ಮಧುಮೇಹ ಇರುವ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು

By: Divya
Subscribe to Boldsky

ಗರ್ಭಾವಸ್ಥೆಯಲ್ಲಿರುವಾಗ ತಾಯಿ ಹಾಗೂ ಮಗುವಿನ ಆರೋಗ್ಯ ಬಹಳ ಮುಖ್ಯವಾಗಿರುತ್ತದೆ. 28 ವಾರಗಳ ನಂತರ ಮಗುವಿನ ಚಟುವಟಿಕೆಯು ಹೆಚ್ಚುತ್ತದೆ. ಈ ಸಮಯದಲ್ಲಿ ತಾಯಿಯ ಆರೋಗ್ಯವೂ ಹೆಚ್ಚು ಪೂರಕವಾಗಿರಬೇಕಾಗುವುದು. ಈ ಸಂದರ್ಭದಲ್ಲಿ ತಾಯಿಯ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್‍ಗಳ ವ್ಯತ್ಯಾಸದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತವೆ.

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದರ ಜೊತೆಗೆ ಮಧುಮೇಹದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ತಾಯಿ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅನಿವಾರ್ಯತೆ ಇರುತ್ತದೆ. ಹಾಗಂತ ಮಗುವಿನ ಬೆಳವಣಿಗೆಗೆ ಮಾರಕವಾಗುವಂತಹ ವ್ಯಾಯಾಮ ಹಾಗೂ ಪಥ್ಯಗಳನ್ನು ಮಾಡುವಂತಿಲ್ಲ. ಮಧುಮೇಹ ಇರುವ ಮಹಿಳೆಯರು ಯಾವ ಬಗೆಯ ಆರೋಗ್ಯ ಆರೈಕೆ ಮಾಡಿಕೊಳ್ಳಬೇಕು ಎನ್ನುವ ಸಂಕ್ಷಿಪ್ತ ವಿವರಣೆ ಇಲ್ಲಿದೆ ನೋಡಿ...

ಗರ್ಭಾವಸ್ಥೆಯಲ್ಲಿ ಯಾವ ವ್ಯಾಯಾಮ ಒಳ್ಳೆಯದು?

ಗರ್ಭಾವಸ್ಥೆಯಲ್ಲಿ ಯಾವ ವ್ಯಾಯಾಮ ಒಳ್ಳೆಯದು?

ಭಾರವನ್ನು ಎತ್ತುವಂತಹ ವ್ಯಾಯಾಮಗಳನ್ನು ಈ ಸಂದರ್ಭದಲ್ಲಿ ನಿರ್ಲಕ್ಷಿಸಬೇಕು. ಲಘು ವ್ಯಾಯಾಮಗಳಾದ ವಾಕಿಂಗ್ ಹಾಗೂ ನೀರಲ್ಲಿ ಈಜುವುದು ಉತ್ತಮವಾದದ್ದು.

ಪ್ರಸವದ ಸಂದರ್ಭದ ಕಾಳಜಿ

ಪ್ರಸವದ ಸಂದರ್ಭದ ಕಾಳಜಿ

ಪ್ರಸವದ ಸಮಯ ಹತ್ತಿರವಾಗುತ್ತಿದ್ದಂತೆ ಅತಿ ಹೆಚ್ಚು ಕಾಳಜಿ ವಹಿಸಬೇಕು. ರಕ್ತದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿ ಇರಬೇಕು. ಇಲ್ಲವಾದರೆ ಸಮತೋಲನದ ಸ್ಥಿತಿಗೆ ಬಹಳ ಹತ್ತಿರವಾಗಿಯಾದರೂ ಇರಬೇಕು. ಪ್ರಸವದ ಸಮಯ ಹತ್ತಿರವಾದಂತೆ ರಕ್ತ ಪರೀಕ್ಷೆಯನ್ನು ಆಗಾಗ ಮಾಡಿಸುತ್ತಿರಬೇಕು. ಮಧುಮೇಹ ಮುಂದುವರಿದಿದ್ದರೆ ಎದೆ ಹಾಲು ಉಣ್ಣುವವರೆಗೂ ಇನ್ಸುಲಿನ್‍ಅನ್ನು ಮುಂದುವರಿಸಬೇಕಾಗಿರುತ್ತದೆ.

ಮಗುವಿಗೆ ಮಧುಮೇಹ ಬರುವುದೇ?

ಮಗುವಿಗೆ ಮಧುಮೇಹ ಬರುವುದೇ?

ಮಗುವಿನ ಸಕ್ಕರೆ ಪ್ರಮಾಣ ಸಾಮಾನ್ಯವಾಗಿರುತ್ತದೆ. ಮಗುವಿನ ದೇಹದಲ್ಲಿ ಸಕ್ಕರೆ ಪ್ರಮಾಣವು ಕಡಿಮೆಯಾಗಿರುತ್ತದೆ. ಆದರೆ ತಾಯಿಯ ಎದೆ ಹಾಲು ಉಣಿಸುವುದರಿಂದ ಮಧುಮೇಹ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ತಾಯಿ ಇನ್ಸುಲಿನ್ ಸ್ವೀಕರಿಸಬೇಕಾಗುವುದು. ಎದೆಹಾಲು ಉಣಿಸುವುದರ ಬಗ್ಗೆ ಸೂಕ್ತ ಕಾಳಜಿ ನೀಡಬೇಕು.

ಯಾವ ಕ್ರಮ ಕೈಗೊಳ್ಳಬೇಕು?

ಯಾವ ಕ್ರಮ ಕೈಗೊಳ್ಳಬೇಕು?

ಮಧುಮೇಹ ಹೊಂದಿರುವ ತಾಯಿ ಪ್ರಸವದ 6 ವಾರದ ಬಳಿಕ ಗ್ಲೂಕೋಸ್ ಟೊಲೆರೆನ್ಸ್ ಪರೀಕ್ಷೆಗೆ ಒಳಪಡಬೇಕು. ಆಗ ಮಧುಮೇಹ ಇದೆಯೇ? ಇಲ್ಲವೇ? ಎನ್ನುವುದನ್ನು ಕಂಡು ಹಿಡಿಯಬಹುದು. ಭವಿಷ್ಯದಲ್ಲಿ ನಿಮಗೆ ಮಧುಮೇಹ ಬರುವ ಸಾಧ್ಯತೆ ಇರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಮುನ್ನೆಚ್ಚರಿಕೆ ಅತ್ಯಗತ್ಯವಾಗಿರುತ್ತದೆ. ಆರೋಗ್ಯಕರ ಆಹಾರ ಹಾಗೂ ನಿಯಮಿತವಾದ ವ್ಯಾಯಾಮಗಳನ್ನು ಮಾಡಬೇಕು. ಗರ್ಭಾವಸ್ಥೆಗೆ ಒಳಗಾಗುವ ಮುಂಚೆ ನೀವು ಟೈಪ್ 1 ಮತ್ತು ಟೈಪ್ 2ರ ಮಧುಮೇಹ ಹೊಂದಿದವರಾಗಿದ್ದೀರಾ? ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಗರ್ಭಾವಸ್ಥೆಯಲ್ಲಿ ಮಧುಮೇಹ ಮುಂದುವರಿದಿದ್ದರೆ ಫೋಲಿಕ್ ಆಸಿಡ್ ವಿಟಮಿನ್ 5ಎಮ್‍ಜಿ ಮಾತ್ರೆಯನ್ನು ನಿತ್ಯವೂ ಸೇವಿಸಬೇಕು.

English summary

Diabetes Pregnancy And Care

This is very important to understand. As pregnancy advances, particularly from after 28 weeks, placental activity increases to keep the baby in good health. To do this placenta produces some hormones which act against Insulin and your dose of Insulin goes up and up during pregnancy, sometimes on daily basis we need to increase Insulin dose.
Subscribe Newsletter