Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾತ್ರಿ ಹೊತ್ತು ಮೊಸರನ್ನು ಸೇವಿಸದಿರಿ, ಇಲ್ಲಿದೆ ಪರಿಹಾರ
ನಾವು ಸೇವಿಸುವ ಆಹಾರದಲ್ಲಿ ಮೊಸರು ಇಲ್ಲದಿದ್ದರೆ ಊಟವು ಪೂರ್ಣವಾಗುವುದೇ ಇಲ್ಲ. ವಿಶೇಷವಾಗಿ ಭಾರತದಲ್ಲಿ ಮೊಸರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮೊಸರು ಸ್ವಾಭಾವಿಕವಾಗಿ ಸಿಹಿಯುಕ್ತವಾದ ಹುಳಿಯ ಪದಾರ್ಥವಾಗಿದ್ದು, ಇದನ್ನು ಅನೇಕ ಆಹಾರ ಪದಾರ್ಥಗಳಿಗೆ ಬೆರೆಸುತ್ತಾರೆ. ಮೊಸರಿಲ್ಲದೆ ನಿಜವಾದ ಊಟದ ಸವಿಯು ಮಾಯವಾಗುತ್ತದೆ. ಮೊಸರಿನಿಂದ ಬಗೆಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.
ಆದರೆ ಆಯುರ್ವೇದದ ಪ್ರಕಾರ ಮೊಸರಿನ ಸೇವನೆ ದೇಹದಲ್ಲಿ ಕಫ ದೋಷ ಉಂಟಾಗಲು ಕಾರಣವಾಗುತ್ತದೆ. ಅದರಲ್ಲೂ ರಾತ್ರಿ ಊಟದಲ್ಲಿ ಮೊಸರಿನ ಸೇವನೆ ಮಾಡಲೇಬಾರದು. ಮೊಸರನ್ನು ರಾತ್ರಿ ಹೊತ್ತು ಸೇವಿಸುತ್ತಾ ಇದ್ದರೆ ಅದು ನಿಧಾನವಾದ ವಿಷ ಎಂದೇ ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ರಾತ್ರಿ ಸಮಯದಲ್ಲಿ ಮೊಸರಿನ ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಜಾಸ್ತಿಯಾಗುತ್ತದೆ.
ಇದರಿಂದ ಅನೇಕ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಹಾಗೆಯೇ ಮಧ್ಯಾಹ್ನದ ಹೊತ್ತು ಸೂರ್ಯ ಶಾಖಕ್ಕೆ ಮೈಯನ್ನು ಒಡ್ಡಬಾರದು. ಏಕೆಂದರೆ ಮಧ್ಯಾಹ್ನದ ಹೊತ್ತು ಪಿತ್ತವು ಬೇಗ ಬರಲು ಕಾರಣವಾಗಿ ಬಿಸಿಲಿನ ಶಾಖಕ್ಕೆ ಅದು ಹೆಚ್ಚಾಗುವ ಅಪಾಯವಿರುತ್ತದೆ. ಹಾಗೆಯೇ ರಾತ್ರಿ ಹೊತ್ತು ಮೊಸರಿನ ಬಳಕೆ ನಿಷಿದ್ಧ. ಮೊಸರು ರುಚಿಯಲ್ಲಿ ಹುಳಿಯಾಗಿದ್ದು, ಅದರ ಸಾಮರ್ಥ್ಯ ಮಾತ್ರ ಅಧಿಕ.

ಇದರ ಜೀರ್ಣಕ್ರಿಯೆಯು ಹೆಚ್ಚು ಹೊತ್ತು ತೆಗೆದುಕೊಳ್ಳಲಿದ್ದು, ಜೀರ್ಣ ಕ್ರಿಯೆಯು ಇತರೆ ಆಹಾರಗಳ ಜೀರ್ಣ ಕ್ರಿಯೆಗಿಂತ ಸ್ವಲ್ಪ ಕಷ್ಟವೇ ಸರಿ. ಇದರಿಂದ ಬೊಜ್ಜು, ಕಫ, ಪಿತ್ತ ಹೆಚ್ಚಾಗಿ ಜೀರ್ಣದ ಸಾಮರ್ಥ್ಯವನ್ನೂ ಸಹ ಹೆಚ್ಚಿಸುತ್ತದೆ. ನಿಮಗೆ ಉದರದ ಊತ ಅಥವಾ ಉರಿಯು ಬಂದ ಸಂದರ್ಭಗಳಲ್ಲಿ ಮೊಸರನ್ನು ಸೇವಿಸಿದರೆ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಈ ಗುಣಲಕ್ಷಣವು ಹುಳಿಯಾದ ಮೊಸರಿನಲ್ಲಿ ಅಧಿಕವಿರುತ್ತದೆ.
ಹುಳಿ ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಿ ಸೇವಿಸಬಾರದು. ಇದನ್ನು ರಾತ್ರಿ ಸಮಯದಲ್ಲಿ, ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ ಸೇವಿಸುವುದು ನಿಷಿದ್ಧ. ಆದರೆ ಹುಳಿ ಮೊಸರಿಗೆ ಹೆಸರಿನ ಕಾಳಿನ ಸೂಪ್, ಜೇನು, ತುಪ್ಪ, ಸಕ್ಕರೆ ಮತ್ತು ಆಮ್ಲ ಬೆರೆಸಿಕೊಂಡು ಸೇವಿಸಿದರೆ ಉರಿಮೂತ್ರ ನಿವಾರಣೆ ಮತ್ತು ಅಜೀರ್ಣದ ನಿವಾರಣೆಯಾಗುತ್ತದೆ. ಕೊಬ್ಬಿನಾಂಶ ನಿಯಂತ್ರಿಸಲು ಮೊಸರು ಸೇವನೆ ಹೇಗಿರಬೇಕು?
ಪರಿಹಾರ
ರಾತ್ರಿ ಹೊತ್ತು ಮೊಸರು ಸೇವಿಸುವುದನ್ನು ನಿಲ್ಲಿಸಿ. ಏಕೆಂದರೆ ರಾತ್ರಿ ಹೊತ್ತು ಕಫ ಬಹುಬೇಗ ಬರುತ್ತದೆ. ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ರಾತ್ರಿ ಹೊತ್ತು ಮೊಸರನ್ನು ಸೇವಿಸಿದರೆ ಕಫ ಗ್ಯಾರಂಟಿ. ಆದರೆ ಮೊಸರನ್ನು ಸೇವಿಸದೇ ಆಹಾರ ಸ್ವೀಕರಿಸದೇ ಇರುವವರು, ಮೊಸರಿಗೆ ಮಾರುಹೋದವರು ಈ ಪರಿಹಾರವನ್ನು ಅನುಸರಿಸಬಹುದು. ಮೊಸರಿಗೆ ಸ್ವಲ್ಪ ಮೆಣಸಿನ ಪುಡಿ ಬೆರೆಸಿಕೊಂಡು ಸೇವಿಸಿದರೆ ಉತ್ತಮ. ಆದರೆ ಹೆಚ್ಚು ಮೆಣಸನ್ನು ಬೆರೆಸದಿರಿ, ಇದರಿಂದ ಉದರದಲ್ಲಿ ಉರಿಯ ಅನುಭವವಾಗುತ್ತದೆ.
ಅದರಲ್ಲೂ ನಿಮಗೆ ಸ್ವಲ್ಪ ಕಹಿಯನ್ನು ಸೇವಿಸುವ ಸ್ವಭಾವವಿದ್ದಲ್ಲಿ, ಮೊಸರಿಗೆ ಸ್ವಲ್ಪ ಮೆಂತೆ ಕಾಳಿನ ಪುಡಿಯನ್ನು ಬೆರೆಸಿಕೊಂಡು ಸೇವಿಸಬಹುದು. ಹೀಗೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಯನ್ನು ಮತ್ತು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಬಹುದು.ಸಕ್ಕರೆ ಮಿಶ್ರಿತ ಮೊಸರನ್ನು ರಾತ್ರಿ ಸಮಯದಲ್ಲಿ ಸೇವಿಸಲೇಬಾರದು. ರಾತ್ರಿ ಹೊತ್ತು ಮೊಸರಿಗೆ ಬದಲು ಮಜ್ಜಿಗೆಯು ಅತೀ ಸೂಕ್ತ. ಮಜ್ಜಿಗೆಯ ಸೇವನೆಯಿಂದ ಎಲ್ಲ ನಾಳಗಳು ಶುದ್ಧಿಯಾಗಿ ಹಾನಿಕಾರಕ ಅಂಶಗಳು ಹೀರಿಕೊಳ್ಳುವುದನ್ನು ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
