Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ತಾಯ್ತನ, ಉದ್ಯೋಗ ಇವೆರಡನ್ನೂ ನಿಭಾಯಿಸುವುದು ಹೇಗೆ?
ಗರ್ಭಾವಸ್ಥೆ ಎಂಬುದು ಪ್ರತಿಯೊಬ್ಬ ಹೆಣ್ಣಿನ ಬಾಳಿನಲ್ಲೂ ಪುಳಕವನ್ನುಂಟು ಮಾಡುವ ಸುಸಮಯವಾಗಿದೆ. ಈ ಅಭೂತಪೂರ್ವ ಕ್ಷಣಕ್ಕಾಗಿ ವಿವಾಹಿತ ಸ್ತ್ರೀ ಎದುರು ನೋಡುತ್ತಿರುತ್ತಾರೆ. ಹೆಣ್ಣು ಗರ್ಭಿಣಿಯಾದ ಸಮಯದಿಂದ ಹಿಡಿದು ಮಗುವನ್ನು ಪ್ರಸವಿಸುವವರೆಗೂ ಸಾಧ್ಯವಾದಷ್ಟು ಕಾಳಜಿಯನ್ನು ಮಾಡಬೇಕು. ಆದರೆ ಗರ್ಭವತಿಯು ಕೆಲಸಕ್ಕೆ ಹೋಗುವ ಉದ್ಯೋಗಿಯಾಗಿದ್ದಲ್ಲಿ ಆಕೆ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗಿದೆ.
ಇಂದಿನ ದಿನಗಳಲ್ಲಿ ಮಹಿಳೆಯರನ್ನು ಕಾಡುತ್ತಿರುವ ಕೆಲಸದ ಒತ್ತಡ ಮತ್ತು ಧಾವಂತಹ ಜೀವನ ಗರ್ಭಿಣಿಯರನ್ನೂ ಬಿಟ್ಟಿಲ್ಲ. ಸಾಧಾರಣ ಮಹಿಳಯೆರಿಗೆಯೇ ಮನೆಯ ಕೆಲಸಗಳನ್ನು ಮುಗಿಸಿ ಕಚೇರಿಗೆ ಹೋಗಿ ಅಲ್ಲಿನ ಕೆಲಸಗಳನ್ನು ಮುಗಿಸಿ ಪುನಃ ಮನೆಗೆ ಬರುವಾಗ ಉಸ್ಸಪ್ಪಾ ಎಂಬ ಉದ್ಗಾರ ಬಾಯಿಂದ ಬರುತ್ತದೆ.
ಆದರೆ ತನ್ನ ಒಡಲೊಳಗೆ ಇನ್ನೊಂದು ಜೀವವನ್ನು ಕಾಪಾಡಿಕೊಳ್ಳುವ ತಾಯಿಯಾಗಲಿರುವ ಗರ್ಭಿಣಿ ಸ್ತ್ರೀಗೆ ಈ ಒತ್ತಡ ದುಪ್ಪಟ್ಟು ಪಟ್ಟು ಇರುತ್ತದೆ. ಸಾಧ್ಯವಾದಷ್ಟು ವಿಶ್ರಾಂತಿಯನ್ನು ತೆಗೆದುಕೊಂಡು ಮನೆ, ಕಚೇರಿ ಎರಡನ್ನೂ ನಿಭಾಯಿಸುವ ಜವಾಬ್ದಾರಿ ಆಕೆಯ ಮೇಲಿರುತ್ತದೆ, ಜೊತೆಗೆ ತನ್ನ ಮತ್ತು ಕರುಳ ಕುಡಿಯ ಸುರಕ್ಷತೆಯನ್ನು ನೋಡಿಕೊಳ್ಳಬೇಕು.
ಆದರೆ ಇದನ್ನು ಆಕೆಯೊಬ್ಬಳೇ ನಿಭಾಯಿಸುವುದು ಪ್ರಯಾಸದ ಕೆಲಸವಾಗಿದೆ. ಸಹೋದ್ಯೋಗಿಗಳು ಮತ್ತು ಮನೆಯವರ ಸಹಾಯ ಆಕೆಗೆ ಬೇಕೇ ಬೇಕು. ನೀವು ಸುರಕ್ಷತೆಯುಳ್ಳ ಗರ್ಭಾವಸ್ಥೆಯನ್ನು ಬಯಸುತ್ತಿದ್ದೀರಿ ಎಂದಾದಲ್ಲಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಬೆಳಗ್ಗಿನ ವಾಕರಿಕೆ, ಹಾರ್ಮೋನಲ್ ಬದಲಾವಣೆಗಳು ಇವೇ ಮೊದಲಾದ ಕೆಲವೊಂದು ಸಮಸ್ಯೆಗಳನ್ನು ಪಾರು ಮಾಡಬೇಕು. ಇಂದಿನ ಲೇಖನದಲ್ಲಿ ಉದ್ಯೋಗಿ ಗರ್ಭವತಿ ಸ್ತ್ರೀಯರಿಗಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ನಾವು ಇಲ್ಲಿ ನೀಡಿದ್ದು ಇದರಿಂದ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಂಡು ಕಚೇರಿಗೂ ಹೋಗಬಹುದಾಗಿದೆ...
ಬೆಳಗ್ಗಿನ ವಾಕರಿಕೆಯನ್ನು ನಿಭಾಯಿಸುವುದು
ಕಚೇರಿಯಲ್ಲಿ ಕೂಡ ಗರ್ಭಿಣಿ ಸ್ತ್ರೀಯರು ಬೆಳಗ್ಗಿನ ವಾಕರಿಕೆ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಇದಕ್ಕಾಗಿ ಮುಂಜಾನೆ ಬೇಗನೇ ಏಳುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದರಿಂದ ನಿಮ್ಮ ಹೊಟ್ಟೆಯು ಸಮಸ್ಥಿತಿಗೆ ಬರುತ್ತದೆ. ಇದಕ್ಕಾಗಿ ವೈದ್ಯರ ಸಲಹೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಗರ್ಭಾವಸ್ಥೆಯಲ್ಲಿ ವಾಕರಿಕೆ ಶಮನಕ್ಕೆ ಮನೆ ಮದ್ದು ರಾಮಬಾಣ
ಕಚೇರಿಗೆ ಪ್ರಯಾಣ ಬೆಳೆಸುವುದು
ನಿಮ್ಮನ್ನು ಯಾರಾದರೂ ಕಚೇರಿಗೆ ಕರೆದುಕೊಂಡು ಹೋಗಿ ಬಿಡುವುದು ಉತ್ತಮ ಸಲಹೆಯಾಗಿದೆ. ಆದರೆ ಇದು ಸಾಧ್ಯವಿಲ್ಲ ಎಂದಾದಲ್ಲಿ ನೀವೇ ಕಾರು ಚಾಲನೆ ಮಾಡಿಕೊಂಡು ಕಚೇರಿಗೆ ಹೋಗಿ. ನೀವು ಕ್ಯಾಬ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಿ ಎಂದಾದಲ್ಲಿ ಕ್ಯಾಬ್ ಡ್ರೈವರ್ ಬಳಿ ನಿಧಾನವಾಗಿ ಕಾರು ಚಲಾಯಿಸುವಂತೆ ಕೇಳಿಕೊಳ್ಳಿ.
ಕಚೇರಿ ಉಡುಪುಗಳು
ಕಚೇರಿಗೆ ಆದಷ್ಟು ಹಗರುವಾಗಿರುವ ಉಡುಪುಗಳನ್ನು ಧರಿಸಿಕೊಂಡು ಹೋಗಿ. ಕಚೇರಿಯ ಉಡುಪುಗಳು ಈ ಸಮಯದಲ್ಲಿ ನಿಮಗೆ ಫಿಟ್ ಆಗಬೇಕೆಂದೇನಿಲ್ಲ, ಅದಕ್ಕಾಗಿ ಕಷ್ಟಪಟ್ಟು ಉಡುಪು ಧರಿಸಿಕೊಂಡು ಹೋಗದಿರಿ. ನಿಮಗೆ ಆರಾಮವಾಗಿರುವ ದಿರಿಸನ್ನೇ ಧರಿಸಿ.
ಕಚೇರಿಯಲ್ಲಿ ಕುಳಿತುಕೊಳ್ಳುವ ಭಂಗಿ
ನಿಮ್ಮ ಕುರ್ಚಿಗೆ ಒರಗಿಕೊಂಡು ಆದಷ್ಟು ಆರಾಮ ಭಂಗಿಯಲ್ಲಿ ಕುಳಿತುಕೊಳ್ಳಿ. ಮುಂದಕ್ಕೆ ಕೀಬೋರ್ಡ್‌ನಲ್ಲಿ ಟೈಪ್ ಮಾಡಲು ಬಾಗುವುದನ್ನು ಕಡಿಮೆ ಮಾಡಿ. ಇದರಿಂದ ನಿಮ್ಮ ಹೊಟ್ಟೆಗೆ ಹೆಚ್ಚಿನ ಒತ್ತಡ ಬೀಳಬಹುದು.
ವಾಕರಿಕೆಗಾಗಿ ಪರಿಹಾರಗಳು
ವಾಕರಿಕೆಯಂತಹ ಸಮಸ್ಯೆಗಳನ್ನು ದೂರಮಾಡಲು ಲಿಂಬೆ ಹಣ್ಣಿನ ಸಹಾಯ ಪಡೆದುಕೊಳ್ಳಿ. ನಿಮ್ಮ ಡೆಸ್ಕ್‌ನಲ್ಲಿ ಲಿಂಬೆಯನ್ನು ಇರಿಸಿಕೊಳ್ಳಿ. ಅಂತೆಯೇ ತಾಜಾ ಹೂವನ್ನು ನಿಮ್ಮ ಕ್ಯಾಬಿನ್‌ನಲ್ಲಿ ಇರಿಸಿಕೊಳ್ಳಿ. ಇದರಿಂದ ಹೂವಿನ ಸುಗಂಧ ನಿಮ್ಮ ವಾಕರಿಕೆಯನ್ನು ದೂರಮಾಡಬಹುದು.
ಪಾದಗಳ ಆರೈಕೆ
ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಕಾಲುಗಳು ಪಾದಗಳು ಬಾತುಕೊಳ್ಳಬಹುದು. ನಿಮ್ಮ ಡೆಸ್ಕ್ ಬಳಿ ಸಣ್ಣ ಸ್ಟೂಲ್ ಅನ್ನು ಇರಿಸಿಕೊಳ್ಳಿ ಮತ್ತು ಅದರಲ್ಲಿ ನಿಮ್ಮ ಕಾಲುಗಳನ್ನು ಇರಿಸಿ. ಅಂತೆಯೇ ಕೆಲಸದ ನಡುವೆ ವಿಶ್ರಾಂತಿಯನ್ನು ಪಡೆದುಕೊಳ್ಳಿ. ಸಣ್ಣ ವಾಕ್ ಅನ್ನು ಸಾಧ್ಯವಾದಲ್ಲಿ ಮಾಡಿ.
ಆಗಾಗ್ಗೆ ಆಹಾರ ಸೇವಿಸಿ
ನಿಮ್ಮ ಬಳಿ ಸಾಕಷ್ಟು ತರಕಾರಿ, ಹಣ್ಣುಗಳ ಸ್ಟಾಕ್ ಅನ್ನು ಇರಿಸಿಕೊಳ್ಳಿ. ಬಿಸ್ಕೆಟ್, ಡ್ರೈ ಫ್ರುಟ್ಸ್‌ನಂತಹ ಸಾಮಾಗ್ರಿಗಳನ್ನು ಆಗಾಗ್ಗೆ ಸೇವಿಸುತ್ತಿರಿ.
ದ್ರವಹಾರಗಳ ಸೇವನೆ
ನೀವು ಗರ್ಭಿಣಿಯಾಗಿದ್ದಾಗ ಆದಷ್ಟು ದಿನದಲ್ಲಿ 6 ಲೀಟರ್‌ಗಳಷ್ಟು ನೀರು ಕುಡಿಯಬೇಕು. ನಿಮ್ಮ ಕೆಲಸದ ನಡುವೆ ನೀರು ಕುಡಿಯುವುದನ್ನು ಮರೆಯದಿರಿ.
ಹಾರ್ಮೋನಲ್ ಅಸಮತೋಲನ
ನಿಮ್ಮ ದೇಹದಲ್ಲಿ ಗರ್ಭಾವಸ್ಥೆಯು ಹಾರ್ಮೋನಲ್ ಅಸಮತೋಲವನ್ನು ಉಂಟುಮಾಡಬಹುದು. ನಿಮಗೆ ಕೋಪ, ಹತಾಶೆ, ಮರೆಗುಳಿತನ ಮೊದಲಾದ ಮಾನಸಿಕ ತೊಳಲಾಟಗಳು ಸಂಭವಿಸುವ ಪರಿಸ್ಥಿತಿ ಕೂಡ ಇರುತ್ತದೆ. ಇದರಿಂದ ನಿಮ್ಮ ಕೆಲಸ ಹಿಮ್ಮುಖವಾಗಬಹುದು. ಆದ್ದರಿಂದ ನೀವು ಕಚೇರಿಯಲ್ಲಿ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ತಯಾರಿಸಿ ಮತ್ತು ಅದರಂತೆಯೇ ಕೆಲಸ ಮಾಡಿ.
ಮಾನಸಿಕ ತೊಳಲಾಟ
ಹಾರ್ಮೋನಲ್ ಬದಲಾವಣೆಗಳಿಂದ ಗರ್ಭವತಿಯು ಮಾನಸಿಕ ಕ್ಲೇಶೆಗಳನ್ನು ಅನುಭವಿಸಬೇಕಾಗುತ್ತದೆ. ಕೋಪ, ಅಳು, ನಗು ಮೊದಲಾದ ಪ್ರಕ್ರಿಯೆಗಳು ಆಗಾಗ್ಗೆ ಸಂಭವಿಸುತ್ತವೆ. ಈ ರೀತಿಯಾದಾಗ ಆಳವಾಗಿ ಉಸಿರಾಡಿ ಮತ್ತು ಹೊರಹೋಗಿ ತಾಜಾ ಗಾಳಿ ಸೇವಿಸಿ
ವಾರಾಂತ್ಯದ ಚೆಕಪ್
ವಾರಾಂತ್ಯಗಳಲ್ಲಿ ನಿಯಮಿತವಾಗಿ ವೈದ್ಯರನ್ನು ಹೋಗಿ ಕಾಣಿ. ಆದಷ್ಟು ವಾರದ ಮಧ್ಯದಲ್ಲಿ ಚೆಕಪ್‌ಗಳನ್ನು ನಿರ್ವಹಿಸದೇ ವಾರಾಂತ್ಯದ ಸಮಯವನ್ನು ಇದಕ್ಕಾಗಿ ಮೀಸಲಿರಿಸಿ.
ನಿಮ್ಮಷ್ಟಕ್ಕೆ ಮನೆಯಲ್ಲಿ ಆರಾಮ ಮಾಡಿಕೊಳ್ಳಿ
ನೀವು ಮನೆಯಲ್ಲಿದ್ದಾಗ, ಹಾಸಿಗೆಯಲ್ಲಿ ಹಾಗೆಯೇ ಮಲಗಿಕೊಂಡು ಆರಾಮ ಮಾಡಿ. ನೀವು ಗರ್ಭವತಿಯಾಗಿದ್ದಾಗ ತುಸು ಕಾಲ ವಿಶ್ರಾಂತಿ ನಿಮಗೆ ಅಗತ್ಯವಿದೆ.
ಒತ್ತಡವನ್ನು ನಿವಾರಿಸಿಕೊಳ್ಳುವುದು
ನಿಮ್ಮನ್ನು ಒತ್ತಡರಹಿತರನ್ನಾಗಿ ಮಾಡಿಕೊಳ್ಳುವುದು ಕೂಡ ನೀವು ಪಾಲಿಸಬೇಕಾದ ಕೆಲಸವಾಗಿದೆ. ಸಂಗೀತವನ್ನು ಆಸ್ವಾದಿಸಿ ಮತ್ತು ಚಲನಚಿತ್ರಗಳನ್ನು ನೋಡಿ. ಇದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದಾಗಿದೆ.
ನಿಮ್ಮ ಗರ್ಭಾವಸ್ಥೆಯ ರಜಾದಿನವನ್ನು ಯೋಜಿಸಿಕೊಳ್ಳಿ
ನಿಮಗೆ 3 ತಿಂಗಳ ಪಾವತಿ ಇರುವ ಗರ್ಭಾವಸ್ಥೆ ರಜಾದಿನಗಳು ದೊರೆಯಬಹುದು. ನೀವು ಪಾವತಿ ಇಲ್ಲದೇ ಇರುವ ಇನ್ನೊಂದಿಷ್ಟು ತಿಂಗಳು ನಿಮ್ಮ ರಜೆಯನ್ನು ಮುಂದೂಡಬಹುದಾಗಿದೆ. ನಿಮ್ಮ ಗರ್ಭಾವಸ್ಥೆಯ ಕೊನೆಯ ತಿಂಗಳವರೆಗೆ ಕಾರ್ಯನಿರ್ವಹಿಸಿ ಮತ್ತು ಇನ್ನಷ್ಟು ಸಮಯವನ್ನು ನಿಮ್ಮ ಮಗುವಿನೊಂದಿಗೆ ಕಳೆಯಿರಿ. 7 ರಿಂದ 8 ತಿಂಗಳ ಕಾಲ ರಜೆಯನ್ನು ಪಡೆದುಕೊಳ್ಳಿ. ನಿಮ್ಮ ಹೆರಿಗೆ ಯಾವ ಪ್ರಕಾರದ್ದು ಎಂಬುದನ್ನು ನಿರ್ಧರಿಸಿಕೊಂಡು ರಜೆಯನ್ನು ಹೆಚ್ಚಿಸಿಕೊಳ್ಳಿ.