For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಮೊದಲು ಕಾಡುವ ಆ ವಾಂತಿಯ ಸಮಸ್ಯೆಗೆ ಸಮರ್ಥ ಪರಿಹಾರಗಳು

By Arshad
|

ಗರ್ಭಾವಸ್ಥೆಯ ಒಂಬತ್ತೂ ತಿಂಗಳು ಗರ್ಭವತಿಯ ದೇಹ ಹಲವಾರು ಬದಲಾವಣೆಗಳಿಗೆ ಒಳಪಡುತ್ತದೆ. ಇದರಲ್ಲಿ ಪ್ರಥಮ ತ್ರೈಮಾಸಿಕ ಅತ್ಯಂತ ಸೂಕ್ಷ್ಮವಾಗಿದ್ದು ಕೊಂಚ ಎಚ್ಚರ ತಪ್ಪಿದರೂ ಗರ್ಭಾಪಾತವಾಗುವ ಸಾಧ್ಯತೆ ಇದೆ. ಈ ಹಂತದಲ್ಲಿ ಫಲಿತಗೊಂಡ ಅಂಡಾಶಯ ಶೀಘ್ರವಾಗಿ ಬೆಳವಣಿಗೆ ಪಡೆಯುತ್ತಾ ಹೋಗುತ್ತಿದ್ದಂತೆಯೇ ಗರ್ಭವತಿಯ ದೇಹವೂ ಹಲವಾರು ಬದಲಾವಣೆ ಹಾಗೂ ವಿರೋಧಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾದ ವಿರೋಧ ಎಂದರೆ ವಾಕರಿಕೆ ಮತ್ತು ವಾಂತಿ. ಈ ಹಂತದಲ್ಲಿ ವಾಕರಿಕೆ ಎಷ್ಟು ಪ್ರಬಲವಾಗಿರುತ್ತದೆ ಎಂದರೆ ಮನೆಯಿಂದ ಹೊರ ಹೋಗಬೇಕಾದರೂ ಚಿಂತಿಸುವಂತೆ ಮಾಡುತ್ತದೆ.

ಗರ್ಭಿಣಿಯಾಗುವುದರ ಲಕ್ಷಣಗಳನ್ನು ನೀವೆ ಪತ್ತೆ ಮಾಡಿ

ಹೆಚ್ಚೂ ಕಡಿಮೆ ನಾಲ್ವರಲ್ಲಿ ಮೂವರು ಗರ್ಭಿಣಿಯರಿಗೆ ವಾಕರಿಕೆ ಮತ್ತು ವಾಂತಿ ಹೆಚ್ಚೇ ಎನಿಸುವಷ್ಟಿದ್ದರೆ ಉಳಿದವರಿಗೆ ಅಷ್ಟು ಹೆಚ್ಚಾಗಿ ಇರುವುದಿಲ್ಲ. ಕೆಲವರಿಗೆ ಹೆರಿಗೆಯಾಗುವವರೆಗೂ ಮುಂದುವರೆಯಬಹುದು. ಇದಕ್ಕೆ ಕೆಲವಾರು ಕಾರಣಗಳಿವೆ. ಪ್ರಮುಖವಾಗಿ ಹೆಚ್ ಸಿ ಜಿ ರಸದೂತ ಅಥವಾ human chorionic gonadotropin (hCG), ಈಸ್ಟ್ರೋಜೆನ್, ಪ್ರೊಜೆಸ್ಟರಾನ್ ಹಾಗೂ ಇತರ ರಸದೂತಗಳು ಕಾರಣವಾಗಿವೆ. ಗರ್ಭಿಣಿ ಇಷ್ಟಪಡದ ಪರಿಮಳ, ತೂಕ ಹೆಚ್ಚಿಸುವ ಕೊಬ್ಬಿನ ಆಹಾರಗಳು, ಭಾವನಾತ್ಮಕ ಅಸಮತೋಲನ ಮೊದಲಾದವೂ ಈ ವಾಕರಿಕೆಗೆ ಪರೋಕ್ಷ ಕಾರಣಗಳಾಗಿವೆ. ಪ್ರಥಮ ದಿನಗಳಲ್ಲಿ ವಾಕರಿಕೆ ಹಾಗೂ ವಾಂತಿ ಸಹಜವಾಗಿದೆ. ಆದರೆ ಇದು ನಿಯಂತ್ರಣ ಮೀರಿ ತುಂಬಾ ಹೆಚ್ಚಾದರೆ ಇದರ ಪರಿಣಾಮಗಳು ಭೀಕರವಾಗಬಹುದು.

ಗರ್ಭಿಣಿಯರ ವಾಂತಿ ಸಮಸ್ಯೆಗೆ ಮನೆ ಮದ್ದು

ಈ ಸ್ಥಿತಿಗೆ hyperemesis gravidarum ಎಂದು ಕರೆಯುತ್ತಾರೆ. ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸದೇ ತೂಕ ಅತಿ ಶೀಘ್ರವಾಗಿ ಇಳಿಯುತ್ತದೆ ಹಾಗೂ ಮಗುವಿನ ಬೆಳವಣಿಗೆಗೂ ಬಾಧೆಯುಂಟಾಗುತ್ತದೆ. ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಪರ್ಯಾಯವಾಗಿ ಕೆಳಗೆ ಸೂಚಿಸಿರುವ ಕೆಲವು ಸುಲಭ ವಿಧಾನಗಳನ್ನು ಅನುಸಸಿರುವ ಮೂಲಕವೂ ವಾಕರಿಕೆ ವಾಂತಿಯನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು....

ಹಸಿಶುಂಠಿ

ಹಸಿಶುಂಠಿ

ವಾಕರಿಕೆ ಮತ್ತು ವಾಂತಿ ಕಡಿಮೆಗೊಳಿಸಲು ಅತ್ಯಂತ ಉತ್ತಮ ಪರಿಹಾರವನ್ನು ಹಸಿಶುಂಠಿ ಒದಗಿಸುತ್ತದೆ. ವಾಂತಿಯಾಗುವ ಭಾವನೆ ಬಲವಾಗುವ ಮುನ್ನವೇ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಬಾಯಲ್ಲಿ ಹಾಕಿಕೊಂಡು ಅಗಿಯುತ್ತಾ ರಸವನ್ನು ನುಂಗಬೇಕು. ಇದರ ಪ್ರಬಲ ಪರಿಮಳ ಹಾಗೂ ಖಾರವಾದ ರುಚಿ ವಾಕರಿಕೆಯ ಭಾವನೆಯನ್ನು ತೊಡೆದು ಹೆಚ್ಚು ವಾಂತಿಯಾಗದಂತೆ ರಕ್ಷಿಸುತ್ತದೆ. ಪರ್ಯಾಯವಾಗಿ ಬೆಳಿಗ್ಗೆ ಒಂದು ಅಥವಾ ಎರಡು ಕಪ್ ಹಸಿಶುಂಠಿ ಬೆರೆಸಿ ಮಾಡಿದ ಟೀ ಕುಡಿಯಬಹುದು. ಆದರೆ ಒಟ್ಟಾರೆ ಹಸಿಶುಂಠಿಯ ಪ್ರಮಾಣ ಹೆಚ್ಚಾಗಬಾರದು, ಹೆಚ್ಚಿನ ಪ್ರಮಾಣದ ಹಸಿಶುಂಠಿ ಗರ್ಭಿಣಿಗೆ ಸೂಕ್ತವಲ್ಲ.

ಲಿಂಬೆಹಣ್ಣು

ಲಿಂಬೆಹಣ್ಣು

ವಾಕರಿಕೆ ಕಡಿಮೆಗೊಳಿಸಲು ವಿಶ್ವದಲ್ಲಿಯೇ ಅತಿ ಸಾಮಾನ್ಯವಾಗಿ ಬಳಸಲಾಗುವ ವಿಧಾನವೆಂದರೆ ಲಿಂಬೆರಸ ಸೇವಿಸುವುದು. ಇದು ವಾಕರಿಕೆ ಕಡಿಮೆ ಮಾಡುವುದರೊಂದಿಗೇ ದೇಹಕ್ಕೆ ಅಗತ್ಯವಾದ ನೀರು ಹಾಗೂ ವಿಟಮಿನ್ ಸಿ ಒದಗಿಸುತ್ತದೆ ಹಾಗೂ ಇವು ಮಗುವಿನ ಬೆಳವಣಿಗೆಗೆ ಪೂರಕವಾಗಿವೆ. ವಾಕರಿಕೆಯಾಗುತ್ತಿದೆ ಎನ್ನಿಸುತ್ತಿದ್ದಂತೆಯೇ ಒಂದು ಚಿಕ್ಕ ಲಿಂಬೆಹಣ್ಣಿನ ರಸವನ್ನು ಹಿಂಡಿಕೊಂಡು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಚಮಚ ಜೇನು ಬೆರೆಸಿ ಕುಡಿಯಿರಿ. ಇದು ಸಾಧ್ಯವಿಲ್ಲ ಎಂದಾದರೆ ಕತ್ತರಿಸಿದ ಲಿಂಬೆಹಣ್ಣಿನ ಸಿಪ್ಪೆಯನ್ನು ಕಿವುಚಿ ಇದರ ಪರಿಮಳವನ್ನು ಆಸ್ವಾದಿಸಿ.

ದೊಡ್ಡ ಜೀರಿಗೆ

ದೊಡ್ಡ ಜೀರಿಗೆ

ದೊಡ್ಡ ಜೀರಿಗೆ ಅಥವಾ ಬಡಾಸೌಂಫ್ ಅನ್ನು ಪ್ರತಿ ಹೋಟೆಲಿನಲ್ಲಿಯೂ ಊಟದ ಬಳಿಕ ಸೇವಿಸಲು ಇಟ್ಟಿರುತ್ತಾರೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಹಾಗೂ ಜೀರ್ಣಾಂಗಗಳು ಸಡಿಲಗೊಂಡು ವಾಕರಿಕೆ ಹಾಗೂ ವಾಂತಿಯಾಗದಂತೆ ತಡೆಯುತ್ತವೆ. ಹಾಗಾಗಿ ಗರ್ಭಿಣಿ ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಕೊಂಚ ದೊಡ್ಡ ಜೀರಿಗೆಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋದರೆ ವಾಕರಿಕೆಯ ಮುಜುಗರದಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಮರೆತರೆ ಮಾರುಕಟ್ಟೆಯಲ್ಲಿರುವ ಯಾವುದೇ ಹೋಟೆಲಿನಲ್ಲಿ ಅಥವಾ ಅಂಗಡಿಯಲ್ಲಿ ಈ ಜೀರಿಗೆ ಸುಲಭವಾಗಿ ಲಭ್ಯವಾಗುವುದರಿಂದ ತಡಮಾಡದೇ ಹತ್ತಿರದ ಸ್ಥಳದಿಂದ ಪಡೆದುಕೊಂಡು ತಕ್ಷಣ ಜಗಿದು ರಸವನ್ನು ನುಂಗಬೇಕು. ಮನೆಯಲ್ಲಿದ್ದರೆ ಒಂದು ಲೋಟ ನೀರು ಕುದಿಸಿ ಒಂದು ಚಿಕ್ಕ ಚಮಚದಷ್ಟು ಜೀರಿಗೆ ಬೆರೆಸಿ ಉಗುರುಬೆಚ್ಚಗಾಗುವಷ್ಟು ತಣಿಸಿ ಸೋಸಿ ಕುಡಿಯಬೇಕು.

ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿರಬಾರದು

ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿರಬಾರದು

ಹೊಟ್ಟೆ ಖಾಲಿ ಇದ್ದರೆ ಆಮ್ಲೀಯತೆ ಎದುರಾಗುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣವೇ ಕೊಂಚ ಪ್ರಮಾಣದ ದ್ರವಾಹಾರ ಸೇವಿಸಬೇಕು. ಏನೂ ಇಲ್ಲವೆಂದಾದರೆ ಕನಿಷ್ಠ ಒಂದು ಲೋಟ ನೀರನ್ನಾದರೂ ಕುಡಿಯಬೇಕು. ಆದರೆ ಕೆಲವರಿಗೆ ನೀರು ಕುಡಿದ ತಕ್ಷಣವೇ ವಾಂತಿಯಾಗುವ ಸಾಧ್ಯತೆ ಇರುವುದರಿಂದ ಈ ಸಮಯದಲ್ಲಿ ಕೊಂಚ ಒಣಫಲಗಳು ಹೆಚ್ಚು ನೆರವು ನೀಡುತ್ತವೆ. ವಿಶೇಷವಾಗಿ ಬಾದಾಮಿ ಹೆಚ್ಚು ಉಪಯುಕ್ತವಾಗಿದೆ. ಇದರಿಂದ ಹೊಟ್ಟೆ ತುಂಬಿದಂತಾಗಿರುವ ಭಾವನೆ ಬೆಳೆದು ವಾಂತಿಯಾಗದೇ ಇರಲು ಸಾಧ್ಯವಾಗುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ.

English summary

Remedies for nausea in first trimester

Women go through thick and thin during the nine months of pregnancy. The most crucial stage is the first trimester; when the chances of a miscarriage are higher. The foetus takes shape during this time when the mother has to battle many other odds due to bodily changes. Nausea and vomiting are some of the odds that women could face during this time. They have so much of prominence that they go hand in hand with pregnancy. Three-quarters of women experience nausea and vomiting only during the first trimester.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more