For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಚಾಲೆಂಜ್, ಊದಿಕೊಂಡ ಪಾದ ಮತ್ತು ಹಸ್ತಗಳು

By Anuradha
|

ಪ್ರತಿಯೊಬ್ಬ ಮದುವೆಯಾದ ಸ್ತ್ರೀಯ ಕನಸು ಆದಷ್ಟು ಬೇಗನೆ ತಾಯ್ತನದ ಸುಖ ಅನುಭವಿಸುವದು. ಆದರೆ ಈಗಿನ ಮಾಡರ್ನ್ ಯುಗದಲ್ಲಿ ಸ್ತ್ರೀಯರು ಗರ್ಭಧರಿಸುವದನ್ನು ಸ್ವಲ್ಪ ಮುಂದೂಡುವದು ಸಾಮನ್ಯವೇ ಆಗಿದೆ, ಎಲ್ಲರಿಗೂ ಅವರ ಕೆರಿಯರ್ ಕೂಡ ಮುಖ್ಯವಾಗಿದೆ. ಒಮ್ಮೆ ಗರ್ಭ ಧರಿಸಿದರೆ ಅನೇಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಬಹುದು ಎಂಬುದೇ ಭಯ. ಆದರೆ ವಯಸ್ಸು ಹೆಚ್ಚಿದಂತೆ ತಾಯ್ತನದ ಸವಾಲುಗಳೂ ಹೆಚ್ಚುತ್ತವೆಂದರೆ ಸುಳ್ಳಾಗಲಾರದು.

ಹಾರ್ಮೋನುಗಳ ಬದಲಾವಣೆಯಿಂದ ಮಾರ್ನಿಂಗ್ ಸಿಕ್‌ನೆಸ್, ಮೂಡ್ ಸ್ವಿಂಗ್ಸ್(ಮನಸ್ಥಿತಿಯ ಏರು ಪೇರು), ಊದಿಕೊಂಡಿರುವ ಪಾದ ಮತ್ತು ಹಸ್ತಗಳು ಕಾಣಿಸಿಕೊಂಡರೆ ಎನೂ ಭಯಪಡಬೇಕಾಗಿಲ್ಲ. ಇವು ಅತಿ ಸಾಮಾನ್ಯವಾದ ಸಮಸ್ಯೆಗಳೇ ಆಗಿವೆ. ಒಮ್ಮೆಲೇ ವರ್ಷಗಳಿಂದ ಧರಿಸುತ್ತಿರುವ ಬಟ್ಟೆಗಳನ್ನು ಧರಿಸಲು ಕಷ್ಟವಾಗುವದು, ಚಪ್ಪಲಿಗಳು ಬಿಗಿ ಎನಿಸುವವು. ಅನೇಕ ಬಾರಿ ದೇಹದ ಸಮತೋಲನ ಕಳೆದಂತಾಗಿ ಬೀಳುವ ಸಾಧ್ಯತೆಗಳೂ ಇರುತ್ತವೆ. ಈ ಎಲ್ಲ ಲಕ್ಷಣಗಳನ್ನು ಹೇಗೆ ನಿಭಾಯಿಸಿ, ಗರ್ಭಾವಸ್ಥೆಯ ಸಮಯವನ್ನು ಆನಂದದಿಂದ ಸುರಕ್ಷಿತವಾಗಿ ಕಳೆಯಬಹುದು ಎಂಬುದನ್ನು ತಿಳಿಯೋಣ ಬನ್ನಿ. ಈ ಲೇಖನದಲ್ಲಿ ಮುಖ್ಯವಾಗಿ ಊದಿಕೊಂದ ಪಾದ ಮತ್ತು ಹಸ್ತಗಳಿಗೆ ಕಾರಣ ಮತ್ತು ಪರಿಹಾರಗಳನ್ನು ತಿಳಿಯಲು ಪ್ರಯತ್ನಿಸೋಣ ಬನ್ನಿ. ಊದಿಕೊಂದ ಪಾದ ಮತ್ತು ಹಸ್ತಗಳಿಗೆ ಕಾರಣಗಳು

ದೇಹದಲ್ಲಿ ವಾಟರ್ ರಿಟೆನ್ಷನ್ (ನೀರಿನ ಧಾರಣ)

ಈ ಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ 'ಎಡೆಮಾ' ಎಂದು ಕೂಡ ಕರೆಯುತ್ತಾರೆ. ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಸ್ಪಂದಿಸಲು ದೇಹಕ್ಕೆ ಸ್ವಲ್ಪ ಹೆಚ್ಚಿನ ನೀರಿನಂಶದ ಅವಶ್ಯಕತೆಯಿರುತ್ತದೆ. ಅದಕ್ಕಾಗಿ ಜೀವಕೋಶಗಳು ಸ್ವಲ್ಪ ಹೆಚ್ಚಿನ ನೀರಿನ ಶೇಖರಣೆ ಮಾಡಿಕೊಳ್ಳುತ್ತವೆ, ಇದು ಅತ್ಯಂತ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆ. ಆದರೆ ಕೆಲವೊಮ್ಮೆ ಸ್ವಲ್ಪ ಹೆಚ್ಚೆ ಎನ್ನುವಷ್ಟು ನೀರು ಶೇಖರಣೆಗೊಂಡರೆ ಪಾದ ಮತು ಹಸ್ತಗಳಲ್ಲಿ ಊತ ಕಂಡುಬರುವದು.ಗರ್ಭಿಣಿಯರ ಕಾಲಿನ ಊತ ತಡೆಯುವುದು ಹೇಗೆ?

ಬೆಳೆಯುತ್ತಿರುವ ಗರ್ಭಕೋಶದಿಂದ ಉಂಟಾಗುವ ಒತ್ತಡ

ಗರ್ಭಕೋಶದಲ್ಲಿ ಮಗು ಬೆಳೆದಂತೆಲ್ಲ, ದೇಹದ ಕೆಳಗಿನ ರಕ್ತನಾಳಗಳ ಮೇಲಿನ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಪಾದಗಳಿಂದ ಹೃದಯಕ್ಕೆ ಸರಬರಾಜಾಗುವ ರಕ್ತದ ಗತಿ ನಿಧನವಾಗಿ, ರಕ್ತನಾಳಗಳಲ್ಲಿ ಸ್ವಲ್ಪ ಊತ ಕಾಣಿಸಿಕೊಂಡು ಪಾದ ಮತ್ತು ಹಸ್ತಗಳಲ್ಲಿ ದ್ರವದ ಶೇಖರಣೆ ಹೆಚ್ಚಿ ಸ್ವಲ್ಪ ಊತ ಕಾಣಿಸಿಕೊಳ್ಳುವದು.

ಗುರುತ್ವಾಕರ್ಷಣೆ

ಗರ್ಭಾವಸ್ಥೆಯಲ್ಲಿ ಹೃದಯಕ್ಕೂ ಸ್ವಲ್ಪ ಒತ್ತಡ ಹೆಚ್ಚುವದು, ಇದರಿಂದ ಹೃದಯವು ಯಾವಾಗಲೂ ಮಾದುವಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದೆ ಕೆಲವೊಮ್ಮೆ ರಕ್ತದ ಒತ್ತಡ ಹೆಚ್ಚಬಹುದು. ಇದರಿಂದ ಕೂಡ ಪಾದ ಮತ್ತು ಹಸ್ತಗಳಲ್ಲಿ ಒತ್ತಡ ಕಾಣಿಸಿಕೊಳ್ಳುವದು.

ಅವಳಿಗಳ ಹಾವಳಿ ಇದ್ದರೆ!

ಒಂದುವೇಳೆ ಗರ್ಭಕೋಶದಲ್ಲಿ ಒಂದಕ್ಕಿಂತ ಹೆಚ್ಚು ಕಂದಮ್ಮಗಳಿದ್ದರೆ, ಗರ್ಭಕೋಶಕ್ಕೆ ಸ್ವಲ್ಪ ಹೆಚ್ಚಿನ ಅಮ್ನಿಯಾಟಿಕ್ ಫ್ಲುಯಿಡ್ ಅವಶ್ಯಕತೆಯುಂಟಾಗುವದು. ಆಗ ದೇಹ ತನ್ನಷ್ಟಕ್ಕೆ ತಾನೇ ಹೆಚ್ಚಿನ ನೀರಿನಂಶವನ್ನು ಶೇಖರಿಸಲು ಶುರುಮಾಡುವದು. ಇದರಿಂದ ಕೂಡ ದೇಹದಲ್ಲಿ ಊತ ಕಂಡುಬರುವದು.

ವಾತಾವರಣ

ಬೇಸಿಗೆ ಕಾಲದಲ್ಲಿ ಗರ್ಭವತಿಯ ದೇಹವು ಸ್ವಲ್ಪ ಅವಶ್ಯಕತೆಗಿಂತ ಜಾಸ್ತಿಯೇ ನೀರಿನಂಶ ಉಳಿಸಿಕೊಳ್ಳಲು ಪ್ರಯತ್ನಿಸುವದು. ನಿರ್ಜಲೀಕರಣ ತಡೆಯಲು ಇದು ನಿಸರ್ಗದ ವ್ಯವಸ್ಥೆ. ಚಳಿಗಾಲ ಅಥವಾ ಮಾನ್ಸೂನ್ ಋತುವಿನಲ್ಲಿ ಈ ತೊಂದರೆ ಕಂಡುಬರುವದಿಲ್ಲ. ಅಂದರೆ ಸ್ವಲ್ಪ ಯೋಚನೆ ಮಾಡಿ ಚಳಿಗಾಲಕ್ಕೆ ಹೊಂದಿಕೊಳ್ಳುವ ಹಾಗೆ ಗರ್ಭಧರಿಸಲು ಪ್ರಯತ್ನಿಬೇಕು ಅಲ್ಲವೆ?

ಹಗಲಿನ ಸಮಯದಲ್ಲಿ ಹೆಚ್ಚಿನ ಊತ

ಅನೇಕ ಗರ್ಭವತಿಯರಲ್ಲಿ ರಾತ್ರಿ ತಂಪಾದ ಸಮಯದಲ್ಲಿ ಅಷ್ಟೊಂದು ಊತ ಕಾಣಿಸುವದಿಲ್ಲ, ಆದರೆ ದಿನ ಕಳೆದಂತೆ ಊತ ಹೆಚ್ಚುತ್ತ ಹೋಗುವದು.

ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳದಿರುವದು

ಗರ್ಭಾವಸ್ಥೆಯಲ್ಲಿ ನಿದ್ದೆಗೆ ಸ್ವಲ್ಪ ಹಿಂಸೆಯಾಗುವದು ಸಹಜವೆ, ಇದಕ್ಕೆ ಕಾರಣ ಕಂದನಿರುವ ನಿಮ್ಮ ಉಬ್ಬಿದ ಒಡಲು. ಬೇಗಬೇಗನೆ ಮಗ್ಗುಲು ಬದಲಾಯಿಸುವದು ಕಷ್ಟವೆ, ಅಷ್ಟೇ ಅಲ್ಲ ರಾತ್ರಿ ಕೆಲವೊಮ್ಮೆ ಪದೆ ಪದೆ ಮೂತ್ರ ವಿಸರ್ಜನೆಗೆ ಹೋಗಬೇಕಾಗಬಹುದು. ಮಧ್ಯರಾತ್ರಿ ಹೊಟ್ಟೆ ಹಸಿಯುವದು.

ಇದರಿಂದ ಸಂಪೂರ್ಣ ವಿಶ್ರಾಂತಿ ಸಿಗಲಿಕ್ಕಿಲ್ಲ

ಕೆಲವು ಮಹಿಳೆಯರಿಗೆ ಬಹಳ ಹೊತ್ತು ನಿಂತೇ ಮಾಡುವ ಕೆಲಸವಿರುತ್ತದೆ. ಈ ಎಲ್ಲ ಕಾರಣಾಗಳಿಂದಲೂ ಕೆಲವೊಮ್ಮೆ ಪಾದ ಮತ್ತು ಹಸ್ತಗಳಲ್ಲಿ ಊತ ಕಾಣಿಸಿಕೊಳ್ಳುವದು. ಕೆಲವೊಮ್ಮೆ ಅತಿಯಾದ ಊತ ಕಂಡುಬಂದರೆ 'ಪ್ರಿಕ್ಲಾಂಪ್ಸಿಯ' ಎಂಬ ವೈದ್ಯಕೀಯ ಸ್ಥಿತಿ ಉಂಟಾಗುವದು, ಆ ಸಮಯದಲ್ಲಿ ಬೇಗನೆ ವೈದ್ಯರನ್ನು ಕಾಣುವದೇ ಒಳ್ಳೆಯದು. ಕೆಲವೊಮ್ಮೆ ಮುಖ, ಕಣ್ಣುಗಳು, ಪಾದ, ಹಸ್ತ ಹೀಗೆ ಎಲ್ಲ ಕಡೆ ಊತ ಕಂಡುಬಂದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕು, ಇಲ್ಲವೆಂದರೆ ಏನಾದರೂ ಅನಾಹುತವಾದೀತು ಜೋಕೆ! ಸ್ವಲ್ಪವೇ ಊತ ಕಂಡುಬಂದಕೂದಲೇ ಮನೆಯಲ್ಲೇ ಕೆಲವು ಸರಳ ಪರಿಹಾರಗಳನ್ನು ಕಂಡುಕೊಳ್ಳಬಹುದು, ಹೇಗೆಂದು ಓದಿ ನೋಡಿ...

ಕಾಲುಗಳನ್ನು ಕೆಳಗೆ ಬಿಟ್ಟುಕೊಂಡು ಕುಳಿತುಕೊಳ್ಳುವದನ್ನು ಕಡಿಮೆಗೊಳಿಸಿ

ಕಾಲುಗಳನ್ನು ಕೆಳಗೆ ಬಿಟ್ಟುಕೊಂಡು ಕುಳಿತುಕೊಳ್ಳುವದನ್ನು ಕಡಿಮೆಗೊಳಿಸಿ

ಪಾದಗಳಿಗೆ ಸ್ವಲ್ಪ ಆಧಾರ ಒದಗಿಸಿ ಮೇಲಿಇಟ್ಟುಕೊಂಡು ಕುಳಿತುಕೊಳ್ಳಿ, ಆಗ ಪಾದಗಳಲ್ಲಿ ದ್ರವದ ಶೇಖರಣೆ ಕಡಿಮೆಯಾಗುವದು. ಒಂದು ಪುಟ್ಟ ಖುರ್ಚಿ ಅಥವಾ ಸ್ಟೂಲ್ ಆದರೂ ಸಾಕು. ಇದರಿಂದ ರಕ್ತ ಸಂಚಾರಕ್ಕೆ ಅಡಚಣೆ ಕಡಿಮೆಯಾಗಿ ಹೃದಯ ಸುಗಮವಾಗಿ ಕಾರ್ಯ ನಿರ್ವಹಿಸುವದು. ನಿಂತು ಕೆಲಸ ಮಾಡಬೇಕಿದ್ದರೆ, ಘಂಟೆಗೊಮ್ಮೆ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಮಾಡಿ.

ಯಾವಾಗಲೂ ಕ್ರಿಯಾಶೀಲರಾಗಿದ್ದು, ಸಾಧ್ಯವಾದರೆ ಈಜಿನಲ್ಲಿ ತೊಡಗಿಸಿಕೊಳ್ಳಿ.

ಯಾವಾಗಲೂ ಕ್ರಿಯಾಶೀಲರಾಗಿದ್ದು, ಸಾಧ್ಯವಾದರೆ ಈಜಿನಲ್ಲಿ ತೊಡಗಿಸಿಕೊಳ್ಳಿ.

ಅತಿಯಾದ ವಿಶ್ರಾಂತಿಯೂ ಒಳ್ಳೆಯದಲ್ಲ. ಯಾವುದೇ ಅತಿಯಾದರೂ ವಿಷವಾದೀತು. ಅದಕ್ಕಾಗಿ ನಿಧಾನವಾಗಿ ವಾಯುವಿಹಾರ ಮಾಡಿ. ಇದರಿಂದ ಮನಸ್ಸಿಗೆ ಉಲ್ಲಾಸ ದೊರೆಯುವದಲ್ಲದೇ, ದೇಹಕ್ಕೂ ಒಳ್ಳೆಯ ವ್ಯಾಯಾಮವನ್ನು ಒದಗಿಸುತ್ತದೆ. ಈಜಂತೂ ಸರ್ವಕಾಲಿಕ ಉತ್ತಮವಾದ ವ್ಯಾಯಮ. ವೈದ್ಯರ ಸಲಹೆಯನ್ನು ಪಡೆದು ಈಜಿನಲ್ಲಿ ಆನಂದಿಸಿ. ಇದರಿಂದ ಬೆನ್ನಿಗೆ ಒಳ್ಳೆಯ ವ್ಯಾಯಾಮವಾಗುವದು ಅಷ್ಟೇ ಅಲ್ಲ ದೇಹದಲ್ಲಿನ ಹೆಚ್ಚಿನ ನೀರಿನಂಶ ಮೂತ್ರ ರೂಪದಲ್ಲಿ ಹೊರಹೋಗುವದು. ಆಗ ದೇಹದಲ್ಲಿನ ಊತ ಕೂಡ ಕಡಿಮೆಯಾಗುವದು.

ಬಿಗಿಯಾಗಿರುವ ಸಾಕ್ಸ್ ಅಥವಾ ಸ್ಟಾಕಿಂಗ್ಸ್ ಧರಿಸಬೇಡಿ

ಬಿಗಿಯಾಗಿರುವ ಸಾಕ್ಸ್ ಅಥವಾ ಸ್ಟಾಕಿಂಗ್ಸ್ ಧರಿಸಬೇಡಿ

ಬಿಗಿಯಾದ ಸಾಕ್ಸ್ ಧರಿಸುವದರಿಂದ ರಕ್ತ ಸಂಚಾರಕ್ಕೆ ಅಡಚಣೆಯಾಗಿ ಪಾದ ಮತ್ತು ಹಸ್ತಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಆದ್ದರಿಂದ ಸಡಿಲವಾದ ಸಾಕ್ಸ್ ಧರಿಸಿಕೊಳ್ಳಿ.

ಹಿತಕರವಾಗಿರುವ ಪಾದರಕ್ಷೆಗಳನ್ನು ಧರಿಸಿ

ಹಿತಕರವಾಗಿರುವ ಪಾದರಕ್ಷೆಗಳನ್ನು ಧರಿಸಿ

ಗರ್ಭಧರಿಸಿದ ನಂತರ ಬಿಗಿಯಾಗಿರುವ ಅಥವಾ ಹೈ ಹೀಲ್ಡ್ ಇರುವ ಚಪ್ಪಲಿಗಳನ್ನು ಧರಿಸಬೇಡಿ. ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ರಕ್ತನಾಳಗಳಲ್ಲಿ ನೀರಿನಂಶ ಉಳಿದುಕೊಂಡು ಊತ ಕಾಣಿಸಿಕೊಳ್ಳುವದು. ಆರ್ಥೊಪೆಡಿಕ್ ಚಪ್ಪಲಿ ಧರಿಸಿದರಂತೂ ಇನ್ನೂ ಒಳ್ಳೆಯದೆ.

ಆರಾಮದಾಯಕವಾಗಿರುವ ಒಳ‌ಉಡುಪನ್ನು ಧರಿಸಿ

ಆರಾಮದಾಯಕವಾಗಿರುವ ಒಳ‌ಉಡುಪನ್ನು ಧರಿಸಿ

ಆರಾಮದಾಯಕವಾಗಿರುವ ಒಳ‌ಉಡುಪುಗಳನ್ನು ಧರಿಸುವದರಿಂದ ರಕ್ತನಾಳಗಳಿಗೆ ಒತ್ತಡ ಉಂಟಾಗುವದಿಲ್ಲ, ಇದರಿಂದ ರಕ್ತ ಸಂಚಾರ ಸುಗಮವಾಗಿ ಆಗುವದು. ಆಗ ದೇಹದಲ್ಲಿ ಊತ ಕಾಣಿಸುವದನ್ನು ತಡೆಗಟ್ಟಬಹುದು.

ಸಾಕಷ್ಟು ನೀರು ಸೇವಿಸಿ

ಸಾಕಷ್ಟು ನೀರು ಸೇವಿಸಿ

ದಿನಕ್ಕೆ 2 ರಿಂದ 3 ಲೀಟರಿನಷ್ಟು ನೀರು ಸೇವಿಸುವದರಿಂದ ದೇಹದಲ್ಲಿನ ಟಾಕ್ಸಿನ್‌ಗಳು ಮೂತ್ರ ರೂಪದಲ್ಲಿ ಹೊರಹೋಗುವದಲ್ಲದೆ, ಸೋಡಿಯಮ್ ಕೂಡ ಹೊರಹಾಕಲ್ಪಡುವದು. ಇದರಿಂದ ವಾಟರ್ ರಿಟೆನ್ಷನ್ ಆಗುವದನ್ನು ತಡೆಯಬಹುದು.

ಉಪ್ಪಿನ ಸೇವನೆ ಇತಿಮಿತಿಯಲ್ಲಿರಲಿ

ಉಪ್ಪಿನ ಸೇವನೆ ಇತಿಮಿತಿಯಲ್ಲಿರಲಿ

ಆಹಾದಲ್ಲಿನ ಸೋಡಿಯಮ್ ಅಂಶವು ದೇಹದಲ್ಲಿ ನೀರಿನ ಅಂಶ ಉಳಿಯುವ ಹಾಗೆ ಮಾಡುವದು. ಇದರಿಂದ ಉಪ್ಪಿನ ಸೇವನೆ ಇತಿಮಿತಿಯಲ್ಲಿದ್ದರೆ ದೇಹದಲ್ಲಿ ನೀರಿನಂಶ ಉಳಿಯದೆ ಊತ ಕಂಡುಬರುವದಿಲ್ಲ.

ಪಾದ ಮತ್ತು ಹಸ್ತಗಳ ಊತದಿಂದ ಪರಿಹಾರ ದೊರೆಯುವದೇ?

ಪಾದ ಮತ್ತು ಹಸ್ತಗಳ ಊತದಿಂದ ಪರಿಹಾರ ದೊರೆಯುವದೇ?

ಅನೇಕ ಹೆಣ್ಣುಮಕ್ಕಳು ಮಗುವಿನ ಜನನವಾದ ಕೂಡಲೆ ಊತದಿಂದ ಪರಿಹಾರ ಪಡೆಯುವರು. ಸುಮಾರಾಗಿ 24 ಘಂಟೆಗಳ ನಂತರ ನಿಮಗೆ ಪರಿಹಾರ ಸಿಗುವದು. ಕೆಲ ಮಹಿಳೆಯರಿಗೆ ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು. ಒಂದು ವೇಳೆ ನಿಮಗೆ ಊತ ಕಡಿಮೆ ಆಗಲೇ ಇಲ್ಲವೆಂದರೆ ವೈದ್ಯರನ್ನು ಸಂಪರ್ಕಿಸಿ. ಒಟ್ಟಿನಲ್ಲಿ ಈ ಮಗುವಿನ ಪ್ರಜನನದ ಪ್ರಕ್ರಿಯೆಯಲ್ಲಿ ಹೆಂಗಳೆಯರು ಅನೇಕ ತರಹದ ಬದಲಾವಣೆಗಳನ್ನು ಅನುಭವಿಸುತ್ತಾರೆ, ಆದರೆ ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೇ ಇರುತ್ತದೆ, ವೈದ್ಯರನ್ನು ಸಂಪರ್ಕಿಸಿ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.

English summary

Swollen Feet & Hands (Edema) During Pregnancy

The miracle of pregnancy comes with its own set of not so miraculous problems. While the fact that a new life is growing within you makes you ecstatic and euphoric, the troubles that comes with it can weigh you down. The morning sickness, mood swings and hormonal changes can be very hard to deal with. Another major cause of concern for you during pregnancy can be swollen feet and hands.
X