ಗರ್ಭಾವಸ್ಥೆಯಲ್ಲಿ ಇಂತಹ ಆಹಾರಗಳು, ತಾಯಿ-ಮಗುವಿಗೆ ಬಲು ಉಪಕಾರಿ

Posted By: manu
Subscribe to Boldsky

ಮಗುವಿನ ತಾಯಿಯಾಗುವಂತಹ ನೈಸರ್ಗಿಕ ಪ್ರಕ್ರಿಯೆ ಕ್ಷಣ ಮಾತ್ರದಲ್ಲಿ ಸಂಭವಿಸುವಂತಹ ಪವಾಡವಲ್ಲ. ಸಿನಿಮಾಗಳಲ್ಲಿ ಧಾರವಾಹಿಗಳಲ್ಲಿ ಸ್ತ್ರೀಯು ಗರ್ಭಿಣಿಯಾಗುವುದು ನಂತರ ಆಕೆ ಶಿಶುವನ್ನು ಹೆರುವುದು, ಆ ಮಗು ದೊಡ್ಡದಾಗಿ ಬೆಳೆಯುವುದು ಇದೆಲ್ಲವೂ ಕೆಲವೇ ಗಂಟೆಗಳಲ್ಲಿ ಸಂಭವಿಸಿಬಿಡುತ್ತದೆ.

ಆದರೆ ನಿಜ ಜೀವನದಲ್ಲಿ ಗರ್ಭಿಣಿಯಾಗುವುದು ಕಂದಮ್ಮನನ್ನು ಒಡಲಿನಲ್ಲಿ ಒಂಬತ್ತು ತಿಂಗಳು ಹೊರುವುದು ಹೆರುವುದು ತುಂಬಾ ದೀರ್ಘ ಕಾಲದ ಕ್ರಿಯೆಯಾಗಿದೆ, ಎಂಬುದು ವಾಸ್ತವ ಸತ್ಯ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ತಲೆನೋವು, ಹೊಟ್ಟೆನೋವು ಈ ರೀತಿಯ ಹಲವು ರೀತಿಯ ಸಮಸ್ಯೆಗಳು ಕಾಡತೊಡಗುತ್ತದೆ!'

ಗರ್ಭಿಣಿಯರ ಆರೋಗ್ಯಕ್ಕೆ ಚಾಕಲೇಟ್ ಒಳ್ಳೆಯದು, ಆದರೆ ಮಿತಿ ಇರಲಿ!!

ಅದರಲ್ಲೂ ಇಂತಹ ಸಮಯದಲ್ಲಿ ಕೆಲವೊಂದು ಆಹಾರಗಳ, ವಾಸನೆ ಮೂಗಿಗೆ ಬಡಿದರಂತೂ ವಾಂತಿಯ ಸಮಸ್ಯೆ ವಿಪರೀತ ಕಾಡತೊಡಗುತ್ತದೆ... ಕೆಲವು ಆರೋಗ್ಯಕರವಾದ ಆಹಾರವಾಗಿದ್ದರೂ ಗರ್ಭಿಣಿಯರ ದೇಹಕ್ಕೆ ಒಗ್ಗುವುದಿಲ್ಲ. ಗರ್ಭಾವಸ್ಥೆಯಲ್ಲಿ ಉಂಟಾಗುವ ವಾಂತಿ, ಆಯಾಸ ಹಾಗೂ ಒಂದು ಬಗೆಯ ಬಳಲಿಕೆ ಊಟ-ತಿಂಡಿಯಿಂದ ದೂರ ಇರುವಂತೆ ಮಾಡುತ್ತದೆ, ಹಾಗಾಗಿ ಇಂತಹ ಸಮಯದಲ್ಲಿ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದರೆ, ತಾಯಿ ಹಾಗೂ ಮಗುವಿನ ಆರೋಗ್ಯಕ್ಕೂ ಬಲು ಉಪಕಾರಿ....

ದಿನಕ್ಕೊಂದು ಕಪ್ ಮೊಸರು ಸೇವಿಸಿ

ದಿನಕ್ಕೊಂದು ಕಪ್ ಮೊಸರು ಸೇವಿಸಿ

ಹೆಚ್ಚು ಖಾರವಾಗಿರುವ ಆಹಾರವನ್ನು ತಿಂದ ಬಳಿಕ ಮೊಸರನ್ನು ತಿಂದರೆ ದೇಹವು ತಂಪಾಗಿರುವುದು. ಗರ್ಭಿಣಿ ಮಹಿಳೆಯರಿಗೆ ಹೆಚ್ಚಾಗಿ ಖಾರದ ಆಹಾರವನ್ನು ತಿನ್ನಬೇಕೆಂಬ ಹಂಬಲ ಹೆಚ್ಚಿರುತ್ತದೆ. ಖಾರದ ಪದಾರ್ಥಗಳಿಂದ ಆಸಿಡಿಟಿ ಮತ್ತು ಎದೆಯುರಿ ಉಂಟಾಗಬಹುದು. ಇದರಿಂದ ಖಾರದ ಆಹಾರದ ಜತೆಗೆ ಮೊಸರನ್ನು ಸೇವಿಸುವುದು ತುಂಬಾ ಒಳ್ಳೆಯದು.

ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ದಿನಕ್ಕೆ ಒಂದೆರಡು ಮೊಟ್ಟೆಗಳನ್ನು ಸೇವಿಸಿ

ದಿನಕ್ಕೆ ಒಂದೆರಡು ಮೊಟ್ಟೆಗಳನ್ನು ಸೇವಿಸಿ

ಗರ್ಭಿಣಿ ಮಹಿಳೆಯರು ದಿನದಲ್ಲಿ ಕೇವಲ ಎರಡು ಮೊಟ್ಟೆ ಸೇವನೆ ಮಾಡಬೇಕು. ಮೊಟ್ಟೆಯ ಹಳದಿ ಭಾಗ ತಿನ್ನದೇ ಇರುವುದು ಒಳ್ಳೆಯದು. ಯಾಕೆಂದರೆ ಇದರಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇರುತ್ತದೆ ಮತ್ತು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಟ್ಟೆಗಳು ಕೊಲೆಸ್ಟ್ರಾಲ್ ನಿಂದ ಸಮೃದ್ಧವಾಗಿದೆ ಮತ್ತು ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ತುಂಬಾ ಕಡಿಮೆ ಇರುವ ಕಾರಣ ಇದು ತುಂಬಾ ಆರೋಗ್ಯಕಾರಿ. ಆದರೆ ನಿಮಗೆ ವಾಂತಿ, ಭೇದಿ ಮತ್ತು ಆಹಾರ ವಿಷವಾಗುವ

ದಿನಕ್ಕೆ ಒಂದೆರಡು ಬಾದಾಮಿಗಳನ್ನು ನೆನೆಸಿ ಸೇವಿಸಿ

ದಿನಕ್ಕೆ ಒಂದೆರಡು ಬಾದಾಮಿಗಳನ್ನು ನೆನೆಸಿ ಸೇವಿಸಿ

ಕೆಲವು ಬಾದಾಮಿಗಳನ್ನು ನೀರಿನಲ್ಲಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ನೆನೆಸಿಟ್ಟು ಬಳಿಕ ಸೇವಿಸಬೇಕು. ಇದು ಮಗುವಿನಲ್ಲಿ ಅಲರ್ಜಿಯನ್ನು ಕಡಿಮೆ ಮಾಡುವುದು, ಗರ್ಭಿಣಿಯ ದೇಹದಲ್ಲಿ ನೀರು ತುಂಬಿಕೊಂಡು ರಕ್ತದೊತ್ತಡ ಹೆಚ್ಚಾಗುವ (preeclampsia) ತೊಂದರೆಯನ್ನು ಮತ್ತು ಮಲಬದ್ಧತೆಯಾಗುವ ಸಾಧ್ಯತೆಯಿಂದ ರಕ್ಷಿಸುತ್ತದೆ.

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಹಾಲಿಗೆ ಒಂದು ಚಮಚ ಜೇನು ಹಾಕಿ ಕುಡಿಯಿರಿ

ಹಾಲಿಗೆ ಒಂದು ಚಮಚ ಜೇನು ಹಾಕಿ ಕುಡಿಯಿರಿ

ಹಾಲು ಹಾಲಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನು, ಖನಿಜಗಳು ಮತ್ತು ಕ್ಯಾಲ್ಸಿಯಂ ಇದೆ. ಹಾಲಿನೊಂದಿಗೆ ಕೊಂಚ ಜೇನು ಬೆರೆಸಿ ನಿತ್ಯವೂ ಕುಡಿಯುವ ಮೂಲಕ ಗರ್ಭಿಣಿಯ ಆರೋಗ್ಯ ಉತ್ತಮವಾಗಿರುತ್ತದೆ.

ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

ದಿನಕ್ಕೆ ಒಂದೆರಡು ಗ್ಲಾಸ್ ಬಾರ್ಲಿ ನೀರು ಮಾಡಿ ಕುಡಿಯಿರಿ

ದಿನಕ್ಕೆ ಒಂದೆರಡು ಗ್ಲಾಸ್ ಬಾರ್ಲಿ ನೀರು ಮಾಡಿ ಕುಡಿಯಿರಿ

ಬಾರ್ಲಿ ಬಾರ್ಲಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ಮಗುವಿನ ಬೆಳವಣಿಗೆಗೂ ಸಹಕರಿಸುತ್ತದೆ...

ಬಾರ್ಲಿ ನೀರನ್ನು ತಯಾರಿಸುವುದು ಹೇಗೆ?

ಬಾರ್ಲಿ ನೀರನ್ನು ತಯಾರಿಸುವುದು ಹೇಗೆ?

ಸುಮಾರು ಒಂದು ದೊಡ್ಡ ಚಮಚ ಬಾರ್ಲಿಯನ್ನು ತೊಳೆದು ಮೂರು ಅಥವಾ ನಾಲ್ಕು ಕಪ್ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ನಿಧಾನ ಉರಿಯಲ್ಲಿ ಕುದಿಸಿ ಬಳಿಕ ಹಾಗೇ ತಣಿಯಲು ಬಿಡಿ. ತಣಿದ ಬಳಿಕ ಸೋಸಿ ಇದಕ್ಕೆ ಕೊಂಚ ಲಿಂಬೆರಸವನ್ನು ಸೇರಿಸಿ. (ಉತ್ತಮ ಪರಿಣಾಮಕ್ಕೆ ಅರ್ಧ ಲಿಂಬೆ ಇದ್ದರೆ ಉತ್ತಮ, ಕೊಂಚ ಹುಳಿಯಾಗುತ್ತದೆ ಅಷ್ಟೇ). ಲಿಂಬೆಯ ಬದಲಿಗೆ ಕಿತ್ತಳೆ ರಸವನ್ನೂ ಬಳಸಬಹುದು. ಈ ನೀರನ್ನು ದಿನವೆಲ್ಲಾ ನೀರಿನ ಬದಲು ಕುಡಿಯುತ್ತಾ ಹೋಗಬೇಕು. ಪ್ರತಿ ಗಂಟೆಗೂ ಒಂದು ಚಿಕ್ಕ ಲೋಟದಷ್ಟು ಕುಡಿಯುವುದು ಇನ್ನೂ ಉತ್ತಮ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಒಂದು ದೊಡ್ಡ ಚಮಚದಷ್ಟು ಬಾರ್ಲಿಯನ್ನು ಒಂದು ಲೀಟರ್ ನೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಮತ್ತು ಸಂಜೆ ಅರ್ಧ ಅರ್ಧ ಲೀಟರ್ ಕುಡಿಯಬೇಕು.

ಕೇಸರಿ ಹಾಲು

ಕೇಸರಿ ಹಾಲು

ಮಗುವಿನ ಚಲನವಲನಗಳು ಗರ್ಭಿಣಿ ಮಹಿಳೆಯರು 5 ತಿಂಗಳ ನಂತರ ಮಗುವಿನ ಚಲನವಲನವನ್ನು ತಮ್ಮ ಹೊಟ್ಟೆಯಲ್ಲಿಯೇ ಅನುಭವಿಸಬಹುದು. ಕೇಸರಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸುವುದರಿಂದ ಇದರ ಪರಿಣಾಮ ಉತ್ತಮವಾಗಿರುತ್ತದೆ. ಆದರೆ ಇದು ದೇಹದ ಉಷ್ಣಾಂಶವನ್ನು ಅಧಿಕ ಮಾಡುವುದರಿಂದ, ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲು ಹೋಗಬಾರದು.

ಹಸಿರು ಸೊಪ್ಪು

ಹಸಿರು ಸೊಪ್ಪು

ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

English summary

Best Foods to Eat While Pregnant

Pregnancy is a time when women suffer from unusual cravings and experience endless hunger problems. Here are some of the best foods that should be eaten by a pregnant woman.