವೆಸಹಿತ ಸಾಬೀತು ಪಡಿಸುತ್ತಿದ್ದರೂ ಇಂದಿಗೂ ಭಾರತದ ಎಷ್ಟೋ ಕಡೆಗಳಲ್ಲಿ ಸಂತಾನಹೀನತೆಗೆ ಹೆಣ್ಣೇ ಜವಾಬ್ದಾರಿ ಎಂದು ಭಾವಿಸಲಾಗುತ್ತಿದೆ. ಇಂದಿನ ದಿನಗಳಲ್ಲಿ ಪುರುಷರ ಫಲತೆಯೂ ಆತಂಕಕಾರಿ ಮಟ್ಟದಲ್ಲಿ ಕಡಿಮೆಯಾಗುತ್ತಾ ಬಂದಿರುವುದು ಕಂಡುಬಂದಿದ್ದರೂ ಹೀಗಾಗದಂತೆ ಪುರುಷರೂ ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬರಲು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕಾಗುತ್ತದೆ.  ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

ಸಾಮಾನ್ಯವಾಗಿ ಹೊರಗೆ ಕೆಲಸಕ್ಕೆ ಹೋಗುವ ಪುರುಷರು ತಮ್ಮ ಆರೋಗ್ಯದ ಕಾಳಜಿಯನ್ನು ಪ್ರಾಥಮಿಕವಾಗಿ ಕಾಪಾಡಿಕೊಳ್ಳುವುದು ಕಡಿಮೆ. ರೋಗ ಎದುರಾದ ಬಳಿಕವೇ ಇದಕ್ಕೆ ಮದ್ದು ಹುಡುಕಿಕೊಂಡು ಹೋಗುತ್ತಾರೆ. ಪರಿಣಾಮವಾಗಿ ಪತ್ನಿ ಗರ್ಭ ಧರಿಸಲು ಸಮರ್ಥಳಿದ್ದರೂ ಪತಿಯ ಯಾವುದೋ ಒಂದು ಆರೋಗ್ಯದ ಏರುಪೇರಿನ ಕಾರಣ ಗರ್ಭಾಂಕುರವಾಗಲು ಅಸಮರ್ಥರಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಪತಿಯರ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು ಆತನನ್ನು ಸಪುಂಸಕನನ್ನಾಗಿರಿಸುತ್ತವೆ.

ಅರಿವಿಲ್ಲದೇ ಇಂತಹ ಯಾವುದೇ ಅಭ್ಯಾಸಕ್ಕೆ ಒಳಗಾಗಿದ್ದಲ್ಲಿ ತಕ್ಷಣವೇ ಎಚ್ಚರಾಗಿ ಸೂಕ್ತ ಕ್ರಮ ಕೈಗೊಂಡರೆ ನಪುಂಸಕರಾಗುವ ಸಂಭವ ಕಡಿಮೆಯಾಗುತ್ತದೆ ಹಾಗೂ ಶೀಘ್ರವೇ ತಂದೆಯ ಸ್ಥಾನ ಪಡೆಯುವ ದಿನ ಹತ್ತಿರ ಬರುತ್ತದೆ. ಬನ್ನಿ, ಈ ಬಗ್ಗೆ ತಜ್ಞರು ನೀಡಿದ ಸಲಹೆಗಳು ಯಾವುವು ಎಂಬುದನ್ನು ನೋಡೋಣ....  

ಸಲಹೆ #1

ಸಲಹೆ #1

ನಿಮ್ಮ ತೂಕವನ್ನು ಗಮನಿಸಿ. ನಿಮ್ಮ ತೂಕ ನಿಮ್ಮ ಎತ್ತರಕ್ಕೆ ತಕ್ಕಂತೆ ಇಲ್ಲದೇ ಹೆಚ್ಚಾಗಿದ್ದರೆ ಇದರ ಪರಿಣಾಮ ನೇರವಾಗಿ ವೀರ್ಯಾಣುಗಳ ಸಂಖ್ಯೆಯ ಮೇಲೆ ಉಂಟಾಗುತ್ತದೆ. ಹೆಚ್ಚಿನ ತೂಕ ಎಂದರೆ ಕಡಿಮೆ ವೀರ್ಯಾಣು. ಆದ್ದರಿಂದ ತಂದೆಯಾಗಬಯಸುವಿರಾದರೆ ತೂಕ ಇಳಿಸಿ.

ಸಲಹೆ #2

ಸಲಹೆ #2

ಧೂಮಪಾನ ನಿಮ್ಮ ಶ್ವಾಸಕೋಶಕ್ಕೆ ಮಾರಕ, ಇದರಲ್ಲಿ ಅನುಮಾನವೇ ಇಲ್ಲ. ಆದರೆ ಇದು ನಿಮ್ಮ ಪುರುಷತ್ವಕ್ಕೂ ಮಾರಕ. ಅಂದರೆ ಧೂಮಪಾನಿಗಳ ಪ್ರಯತ್ನ ನಿಷ್ಫಲವಾಗುವ ಸಾಧ್ಯತೆ ಹೆಚ್ಚು.

ಸಲಹೆ #3

ಸಲಹೆ #3

ಗರ್ಭ ಕಟ್ಟದೇ ಇದ್ದರೆ ಇದಕ್ಕೆ ಇಬ್ಬರೂ ಸಮಾನರಾಗಿ ಕಾರಣರಾಗಿರುತ್ತೀರಿ. ಹಾಗಾಗಿ ಇಬ್ಬರೂ ವೈದ್ಯರ ಬಳಿ ಸಾಗಿ ಸೂಕ್ತ ಪರೀಕ್ಷೆಗೆ ಒಳಪಟ್ಟು ವೀರ್ಯಾಣು ಮತ್ತು ಅಂಡಾಣು ಆರೋಗ್ಯಕರವಾಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ಹಾಗೂ ವೈದ್ಯರು ಸೂಚಿಸುವ ಚಿಕಿತ್ಸೆಯನ್ನು ಪಡೆದುಕೊಳ್ಳಿ.

ಸಲಹೆ #4

ಸಲಹೆ #4

ಗರ್ಭವತಿಯಾಗಬಯಸುತ್ತಿರುವ ಮಹಿಳೆಗೆ ಕಾಫಿ ಮತ್ತು ಮದ್ಯಪಾನ ಮಾರಕವಾಗಿದೆ. ಆದ್ದರಿಂದ ಗರ್ಭ ಕಟ್ಟಿರುವುದು ಖಾತರಿಯಾಗಿ ಹೆರಿಗೆಯವರೆಗೆ ತಾತ್ಕಾಲಿಕವಾಗಿಯಾದರೂ ಈ ಅಭ್ಯಾಸಗಳನ್ನು ಬಿಟ್ಟಷ್ಟೂ ಒಳ್ಳೆಯದು. ಇದರಿಂದ ಗರ್ಭ ಧರಿಸುವ ಸಾಧ್ಯತೆ ಹೆಚ್ಚುತ್ತದೆ.

ಸಲಹೆ #5

ಸಲಹೆ #5

ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಿತ್ಯದ ಚಟುವಟಿಕೆಗಳಲ್ಲಿ ಒತ್ತಡವಿರದಂತೆ ನೋಡಿಕೊಳ್ಳಿ. ಏಕೆಂದರೆ ಒತ್ತಡ ಹೆಚ್ಚಿದಷ್ಟೂ ಫಲವಂತಿಕೆಯ ಮೇಲೆ ಭಾರೀ ಪ್ರಮಾಣದಲ್ಲಿ ಪ್ರಭಾವವುಂಟಾಗುತ್ತದೆ.

English summary

Tips A Man Should Follow When His Partner Is Trying To Get Pregnant!

There are many instances in which a man hardly takes care of his health, while his partner and himself are trying to conceive a child, which may delay the conception or in worst cases, make him infertile! So, here are a few tips that a man must follow, when his partner is trying to get pregnant.