ಅಕಾಲಿಕ ಹೆರಿಗೆಯನ್ನು ಮೊದಲೇ ಪತ್ತೆ ಹಚ್ಚಬಹುದೇ?

By Hemanth
Subscribe to Boldsky

ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆನ್ನುವುದು ಪ್ರತಿಯೊಬ್ಬರ ಸಲಹೆಯಾಗಿರುತ್ತದೆ. ವೈದ್ಯರಿಂದ ಹಿಡಿದು ಕುಟುಂಬದವರ ತನಕ ಪ್ರತಿಯೊಬ್ಬರು ಗರ್ಭಿಣಿ ಮಹಿಳೆಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಗರ್ಭಧಾರಣೆ ತುಂಬಾ ಸೂಕ್ಷ್ಮ ಹಾಗೂ ಅತ್ಯಂತ ಕಠಿಣ ಸಮಯವಾಗಿದೆ. 

ಈ ಸಮಯದಲ್ಲಿ ಮಹಿಳೆಯು ತನ್ನ ತೂಕವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆರೋಗ್ಯವಂತಹ ಮಗುವಿಗೆ ಜನ್ಮ ನೀಡಬೇಕಾದರೆ ಮಹಿಳೆಯ ಆರೋಗ್ಯ ಕೂಡ ಚೆನ್ನಾಗಿರಬೇಕು. ಇಲ್ಲವೆಂದರೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಪ್ರಮುಖ ಸಮಸ್ಯೆಯೆಂದರೆ ಅಕಾಲಿಕ ಹೆರಿಗೆಯಾಗುವುದು.   ಗರ್ಭಾವಸ್ಥೆಯಲ್ಲಿ ಆಂಟಿಬಯಾಟಿಕ್‌ ಸೇವನೆ ಎಷ್ಟು ಸೂಕ್ತ?

pregnant women
 

ಅಕಾಲಿಕ ಹೆರಿಗೆಯಾಗಲು (ಪ್ರಾಪ್ತಪೂರ್ವಕಾಲ ಜನನ) ಮುಖ್ಯ ಕಾರಣವೆಂದರೆ ಆರೋಗ್ಯಕರ ಆಹಾರ ಕ್ರಮ ಪಾಲಿಸದೆ ಇರುವುದು, ತಾಯಿಯ ವೈದ್ಯಕೀಯ ಇತಿಹಾಸ, ಗರ್ಭಧಾರಣೆ ವೇಳೆ ತೂಕ ಹೆಚ್ಚಳವಾಗದೆ ಇರುವುದು, ಒತ್ತಡ, ಖಿನ್ನತೆ, ಮಧುಮೇಹ, ಬೊಜ್ಜು, ಧೂಮಪಾನ, ಮದ್ಯಪಾನ ಇತ್ಯಾದಿ ಪ್ರಮುಖ ಕಾರಣವಾಗಿದೆ. ಗರ್ಭಾವಸ್ಥೆಯಲ್ಲಿ ಆಂಟಿಬಯಾಟಿಕ್‌ ಸೇವನೆ ಎಷ್ಟು ಸೂಕ್ತ?

ಗರ್ಭಿಣಿ ಮಹಿಳೆಯು ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಇದ್ದಲ್ಲಿ ಅಕಾಲಿಕ ಹೆರಿಗೆಯಾಗುವ ಸಂಭವ ಹೆಚ್ಚಿದೆ. ಅಕಾಲಿಕ ಹೆರಿಗೆಯಾಗುವ ಬಗ್ಗೆ ಮೊದಲೇ ಸುಳಿವು ಸಿಗುತ್ತದೆಯಾ ಎನ್ನುವುದನ್ನು ಈ ಲೇಖನ ಓದುತ್ತಾ ತಿಳಿಯಬಹುದು.  

pregnant women
 

ಅಕಾಲಿಕ ಹೆರಿಗೆಯನ್ನು ಪತ್ತೆ ಮಾಡಬಹುದೇ ಎಂದು ಕೆಲವೊಂದು ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಉತ್ಹಾ ಹೆಲ್ತ್ ಸೈನ್ಸ್ ಯೂನಿವರ್ಸಿಟಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಅದು ನಡೆಸಿದಂತಹ ಸ್ಕ್ರೀನ್ ಟೆಸ್ಟ್‌ನಲ್ಲಿ ಗರ್ಭಿಣಿ ಮಹಿಳೆಯರ ಅಕಾಲಿಕ ಹೆರಿಗೆಯನ್ನು ಪತ್ತೆ ಮಾಡಲಾಗಿದೆ. ಮಹಿಳೆಗೆ ಅಕಾಲಿಕ ಹೆರಿಗೆಯಾಗುತ್ತದೆಯಾ ಎಂದು ತಿಳಿಯಲು ಗರ್ಭಿಣಿ ಮಹಿಳೆಯ ಗರ್ಭಕಂಠದ ಪರೀಕ್ಷೆಯನ್ನು ನಡೆಸಲಾಗಿದೆ. 

pregnant women testing
 

ಗರ್ಭಕಂಠವು ಗರ್ಭಕೋಶದ ಒಂದು ಭಾಗವಾಗಿದ್ದು, ಇದು ದಪ್ಪವಾಗಿರುತ್ತದೆ ಮತ್ತು ಗರ್ಭಧಾರಣೆಯ ಕೊನೆಯ ಹಂತದ ತನಕ ಇದು ಮುಚ್ಚಿರುತ್ತದೆ. ಗರ್ಭಕಂಠವು ತೆಳುವಾಗಲು ಆರಂಭವಾದರೆ ಅಕಾಲಿಕ ಹೆರಿಗೆಯಾಗಬಹುದೆಂದು ತಿಳಿಯಬಹುದಾಗಿದೆ. ಅಧ್ಯಯನವು ಈ ಎರಡು ಸ್ಕ್ರೀನ್ ಟೆಸ್ಟ್‌ಗಳನ್ನು ಮಾಡಿ ಅಕಾಲಿಕ ಹೆರಿಗೆಯಾಗುವ ಸಂಭವನೀಯತೆಯನ್ನು ಕಂಡುಹಿಡಿದಿದೆ.

For Quick Alerts
ALLOW NOTIFICATIONS
For Daily Alerts

    English summary

    Can Premature Births Actually Be Predicted?

    Pregnancy is a wonderful phase for the mother; however, this phase is also filled with a lot of worry and anxiety over the health of her unborn baby. Some women may even be scared to go through the painful labour, and the possibility of complications involved will not allow a pregnant lady's mind to be at peace.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more