For Quick Alerts
ALLOW NOTIFICATIONS  
For Daily Alerts

  ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದಾ? ಮುನ್ನೆಚ್ಚರಿಕೆ ಕ್ರಮಗಳೇನು?

  By Arshad
  |

  ಗರ್ಭವತಿಯಾಗುವುದು ಪ್ರತಿ ವಿವಾಹಿತೆಯ ಕನಸಾಗಿದ್ದು ಒಮ್ಮೆ ಗರ್ಭ ನಿಂತಿರುವುದು ಖಾತರಿಯಾದ ಬಳಿಕ ಸಮಾಗಮ ನಡೆಸುವುದು ತಪ್ಪು ಎಂಬ ಅಭಿಪ್ರಾಯವನ್ನು ಹೆಚ್ಚಿನವರು ಹೊಂದಿದ್ದಾರೆ. ಇದರಿಂದ ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಗೆ ಏನಾದರೂ ತೊಂದರೆಯಾಗಬಹುದೆಂಬ ಅಳುಕಿನಿಂದ ಹೆಚ್ಚಿನ ದಂಪತಿಗಳು ಪರಸ್ಪರ ದೂರವಿರುತ್ತಾರೆ. ಆದರೆ ಇದು ಪೂರ್ಣವಾಗಿ ಸತ್ಯವಲ್ಲ.

  ಎಲ್ಲಿಯವರೆಗೆ ಸ್ತ್ರೀರೋಗ ತಜ್ಞರು ಆರೋಗ್ಯದ ಕಾರಣದಿಂದ ಸಮಾಗಮವನ್ನು ಕಡ್ಡಾಯವಾಗಿ ನಿಷೀಧಿಸುತ್ತಾರೋ ಆಗ ಮಾತ್ರ ಈ ದೂರ ವಹಿಸುವುದು ಅನಿವಾರ್ಯವಾಗುತ್ತದೆ. ಗರ್ಭವತಿಯ ಆರೋಗ್ಯವನ್ನು ಪರಿಗಣಿಸಿ ಪ್ರಥಮ ಮೂರು ತಿಂಗಳು ಹಾಗೂ ಹೆರಿಗೆಗೂ ನಾಲ್ಕು ವಾರಗಳ ಹಿಂದಿನ ಅವಧಿಯಲ್ಲಿ ಈ ದೂರ ವಹಿಸುವುದು ಅಗತ್ಯ ಎಂದು ಹೆಚ್ಚಿನ ವೈದ್ಯರು ಅಭಿಪ್ರಾಯಪಡುತ್ತಾರೆ.

  Sex During Pregnancy

  ಪ್ರಥಮ ಮೂರು ತಿಂಗಳಲ್ಲಿ ಗರ್ಭವತಿಯ ದೇಹದಲ್ಲಿ ಆಗುವ ಅಪಾರ ಬದಲಾವಣೆ ಹಾಗೂ ಕಡೆಯ ತಿಂಗಳಲ್ಲಿ ಹೆರಿಗೆಗಾಗಿ ದೇಹ ನಡೆಸುವ ಸಿದ್ಧತೆಗಳಿಗೆ ನೆರವಾಗಲು ಈ ದಿನಗಳಲ್ಲಿ ಸಮಾಗಮ ಬೇಡ. ಇದರ ಹೊರತಾಗಿ ಇತರ ತಿಂಗಳುಗಳಲ್ಲಿ ಗರ್ಭಿಣಿಯ ದೇಹಕ್ಕೆ ಭಾರವಾಗದಂತೆ ಸುರಕ್ಷಿತ ವಿಧಾನಗಳನ್ನು ಅನುಸರಿಸಬಹುದು.

  ಆದರೆ ಕೆಲವು ಗರ್ಭವತಿಯರಿಗೆ ಕೊಂಚ ನೋವಿನ ಅನುಭವವಾಗುತ್ತದೆ. ಈ ಸಂದರ್ಭಗಳನ್ನು ವೈದ್ಯರಿಗೆ ವಿವರಿಸಿ ಅವರ ಸೂಚನೆಯ ಮೇರೆಗೆ ಮುಂದುವರೆಯುವುದು ಉತ್ತಮ. ಕೆಲವು ಮಹಿಳೆಯರಲ್ಲಿ ಕೆಳಹೊಟ್ಟೆಯಲ್ಲಿ ನೋವು ಹಾಗೂ ಆರೋಗ್ಯದ ಇತಿಹಾಸದಲ್ಲಿ ಜನನಾಂಗದ ಸ್ನಾಯುಗಳು ಸೆಳೆತ ಕಳೆದುಕೊಂಡಿದ್ದರೆ ಸಹಾ ಈ ಅವಧಿಯಲ್ಲಿ ಸಮಾಗಮ ಬೇಡ.

  ಕೆಲವು ಹಂತಗಳಲ್ಲಿ ಮಾತ್ರವೇ ಏಕೆ ಸಮಾಗಮ ಬೇಡ?

  ಗರ್ಭಾವಸ್ಥೆಯನ್ನು ಸ್ಥೂಲವಾಗಿ ಮೂರು ತಿಂಗಳ ಮೂರು ಹಂತಗಳನ್ನಾಗಿ ವಿಂಗಡಿಸಲಾಗಿದ್ದು ಇದರಲ್ಲಿ ಪ್ರಥಮ ಮತ್ತು ಅಂತಿಮ ಮೂರು ತಿಂಗಳ ಹಂತಗಳು ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಪ್ರಥಮ ತ್ರೈಮಾಸಿಕದಲ್ಲಿ ಗರ್ಭಕೋಶದೊಳಗೆ ಜರಾಯು ಅಥವಾ ಪ್ಲಸೆಂಟಾ ಎಂಬ ಪದರ ಉತ್ಪತ್ತಿಯಾಗಿ ಶಿಶುವಿನ ಬೆಳವಣಿಗೆಗೆ ಅಗತ್ಯವಾದ ವಾತಾವರಣವನ್ನು ಏರ್ಪಡಿಸುತ್ತದೆ ಹಾಗೂ ಈ ಹಂತದಲ್ಲಿ ಮಗುವಿನ ಅಂಗಾಂಗಗಳು ಪ್ರಾರಂಭಿಕ ಬೆಳವಣಿಗೆ ಪಡೆಯುತ್ತವೆ. ಈ ಹಂತದಲ್ಲಿ ಗರ್ಭವತಿಯ ದೇಹ ಕುಲುಕಾಟಕ್ಕೆ ಒಳಗಾದರೆ ಗರ್ಭಪಾತದ ಸಂಭವವಿರುತ್ತದೆ. ಆದ್ದರಿಂದ ಈ ಹಂತದಲ್ಲಿ ಸಮಾಗಮ ಮಾತ್ರವಲ್ಲ, ಮೆಟ್ಟಿಲು ಇಳಿಯುವುದು, ಪ್ರಯಾಣ, ಜಿಗಿತ ಮೊದಲಾದ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು. ಕಡೆಯ ತಿಂಗಳುಗಳ ಸಮಾಗಮ ಕೂಡಾ ಅಪಾಯಕರವಾಗಿದ್ದು ಇದರಿಂದ ಅವಧಿಗೂ ಮುನ್ನ ಹೆರಿಗೆಯಾಗುವ ಸಂಭವವಿರುತ್ತದೆ.

  Sex During Pregnancy

  ಸಮಾಗಮದಿಂದ ಮಗುವಿಗೆ ಅಪಾಯವಿದೆಯೇ?

  ಅಪಾಯಕರವಲ್ಲದ ದಿನಗಳಲ್ಲಿ, ಗರ್ಭವತಿ ಹಾಗೂ ಗರ್ಭಕ್ಕೆ ಅಪಾಯವಾಗದ ಸುರಕ್ಷಿತ ಭಂಗಿಗಳನ್ನು ಅನುಸರಿಸುವ ಮೂಲಕ ಗರ್ಭದಲ್ಲಿರುವ ಮಗುವಿಗೆ ಯಾವುದೇ ಅಪಾಯವಾಗುವುದಿಲ್ಲ. ಮೂರು ತಿಂಗಳ ಬಳಿಕ ಗರ್ಭಾಶಯದಲ್ಲಿ ಮಗುವನ್ನು ಆಮ್ನಿಯಾಟಿಕ್ ಎಂಬ ದ್ರವ ಸುತ್ತುವರೆದಿರುತ್ತದೆ. ಈ ದ್ರವ ಮಗುವಿನ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಗರ್ಭವತಿಯ ದೇಹಕ್ಕೆ ಯಾವುದೇ ಒತ್ತಡ ಅಥವಾ ಜಗ್ಗುವಿಕೆಯನ್ನು ನೀಡದ ಭಂಗಿಗಳ ಸಮಾಗಮ ಸುರಕ್ಷಿತವಾಗಿದೆ.

  Sex During Pregnancy

  ಈ ಹಂತದಲ್ಲಿ ಏನನ್ನು ನೆನಪಿಡಬೇಕು?

  ಸುರಕ್ಷಿತ ದಿನಗಳಲ್ಲಿ ಸಮಾಗಮ ನಡೆಸಲು ದಂಪತಿಗಳು ಬಯಸಿದರೆ ಪ್ರಥಮವಾಗಿ ಇಬ್ಬರಿಗೂ ಈ ವಿಷಯ ನೆನಪಿರಬೇಕು-ಏನೆಂದರೆ ಯಾವುದೇ ಕಾರಣಕ್ಕೂ ಭಾರ ಗರ್ಭದ ಮೇಲೆ ಬೀಳಕೂಡದು. ಗರ್ಭವತಿ ಯಾವುದೇ ಕಾರಣಕ್ಕೂ ಹೊಟ್ಟೆಯ ಮೇಲೆ ಮಲಗಕೂಡದು. ನೋವಿಲ್ಲದ ಹಾಗೂ ಗರ್ಭಿಣಿಗೆ ಸುಖಕರವೆನಿಸುವ ಭಂಗಿಗಳನ್ನು ಮಾತ್ರವೇ ಅನುಸರಿಸಬೇಕು. ಈ ವಿಷಯಗಳನ್ನು ದಂಪತಿಗಳು ಕಡ್ಡಾಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದಕ್ಕೂ ಈ ನಿರ್ಧಾರಕ್ಕೂ ಮುನ್ನ ನಿಮ್ಮ ಕುಟುಂಬ ವೈದ್ಯರು ಅಥವಾ ಸ್ತ್ರೀರೋಗ ತಜ್ಞರು ಗರ್ಭವತಿಯ ಆರೋಗ್ಯವನ್ನು ತಪಾಸಿಸಿ ಎಲ್ಲವೂ ಸರಿ ಇದೆ ಎಂದು ಖಾತರಿಪಡಿಸಿಕೊಂಡು ಸಮಾಗಮಕ್ಕೆ ಅನುಮತಿ ನೀಡಿದರೆ ಮಾತ್ರವೇ ಅನುಸರಿಸಬೇಕೇ ವಿನಃ ವೈದ್ಯರು ಯಾವುದೇ ಕಾರಣಕ್ಕೂ ಬೇಡ ಎಂದು ಹೇಳಿದರೆ ಖಂಡಿತಾ ಕೂಡದು.

  English summary

  Things To Know Before Having Sex During Pregnancy

  Once you get pregnant, you start considering sex as a mistake. Often couples abstain from lovemaking simply because they are worried about the growing foetus. Well, having sex during pregnancy is not risky if you have the consent of your gynaecologist. But abstinence in the first trimester and then again in the last four weeks of pregnancy is very important. Most of the doctors say that these are the weeks when abstinence from lovemaking will be good for the pregnant woman.
  Story first published: Monday, September 18, 2017, 23:31 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more