ಪಾಪ ಗರ್ಭಿಣಿಯರಿಗೆ ಕಾಡುವ ಸಮಸ್ಯೆ ಒಂದೇ ಎರಡೇ?

By: Divya pandith
Subscribe to Boldsky

ಗರ್ಭಾವಸ್ಥೆಯಲ್ಲಿ ಇರುವಾಗ ತಾಯಿಯ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಜ್ವರ, ನೆಗಡಿ, ತಲೆನೋವುಗಳಂತಹ ಚಿಕ್ಕ ಪುಟ್ಟ ಸಮಸ್ಯೆಗಳಾದರೆ ಸಾಮಾನ್ಯ ದಿನದಲ್ಲಿರುವಾಗ ತೆಗೆದುಕೊಳ್ಳುವ ಔಷಧಗಳನ್ನು ತೆಗೆದುಕೊಳ್ಳಬಾರದು. ಯಾವುದೇ ಸಮಸ್ಯೆಯಾದರೂ ವೈದ್ಯರ ಸಲಹೆ ಹಾಗೂ ತಪಾಸಣೆಗೆ ಒಳಗಾಗಲೇ ಬೇಕು. ಆದರೆ ಕೆಲವೊಮ್ಮೆ ಗಂಭೀರ ಸಮಸ್ಯೆಗಳು ತಲೆದೂರಬಹುದು. ಪ್ರತಿಯೊಂದು ಆರೋಗ್ಯ ಬದಲಾವಣೆ ಹಾಗೂ ಸಮಸ್ಯೆಯ ಕುರಿತು ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಕೆಲವರು ಗರ್ಭಾವಸ್ಥೆಯಲ್ಲಿ ಸಾಮಾಣ್ಯವಾಗಿ ಆರೋಗ್ಯ ಸಮಸ್ಯೆ ಹಾಗೂ ಬದಲಾವಣೆ ಆಗುತ್ತಲೇ ಇರುತ್ತದೆ ಎನ್ನುವ ಮನೋಭಾವದಿಂದ ವೈದ್ಯರ ಬಳಿ ಹೋಗುವುದನ್ನು ನಿರ್ಲಕ್ಷಿಸುತ್ತಾರೆ. ಕೆಲವೊಮ್ಮೆ ನಿರ್ಲಕ್ಷ್ಯ ಮಾಡುವುದರಿಂದ ಗಂಭೀರ ಸಮಸ್ಯೆಗೆ ಒಳಗಾಗಬಹುದು. ಅಲ್ಲದೆ ಸಮಸ್ಯೆಗಳಿಗೆ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ನಿಜ, ಅನಾರೋಗ್ಯ ಎನಿಸದೆ ಕೆಲವು ಕಿರಿ ಕಿರಿ ಉಂಟುಮಾಡುವ ಸಲೈವಾ (ಜೊಲ್ಲು ಸುರಿಯುವುದು) ಪ್ರಮಾಣವು ಗರ್ಭಾವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 

ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಸಲೈವಾ ಹೆಚ್ಚಳಕ್ಕೆ ಸೇರಿದಂತೆ ಯಾವೆಲ್ಲಾ ಸಮಸ್ಯೆಗಳು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿರುತ್ತವೆ? ಯಾವುದನ್ನು ಗಂಭೀರ ಸ್ಥಿತಿ ಎಂದು ಪರಿಗಣಿಸಬೇಕು? ಅದಕ್ಕೆ ಸೂಕ್ತ ಕ್ರಮಗಳು ಯಾವವು? ಎನ್ನುವುದನ್ನು ತಿಳಿದುಕೊಳ್ಳಿ. ಆಗ ನೀವು ನಿಮ್ಮವರು ಅಥವಾ ನಿಮ್ಮ ಹತ್ತಿರದವರಿಗೆ ಸಮಸ್ಯೆ ಉಂಟಾದಾಗ ಅವರ ಕಾಳಜಿ ಹಾಗೂ ಆರೈಕೆಗೆ ಅನುಕೂಲವಾಗುವುದು. ಬನ್ನಿ ಇದೀಗ ಗರ್ಭಾವಸ್ಥೆಯಲ್ಲಿರುವವರಿಗೆ ಉಂಟಾಗುವ ಜೊಲ್ಲು ಸುರಿಯುವ ಸಮಸ್ಯೆಗಳು ಯಾವವು? ಅದಕ್ಕೆ ಸೂಕ್ತ ಕ್ರಮ ಏನು? ಎನ್ನುವುದನ್ನು ತಿಳಿಯೋಣ...

ಸಲೈವಾ ಎಂದರೇನು?

ಸಲೈವಾ ಎಂದರೇನು?

ಇದು ಬಾಯಿಯ ಗ್ರಂಥಿಗಳಿಂದ ಸ್ರವಿಸುವ ಒಂದು ದ್ರವವಾಗಿದೆ. ಲಾಲಾರಸದ ಮುಖ್ಯ ಘಟಕವು ಕೇವಲ ನೀರು. ಇದಲ್ಲದೆ ಜೊಲ್ಲು ಆಹಾರದ ಜೀರ್ಣಕ್ರಿಯೆಯಲ್ಲಿ ನೆರವಾಗುವ ಪ್ರೋಟೀನ್‍ಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಆರೋಗ್ಯಕರ ದೇಹಕ್ಕೆ ಅಥವಾ ಮೌಖಿಕ ಆರೋಗ್ಯಕ್ಕೆ ಸಲೈವಾ ಬಹಳ ಮುಖ್ಯ. ಇದು ಜಗೆಯಲು, ರುಚಿಯನ್ನು ಗುರುತಿಸಲು ಮತ್ತು ನುಂಗಲು ಸಹಾಯಮಾಡುತ್ತದೆ. ಸೂಕ್ಷ್ಮ ಜೀವಿಗಳಿಂದ ಹಲ್ಲುಗಳು ಮತ್ತು ಒಸಡುಗಳನ್ನು ರಕ್ಷಿಸುತ್ತದೆ.

ಸಲೈವಾ ಎಷ್ಟು ಅಧಿಕವಾಗಿದೆ?

ಸಲೈವಾ ಎಷ್ಟು ಅಧಿಕವಾಗಿದೆ?

ಸಾಮಾನ್ಯವಾಗಿ ವ್ಯಕ್ತಿ ಪ್ರತಿದಿನ ಒಂದು ಮತ್ತು ಒಂದುವರೆ ಕ್ವಾರ್ಟರ್ ಲಾಲಾರಸವನ್ನು ಉತ್ಪಾದಿಸುತ್ತಾನೆ. ಇದನ್ನು ಕೇಳುತ್ತಿದ್ದರೆ ಒಮ್ಮೆ ಆಶ್ಚರ್ಯವಾಗಬಹುದು. ಲವಣಯುಕ್ತ ನುಂಗುವಿಕೆಯು ನಿಷ್ಕ್ರಿಯೆ ರೀತಿಯಲ್ಲಿ ನಡೆಯುತ್ತದೆ. ಗರ್ಭಿಣಿಯಾಗಿರುವಾಗ ಲಾವಾರಸದ ಪ್ರಮಾಣವು ಎರಡು ಕ್ವಾರ್ಟರ್ ಅಥವಾ ಅದಕ್ಕೂ ಹೆಚ್ಚಿನ ಪ್ರಮಾಣಕ್ಕೆ ಹೋಗಬಹುದು. ಅದು ಅಸ್ವಸ್ಥತೆಯನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗುವುದು.

ಗರ್ಭಾವಸ್ಥೆಯಲ್ಲಿ ವಿಪರೀತ ಸಲಿವಾಕ್ಕೆ ಕಾರಣ

ಗರ್ಭಾವಸ್ಥೆಯಲ್ಲಿ ವಿಪರೀತ ಸಲಿವಾಕ್ಕೆ ಕಾರಣ

ಸಲೈವಾ ಉತ್ಪಾದನೆಯ ವ್ಯತ್ಯಯವು ಗರ್ಭಾವಸ್ಥೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಉಂಟಾಗದು. ಕೆಲವರಲ್ಲಿ ಮಾತ್ರ ಈ ಸಮಸ್ಯೆ ಉದ್ಭವಿಸುತ್ತದೆ. ಈ ಸಮಸ್ಯೆಗೆ ಕಾರಣವೇನು ಎನ್ನುವುದು ವೈದ್ಯಕೀಯ ಕ್ಷೇತ್ರದಲ್ಲಿ ಸೂಕ್ತ ಕಾರಣವೇನು ಎನ್ನುವುದಕ್ಕೆ ಉತ್ತರ ದೊರಕಿಲ್ಲ. ಆದಾಗ್ಯೂ ಕೆಲವು ಸಂಭವನೀಯ ಕಾರಣಗಳು ಇರಬಹುದು ಎಂದು ಅಂದಾಜಿಸಲಾಗಿದೆ.

ಯಾವ ಹಂತದಲ್ಲಿ ಹೆಚ್ಚುವುದು?

ಯಾವ ಹಂತದಲ್ಲಿ ಹೆಚ್ಚುವುದು?

ಕೆಲವು ಆಧಾರದ ಪ್ರಕಾರ ಗರ್ಭಾವಸ್ಥೆಯ ಆರನೇ ವಾರದಲ್ಲಿ ಅಥವಾ ಮೊದಲ ತ್ರೈ ಮಾಸಿಕದಲ್ಲಿ ಅಥವಾ ಮುಂಚಿತವಾಗಿಯೂ ಕಾಣಿಸಿಕೊಳ್ಳುತ್ತದೆ. ನಂತರ ನಿಧಾನವಾಗಿ ಕಡಿಮೆಯಾಗುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ಮುಂಜಾನೆಯ ಅಸ್ವಸ್ಥತೆಯ ಸಮಯದಲ್ಲಿ ವಿಪರೀತ ಲವಣಯುಕ್ತತೆ ಉಂಟಾಗುತ್ತದೆ. ಈ ಕಾರಣದಿಂದಲೂ ಉದ್ಭವಿಸುವುದು. ನಂತರ ಮುಂಜಾನೆಯ ಅಸ್ವಸ್ಥತೆ ಕಡಿಮೆಯಾದ ಹಂತದಲ್ಲಿ ನಿಲ್ಲುತ್ತದೆ ಎನ್ನಲಾಗುವುದು. ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯ ಆರಂಭದಿಂದ ಕೊನೆಯವರೆಗೂ ಉಂಟಾಗುವುದು ಎನ್ನಲಾಗುತ್ತದೆ.

ಹಾರ್ಮೋನ್‍ಗಳ ಪ್ರಭಾವ

ಹಾರ್ಮೋನ್‍ಗಳ ಪ್ರಭಾವ

ಈ ಸಂದರ್ಭದಲ್ಲಿ ಮಹಿಳೆಯರ ಹಾರ್ಮೋನ್‍ಗಳು ತೀವ್ರಗತಿಯ ಏರಿಳಿತ ಉಂಟಾಗುವುದು. ಇದು ಯಾವ ಗತಿಯಲ್ಲಿ ಏರಿಳಿತ ಆಗುವುದು ಎಂದು ನಿರ್ಧಿಷ್ಟ ಪ್ರಮಾಣದಲ್ಲಿ ಹೇಳಲಾಗುವುದಿಲ್ಲ. ಆದರೆ ಗರ್ಭಿಣಿಯ ದೇಹದಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್‍ಗಳ ಕೆಲಸವು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ವಾಕರಿಕೆ

ವಾಕರಿಕೆ

ವಾಕರಿಕೆ ಎನ್ನುವುದು ಗರ್ಭಾವಸ್ಥೆಯ ಒಂದು ಲಕ್ಷಣ. ವಾಕರಿಕೆಯ ಭಾವವು ಯಾವುದೇ ಆಹಾರವನ್ನು ಸೇವಿಸಬೇಕು ಎನ್ನುವ ಬಯಕೆ ಉಂಟಾಗುವಂತೆ ಮಾಡುವುದಿಲ್ಲ. ಲಾಲಾರಸದ ನುಂಗುವಿಕೆಯನ್ನು ಒಳಗೊಂಡಿರುತ್ತದೆ. ಮರಿಣಾಮವಾಗಿ ಲಾವಾರಸವು ಬಾಯಲ್ಲಿ ನಿರ್ಮಿಸುತ್ತದೆ. ಹೈಪರ್ಮೆಮಿಸ್ ಗ್ರ್ಯಾವಿಡರಮ್ ಹೊಂದಿರುವ ಮಹಿಳೆಯರಲ್ಲಿ ವಿಪರೀತ ಲವಣಿಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ.

ಎದೆಯುರಿ

ಎದೆಯುರಿ

ಗರ್ಭಾವಸ್ಥೆಯ ಇನ್ನೊಂದು ಲಕ್ಷಣವೆಂದರೆ ಎದೆಯುರಿ. ಇದು ಲಾವಾರಸದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೊಟ್ಟೆಯ ಆಮ್ಲೀಯ ಅಂಶವು ಅನ್ನನಾಳದಲ್ಲಿ ಸಂಗ್ರಹವಾಗುವ ಸಮಯದಲ್ಲಿ ಸುಡುವ ಅನುಭವವಾಗುತ್ತದೆ. ಇದನ್ನು ನಿಭಾಯಿಸಲು, ಅಲ್ಕಾಲೈನ್‍ಅನ್ನು ಹೊಂದಿರುವ ಹೆಚ್ಚುವರಿ ಲಾಲಾರಸವನ್ನು ಉತ್ಪಾದಿಸಲಾಗುತ್ತದೆ. ನುಂಗಿದ ನಂತರ ಇದು ಅನ್ನನಾಳವನ್ನು ಶಮನಗೊಳಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಆಮ್ಲವು ತಟಸ್ಥಗೊಳಿಸುತ್ತದೆ.

ಇತರ ಸಂಭವನೀಯ ಅಂಶಗಳು

ಇತರ ಸಂಭವನೀಯ ಅಂಶಗಳು

ಧೂಮಪಾನದ ಉರಿ ಊತವು ಹೆಚ್ಚು ಲಾವಾರಸವನ್ನು ಉತ್ಪತ್ತಿ ಮಾಡಲು ಲವಣ ಗ್ರಂಥಿಗಳನ್ನು ಪ್ರಚೋದಿಸುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ದಂತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಪಾದರಸ ಮತ್ತು ಕ್ರಿಮಿನಾಶಕಗಳಂತಹ ಜೀವಾಣುಗಳಿಗೆ ಒಡ್ಡಿಕೊಳ್ಳಬಹುದು. ಬಹುಶಃ ಕೆಲವು ವೈದ್ಯಕೀಯ ಪರಿಸ್ಥಿತಿಗಳು ಅಥವಾ ತಾಯಿ ತೆಗೆದುಕೊಂಡ ಔಷಧಿ ಪರಿಣಾಮದಿಂದ ಉಂಟಾಗಬಹುದು.

ಇದು ಹಾನಿಕಾರಕವೇ?

ಇದು ಹಾನಿಕಾರಕವೇ?

ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ಸಮಸ್ಯೆಯನ್ನು ಉಂಟುಮಾಡದು. ಮಗುವಿನ ಬೆಳವಣಿಗೆಗೆ ಯಾವುದೇ ಹಾನಿಯುಂಟಾಗದು. ಆದರೂ ವಿಪರೀತ ಸಲಿವಾ ಉಂಟಾದರೆ ವೈದ್ಯರಲ್ಲಿ ಒಮ್ಮೆ ತೋರಿಸಿ ಸೂಕ್ತ ತಪಾಸಣೆಗೆ ಒಳಗಾಗಬೇಕಾಗುವುದು.

ಸಲೈವಾ ನಿಯಂತ್ರಣಕ್ಕೆ ಪರಿಹಾರಗಳು

ಸಲೈವಾ ನಿಯಂತ್ರಣಕ್ಕೆ ಪರಿಹಾರಗಳು

ವಿಪರೀತ ಸಲೈವಾ ಉತ್ಪಾದನೆಯನ್ನು ನಿಯಂತ್ರಣದಲ್ಲಿ ತರಬಹುದು. ನೀರಿನ ಬಾಟಲಿಯನ್ನು ಇಟ್ಟುಕೊಂಡು ನಿಯಮಿತವಾಗಿ ಸ್ವಲ್ಪ ಸ್ವಲ್ಪವೇ ಕುಡಿಯುತ್ತಿರಬೇಕು. ಪಿಷ್ಟ ಆಹಾರವನ್ನು ಸೇವಿಸುವ ಬದಲು ಸಾಮಾನ್ಯ ಆಹಾರವನ್ನು ಹೆಚ್ಚು ಸೇವಿಸಬೇಕು. ಈ ಸಮಯದಲ್ಲಿ ಬಾಯಿಯ ಆರೈಕೆ ಅಗತ್ಯವಾಗಿರುತ್ತದೆ. ಒಂದು ದಿನದಲ್ಲಿ ಬ್ರಷ್ ಮತ್ತು ಮೌತ್ ವಾಶ್‍ಅನ್ನು ಹಲವು ಬಾರಿ ಬಳಸಬೇಕು. ಕೆಲವು ಗಟ್ಟಿಯಾದ ಕ್ಯಾಂಡಿ ಅಥವಾ ಚೂಯಿಂಗ್ ಗಮ್ ಬಳಸಬಹುದು. ಸಲಿವಾವನ್ನು ಉಗುಳಬೇಕು.

English summary

Excessive Salivation During Pregnancy

Symptoms are unavoidable in any medical condition and pregnancy symptoms are sometimes weird. They are many in number and most women experience the widely prevalent ones like morning sickness, constipation, bloating, breast changes and many others. However, there are some symptoms that are not much known to people, rather, it is best to say that people don't really care about it much, unless it becomes unmanageable.
Subscribe Newsletter