For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ-ಬೊಜ್ಜು ಸಂತಾನ ಫಲವನ್ನೇ ಕಸಿಯಬಹುದು!

ಬೊಜ್ಜು ದೇಹ ಹೊಂದಿರುವ ದಂಪತಿಗೆ ಮಕ್ಕಳಾಗುವುದು ಕಷ್ಟ ಎಂದು ಇತ್ತೀಚೆಗೆ ನಡೆಸಿರುವ ಅಧ್ಯಯನವೊಂದು ಹೇಳಿದೆ....

By Hemanth
|

ಆಧುನಿಕ ಜೀವನ ಶೈಲಿಯಲ್ಲಿ ಮೈಮೇಲೆ ಬೊಜ್ಜು ಹೊತ್ತುಕೊಂಡಿರುವ ಹಲವಾರು ಮಂದಿಯನ್ನು ನಾವು ಕಾಣುತ್ತೇವೆ. ವಿವಿಧ ಕಾರಣಗಳಿಂದಾಗಿ ಬೊಜ್ಜು ಕಾಣಿಸಿಕೊಳ್ಳಬಹುದು. ದೇಹವನ್ನು ಒಮ್ಮೆ ಬೊಜ್ಜು ಆವರಿಸಿಕೊಂಡರೆ ಅದರಿಂದ ಹೊರಬರುವುದು ತುಂಬಾ ಕಷ್ಟಕರ. ಕೆಲವೊಮ್ಮೆ ಪತಿ-ಪತ್ನಿ ಇಬ್ಬರೂ ಬೊಜ್ಜು ಬೆಳೆಸಿಕೊಂಡಿರುತ್ತಾರೆ. ಇಂತಹ ದಂಪತಿಗೆ ಮಕ್ಕಳಾಗುವುದು ತುಂಬಾ ಕಷ್ಟ, ಅಥವಾ ಮಕ್ಕಳಾಗದೇ ಇರಬಹುದು!

ಯಾಕೆಂದರೆ ಬೊಜ್ಜು ದೇಹ ಹೊಂದಿರುವ ವ್ಯಕ್ತಿಗಳ ಫಲವತ್ತತೆ ಕಡಿಮೆಯಿರುತ್ತದೆ. ಇಷ್ಟು ಮಾತ್ರವಲ್ಲದೆ ಬೊಜ್ಜು ದೇಹದವರಿಗೆ ಸಂಧಿವಾತ, ನಿಶ್ಯಕ್ತಿ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಯಂತಹ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಬೊಜ್ಜು ದೇಹ ಹೊಂದಿರುವ ದಂಪತಿಗೆ ಮಕ್ಕಳಾಗುವುದು ಕಷ್ಟ ಎಂದು ಇತ್ತೀಚೆಗೆ ನಡೆಸಿರುವ ಅಧ್ಯಯನವೊಂದು ಹೇಳಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ. ಬಂಜೆತನ ಗೆದ್ದು, ಫಲವಂತಿಕೆಯನ್ನು ಪಡೆಯಬಹುದು ಧೈರ್ಯವಾಗಿರಿ

fat women

ಬೊಜ್ಜು ಮತ್ತು ಫಲವತ್ತತೆ ನಡುವಿನ ಕೊಂಡಿ
ಇತ್ತೀಚೆಗೆ ಬೊಜ್ಜು ದೇಹ ಹೊಂದಿರುವ ಪತಿ ಹಾಗೂ ಪತ್ನಿ ಇಬ್ಬರನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಸಂಶೋಧನೆಗೆ ಒಳಪಡಿಸಿತು. ಇದರಲ್ಲಿ ಕಂಡು ಬಂದಂತಹ ಅಂಶವೆಂದರೆ ಸಾಮಾನ್ಯ ತೂಕವನ್ನು ಹೊಂದಿರುವ ದಂಪತಿಗಿಂತ ಬೊಜ್ಜು ದೇಹ ಹೊಂದಿರುವ ದಂಪತಿಯು ಮಕ್ಕಳನ್ನು ಪಡೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆಂದು ಕಂಡುಕೊಳ್ಳಲಾಗಿದೆ.

ಮಕ್ಕಳಿಗಾಗಿ ಪ್ರಯತ್ನ ಮಾಡುತ್ತಿರುವ ಎರಡು ಗುಂಪಿನ ದಂಪತಿಯನ್ನು ಈ ಸಂಶೋಧನೆಗೆ ಒಳಪಡಿಸಲಾಗಿದೆ. ಮೊದಲ ಗುಂಪಿನಲ್ಲಿ ಬಿಎಂಐ 35ಕ್ಕಿಂತ ಹೆಚ್ಚಿರುವ ದಂಪತಿಗಳನ್ನು ಸೇರಿಸಲಾಗಿತ್ತು. ಎರಡನೇ ಗುಂಪಿನಲ್ಲಿ ಬಿಎಂಐ 20-30 ಇರುವ ದಂಪತಿಗಳನ್ನು ಸೇರಿಸಲಾಗಿತ್ತು. ಮೊದಲ ಗುಂಪಿನಲ್ಲಿದ್ದ ಹೆಚ್ಚಿನ ಬೊಜ್ಜನ್ನು ಹೊಂದಿದ್ದ ದಂಪತಿಗಳು ಮಕ್ಕಳನ್ನು ಪಡೆಯಲು ಹೆಚ್ಚಿನ ಸಮಯ ತೆಗೆದುಕೊಂಡರು.

ಫಲವತ್ತತೆ ವಿಚಾರಕ್ಕೆ ಬಂದಾಗ ದೇಹದಲ್ಲಿ ಜಮೆಯಾಗಿರುವ ಬೊಜ್ಜು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಹದಲ್ಲಿ ಹೆಚ್ಚುವರಿಯಾಗಿ ಕೊಬ್ಬು ಸೇರಿಸಿಕೊಂಡಿರುವಾಗ ಕೆಲವೊಂದು ಸಂತಾನೋತ್ಪತ್ತಿ ಹಾರ್ಮೋನುಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಬಂಜೆತನಕ್ಕೆ ಮಹಿಳೆಯರು ಮಾತ್ರವಲ್ಲ ಪುರುಷರೂ ಕಾರಣ..

ಮಹಿಳೆಯರಲ್ಲಿ ಅಂಡಾಣುಗಳ ಮತ್ತು ಪುರುಷರಲ್ಲಿ ವೀರ್ಯದ ಗುಣಮಟ್ಟವು ಕಡಿಮೆಯಾಗುವುದು. ಇದರಿಂದ ಗರ್ಭಧಾರಣೆ ವಿಳಂಬವಾಗುತ್ತದೆ. ಬೊಜ್ಜು ದೇಹ ಹೊಂದಿರುವ ದಂಪತಿಗೆ ಮಕ್ಕಳನ್ನು ಪಡೆಯಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

English summary

Does It Take Longer For Obese Couple To Get Pregnant?

When people suffer from obesity, they are at the risk of developing other serious ailments like, joint pain, fatigue, high cholesterol, hypertension, fatigue, heart diseases and so on. In fact, obesity is the root cause of numerous other diseases, apart from the ones mentioned above. Some of the most common causes for obesity are, lack of a proper diet and exercise regime,
X
Desktop Bottom Promotion