ಗರ್ಭಾವಸ್ಥೆಯಲ್ಲಿ ಕಾಡುವ ಕಾಲಿನ ನೋವು, ಸೆಳೆತಗಳಿಗೆ ಆರೈಕೆ ಹೀಗಿರಲಿ...

By: Hemanth
Subscribe to Boldsky

ಗರ್ಭ ಧರಿಸಿದ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಹಲವಾರು ರೀತಿಯ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವು ಗರ್ಭಿಣಿಯರಲ್ಲಿ ತಲೆನೋವು, ಕಾಲುನೋವು ಹಾಗೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಕಾಲು ನೋವು ದಿನವಿಡೀ ಇರುತ್ತದೆ ಮತ್ತು ರಾತ್ರಿ ವೇಳೆ ಕಾಲಿನಲ್ಲಿ ಸ್ನಾಯು ಸೆಳೆತ ಉಂಟಾಗುತ್ತದೆ. ಇದಕ್ಕೆ ದೇಹದ ತೂಕ ಹೆಚ್ಚಳ ಮತ್ತು ಆಯಾಸ ಪ್ರಮುಖ ಕಾರಣವಾಗಿದೆ.

ಗರ್ಭಿಣಿ ಮಹಿಳೆಯರ ತೂಕವು ಹೆಚ್ಚಾಗುತ್ತಾ ಹೋಗುವ ಕಾರಣದಿಂದ ಕಾಲುಗಳ ಮೇಲೆ ಒತ್ತಡ ಬೀಳುತ್ತಾ ಹೋಗುತ್ತದೆ. ರಾತ್ರಿ ವೇಳೆ ಸ್ನಾಯುಗಳು ವಿಶ್ರಾಂತಿ ಪಡೆಯುತ್ತಿರುವಾಗ ಸಹಿಸಲಾರದ ಸೆಳೆತ ಉಂಟಾಗುತ್ತದೆ. ಗರ್ಭಧಾರಣೆ ವೇಳೆ ಗರ್ಭಕೋಶವು ಹಿಗ್ಗುವ ಕಾರಣ ಕಾಲಿಗೆ ಹೋಗುವ ಕೆಲವು ನರಗಳು ಮತ್ತು ಸ್ನಾಯುಗಳಿಗೆ ಅಡ್ಡಿಯಾಗುತ್ತದೆ. ಕಾಲಿಗೆ ಸರಿಯಾಗಿ ರಕ್ತಸಂಚಾರವಾಗದೆ ಇರುವ ಕಾರಣ ಸೆಳೆತ ಕಾಣಿಸಿಕೊಳ್ಳುವುದು. 

Pregnancy women

ಮೆಗ್ನಿಶಿಯಂ,ಕ್ಯಾಲ್ಸಿಯಂ ಮತ್ತು ಪೊಟಾಶಿಯಂನಂತಹ ಕೆಲವೊಂದು ಪೌಷ್ಠಿಕಾಂಶಗಳ ಕೊರತೆ ಗರ್ಭಿಣಿಯರಲ್ಲಿ ಕಾಲು ನೋವಿಗೆ ಕಾರಣವಿದೆ. ಅಷ್ಟೇ ಅಲ್ಲದೆ ದಿನಿನಿತ್ಯದ ಆಹಾರಕ್ರಮದಲ್ಲಿ, ತಿಂಡಿತಿನಿಸುಗಳು, ಸೋಡಾ ಮತ್ತು ಮಾಂಸದಲ್ಲಿ ಕಂಡುಬರುವಂತಹ ಉನ್ನತ ಮಟ್ಟದ ಪ್ರೋಸ್ಪರಸ್ ಗರ್ಭಿಣಿ ಮಹಿಳೆಯರಲ್ಲಿ ಕಾಲಿನ ಸೆಳೆತಕ್ಕೆ ಕಾರಣವಾಗಿದೆ.

ಗರ್ಭಾವಸ್ಥೆಯಲ್ಲಿ ಪಾದಗಳ ಊತ- ಇಲ್ಲಿದೆ ಫಲಪ್ರದ ಟಿಪ್ಸ್

ಗರ್ಭಿಣಿಯರಲ್ಲಿ ಕಂಡುಬರುವ ಕಾಲು ನೋವಿನ ನಿವಾರಣೆ ಹೇಗೆ?

ಗರ್ಭಿಣಿ ಮಹಿಳೆಯರು ಕಾಲನ್ನು ಎಳೆಯುವಂತಹ ಕೆಲವೊಂದು ಸರಳ ವ್ಯಾಯಾಮಗಳನ್ನು ಮಾಡಿದರೆ ಒಳ್ಳೆಯದು. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಕಾಲುಗಳನ್ನು ಎಳೆಯಬೇಕು. ಮಲಗುವ ಮೊದಲು ಬಿಸಿ ನೀರಿನಲ್ಲಿ ಸುಮಾರು 20-30 ನಿಮಿಷ ಪಾದಗಳನ್ನು ಇಡಿ. ಇದರಿಂದ ಸ್ನಾಯುಗಳಿಗೆ ಆರಾಮ ಸಿಗುವುದು ಮತ್ತು ನೋವು ಕಡಿಮೆಯಾಗುವುದು.

*ಕಾಲುಗಳನ್ನು ಮಡಚಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ. ಕಾಲಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರೂ ಕುಳಿತುಕೊಂಡ ಭಂಗಿಯನ್ನು ಬದಲಾಯಿಸಿ.

*ಕಾಲುಗಳನ್ನು ಮಡಚಿ ಕುಳಿತುಕೊಂಡಿರುವಾಗ ಪಾದಗಳನ್ನು ತಿರುಗಿಸುತ್ತಾ ಇರಿ. ಇದರಿಂದ ನೋವು ಕಡಿಮೆಯಾಗುವುದು.

*ಪ್ರತೀದಿನ ಸ್ವಲ್ಪ ನಡೆಯಿರಿ. ಇದು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಡೆಯುವುದರಿಂದ ಕಾಲು ನೋವು ಕಡಿಮೆಯಾಗಿ ಕಾಲುಗಳ ಸ್ನಾಯುಗಳು ಬಲಗೊಳ್ಳುವುದು. 

Pregnancy women

*ಹೆಚ್ಚು ನೀರು ಕುಡಿಯಿರಿ. ಹಸಿರೆಲೆ ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ಪ್ರತೀ ದಿನ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

*ಗರ್ಭಧಾರಣೆ ವೇಳೆ ಕಾಲು ನೋವು ಗಂಭೀರ ಸಮಸ್ಯೆಯೇನಲ್ಲ. ಆರೋಗ್ಯಕರ ಆಹಾರ ಸೇವನೆ ಮತ್ತು ಕಾಲುಗಳನ್ನು ಹಿಗ್ಗಿಸುವ ವ್ಯಾಯಾಯ ಮಾಡಿದರೆ ಸೆಳೆತ ಕಡಿಮೆಯಾಗುವುದು.

English summary

How To Cure Leg Pain During Pregnancy?

Most of the pregnant women suffer from body pain, especially in the back and legs. Leg pain during pregnancy is very common after the second trimester. The pain is felt throughout the day but cramps are very high at night when the leg muscles relax. Increasing body weight and fatigue are common causes of leg pain during pregnancy. Causes of leg pain during pregnancy:
Story first published: Saturday, June 24, 2017, 13:05 [IST]
Subscribe Newsletter