Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು!
ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಸಂಚಕಾರ
ಗರ್ಭಾವಸ್ಥೆಯು ಹೆಚ್ಚಿನ ಜೀವನದಲ್ಲಿ ಹೆಚ್ಚು ಮಹತ್ವಪೂರ್ಣ ಘಟ್ಟವಾಗಿದ್ದು ನಾಜೂಕಾಗಿ ತನ್ನ ಆರೋಗ್ಯದ ಮೇಲೆ ಗಮನ ಹರಿಸಬೇಕಾಗುತ್ತದೆ. ತನ್ನೊಂದಿಗೆ ಇನ್ನೊಂದು ಜೀವವನ್ನು ಸಂರಕ್ಷಿಸುವ ಜವಬ್ದಾರಿ ಆಕೆಗಿರುವುದರಿಂದ ಕೊಂಚ ಕೂಡ ಏರುಪೇರು ಉಂಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಸ್ತ್ರೀಯನ್ನು ಹೊಸ ಹೊಸ ಕಾಯಿಲೆಗಳು ಕಾಡಿದರೂ ಅದಕ್ಕೆ ತಕ್ಕುದಾದ ಪರಿಹಾರಗಳನ್ನು ಆಕೆ ತೆಗೆದುಕೊಳ್ಳಬೇಕಾಗುತ್ತದೆ.

ಗರ್ಭಾವಸ್ಥೆ ಸಮಯದಲ್ಲಿ ಹೆಚ್ಚು ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹದಂತಹ ರೋಗಗಳಿಗೆ ತುತ್ತಾಗುತ್ತಾರೆ ಎಂಬುದಾಗಿ ಹೊಸ ಅಧ್ಯಯನವು ತಿಳಿಸಿದೆ.
ಹೆಚ್ಚು ರಕ್ತದೊತ್ತಡವು ಅಪಾಯಕಾರಿಯಾಗಿದ್ದು, ಗರ್ಭಾವಸ್ಥೆಯಲ್ಲಿ ಈ ತೊಂದರೆಯು ಹಾನಿಕರವಾಗಿದೆ ಎಂಬುದಾಗಿ ಈ ಅಧ್ಯಯನವು ತಿಳಿಸಿದೆ. ಇದಲ್ಲದೆ, ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲಿದ ಗರ್ಭಿಣಿಯರು ಆರಕ್ಕಿಂತ ಹೆಚ್ಚು ಬಾರಿ ಚಯಾಪಚಯ ರೋಗಲಕ್ಷಣಗಳನ್ನು ನಂತರ ಸಮಯಗಳಲ್ಲಿ ಹೊಂದುವ ಅವಕಾಶವಿರುತ್ತದೆ.
ಗರ್ಭಾವಸ್ಥೆಯ ಬೇರೆ ಬೇರೆ ಸ್ಥಿತಿಗಳಲ್ಲಿರುವ 500 ಮಹಿಳೆಯರನ್ನು ಸಂಶೋಧಕರು ವಿಶ್ಲೇಷಿಸಿದರು. ಇವರು ಹೆಚ್ಚು ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಮಟ್ಟಗಳನ್ನು ಹೊಂದಿಯೇ ಇರಲಿಲ್ಲ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಗರ್ಭಾವಸ್ಥೆಯಲ್ಲಿ ಕಾಡುವ ಬಿಪಿಯು ನಂತರ ಅಪಾಯಗಳನ್ನು ಉಂಟುಮಾಡುವ ಅವಕಾಶ ಅಧಿಕವಾಗಿರುತ್ತದೆ ಎಂದಾಗಿದೆ. ನಂತರ ನಿಮ್ಮನ್ನು ಕಾಡುವ ಆರೋಗ್ಯ ಅಪಾಯಗಳನ್ನು ನಿವಾರಿಸಿಕೊಳ್ಳಲು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರಬೇಕಾಗುವುದು ಉತ್ತಮ ಸಲಹೆಯಾಗಿದೆ. ರಕ್ತದೊತ್ತಡವನ್ನು ಹದ್ದು ಬಸ್ತಿನಲ್ಲಿಡುವ ಟಾಪ್ ಫುಡ್
ಗರ್ಭಾವಸ್ಥೆಯಲ್ಲಿ ಸ್ತ್ರೀಯು ಹೆಚ್ಚು ಜಾಗರೂಕಳಾಗಿರಬೇಕಾಗಿದ್ದು ಹೆಚ್ಚು ರಕ್ತದೊತ್ತಡ ಸಮಸ್ಯೆಯನ್ನು ಜಾಗರೂಕವಾಗಿ ನಿರ್ವಹಿಸಬೇಕಾಗುತ್ತದೆ. ಇದರೊಂದಿಗೆ ಹೆರಿಗೆಯ ನಂತರ ಸ್ತ್ರೀಯು ತಮ್ಮ ಆಹಾರ ಮತ್ತು ಚಟುವಟಿಕಾ ಹಂತಗಳಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕಾಗುತ್ತದೆ ಇದರಿಂದ ಅವರನ್ನು ಕಾಡುವ ಮಧುಮೇಹ, ಸಕ್ಕರೆ ಕಾಯಿಲೆ ಮತ್ತು ಹೃದಯ ಸಮಸ್ಯೆಗಳನ್ನು ದೂರಮಾಡಬಹುದಾಗಿದೆ.
ಅಧಿಕ ರಕ್ತದೊತ್ತಡದ ಶಮನಕ್ಕೆ ಲಿಂಬೆಯ ಚಮತ್ಕಾರ
ಸದ್ದು ಮಾಡದೇ ಕಾಡುವ ರಕ್ತದೊತ್ತಡಕ್ಕೆ ಸರಳ ಟಿಪ್ಸ್



Click it and Unblock the Notifications


