ಗರ್ಭಿಣಿಯರ ಆರೋಗ್ಯಕ್ಕೆ 'ಮೊಸರು' ಬಹಳ ಒಳ್ಳೆಯದು

Posted By: manu
Subscribe to Boldsky

ಗರ್ಭಿಣಿ ಮಹಿಳೆಯರು ಪೋಷಕಾಂಶಗಳು ಹಾಗೂ ವಿಟಮಿನ್ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಒಳ್ಳೆಯ ಪೋಷಕಾಂಶಗಳು ಸಿಗಬೇಕಾದರೆ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಾವು ತಿನ್ನುವಂತಹ ಆಹಾರಗಳಲ್ಲಿ ಹಲವಾರು ರೀತಿಯ ವಿಟಮಿನ್ ಹಾಗೂ ಪೋಷಕಾಂಶಗಳು ಇವೆ.

ಅದರಲ್ಲೂ ಮಹಿಳೆಯ ಗರ್ಭದಲ್ಲಿರುವ ಮಗುವಿನ ಮೂಳೆ, ಹಲ್ಲು ಮತ್ತು ಸ್ನಾಯುಗಳು ಬೆಳೆಯಲು ಕ್ಯಾಲ್ಸಿಯಂ ಅಗತ್ಯವಾಗಿರುತ್ತದೆ. ಕ್ಯಾಲ್ಸಿಯಂ ಇರುವಂತಹ ಹಾಲನ್ನು ಸೇವಿಸುವ ಜತೆಜತೆಗೆ ಮೊಸರನ್ನು ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮೊಸರಿನ ಕುರಿತ೦ತೆ ಬಹುತೇಕ ಗರ್ಭಿಣಿ ಸ್ತ್ರೀಯರ ಮನದಲ್ಲಿ ಮೂಡುವ ಒ೦ದು ಪ್ರಶ್ನೆ ಏನೆ೦ದರೆ, ಗರ್ಭಿಣಿ ಸ್ತ್ರೀಯರ ಪಾಲಿಗೆ ಮೊಸರಿನ ಸೇವನೆಯು ಆರೋಗ್ಯಕರವೇ? ಎ೦ಬುದೇ ಆಗಿರುತ್ತದೆ.  

ಇದನ್ನೂ ಓದಿ-  ಗರ್ಭಿಣಿಯರೇ ಹಣ್ಣು-ತರಕಾರಿಗಳೆಂದರೆ ಮುಖ ಸಿಂಡರಿಸಬೇಡಿ

ಗರ್ಭಿಣಿ ಸ್ತ್ರೀಯರಿಗೆ ಸ೦ಬ೦ಧಿಸಿದ ಹಾಗೆ ಮೊಸರಿನಿ೦ದ ಅನೇಕ ಆರೋಗ್ಯ ಸ೦ಬ೦ಧೀ ಪ್ರಯೋಜನಗಳಿದ್ದು, ಅವುಗಳ ಕುರಿತ೦ತೆ ನಾವು ಇ೦ದು ನಿಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದೇವೆ. ಮೊಸರಿನಲ್ಲಿ ಕ್ಯಾಲ್ಸಿಯ೦ ಸಮೃದ್ಧವಾಗಿದ್ದು, ಸುಲಭವಾಗಿ ಜೀರ್ಣಗೊಳ್ಳುತ್ತದೆ. ಮೊಸರು ಗರ್ಭಿಣಿ ಸ್ತ್ರೀಯ ಶರೀರಕ್ಕೆ ಕ್ಯಾಲ್ಸಿಯ೦ ಹಾಗೂ ಜೊತೆಗೆ ಪ್ರೋಟೀನ್‌ಗಳನ್ನೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಒದಗಿಸುತ್ತದೆ ಹಾಗೂ ತನ್ಮೂಲಕ ಗರ್ಭಿಣಿಯ ಹೊಟ್ಟೆಯಲ್ಲಿರುವ ಮಗುವಿನ ಸರಿಯಾದ ಬೆಳವಣಿಗೆಯನ್ನು ಬೆ೦ಬಲಿಸುತ್ತದೆ...

 ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ಮೊಸರು ಆಹಾರವನ್ನು ಸರಿಯಾಗಿ ಜೀರ್ಣವಾಗಿಸಲು ನೆರವಾಗುತ್ತದೆ. ಆಹಾರದಲ್ಲಿರುವ ಪೋಷಕಾಂಶಗಳನ್ನು ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿ ಹೀರಿಕೊಳ್ಳಲು ಮೊಸರು ನೆರವಾಗುವುದು. ಇದರಿಂದ ಗರ್ಭಿಣಿ ಮಹಿಳೆಯರು ಕುಪೋಷಣೆಯಿಂದ ಬಳಲುವುದು ತಪ್ಪುತ್ತದೆ. ಗರ್ಭಿಣಿ ಮಹಿಳೆಯರು ಮೊಸರು ಸೇವಿಸುವುದರ ಪ್ರಮುಖ ಲಾಭ ಇದಾಗಿದೆ.

ಇದನ್ನೂ ಓದಿ - ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ದೇಹವನ್ನು ತಂಪಾಗಿಡುವುದು

ದೇಹವನ್ನು ತಂಪಾಗಿಡುವುದು

ಹೆಚ್ಚು ಖಾರವಾಗಿರುವ ಆಹಾರವನ್ನು ತಿಂದ ಬಳಿಕ ಮೊಸರನ್ನು ತಿಂದರೆ ದೇಹವು ತಂಪಾಗಿರುವುದು. ಗರ್ಭಿಣಿ ಮಹಿಳೆಯರಿಗೆ ಹೆಚ್ಚಾಗಿ ಖಾರದ ಆಹಾರವನ್ನು ತಿನ್ನಬೇಕೆಂಬ ಹಂಬಲ ಹೆಚ್ಚಿರುತ್ತದೆ. ಖಾರದ ಪದಾರ್ಥಗಳಿಂದ ಆಸಿಡಿಟಿ ಮತ್ತು ಎದೆಯುರಿ ಉಂಟಾಗಬಹುದು. ಇದರಿಂದ ಖಾರದ ಆಹಾರದ ಜತೆಗೆ ಮೊಸರನ್ನು ಸೇವಿಸುವುದು ತುಂಬಾ ಒಳ್ಳೆಯದು.

ಕ್ಯಾಲ್ಸಿಯಂನ ಮೂಲ

ಕ್ಯಾಲ್ಸಿಯಂನ ಮೂಲ

ಭ್ರೂಣದ ಮೂಳೆ, ಸ್ನಾಯುಗಳು ಮತ್ತು ಹಲ್ಲುಗಳು ಬೆಳೆಯಲು ಕ್ಯಾಲ್ಸಿಯಂ ಅನಿವಾರ್ಯ. ಗರ್ಭಿಣಿ ಮಹಿಳೆಯರು ಮೊಸರನ್ನು ಸೇವಿಸಿದರೆ ಮೂಳೆಗಳು ಕ್ಯಾಲ್ಸಿಯಂ ಕಳಕೊಳ್ಳುವುದನ್ನು ತಡೆಯಬಹುದು. ಇದು ಮೊಸರಿನ ಅತ್ಯುತ್ತಮ ಲಾಭಗಳಲ್ಲಿ ಒಂದಾಗಿದೆ.

ಇದನ್ನೂ ಓದಿ - ರಾತ್ರಿ ಹೊತ್ತು ಮೊಸರನ್ನು ಸೇವಿಸದಿರಿ, ಇಲ್ಲಿದೆ ಪರಿಹಾರ

ಅಧಿಕ ರಕ್ತದೊತ್ತಡ ತಡೆಯುವುದು

ಅಧಿಕ ರಕ್ತದೊತ್ತಡ ತಡೆಯುವುದು

ಗರ್ಭಿಣಿ ಮಹಿಳೆಯರು ಮೊಸರು ಸೇವಿಸುವ ಪ್ರಮುಖ ಲಾಭವೆಂದರೆ ರಕ್ತದೊತ್ತಡವನ್ನು ಅದು ನಿಯಂತ್ರಣದಲ್ಲಿ ಇಡುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೊಸರನ್ನು ಸೇವಿಸಿದರೆ ಇದನ್ನು ತಡೆಯಬಹುದು. ಮೊಸರು ಹೃದಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.

ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ದೇಹದಲ್ಲಿ ಸೋಂಕನ್ನು ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾ ವಿರುದ್ಧ ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಹೋರಾಡುತ್ತದೆ. ಮೊಸರು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಪ್ರೊಬಯೋಟಿಕ್ಸ್ ಸಂಖ್ಯೆ ಹೆಚ್ಚಾಗುವುದು. ಇದು ಜೀರ್ಣಕ್ರಿಯೆಯಲ್ಲಿ ಇರುವಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ಆತಂಕ ಮತ್ತು ಒತ್ತಡ ಗರ್ಭಿಣಿ ಮಹಿಳೆಯರಲ್ಲಿ ಸಾಮಾನ್ಯವಾಗಿರುವಂತದ್ದಾಗಿದೆ. ಮೊಸರು ಗರ್ಭಿಣಿ ಮಹಿಳೆಯರಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಗರ್ಭಧಾರಣೆ ವೇಳೆ ಮೆದುಳಿನ ಭಾವನಾತ್ಮಕ ಕೇಂದ್ರವು ಹೆಚ್ಚು ಕ್ರಿಯಾತ್ಮಕವಾಗಿರುವ ಕಾರಣದಿಂದ ಮೊಸರು ಅದನ್ನು ತಣ್ಣಗಾಗಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Benefits Of Curd/Yoghurt During Pregnancy

    There are many health benefits of curd during pregnancy that we will share with you today. Curd is rich in calcium and easy to digest. It will provide you enough calcium and proteins as well during pregnancy to support the proper growth of your baby. If the body does not get enough calcium during pregnancy, it will start taking calcium from your bones for fulfilling the requirements of your growing baby.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more