Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಡವಾಗಿ ಗರ್ಭಧರಿಸಿದರೆ ಆಯಸ್ಸು ಹೆಚ್ಚುತ್ತದೆಯೇ?
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ತಮ್ಮ ಫಲಿತಾವಧಿಯ ಕಡೆಯ ವರ್ಷಗಳಲ್ಲಿ ಮಕ್ಕಳನ್ನು ಹೆತ್ತ ಮಹಿಳೆಯರು ಹೆಚ್ಚು ವರ್ಷ ಜೀವಿಸಿರುತ್ತಾರೆಂದು ಕಂಡುಕೊಳ್ಳಲಾಗಿದೆ. ಅಂದರೆ ಮೂವತ್ತರ ಬಳಿಕ ಮತ್ತು ನಲವತ್ತರ ಆಸುಪಾಸಿನಲ್ಲಿ ಹೆತ್ತ ಮಹಿಳೆಯರ ಆಯಸ್ಸು ಹೆಚ್ಚುತ್ತದೆ ಎಂದು ಹೇಳಲಾಗಿದೆ.

ಇದುವರೆಗೆ ತಡವಾಗಿ ಗರ್ಭಧರಿಸುವುದು ಆರೋಗ್ಯಕ್ಕೆ ಮಾರಕ ಎಂದೇ ಹೆಚ್ಚಿನವರು ತಿಳಿದುಕೊಂಡಿದ್ದರು. ಆದರೆ ಈ ನಂಬಿಕೆಯನ್ನು ಹೊಸ ಸಂಶೋಧನೆ ಬುಡಸಹಿತ ಅಲ್ಲಾಡಿಸುತ್ತಿದೆ. ಆದರೆ ಎಷ್ಟೋ ಮಹಿಳೆಯರಿಗೆ ಈ ವಿಷಯ ಒಂದು ಆಶಾಕಿರಣವಾಗಿ ಗೋಚರಿಸಿದೆ.
ಈ ಸಂಶೋಧನೆಯಲ್ಲಿ ಭಾಗಿಯಾದ ತಜ್ಞರ ಪ್ರಕಾರ 33 ವಯಸ್ಸಿನಲ್ಲಿ ಕಡೆಯ ಬಾರಿ ಗರ್ಭ ಧರಿಸಿದ ಮಹಿಳೆಯರು ತೊಂಭತ್ತು ವರ್ಷ ತೊಂಭತ್ತೈದು ವರ್ಷ ಆಯಸ್ಸು ಹೊಂದಿರುತ್ತಾರೆ. ಇದೇ ಹೊತ್ತಿನಲ್ಲಿ ಇಪ್ಪತ್ತೊಂಬತ್ತು ವರ್ಷಕ್ಕೂ ಮುನ್ನ ಗರ್ಭಧರಿಸಿದ ಮಹಿಳೆಯರು ತೊಂಬತ್ತಕ್ಕೂ ಕಡಿಮೆ ವರ್ಷ ಆಯಸ್ಸು ಹೊಂದಿರುತ್ತಾರೆ.
ಈ ಸಂಶೋಧನೆಯಲ್ಲಿ 450ಕ್ಕೂ ಹೆಚ್ಚು ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಯಿತು. ನಿಖರ ಪರಿಗಣನೆಗಾಗಿ ಆನುವಂಶಿಕ ಗುಣ ಮತ್ತು ಮಾಹಿತಿಗಳನ್ನೂ ಪರಿಗಣಿಸಲಾಗಿತ್ತು.
ವೈಜ್ಞಾನಿಕ ವಿಶ್ಲೇಷಣೆಯಿಂದ ತಡವಾಗಿ ಹೆರಿಗೆಯಾದ ಮಹಿಳೆಯರು ಹೆಚ್ಚು ಆಯಸ್ಸು ಹೊಂದಿರುತ್ತಾರೆ ಎಂದು ಕಂಡುಕೊಳ್ಳಲಾಯಿತು. ಆದರೆ ತಡವಾಗಿ ಹೊಂದುವ ಗರ್ಭಾವಸ್ಥೆಗೆ ತನ್ನದೇ ಆದ ಜಟಿಲತೆಗಳಿವೆ. ವಯಸ್ಸು ಹೆಚ್ಚಿದಂತೆಯೇ ಫಲವತ್ತತೆಯೂ ಕಡಿಮೆಯಾಗುತ್ತಾ ಹೋಗುವ ಕಾರಣ ಗರ್ಭ ಧರಿಸುವ ಸಾಧ್ಯತೆಯೇ ಕಡಿಮೆಯಾಗುತ್ತಾ ಹೋಗಬಹುದು.
ಅಲ್ಲದೇ ಈ ವಯಸ್ಸಿನಲ್ಲಿ ಹೆಚ್ಚಿದ ತೂಕ, ಶಿಥಿಲವಾದ ಮೂಳೆಗಳು, ಹಾರ್ಮೋನುಗಳ ಏರುಪೇರು ಮೊದಲಾದವು ಮಹಿಳೆಯ ಮತ್ತು ಮಗುವಿನ ಆರೋಗ್ಯದ ಮೇಲೆ ಗಾಢವಾದ ಪರಿಣಾಮವನ್ನೂ ಬೀರಬಹುದು. ಆದ್ದರಿಂದ ತಡವಾಗಿ ಗರ್ಭಧರಿಸುವ ಇರಾದೆಯನ್ನು ತಾವೇ ತೆಗೆದುಕೊಳ್ಳುವ ಬದಲು ಕುಟುಂಬವೈದ್ಯರ ಸಲಹೆ ಮೇರೆಗೆ ಪಾಲಿಸುವುದೇ ಕ್ಷೇಮ.
ತಡ ವಯಸ್ಸಿನಲ್ಲಿ ಗರ್ಭಧಾರಣೆ, ಹೃದಯಕ್ಕೆ ಅಪಾಯವಿದೆಯೇ?
ನಲವತ್ತರ ಬಳಿಕದ ಗರ್ಭಧಾರಣೆ: ಅಪಾಯ ಕಟ್ಟಿಟ್ಟ ಬುತ್ತಿ



Click it and Unblock the Notifications




