ಗರ್ಭಿಣಿಯರ ಆರೋಗ್ಯಕ್ಕೆ ಇಂತಹ ಹಣ್ಣುಗಳು ಬಹಳ ಒಳ್ಳೆಯದು...

By: Jaya
Subscribe to Boldsky

ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಿಣಿಯರು ತೆಗೆದುಕೊಳ್ಳುವ ಆಹಾರ ಪದ್ಧತಿಯ ಮೇಲೆ ಕಟ್ಟುನಿಟ್ಟಿನ ಎಚ್ಚರವನ್ನು ವಹಿಸಬೇಕಾಗುತ್ತದೆ. ಅತ್ಯುತ್ತಮ ಆಹಾರ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ ದೈನಂದಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ತಾಯಿಯು ತನ್ನ ಗರ್ಭದಲ್ಲಿ ಇನ್ನೊಂದು ಜೀವವನ್ನು ಕಾಪಾಡಿಕೊಂಡಿರುವುದರಿಂದ ಸೂಕ್ತವಾದ ಆಹಾರ ಪದ್ಧತಿಯನ್ನು ಈ ಸಮಯದಲ್ಲಿ ಕಾರ್ಯರೂಪಕ್ಕೆ ತರಬೇಕು, ಅಲ್ಲದೇ ಮುಂಜಾಗ್ರತೆಗಳನ್ನು ಅನುಸರಿಸಬೇಕು. ಹೆಚ್ಚಿನ ಪೋಷಕಾಂಶಗಳಿರುವ ಆಹಾರ ಪದ್ಧತಿಗಳನ್ನು ತಾಯಿಯು ಅಳವಡಿಸಿಕೊಂಡಲ್ಲಿ ಜನಿಸುವ ಮಗು ಆರೋಗ್ಯ ಪೂರ್ಣವಾಗಿರುತ್ತದೆ ಅಂತೆಯೇ ತಾಯಿಗೂ ಸೂಕ್ತ ಪೋಷಕಾಂಶಗಳನ್ನು ಒದಗಿಸುವಲ್ಲಿ ಈ ನ್ಯೂಟ್ರೀನ್‌ಯುಕ್ತ ಆಹಾರಗಳು ಸಹಾಯ ಮಾಡಲಿವೆ. 

ಮೂರನೇ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು?

ಇನ್ನು ಕೆಲವು ತಾಯಂದಿರಿಗೆ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕು ತಿನ್ನಬಾರದು ಎಂಬಂತಹ ಗೊಂದಲಗಳಿರುತ್ತವೆ. ಇಂತಹ ಗೊಂದಲಗಳನ್ನು ನಿವಾರಿಸಲೆಂದೇ ಇಂದಿನ ಲೇಖನ ಉತ್ತಮ ಕೈಪಿಡಿಯಾಗಿ ಗರ್ಭಿಣಿಯರಿಗೆ ನೆರವು ನೀಡಲಿದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿನ ಹಣ್ಣು ತರಕಾರಿಗಳನ್ನು ತಿನ್ನಬಹುದಾಗಿದ್ದರೂ ಕೆಲವೊಂದು ನಿರ್ದಿಷ್ಟ ಹಣ್ಣುಗಳನ್ನು ತಿನ್ನುವುದರಿಂದ ತಾಯಿಗೆ ಹೆಚ್ಚು ಪ್ರಯೋಜನವಿರುತ್ತದೆ ಮತ್ತು ಹೆರಿಗೆ ಸಮಯದಲ್ಲಿ ಇದು ತಾಯಿಗೆ ಸಹಾಯ ಮಾಡಲಿದೆ. ಹಾಗಿದ್ದರೆ ತಾಯಿ ಮತ್ತು ಮಗುವಿಗೆ ಅತ್ಯುತ್ತಮ ಪೋಷಕಾಂಶಗಳನ್ನು ನೀಡುವ ಹಣ್ಣುಗಳು ಯಾವುವು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.....  

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಗರ್ಭಾವಸ್ಥೆಯಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಅತಿ ಅಗತ್ಯ. ಕಿತ್ತಳೆ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ನೀರು ಲಭ್ಯವಿದ್ದು ಗರ್ಭಿಣಿಯ ಅಗತ್ಯದ ನೀರಿನ ಕೊರತೆಯನ್ನು ನೀಗಿಸುತ್ತದೆ ಹಾಗೂ ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಮತ್ತು ಸೋಡಿಯಂ ಲವಣಗಳು ದೇಹದಲ್ಲಿ ಸಂತುಲಿತ ಪ್ರಮಾಣದ ನೀರು ಲಭ್ಯವಿರುವಂತೆ ನೋಡಿಕೊಳ್ಳುತ್ತದೆ.

ಸೀಬೆ ಹಣ್ಣುಗಳು

ಸೀಬೆ ಹಣ್ಣುಗಳು

ಸೀಬೆಗಳನ್ನು ಗರ್ಭಿಣಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಇದರಲ್ಲಿ ವಿಟಮಿನ್ ಸಿ ಮತ್ತು ಇ ಹಾಗು ಫ್ಲಾವೊನಾಯ್ಡ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ಹಣ್ಣಾಗಿದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಮಾವಿನ ಹಣ್ಣು

ಮಾವಿನ ಹಣ್ಣು

ಬೇಸಿಗೆಯಲ್ಲಿ ಲಭ್ಯವಾಗುವ ಮಾವಿನ ಹಣ್ಣಿನಲಿ ವಿಟಮಿನ್ ಸಿ, ಎ, ಬಿ6, ಪೊಟ್ಯಾಶಿಯಂ ಹಾಗೂ ಫೋಲಿಕ್ ಆಮ್ಲಗಳೂ ಇವೆ. ಗರ್ಭಿಣಿಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಬೇಕಾಗಿದ್ದು ಈ ಆವಧಿಯಲ್ಲಿ ಮಾವಿನ ಹಣ್ಣಿನ ಸೇವನೆ ಉತ್ತಮವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆದರೆ ನೆನಪಿಡಿ ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣಿನಿಂದ ಆದಷ್ಟು ದೂರವಿರಿ.

ದ್ರಾಕ್ಷಿ

ದ್ರಾಕ್ಷಿ

ಹೆಚ್ಚಿನವರು ಗರ್ಭಿಣಿಯರು ಈ ಹಣ್ಣನ್ನು ತಿನ್ನಬಾರದು ಎಂದೇ ಯೋಚಿಸುತ್ತಾರೆ. ಆದರೆ ವಿಟಮಿನ್ ಎ ಅನ್ನು ಈ ಹಣ್ಣು ಒಳಗೊಂಡಿದ್ದು ಫೋಲೆಟ್, ಪೊಟಾಶಿಯಮ್, ಫಾಸ್‌ಫರಸ್, ಮೆಗ್ನೇಶಿಯಂ, ಸೋಡಿಯಂ ಅನ್ನು ಈ ಹಣ್ಣು ಒಳಗೊಂಡಿದೆ. ಗರ್ಭಾವಸ್ಥೆಯಲ್ಲಿ ಇದು ಅತ್ಯುತ್ತಮ ಆಹಾರ ಎಂದೆನಿಸಿದೆ.

ಕಲ್ಲಂಗಡಿ, ನೇರಳೆ, ದ್ರಾಕ್ಷಿ

ಕಲ್ಲಂಗಡಿ, ನೇರಳೆ, ದ್ರಾಕ್ಷಿ

ಗರ್ಭಿಣಿಯಾಗಿರುವಾಗ, ಪ್ರತಿದಿನ ಐದು ಭಾಗಗಳಷ್ಟು ಹಣ್ಣುಗಳನ್ನು ಸೇವಿಸಬೇಕೆಂದು ಶಿಫಾರಸು ಮಾಡಲಾಗಿದೆ. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಹಣ್ಣುಗಳಾದ ಕಲ್ಲಂಗಡಿ, ನೇರಳೆ, ದ್ರಾಕ್ಷಿ ಇತ್ಯಾದಿಗಳನ್ನು ಸೇವಿಸಿರಿ. ವಿಟಾಮಿನ್ C ನಿಂದ ಸಮೃದ್ಧವಾಗಿರುವ ಕಿತ್ತಲೆಗಳು ಕಬ್ಬಿಣದ ಅಂಶವು ಶರೀರದಲ್ಲಿ ಹಿರಲ್ಪಡಲು ಸಹಕಾರಿಯಾಗಿದೆ ಹಾಗೂ ಸೇಬುಗಳು ನಾರಿನಂಶದಿಂದ ಕೂಡಿರುವುದರಿಂದ, ಗರ್ಭಿಣಿಯಾಗಿರುವಾಗ ಸಾಮಾನ್ಯವಾಗಿ ತಲೆದೋರುವ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿವೆ.

ಬಾಳೆಹಣ್ಣು

ಬಾಳೆಹಣ್ಣು

ಮಲಬದ್ಧತೆ ಗರ್ಭಾವಸ್ಥೆಯಲ್ಲಿ ಸರ್ವೇ ಸಾಮಾನ್ಯವಾದುದು. ಇದಕ್ಕಾಗಿ ಬಾಳೆಹಣ್ಣನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಬೆರ್ರಿ

ಬೆರ್ರಿ

ಬೆರ್ರಿಗಳಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಹೆಚ್ಚು ಇದ್ದು ಇದು ಅತ್ಯುತ್ತಮ ಆಹಾರ ಎಂದೆನಿಸಿದೆ. ನಿಮ್ಮ ಗರ್ಭಾವಸ್ಥೆಯ ಆಹಾರ ಪದ್ಧತಿಯಲ್ಲಿ ಈ ಹಣ್ಣುನ್ನು ಮರೆಯದೇ ಸೇರಿಸಿ ಮತ್ತು ಸೇವಿಸಿ.

ಸೇಬು

ಸೇಬು

"ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು...

ಸೀತಾಫಲ

ಸೀತಾಫಲ

ಸೀತಾಫಲವು ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗಲು, ನರ ವ್ಯೂಹ ಮತ್ತು ರೋಗ ನಿರೋಧಕ ಶಕ್ತಿಯು ಸುಗಮವಾಗಲು ನೆರವಾಗುತ್ತದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಸೀತಾಫಲವು ಗರ್ಭಪಾತದ ಅಪಾಯವನ್ನು ತಡೆಯುವ ಸಾಮರ್ಥ್ಯವನ್ನು ಸಹ ಹೊಂದಿದೆ.

English summary

Best Fruits to Eat During Pregnancy

Most of the women are worried about eating fruits as papaya and pineapple are considered to be dangerous during pregnancy. Fruits to avoid during pregnancy If you want to know which fruits you can have during pregnancy...
Story first published: Friday, June 16, 2017, 8:31 [IST]
Subscribe Newsletter