ಗರ್ಭಾವಸ್ಥೆಯಲ್ಲಿ ಊತದ ಸಮಸ್ಯೆ ಮಾಮೂಲು-ಚಿಂತಿಸದಿರಿ!

By Jaya Subramanya
Subscribe to Boldsky

ಸ್ತ್ರೀಯು ಗರ್ಭ ಧರಿಸಿದ ಸಮಯದಲ್ಲಿ ದೇಹದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳು ನಡೆಯುತ್ತವೆ. ತಾಯಿಯನ್ನು ಕಂದನ ಜನನಕ್ಕೆ ಅಣಿಗೊಳಿಸುವ ಪ್ರಕೃತಿಯು ಕೆಲವೊಂದು ಮಾರ್ಪಾಡುಗಳನ್ನು ದೇಹದಲ್ಲಿ ಮಾಡುತ್ತದೆ. ಇದರಲ್ಲಿ ಒಂದು ಬಗೆಯ ತಾಯ್ತನದ ಸುಖ ಕೂಡ ಇರುತ್ತದೆ ಅಂತೆಯೇ ಬೇನೆ ಕೂಡ.      ಹೆದರದಿರಿ! ಗರ್ಭಾವಸ್ಥೆಯಲ್ಲಿ ಈ ಲಕ್ಷಣಗಳು ಸರ್ವೇ ಸಾಮಾನ್ಯ

ಗರ್ಭಾವಸ್ಥೆಯ ಸಂದರ್ಭದಲ್ಲಿ ದೇಹದ ಭಾಗಗಳಲ್ಲಿ ಊತ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ಗರ್ಭದಲ್ಲಿ ಶಿಶುವಿನ ಬೆಳವಣಿಗೆಯಾಗುತ್ತಿದ್ದಂತೆ ದ್ರವ ಪ್ರಮಾಣವನ್ನು ದೇಹವು ಹೆಚ್ಚು ಬಳಸಿಕೊಳ್ಳಲು ಆರಂಭಿಸುತ್ತದೆ. ದೇಹದಲ್ಲಿ ನೀರಿನ ಧಾರಣಶಕ್ತಿ ಹೆಚ್ಚಾಗುವ ಸಂದರ್ಭದಲ್ಲಿ ಈ ಊತ ಪ್ರಮುಖವಾಗಿದ್ದರೆ, ರಕ್ತದ ಪ್ರಮಾಣದ ಹೆಚ್ಚುವಾಗ ಕೂಡ ಊತ ಕಾಣಿಸಿಕೊಳ್ಳುತ್ತದೆ.     

ಐದನೇ ತಿಂಗಳ ಮೂರನೇ ತ್ರೈಮಾಸಿಕದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಹೆರಿಗೆ ಸಮಯದಲ್ಲಿ ನಿರ್ದಿಷ್ಟ ಅಂಗಾಂಶಗಳು ಮತ್ತು ಕೀಲುಗಳನ್ನು ಸಡಿಲಗೊಳಿಸಿ ಹೆರಿಗೆಯನ್ನು ಸುಸೂತ್ರಗೊಳಿಸಲು ದ್ರವಗಳು ಪರಿಣಾಮಕಾರಿ ಪಾತ್ರವನ್ನು ವಹಿಸುತ್ತವೆ. ಇಂದಿನ ಲೇಖನದಲ್ಲಿ ದೇಹದ ಯಾವ ಭಾಗಗಳು ಈ ಊತದ ಪರಿಣಾಮವನ್ನು ಎದುರಿಸುತ್ತವೆ ಎಂಬುದನ್ನು ಅರಿತುಕೊಳ್ಳೋಣ...

ಪಾದ

ಪಾದ

ಗರ್ಭಿಣಿ ಸ್ತ್ರೀಯರಲ್ಲಿ ಹೆಚ್ಚು ಸಾಮಾನ್ಯವಾದುದು ಊದಿಕೊಂಡ ಕಾಲುಗಳಾಗಿವೆ. ಕಾಲುಗಳು ಬಿಗಿಗೊಂಡಂತೆ ಭಾಸಗೊಳ್ಳುತ್ತದೆ ಆದರೆ ಇದಕ್ಕೆ ಕಾರಣ ಊತವಾಗಿದೆ. ಗರ್ಭಾವಸ್ಥೆಯಲ್ಲಿ ಪಾದಗಳ ಊತ- ಇಲ್ಲಿದೆ ಫಲಪ್ರದ ಟಿಪ್ಸ್

ತುಟಿ

ತುಟಿ

ಗರ್ಭಾವಸ್ಥೆಯಲ್ಲಿ ಮುಂಜಾನೆ ಎದ್ದಾಗ ನಿಮ್ಮ ತುಟಿ ಊದಿಕೊಂಡಿದ್ದರೆ ನೀವು ಆಶ್ಚರ್ಯಪಡಬೇಕಾಗಿಲ್ಲ. ಇದು ಸರ್ವೇ ಸಾಮಾನ್ಯವಾದ ಪ್ರತಿಕ್ರಿಯೆಯಾಗಿದೆ. ನೋವಿದ್ದಲ್ಲಿ, ವೈದ್ಯರನ್ನು ಹೋಗಿ ಕಾಣಿ ಇಲ್ಲದಿದ್ದರೆ ನೀವು ಚಿಂತಿಸಬೇಕಾದ ಅಗತ್ಯವಿಲ್ಲ.

ಸ್ತನಗಳು

ಸ್ತನಗಳು

ಗರ್ಭಿಣಿ ಸ್ತ್ರೀಯಲ್ಲಿ ಊದಿಕೊಂಡ ಸ್ತನಗಳು ಸಾಮಾನ್ಯವಾಗಿರುತ್ತದೆ. ಗರ್ಭಿಣಿಯಾದ 10-15 ದಿನಗಳ ನಂತರ ಸ್ತನಗಳು ಊದಿಕೊಳ್ಳುತ್ತವೆ ಮತ್ತು ಗಾತ್ರದಲ್ಲಿ ಹಿರಿದಾಗುತ್ತವೆ. ಸ್ತನ್ಯಪಾನ ಮಾಡಿಸುವಾಗ ಇದು ಸಾಮಾನ್ಯ ಗಾತ್ರಕ್ಕೆ ಬರುತ್ತದೆ.

ಮೂಗು

ಮೂಗು

ಕೆಲವು ಮಹಿಳೆಯರಲ್ಲಿ ಮೂಗಿನ ರಕ್ತನಾಳಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ನಿಮ್ಮ ಮೂಗಿನಲ್ಲಿ ರಕ್ತ ಒಸರುತ್ತಿದ್ದರೆ ಅಥವಾ ಊತ ಕಾಣಿಸಿಕೊಂಡರೆ, ನೀವು ಅಗತ್ಯದಷ್ಟು ನೀರು ಕುಡಿಯುತ್ತಿರಬೇಕು. ಮಂಜುಗಡ್ಡೆಯನ್ನು ಹಚ್ಚುವುದು ಊತವನ್ನು ಹೆಚ್ಚಿಸಬಹುದು.

ಒಸಡು

ಒಸಡು

ಗರ್ಭಾವಸ್ಥೆಯಲ್ಲಿ ಕೆಲವು ತಾಯಂದಿರಿಗೆ ವಸಡಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಹಲ್ಲಿನಲ್ಲೂ ನೋವು ಕಾಣಿಸಿಕೊಳ್ಳುತ್ತದೆ, ಮತ್ತು ಒಸಡಿನಲ್ಲಿ ರಕ್ತ ವಸರಲೂಬಹುದು. ದಂತ ವೈದ್ಯರನ್ನು ಕಾಣುವುದು ಈ ಸಂದರ್ಭದಲ್ಲಿ ಉತ್ತಮವಾದುದಾಗಿದೆ.

ರಕ್ತನಾಳಗಳು

ರಕ್ತನಾಳಗಳು

ಕೆಲವು ಮಹಿಳೆಯರಲ್ಲಿ, ತ್ವಚೆಯಲ್ಲಿ ನೀಲಿ ರಕ್ತನಾಳಗಳು ಕಾಣಿಸಿಕೊಳ್ಳುತ್ತದೆ. ಇದು ಊತಕ್ಕೆ ಒಳಗಾಗಿರುತ್ತದೆ. ಅಪರೂಪದಲ್ಲಿ ಮಾತ್ರ ಹೀಗೆ ಸಂಭವಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Things That Swell During Pregnancy

    Swelling is considered to be part of pregnancy as the body tends to produce more fluids and blood in that phase. Certain estimates say that the fluid production goes 50% more than the normal just to meet the pregnancy requirements. As the body may need to expand a bit to accommodate the growing foetus, fluids are secreted more to soften the body and keep it elastic.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more