For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಎದೆ ಹಾಲು ತುಂಬಿಕೊಳ್ಳುವ ಸಂದರ್ಭದಲ್ಲಿ....

By Arshad
|

ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಸ್ತನಗಳಲ್ಲಿ ಹಾಲು ತುಂಬಿಕೊಳ್ಳುವ ಪ್ರಕ್ರಿಯೆಗೂ ಚಾಲನೆ ದೊರಕುತ್ತದೆ. ಹೆರಿಗೆಯ ಬಳಿಕ ಮಗುವಿಗೆ ಊಣಿಸಲು ಈ ಹಾಲು ಅಗತ್ಯವಾಗಿದ್ದು ಪ್ರಥಮವಾಗಿ ಹೊರಬರುವ ಹಾಲು ಮಗುವಿಗೆ ಅತ್ಯಗತ್ಯವಾದ ಜೀವದ್ರವವೂ ಅಗಿದೆ. ಈ ದಿನಗಳಲ್ಲಿ ಸ್ತನದ ಜೀವಕೋಶಗಳಲ್ಲಿ ಹಾಲು ತುಂಬಿಕೊಳ್ಳುವ ಸಾಮರ್ಥ್ಯದ ಜೀವಕೋಶಗಳು ಬೆಳೆಯುತ್ತವೆ.

The Process That Occurs During Lactation

ಇವು ನಿಧಾನವಾಗಿ ಹಾಲು ಉತ್ಪಾದಿಸುವ ಜೀವಕೋಶಗಳಾಗಿ ಮಾರ್ಪಡುತ್ತವೆ. ಇವು ಸ್ತನದ ಗಾತ್ರವನ್ನೂ ಕೊಂಚ ಹಿಗ್ಗಿಸುತ್ತವೆ. ಹೆರಿಗೆಯ ಬಳಿಕ ಹಾಲೂಡುವಷ್ಟು ಸಮಯ ಈ ಜೀವಕೋಶಗಳು ಕಾರ್ಯತತ್ಪರವಾಗಿದ್ದು ಆ ಬಳಿಕ ನಿಧಾನವಾಗಿ ಇಲ್ಲವಾಗುತ್ತವೆ. ಸ್ತನಗಳು ಜೋತು ಬೀಳಲಿಕ್ಕೆ ಇದೇ ಕಾರಣ.

ಈ ಪ್ರಕ್ರಿಯೆ ಕೇವಲ ಮಗುವಿನ ಬೆಳವಣಿಗೆಗೆ ಮತ್ತು ಉಳಿವಿಗಾಗಿಯೇ ಇದೆ. ಇದು ಎಲ್ಲಾ ಸಸ್ತನಿಗಳಲ್ಲಿಯೂ ನಡೆಯುತ್ತದೆ. ಮಗು ಪ್ರಾರಂಭದ ದಿನಗಳಲ್ಲಿ ಹೆಚ್ಚು ಹಾಲನ್ನೇ ಕುಡಿಯುವ ಮೂಲಕ ಹೆಚ್ಚು ಹಾಲಿನ ಉತ್ಪಾದನೆಯಾಗುತ್ತದೆ.

ಕ್ರಮೇಣ ಮಗು ಇತರ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿದ ಬಳಿಕ ನಿಧಾನವಾಗಿ ಹಾಲಿನ ಉತ್ಪತ್ತಿಯೂ ಕಡಿಮೆಯಾಗುತ್ತಾ ಮಗು ಹಾಲು ಬಿಡುವ ವೇಳೆಗೆ ಈ ಜೀವಕೋಶಗಳೂ ವಿದಾಯ ಹೇಳುತ್ತವೆ. ಇದೊಂದು ನಿಸರ್ಗದ ವಿಸ್ಮಯವೇ ಸರಿ.

English summary

The Process That Occurs During Lactation

Breast feeding plays an important role in the growth and development of a baby. Researchers say that certain changes that occur during the later phases of pregnancy help in generation of milk producing cells.
Story first published: Saturday, May 28, 2016, 19:40 [IST]
X
Desktop Bottom Promotion