For Quick Alerts
ALLOW NOTIFICATIONS  
For Daily Alerts

  ಹೆರಿಗೆ ನೋವು ಪ್ರಚೋದಿಸಲು ನೈಸರ್ಗಿಕ ಟಿಪ್ಸ್

  By Manu
  |

  ಗರ್ಭಾವಸ್ಥೆ ಎಂಬುದು ಸ್ತ್ರೀಗೆ ಪ್ರಕೃತಿ ಮಾತೆಯ ವರದಾನವಾಗಿದ್ದರೂ ಈ ಸಮಯದಲ್ಲಿ ಆಕೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವುದಕ್ಕಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆರಂಭದ ದಿನಗಳಲ್ಲೇ ವಾಂತಿ, ವಾಕರಿಕೆ, ಸುಸ್ತು ಆಕೆಯನ್ನು ಕಾಡುತ್ತಾ ನಂತರ ಒಂದೊಂದು ತಿಂಗಳಲ್ಲೂ ಮಗು ಬೆಳವಣಿಗೆಯಾಗುತ್ತಿದ್ದಂತೆ ಹೊಸ ಹೊಸ ಸಮಸ್ಯೆಗಳು ಸೆಳೆತಗಳು ಉಂಟಾಗುತ್ತಲೇ ಇರುತ್ತದೆ. ಇದನ್ನು ನಿವಾರಿಸಲು ಆಕೆ ತನ್ನ ಜೀವನ ಶೈಲಿಯನ್ನು ಉತ್ತಮಗೊಳಿಸಬೇಕು ಮತ್ತು ವೈದ್ಯರು ತಿಳಿಸಿ ದಾರಿಯಲ್ಲೇ ಮಾಹಿತಿಗಳನ್ನು ಪಾಲಿಸಬೇಕಾಗುತ್ತದೆ. ಹೆರಿಗೆ ಅವಧಿಯಲ್ಲಿ ಅಪ್ಪಿತಪ್ಪಿಯೂ ಇಂತಹ ತಪ್ಪು ಮಾಡದಿರಿ!

  ಹೆರಿಗೆಯ ಸಮಯ ಸಮೀಪಿಸುತ್ತಿದ್ದಂತೆಯೇ ಗರ್ಭಿಣಿಗೆ ಹೇಳಿಕೊಳ್ಳಲು ಆಗದೇ ಇರುವ ಚಡಪಡಿಕೆ ಆರಂಭವಾಗುತ್ತದೆ. ಮಗುವಿನ ಹೊರಳುವಿಕೆ, ಆಕೆಗೆ ಉಂಟಾಗುವ ಸೆಳೆತ ನೋವು ಆಕೆ ಹೆರಿಗೆಗೆ ಹತ್ತಿರವಾಗುತ್ತಿದ್ದಾಳೆ ಎಂಬುದನ್ನು ಸೂಚಿಸುತ್ತಿದೆಯಾದರೂ ಈ ಸಮಯದಲ್ಲಿ ಆಕೆ ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಕಷ್ಟಪಡುತ್ತಿದ್ದೀರಿ ಮತ್ತು ಹೆರಿಗೆಯ ದಿನಾಂಕ ದಾಟಿದೆ ಎಂದಾದಲ್ಲಿ ಹೆರಿಗೆಯನ್ನು ನೈಸರ್ಗಿಕವಾಗಿ ಪ್ರಚೋದಿಸುವ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದಾಗಿದೆ.

  ತಿನ್ನುವ ಆಹಾರವನ್ನು ಸರಿಯಾಗಿ ಅನುಸರಿಸುವ ಮೂಲಕ ಹೆರಿಗೆ ನೋವನ್ನು ಗರ್ಭಿಣಿಯರು ಪ್ರಚೋದಿಸಬಹುದಾಗಿದ್ದು ಇದಕ್ಕೆ ನೀವು ತೆಗೆದುಕೊಳ್ಳಬೇಕಾಗಿರುವುದು ಆಹಾರ ಮತ್ತು ಪಾನೀಯವಾಗಿದೆ. ಇಂದಿನ ಲೇಖನದಲ್ಲಿ ಇಂತಹ ನೋವು ಪ್ರಚೋದಿಸುವ ಪಾನೀಯ ಮತ್ತು ಆಹಾರ ಪದಾರ್ಥಗಳ ವಿವರಗಳನ್ನು ನಾವು ನೀಡುತ್ತಿದ್ದು ನಿಮಗೆ ಅತಿ ಸರಳ ವಿಧಾನದಲ್ಲಿ ಹೆರಿಗೆ ನೋವನ್ನು ಉಂಟುಮಾಡಲು ಇವುಗಳು ಸಹಕಾರಿಯಾಗಿವೆ. ಇನ್ನು ಈ ಆಹಾರಗಳಿಂದ ನಿಮಗೆ ಅಲರ್ಜಿ ಉಂಟಾಗುತ್ತಿದೆ ಎಂದಾದಲ್ಲಿ ವೈದ್ಯರನ್ನು ಸಂಪರ್ಕಿಸಿ ನಂತರವಷ್ಟೇ ಸೇವಿಸಿ...

  ಪೈನಾಪಲ್

  ಪೈನಾಪಲ್

  ನಿಮ್ಮ ನಿಗದಿತ ಪ್ರಸವ ಅವಧಿಯನ್ನು ನೀವು ದಾಟಿದ್ದೀರಿ ಎಂದಾದಲ್ಲಿ ನೋವಿಗಾಗಿ ಪೈನಾಪಲ್ ಹಣ್ಣು ಸಹಕಾರಿ. ವಿಟಮಿನ್ ಸಿ ಅಂಶವನ್ನು ಹೊಂದಿರುವ ಈ ಹಣ್ಣು ಬ್ರೊಮಿಲೈನ್ ಎಂಜಿಮ್ ಅನ್ನು ಹೊಂದಿದ್ದು, ಗರ್ಭಕಂಠವನ್ನು ಮೃದುಗೊಳಿಸಿ ಹೆರಿಗೆಯ ನೋವನ್ನು ಉಂಟುಮಾಡಲು ಸ್ನಾಯುಗಳನ್ನು ಮೆತ್ತಗಾಗಿಸುತ್ತದೆ.

  ಲಿಕ್ರೊಸ್

  ಲಿಕ್ರೊಸ್

  ಲಿಕ್ರೋಸ್ ರೂಟ್ ಇನ್ನೊಂದು ಆಹಾರವಾಗಿದ್ದು, ಸೇವಿಸಲು ಇದು ಸರಳವಾಗಿದೆ. ಇದು ಗ್ರಿಕರಿಜಿನ್ ಎಂಬ ಅಂಶವನ್ನು ಹೊಂದಿದ್ದು, ಹೆರಿಗೆಯ ನೋವನ್ನು ಉಂಟುಮಾಡುವ ಗರ್ಭಾಶಯದ ಕುಗ್ಗುವಿಕೆಯನ್ನು ಒಳಗೊಂಡಿರುವ ಪ್ರೋಸ್ಟಗ್ಲಾಂಡಿನ್ ಅನ್ನು ಹೆಚ್ಚಿಸಲು ನೆರವುಕಾರಿ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ನಿಮ್ಮ ದೈನಂದಿನ ಆಹಾರದಲ್ಲಿ ಸೇವಿಸಬಹುದಾದ ಶ್ರೀಮಂತ ಮಸಾಲೆಯಾಗಿದೆ. ಹೆರಿಗೆ ನೋವನ್ನು ಉಂಟುಮಾಡುವ ಅಂಶಗಳನ್ನು ಬೆಳ್ಳುಳ್ಳಿ ಹೊಂದಿದ್ದು ಇದನ್ನು ಸೇವಿಸಿ ನೋವನ್ನು ತಂದುಕೊಳ್ಳಬಹುದು.

  ಖಾರದ ಆಹಾರ

  ಖಾರದ ಆಹಾರ

  ನೋವನ್ನು ಉಂಟುಮಾಡುವಲ್ಲಿ ಖಾರದ ಆಹಾರಗಳದ್ದು ಎತ್ತಿದ ಕೈ. ನಿಮ್ಮ ದಿನವನ್ನು ನೀವು ಮೀರಿದ್ದೀರಿ ಎಂದಾದಲ್ಲಿ, ಖಾರದ ಆಹಾರವನ್ನು ಸೇವಿಸುವುದಾಗಿದೆ. ಈ ಆಹಾರವನ್ನು ಸೇವಿಸುವ ವೇಳೆ ತುಸು ಎಚ್ಚರ ವಹಿಸಿ ಇಲ್ಲದಿದ್ದರೆ ಹೊಟ್ಟೆಯಲ್ಲಿ ಕಿರಿಕಿರಿಯುಂಟಾಗಬಹುದು.

  ನಾರಿನ ಆಹಾರಗಳು

  ನಾರಿನ ಆಹಾರಗಳು

  ನೈಸರ್ಗಿಕವಾಗಿ ಹೆರಿಗೆ ನೋವನ್ನು ಉಂಟುಮಾಡಲು ನಾರಿನ ಆಹಾರ ಸಹಕಾರಿ. ಅಂತೆಯೇ ಹೆಚ್ಚು ಕೂಡ ಈ ಆಹಾರವನ್ನು ಸೇವಿಸುವಂತಿಲ್ಲ. ನಿಮ್ಮ ಆಹಾರವನ್ನು ದ್ರವಗಳೊಂದಿಗೆ ಸಮತೋಲನ ಮಾಡುವ ಮೂಲಕ ನಾರಿನ ಆಹಾರಗಳನ್ನು ಸೇವಿಸಿ.

  ರಸ್‎ಬೆರ್ರಿ ಚಹಾ

  ರಸ್‎ಬೆರ್ರಿ ಚಹಾ

  ಗರ್ಭಾಶಯದ ಕುಗ್ಗುವಿಕೆಗೆ ಸಹಕಾರಿಯಾಗಿರುವ ಅಂಶವನ್ನು ರಸ್‎ಬೆರ್ರಿ ಚಹಾ ಹೊಂದಿದೆ. ಈ ರುಚಿಕರ ಚಹಾವನ್ನು ನೀವು ಸೇವಿಸಿದೊಡನೆ ನಿಮಗೆ ಇದರ ಫಲಿತಾಂಶ ತಿಳಿಯುತ್ತದೆ. ಅಂತೆಯೇ ಇದನ್ನು ಹೆಚ್ಚು ಸೇವಿಸಲೂ ಹೋಗದಿರಿ. ಟೀ ಸಿರಪ್‎ಗೆ ಇದನ್ನು ಪರಿವರ್ತಿಸಿದಾಗ ಇದು ಶಾಖ ಪ್ರೇರಿತ ಹಣ್ಣಾಗಿದೆ.

  ಚೈನೀಸ್ ಫುಡ್

  ಚೈನೀಸ್ ಫುಡ್

  ಸಾಸ್ ಮಿಳಿತವಾಗಿರುವ, ಮೆಣಸಿನ ಸುವಾಸನೆಯುಕ್ತ, ಮಸಾಲೆ ಭರಿತ ಈ ಚೈನೀಸ್ ಆಹಾರ ಖಂಡಿತ ನಿಮ್ಮನ್ನು ಪ್ರಸವ ಕೋಣೆಗೆ ಧಾವಿಸುವಂತೆ ಮಾಡುತ್ತದೆ. ಚೈನೀಸ್ ಆಹಾರ ತಾಯಿಗೆ ಹೆಚ್ಚು ವಿಶ್ರಾಂತಿಯನ್ನು ಒದಗಿಸಿ ಕುಗ್ಗುವಿಕೆ ಸಂದರ್ಭದಲ್ಲಿ ಆಕೆಯನ್ನು ನಿರಾಳವಾಗಿಸುತ್ತದೆ.

  ಬದನೆ

  ಬದನೆ

  ಆರೋಗ್ಯಕರ ತರಕಾರಿ ಎಂದೆನಿಸಿರುವ ಬದನೆಗೆ ನೀವು ತುಳಿಸಿ ಮತ್ತು ಓರೆಗಾನೊ ಸೇರಿಸಿದಲ್ಲಿ ಇದು ಹೆರಿಗೆ ಪ್ರಚೋದಕ ಆಹಾರವಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ದಿನಾಂಕ ದಾಟಿದ ನಂತರವೂ ಹೆರಿಗೆ ನೋವು ಉಂಟಾಗಲು ಈ ಆರೋಗ್ಯಕರ ತರಕಾರಿ ಸೇವನೆಯನ್ನು ಮಾಡಬಹುದಾಗಿದೆ.

   

  English summary

  Labour Inducing Foods & Drinks

  Pregnancy becomes a little difficult when the belly grows bigger during the last trimester. This is the phase in which even finding your feet hidden beneath your bump becomes a hide-and-seek game. When you are almost at your due date, signs of irritability and impatience in seeing your baby crawl up. But, it is during this time of your pregnancy where you need to relax, breathe and take it easy. Today, Boldsky shares with you some of the safest and most effective labour-inducing foods you can try out.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more