For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ನೆನಪಿಡಿ, ಅಪ್ಪಿ ತಪ್ಪಿಯೂ ಅನಾನಸ್ ಹಣ್ಣು ಸೇವಿಸಬೇಡಿ...

By Manu
|

ಅನಾನಸ್ ಹಣ್ಣು ಎಂಬ ಹೆಸರು ಕೇಳಿದ ತಕ್ಷಣ ಮುಳ್ಳು, ಹುಳಿ ಮತ್ತು ರುಚಿಕರವಾದ ಹಣ್ಣು ಎನ್ನುವ ಕಲ್ಪನೆ ಬರುತ್ತದೆ. ಇದನ್ನು ಕತ್ತರಿಸಿ ತಿನ್ನುವುದು ಸ್ವಲ್ಪ ಜಟಿಲ ಎನಿಸಿದರೂ ವ್ಯಾಪಕವಾದ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಮಹಿಳೆಯರು ಋತುಬಂಧ (ಮೆನೋಪಸ್)ದ ಅವಧಿಯಲ್ಲಿ ಈ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಧಿಕವಾದ ನೀರಿನಂಶ ಹಾಗೂ ಬೇಸಿಗೆಯ ಉಷ್ಣಾಂಶವನ್ನು ತಣ್ಣಗಾಗಿಸುವ ಸಾಮರ್ಥ್ಯ ಈ ಹಣ್ಣಿಗಿದೆ. ಹಾಗಾಗಿಯೇ ಇದನ್ನು ಬೇಸಿಗೆಯ ಹಣ್ಣು ಎಂತಲೂ ಕರೆಯುತ್ತಾರೆ.

ಗರ್ಭಿಣಿಯರ ಆರೋಗ್ಯಕ್ಕೆ ಇಂತಹ ಹಣ್ಣುಗಳು ಬಹಳ ಒಳ್ಳೆಯದು...

ಇಷ್ಟೊಂದು ಆರೋಗ್ಯಕರ ಅಂಶಗಳನ್ನು ಒಳಗೊಂಡಿದ್ದರೂ ಗರ್ಭಿಣಿಯರು ಮಾತ್ರ ಈ ಹಣ್ಣನ್ನು ತಿನ್ನುವಂತಿಲ್ಲ. ಗರ್ಭಾವಸ್ಥೆಯಲ್ಲಿ ಹುಳಿ ತಿನ್ನುವ ಬಯಕೆ ಉಂಟಾಗಬಹುದು. ಹಾಗಂತ ಅನಾನಸ್ ತಿನ್ನಬಾರದು. ಇದನ್ನು ತಿಂದರೆ ಗರ್ಭದಲ್ಲಿರುವ ಮಗುವಿಗೆ ಅನೇಕ ಅಪಾಯಗಳನ್ನು ತಂದೊಡ್ಡುತ್ತದೆ. ಗರ್ಭಿಣಿಯರಿಗೆ ಅದ್ಯಾವ ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಸಂಕ್ಷಿಪ್ತ ವಿವರವನ್ನು ಈ ಲೇಖನ ನೀಡುತ್ತದೆ....

ಗರ್ಭಪಾತದ ಅಪಾಯ ಜಾಸ್ತಿ!

ಗರ್ಭಪಾತದ ಅಪಾಯ ಜಾಸ್ತಿ!

ಅನಾನಸ್‍ನಲ್ಲಿ ಖನಿಜ ಮತ್ತು ಪ್ರೋಟೀನ್ ಸಮೃದ್ಧವಾಗಿರುವುದರಿಂದ ಹೊಟ್ಟೆ ಮತ್ತು ಕುತ್ತಿಗೆ ನೋವಿಗೆ ಕಾರಣವಾಗುವ ಸೋಂಕನ್ನು ತೆಗೆದು ಹಾಕುವುದು. ಆದರೆ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ಇದು ಗರ್ಭಿಣಿಯರಿಗೆ ಹೆಚ್ಚು ಅಪಾಯಕಾರಿ ಎನ್ನಬಹುದು.

ಗರ್ಭಿಣಿಯರು ಈ ಹಣ್ಣನ್ನು ಸೇವಿಸದಿರುವುದೇ ಒಳ್ಳೆಯದು!

ಗರ್ಭಿಣಿಯರು ಈ ಹಣ್ಣನ್ನು ಸೇವಿಸದಿರುವುದೇ ಒಳ್ಳೆಯದು!

ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಮಲಬದ್ಧತೆ ಮತ್ತು ನಿದ್ರಾಹೀನತೆಯನ್ನು ನಿವಾರಿಸುತ್ತದೆಯಾದರೂ ಗರ್ಭಿಣಿಯರಿಗೆ ಇದು ಅಪಾಯಕಾರಿ. ಗರ್ಭಾಶಯವನ್ನು ಕುಗ್ಗಿಸುವುದಲ್ಲದೆ ಮಗುವಿನ ಉಳಿವಿಗೆ ಕಂಠಕವನ್ನು ತರುತ್ತದೆ.

ಸಂಶೋಧನೆಯ ಪ್ರಕಾರ...

ಸಂಶೋಧನೆಯ ಪ್ರಕಾರ...

ಸಂಶೋಧನೆಯ ಪ್ರಕಾರ ಅನಾನಸ್ ಹಣ್ಣು ಬ್ರೋಮೆಲಿಯನ್ ಅಂಶವನ್ನು ಒಳಗೊಂಡಿರುವುದರಿಂದ ಗರ್ಭಕಂಠದ ಅತಿಸಾರ ಅಥವಾ ಗರ್ಭಪಾತ ಎನ್ನುವ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಈ ಹಣ್ಣಿನಿಂದ ದೂರ ಉಳಿಯುವುದು ಉತ್ತಮ.

ಗರ್ಭಿಣಿಯರ ಪಾಲಿಗೆ ಇದೊಂದು ಮಾರಣಾಂತಿಕ ಹಣ್ಣು!

ಗರ್ಭಿಣಿಯರ ಪಾಲಿಗೆ ಇದೊಂದು ಮಾರಣಾಂತಿಕ ಹಣ್ಣು!

ಗರ್ಭಿಣಿಯರಿಗೆ ಇದೊಂದು ಮಾರಣಾಂತಿಕ ಹಣ್ಣಾಗಿ ಪರಿಣಾಮ ಬೀರುವುದರಿಂದ ಆದಷ್ಟು ದೂರ ಇರುವುದು ಸೂಕ್ತ. ಕೆಲವು ಗರ್ಭಿಣಿಯರ ಆರೋಗ್ಯದ ತಪಾಸಣೆಯ ನಂತರ ವೈದ್ಯರು ಅನಾನಸ್ ತಿನ್ನಬೇಕೆನ್ನುವ ಸಲಹೆ ನೀಡುವುದು ಉಂಟು. ಹಾಗಾಗಿ ಗರ್ಭಿಣಿಯರು ಈ ಹಣ್ಣನ್ನು ತಿನ್ನಬಹುದೇ ಅಥವಾ ಬೇಡವೇ ಎನ್ನುವುದರ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆದುಕೊಳ್ಳಲೇ ಬೇಕು.

English summary

'Pineapple' A Dangerous Fruit For Pregnant Women!

Tartary, citric and delicious is three words you would put across when it comes to a pineapple. There are a vast health benefits of pineapple and for women it is essentially good for them during the menopause period. A summer fruit many would call it as it contains a lot of water content keeping you cool from the summer heat.
X
Desktop Bottom Promotion