For Quick Alerts
ALLOW NOTIFICATIONS  
For Daily Alerts

ಎದೆಹಾಲನ್ನು ಬಾಟಲಿಯಲ್ಲಿ ಶೇಖರಿಸಿ ಮಗುವಿಗೆ ಕುಡಿಸುವುದು ಸರಿಯೇ?

By Jaya Subramanya
|

ತಾಯಿಯಾಗುವುದು ಎನ್ನುವುದು ವಿಶ್ವದಲ್ಲಿಯೇ ಮಹತ್ತರವಾದ ಅನುಭೂತಿಯಾಗಿದೆ. ಮಗು ಜನಿಸಿದ ನಂತರ ಮಗುವಿಗೆ ನೀಡುವ ಒಂದು ಅತ್ಯಮೂಲ್ಯ ಉತ್ತಮ ಆಹಾರವೆಂದರೆ ತಾಯಿಯ ಎದೆಹಾಲಾಗಿದೆ. ಇದು ಮಗುವಿನ ಸಕಲ ರೋಗಗಳನ್ನು ನೀಗುವ ಅದ್ಭುತ ಅಂಶಗಳನ್ನು ತನ್ನಲ್ಲಿ ಒಳಗೊಂಡಿದ್ದು ಮಗುವಿನ ಸರ್ವತೋಮುಖ ಬೆಳಗವಣಿಗೆಗೆ ಕಾರಣವಾಗಿದೆ. ವೈದ್ಯರು ಹೇಳುವಂತೆ ಮಗುವಿಗೆ ಆರು ತಿಂಗಳು ತುಂಬುವವರೆಗೆ ತಾಯಿ ಹಾಲನ್ನು ನೀಡಬೇಕು ಎಂದಾಗಿದೆ.

ಈ ಆಹಾರವನ್ನು ಮಗುವು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ ಮತ್ತು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ನೆರವನ್ನು ನೀಡುತ್ತದೆ. ಆದರೆ ಕೆಲವು ತಾಯಂದಿರು ಮಗು ಜನಿಸಿದ ಕೂಡಲೇ ಉದ್ಯೋಗಕ್ಕೆ ತೆರಳುತ್ತಾರೆ ಮತ್ತು ಕೆಲವೊಂದು ಸಂದರ್ಭಗಳಲ್ಲಿ ಅವರಿಗೆ ಮಗುವಿಗೆ ಹಾಲುಣಿಸಲು ಬೇಕಾದ ಸಮಯವಿರುವುದಿಲ್ಲ ಇಲ್ಲದಿದ್ದರೆ ಅವರು ಹಾಲುಣಿಸುವ ಆಯ್ಕೆಯನ್ನು ಮಾಡಿಕೊಳ್ಳುವುದಿಲ್ಲ. ತಮ್ಮ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ತಮಗೆ ಅನುಕೂಲವಾಗಿರುವ ಸಮಯದಲ್ಲಿ ಮಗುವಿಗೆ ಕುಡಿಸುತ್ತಾರೆ. ಆದರೆ ನೀವು ಹಾಲನ್ನು ಈ ರೀತಿ ಬಾಟಲಿಯಲ್ಲಿ ಸಂಗ್ರಹಿಸುವ ಮುನ್ನ ಕೆಲವೊಂದು ಅಂಶಗಳತ್ತ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.

ಬಾಟಲಿಯಲ್ಲಿ ಶೇಖರಿಸಿದ ಎದೆಹಾಲು ಮಗುವಿಗೆ ಎಷ್ಟು ಸುರಕ್ಷಿತ?

ಬಾಟಲಿಯಲ್ಲಿ ಶೇಖರಿಸಿದ ಎದೆಹಾಲು ಮಗುವಿಗೆ ಎಷ್ಟು ಸುರಕ್ಷಿತ?

ಹಾಲು ತುಂಬಾ ಸೂಕ್ಷ್ಮವಾಗಿರುವ ಆಹಾರವಾಗಿದ್ದು ಇದನ್ನು ಸ್ವಚ್ಛವಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳಿಗೆ ಅನುಸಾರವಾಗಿ ಸಂಗ್ರಹಿಸಬೇಕು. ಅದರಂತೆಯೇ ಎದೆಹಾಲು ಕೂಡ ಇದನ್ನು ಬಿಸಿ ಮಾಡಿ ಇಡಲು ಆಗುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ತಾಯಂದಿರಿಗೆ ಇದೊಂದು ಸವಾಲೇ ಸರಿ. ಇದನ್ನು ಸರಿಯಾಗಿ ಸೂಕ್ತವಾಗಿ ಮುಂಜಾಗರೂಕತೆಯಿಂದ ಸಂಗ್ರಹಿಸಿಟ್ಟಿಲ್ಲ ಎಂದಾದಲ್ಲಿ ಹಾಲು ಬೇಗನೇ ಕೆಟ್ಟು ಹೋಗುತ್ತದೆ.ನಿಮ್ಮ ಮಗುವಿಗೆ ನಿಮ್ಮ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ಕುಡಿಸುವವರು ನೀವಾಗಿದ್ದರೆ ಕೆಲವೊಂದು ಅಂಶಗಳನ್ನು ನೀವು ಗಮನದಲ್ಲಿರಿಸಿ ಕೊಳ್ಳಬೇಕು.

ಸ್ಟೆರಿಲೈಜ್ ಮಾಡಿದ ಪಾತ್ರೆಯಲ್ಲಿ ಹಾಲನ್ನು ಸಂಗ್ರಹಿಸಿ

ಸ್ಟೆರಿಲೈಜ್ ಮಾಡಿದ ಪಾತ್ರೆಯಲ್ಲಿ ಹಾಲನ್ನು ಸಂಗ್ರಹಿಸಿ

ಸಾಧ್ಯಾವಾದಷ್ಟು ತಣ್ಣಗೆಯಾಗಿ ಈ ಬಾಟಲಿಯನ್ನು ಇಡಿ

ಹಾಲನ್ನು ಹೊರತೆಗೆದು 4-5 ಗಂಟೆಗಳ ಒಳಗಾಗಿ ಅದನ್ನು ಕುಡಿಸಿ

ಎದೆಹಾಲನ್ನು ಎಂದಿಗೂ ಕುದಿಸಬೇಡಿ ಏಕೆಂದರೆ ಇದರ ಸ್ವಾದ ಬದಲಾಗಬಹುದು

ಮಗುವಿಗೆ ಹಾಲು ಕುಡಿಸುವ ಮೊದಲು ಹಾಲು ಹಾಳಾಗಿದೆಯೇ ಎಂಬುದನ್ನು ಪರಿಶೀಲಿಸಿ.

ಹಾಲು ಹಾಳಾಗಿದೆ ಎಂಬುದನ್ನು ಪತ್ತೆಹಚ್ಚುವುದು ಹೇಗೆ?

ಹಾಲು ಹಾಳಾಗಿದೆ ಎಂಬುದನ್ನು ಪತ್ತೆಹಚ್ಚುವುದು ಹೇಗೆ?

ಮಗುವಿಗೆ ಅತ್ಯುತ್ತಮವಾಗಿರುವುದನ್ನು ನೀಡಬೇಕು ಎಂಬುದರ ಕಡೆಗೆ ಹೆಚ್ಚಿನ ತಾಯಂದಿರು ಗಮನ ಹರಿಸುತ್ತಾರೆ. ಆದ್ದರಿಂದಲೇ ನಿಮ್ಮ ಮಗುವಿಗೆ ನೀವು ನೀಡುತ್ತಿರುವ ಪ್ರತಿಯೊಂದು ಉತ್ಪನ್ನ ಕೂಡ ಅತ್ಯುತ್ತಮ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಎದೆಹಾಲು ನಿಮ್ಮ ಮಗುವಿನ ಪೋಷಣೆಯಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಮಗುವಿಗೆ ಹಾಳಾದ ಹಾಲನ್ನು ನೀಡುವುದು ಬೇಡವೆಂದಿದ್ದಲ್ಲಿ ನೀವು ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಇಲ್ಲಿ ಕೆಳಗೆ ನಾವು ನೀಡಿರುವ ಕೆಲವೊಂದು ಸಲಹೆಗಳನ್ನು ಅನುಸರಿಸಿಕೊಂಡು ಎದೆಹಾಲನ್ನು ಮಗುವಿಗೆ ನೀಡಿ.

ಕೆಟ್ಟ ವಾಸನೆಯನ್ನು ಹೊರಸೂಸುತ್ತಿದ್ದರೆ

ಕೆಟ್ಟ ವಾಸನೆಯನ್ನು ಹೊರಸೂಸುತ್ತಿದ್ದರೆ

ಹಾಲು ಹಾಳಾಗಿದ್ದರೆ ಅದೊಂದು ರೀತಿಯ ಕೆಟ್ಟ ವಾಸನೆಯನ್ನು ಹೊರಸೂಸುತ್ತದೆ. ಸಾಧಾರಣ ಹಾಲು ಈ ರೀತಿಯ ವಾಸನೆಯನ್ನು ಹೊಂದಿರುವುದಿಲ್ಲ. ನೀವು ಬಾಟಲಿಯ ಮುಚ್ಚಳವನ್ನು ತೆರೆದೊಡನೆ ವಾಸನೆ ಅಸಹ್ಯವಾಗಿದ್ದರೆ ಹಾಲು ಕೆಟ್ಟಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಮೊಸರಿನಂತೆ ಕಾಣಿಸಿದರೆ

ಮೊಸರಿನಂತೆ ಕಾಣಿಸಿದರೆ

ಇತರ ಹಾಲಿನಂತೆಯೇ ಎದೆಹಾಲು ಕೂಡ ಕೆಟ್ಟು ಹೋದ ಸಂದರ್ಭದಲ್ಲಿ ಮೊಸರಿನಂತೆ ಕಾಣಿಸುತ್ತದೆ. ಹಾಲಿನ ಮೇಲ್ಭಾಗದಲ್ಲಿ ಏನಾದರೂ ಕೆನೆಯ ಅಂಶ ತೇಲೂತ್ತಲೂ ಇರಬಹುದು. ಆದರೆ ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ಇದನ್ನು ಪರಿಶೀಲಿಸಿ. ನಿಮಗೆ ಹಾಲಿನ ರುಚಿ ಹಿಡಿಸದೇ ಇದ್ದಲ್ಲಿ ಮಗುವು ಇದನ್ನು ತಿರಸ್ಕರಿಸಬಹುದು. ಹಾಲಿನ ಬಾಟಲಿಯನ್ನು ಒಮ್ಮೆ ಕುಲುಕಿ ನೋಡಿ ನಂತರ ಕೂಡ ಕೆನೆ ಅಂಶ ಇದ್ದರೆ ಹಾಲು ಕೆಟ್ಟಿದೆ ಎಂದರ್ಥವಾಗಿದೆ.

ರುಚಿ ಕೆಟ್ಟಿದ್ದರೆ

ರುಚಿ ಕೆಟ್ಟಿದ್ದರೆ

ಹಾಲಿನ ರುಚಿಯನ್ನು ನೀವೇ ನೋಡಿಕೊಂಡು ನಂತರ ಇದನ್ನು ಮಗುವಿಗೆ ನೀಡಿ. ನಿಮಗೆ ರುಚಿ ಬರದೇ ಇದ್ದಲ್ಲಿ ಮಗುವಿಗೂ ಇದು ಸಹ್ಯವಾಗುವುದಿಲ್ಲ.

ದೀರ್ಘ ಸಮಯ ಇಟ್ಟಲ್ಲಿ

ದೀರ್ಘ ಸಮಯ ಇಟ್ಟಲ್ಲಿ

ಮಗುವನ್ನು ಬಾಟಲಿಯಲ್ಲಿ ಶೇಖರಿಸಿಟ್ಟ ಸಮಯವನ್ನು ನೆನೆಪು ಮಾಡಿಕೊಳ್ಳಿ. ಆರು ಗಂಟೆಗಳಿಗಿಂತ ಹೆಚ್ಚು ಸಮಯ ನೀವು ಸಂಗ್ರಹಿಸಿಟ್ಟುಕೊಂಡಿದ್ದೀರಿ ಎಂದಾದಲ್ಲಿ ಮಗುವಿಗೆ ನೀಡಲು ಇದು ಉತ್ತಮವಾಗಿಲ್ಲ ಎಂದರ್ಥವಾಗಿದೆ.

ನಿಮ್ಮ ಮಗುವು ಹಾಲನ್ನು ತಿರಸ್ಕರಿಸಿದರೆ

ನಿಮ್ಮ ಮಗುವು ಹಾಲನ್ನು ತಿರಸ್ಕರಿಸಿದರೆ

ನೀವು ಮಗುವಿಗೆ ಹಾಲು ಕುಡಿಸುತ್ತಿರುವ ಸಂದರ್ಭದಲ್ಲಿ ಆರಂಭದಲ್ಲಿಯೇ ಮಗುವು ಬಾಟಲಿಯನ್ನು ಕೈಯಿಂದ ದೂಡಿದ ಸಂದರ್ಭದಲ್ಲಿ ಹಾಲಿನ ರುಚಿ ಮತ್ತು ಬಣ್ಣ ಬದಲಾಗಿದೆ ಎಂದರ್ಥವಾಗಿದೆ. ನಿಮ್ಮ ಮಗುವಿನ ರುಚಿ ಸಂವೇದನೆಯು ಅಭಿವೃದ್ಧಿಗೊಳ್ಳುತ್ತದೆ ಮತ್ತು ರುಚಿಯನ್ನು ಅರಿಯುವ ಸಾಮರ್ಥ್ಯ ಅವರಲ್ಲಿ ದಿನಂಪ್ರತಿ ಬೆಳೆಯುತ್ತಿರುತ್ತದೆ.

English summary

How Can You Tell If Your Breast Milk Is Spoilt?

Breast milk is extremely healthy for the baby. Doctors worldwide recommend exclusive breastfeeding the baby for at least the first six month. Breast milk is easier to digest by the baby, increases the natural immunity and also helps the baby gain healthy weight. But how do we identify if the breast milk is spoiled? So
X
Desktop Bottom Promotion