ಅಧ್ಯಯನ ವರದಿ: ಒಸಡಿನ ಕಾಯಿಲೆಯಿಂದ-ಬಂಜೆತನ ಕಾಡಬಹುದು!

By: Hemanth
Subscribe to Boldsky

ಬ್ಯಾಕ್ಟೀರಿಯಾದಿಂದ ಉಂಟಾಗುವಂತಹ ಸಾಮಾನ್ಯ ಒಸಡಿನ ಕಾಯಿಲೆಯಿಂದ ಮಹಿಳೆಯರಲ್ಲಿ ಫಲವತ್ತತೆ ಸಮಸ್ಯೆ ಕಾಡಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ. ಗರ್ಭ ಧರಿಸಲು ಬಯಸುವ ಮಹಿಳೆಯರು ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಮತ್ತು ಪರಿದಂತ ಮೌಲ್ಯಮಾಪನವನ್ನು ನಿಯಮಿತವಾಗಿ ನಡೆಸಬೇಕು ಎಂದು ಹಲವಾರು ಅಧ್ಯಯನಗಳಿಂದ ಕಂಡುಬಂದಿದೆ ಎಂದು ಫಿನ್ ಲ್ಯಾಂಡ್ ನ ಹೆಲ್ಸಿಂಕಿ ವಿಶ್ವವಿದ್ಯಾನಿಲಯದ ಸಂಶೋಧಕ ಸುಸನ್ನಾ ಪಜು ತಿಳಿಸಿದ್ದಾರೆ.

ಒಸಡಿನ ಕೆಳಗಡೆ ಬ್ಯಾಕ್ಟೀರಿಯಾದ ಸೋಂಕಿನಿಂದಾಗಿ ಉಂಟಾಗುವ ಉರಿಯೂತದ ಪ್ರತಿಕ್ರಿಯೆಯನ್ನು ಒಸಡಿನ ಕಾಯಿಲೆ ಎನ್ನಲಾಗುತ್ತದೆ. ಗರ್ಭಧರಿಸದೆ ಇರುವಂತಹ ಸುಮಾರು 256 ಮಂದಿ ಆರೋಗ್ಯಕರ ಮಹಿಳೆಯರನ್ನು(ಸರಾಸರಿ 29.2 ವಯಸ್ಸು 19- 42 ವಯಸ್ಸಿನ) ಈ ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಮಹಿಳೆಯರು ಗರ್ಭ ಧರಿಸಬೇಕೆಂದು ಗರ್ಭನಿರೋಧಕಗಳನ್ನು ತ್ಯಜಿಸಿರುವಂತವರು.

ದಕ್ಷಿಣ ಫಿನ್ ಲ್ಯಾಂಡ್‌ನ ಸಾಮಾನ್ಯ ಸಮುದಾಯದ ಮಹಿಳೆಯರನ್ನು ಈ ಅಧ್ಯಯನಕ್ಕೆ ಸೇರಿಸಿಕೊಳ್ಳಲಾಯಿತು. 12 ತಿಂಗಳ ಕಾಲ ಅವರ ಬಗ್ಗೆ ಗಮನ ಇಡಲಾಯಿತು. ಈ ವೇಳೆ ಅವರು ಗರ್ಭ ಧರಿಸಿದರೆ ಅಥವಾ ಗರ್ಭ ಧರಿಸಲಿಲ್ಲವೇ ಎನ್ನುವುದನ್ನು ಗಮನಿಸಲಾಯಿತು.  

Gum Disease Delay Pregnancy

ಒಂದು ವರ್ಷದ ಅಧ್ಯಯನ ಅವಧಿಯಲ್ಲಿ ಗರ್ಭ ಧರಿಸದೆ ಇದ್ದ ಹೆಚ್ಚಿನ ಮಹಿಳೆಯರ ಲಾಲಾರಸದಲ್ಲಿ ಒಸಡಿನ ಕಾಯಿಲೆಗೆ ಕಾರಣವಾಗುವಂತಹ ಪೊರ್ಫಿರೊಮೋನಾಸ್ ಗಿಂಗಿವಾಲಿಸ್ ಎನ್ನುವ ಬ್ಯಾಕ್ಟೀರಿಯಾವು ಕಂಡುಬಂದಿದೆ ಎಂದು ಜರ್ನಲ್ ಆಫ್ ಓರಲ್ ಮೈಕ್ರೋಬಯೋಲಜಿಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯಿಂದ ತಿಳಿದುಬಂದಿದೆ.

ಗರ್ಭ ಧರಿಸದೆ ಇದ್ದ ಮಹಿಳೆಯರಲ್ಲಿ ರೋಗಕಾರಕ್ಕೆ ಹೋಲಿಸಿದರೆ ಜೊಲ್ಲು ಮತ್ತು ಸೀರಮ್ ಪ್ರತಿಕಾಯ ಮಟ್ಟವು ಹೆಚ್ಚಿದ್ದವು. ಅಂಕಿಅಂಶ ತಜ್ಞರ ಪ್ರಕಾರ ಇದು ಸ್ವತಂತ್ರ ವರದಿಯಾಗಿದೆ. ಗರ್ಭಧರಿಸದೆ ಇರಲು ವಯಸ್ಸು, ಧೂಮಪಾನ, ಸಾಮಾಜಿಕ, ಆರ್ಥಿಕ ಸ್ಥಿತಿ, ಹಿಂದಿನ ಹೆರಿಗೆ ಇತ್ಯಾದಿಗಳು ಕಾರಣವಾಗಿರಬಹುದು. 

ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

ಜೊಲ್ಲಿನಲ್ಲಿ ಪೊರ್ಫಿರೊಮೋನಾಸ್ ಗಿಂಗಿವಾಲಿಸ್ ಇರುವ ಮಹಿಳೆಯರು ಮತ್ತು ರೋಗಕಾರಕ್ಕೆ ಹೋಲಿಸಿದರೆ ಜೊಲ್ಲು ಹಾಗೂ ಸೀರಮ್ ಪ್ರತಿಕಾಯ ಮಟ್ಟವು ಹೆಚ್ಚಿಗೆ ಇರುವ ಮಹಿಳೆಯರು ಇತರ ಮಹಿಳೆಯರಿಗೆ ಹೋಲಿಸಿದರೆ ಗರ್ಭ ಧರಿಸುವ ಸಾಧ್ಯತೆ ಮೂರು ಪಟ್ಟು ಕಡಿಮೆ ಇದೆ. ಇದರಲ್ಲಿನ ಒಂದು ಗುಣ ಅಥವಾ ವಸಡಿನ ರೋಗದ ಲಕ್ಷಣಗಳು ಇದ್ದರೆ ಗರ್ಭ ಧರಿಸುವ ಸಾಧ್ಯತೆ ನಾಲ್ಕು ಪಟ್ಟು ಕಡಿಮೆ ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ. 

ಗರ್ಭಧರಿಸದೆ ಇರುವ ಬಗ್ಗೆ ಸಾಮಾನ್ಯವಾಗಿರುವ ಕಾರಣಗಳಿಗೆ ನಮ್ಮ ಅಧ್ಯಯನದಿಂದ ಯಾವುದೇ ಉತ್ತರವಿಲ್ಲ. ಆದರೆ ಪರಿದಂತ ಬ್ಯಾಕ್ಟೀರಿಯಾವು ಕಡಿಮೆ ಮಟ್ಟದಲ್ಲಿ ಕಾರಣವಾಗಬಹುದು ಎಂದು ಪಜು ಹೇಳಿದ್ದಾರೆ. ಗರ್ಭಧಾರಣೆ ಮತ್ತು ಒಸಡಿನ ಕಾಯಿಲೆಗೆ ಇರುವ ಸಂಬಂಧ ತಿಳಿಯಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ಮಕ್ಕಳಾಗದಿರಲು ಪ್ರಮುಖ ಕಾರಣಗಳು

ಗರ್ಭ ಧರಿಸಲು ಬಯಸುವ ಮಹಿಳೆಯರು ಬಾಯಿಯ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಮತ್ತು ನಿಯಮಿತವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಪಜು ತಿಳಿಸಿದ್ದಾರೆ.

English summary

Can Gum Disease Delay Pregnancy?

A common bacterium associated with gum disease may delay conception in young women, warns a new study."Our results encourage young women of fertile age to take care of their oral health and attend periodontal evaluations regularly," said one of the researchers Susanna Paju of the University of Helsinki in Finland.
Subscribe Newsletter