Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಗರ್ಭಾವಸ್ಥೆಯಲ್ಲಿ ಹಿತಮಿತವಾಗಿ ಎಳ್ಳು ಸೇವನೆ ಆರೋಗ್ಯಕರ
ಮಹಿಳೆಯರ ಜೀವನದ ಪ್ರಮುಖ ಘಟ್ಟವೆಂದರೆ ಗರ್ಭ ಧರಿಸುವುದು. ಮತ್ತೊಂದು ಜೀವವನ್ನು ತನ್ನೊಳಗೆ ಹೊತ್ತುಕೊಂಡು ಒಂಭತ್ತು ತಿಂಗಳು ಪಾಲನೆ ಮಾಡಬೇಕಾದ ಮಹಿಳೆ ತನ್ನ ಆಹಾರದ ಬಗ್ಗೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಆಕೆ ಸೇವಿಸುವ ಆಹಾರವು ಮಗು ಹಾಗೂ ಆಕೆಯ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರಿಂದ ಆಹಾರದ ಆಯ್ಕೆ ಪ್ರಮುಖವಾಗಿದೆ.
ಮಹಿಳೆಯರು ಗರ್ಭಧಾರಣೆ ವೇಳೆ ಎಳ್ಳಿನ ಸೇವನೆ ಮಾಡಬಾರದು. ಅದರಿಂದ ಗರ್ಭಪಾತವಾಗುತ್ತದೆ ಎನ್ನುತ್ತಾರೆ. ಆದರೆ ಇದು ಸುಳ್ಳು ಮತ್ತು ಇದಕ್ಕೆ ಯಾವುದೇ ಆಧಾರವಿಲ್ಲ. ಗರ್ಭಧಾರಣೆ ವೇಳೆ ಮಹಿಳೆಯರು ಎಳ್ಳನ್ನು ಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದರಲ್ಲಿ ಕ್ಯಾಲ್ಸಿಯಂ, ಅಮಿನೋ ಆ್ಯಸಿಡ್, ಪ್ರೋಟೀನ್, ವಿಟಮಿನ್ ಮತ್ತು ಕಬ್ಬಿನಾಂಶ ಸಹಿತ ಹಲವಾರು ರೀತಿಯ ಪೋಷಕಾಂಶಗಳಿವೆ.

ಗರ್ಭಧಾರಣೆ ವೇಳೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಮಲಬದ್ಧತೆಯನ್ನು ಇದು ನಿವಾರಣೆ ಮಾಡುವುದು. ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಎಳ್ಳಿನಲ್ಲಿ ಗರ್ಭಿಣಿಯರಿಗೆ ಬೇಕಾಗುವಂತಹ ಕ್ಯಾಲ್ಸಿಯಂ ಇದೆ. ಇದು ಹಲ್ಲಿನ ಅನಾರೋಗ್ಯವನ್ನು ದೂರ ಮಾಡಿ ಹಲ್ಲನ್ನು ದೃಢವಾಗಿಸುತ್ತದೆ. ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಎಳ್ಳಿನ ಎಣ್ಣೆ ಎಷ್ಟು ಒಳ್ಳೆಯದು?
ಗರ್ಭಧಾರಣೆ ವೇಳೆ ಎಳ್ಳನ್ನು ಹಿತಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಗರ್ಭಿಣಿ ಮಹಿಳೆಯರು ಎಳ್ಳಿನ ಮಿತವಾದ ಸೇವನೆಯಿಂದ ಯಾವ ರೀತಿಯ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಮುಂದೆ ಓದಿ ಆರೋಗ್ಯ ಲಾಭ ತಿಳಿಯಿರಿ.
ಪೋಷಕಾಂಶಗಳಿಂದ ಸಮೃದ್ಧ
ಕ್ಯಾಲ್ಸಿಯಂ, ಅಮಿನೋ ಆ್ಯಸಿಡ್, ಪ್ರೋಟೀನ್, ವಿಟಮಿನ್ ಬಿ, ಸಿ,ಇ ಮತ್ತು ಕಬ್ಬಿನಾಂಶ ಎಳ್ಳಿನಲ್ಲಿದೆ. ಇದು ಗರ್ಭಿಣಿ ಮಹಿಳೆಯರಿಗೆ ಪ್ರಮುಖವಾಗಿ ಬೇಕಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವುದು
ಎಳ್ಳಿನಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿ ಮತ್ತು ಆರೋಗ್ಯವನ್ನು ವೃದ್ಧಿಸುವುದು. ಎಳ್ಳಿನ ಸೇವನೆಯಿಂದ ಗರ್ಭಿಣಿ ಮಹಿಳೆಯರು ಜ್ವರ ಮತ್ತು ಶೀತಕ್ಕೆ ಒಳಗಾಗುವುದು ತಪ್ಪುವುದು.
ಮೂತ್ರಶಂಕೆ ಸಮಸ್ಯೆ ನಿವಾರಣೆ
ಗರ್ಭಧಾರಣೆ ವೇಳೆ ಆಗಾಗ ಮೂತ್ರಶಂಕೆಯಾಗುತ್ತಿರುತ್ತದೆ. ಎಳ್ಳಿನ ಸೇವನೆಯಿಂದಾಗಿ ಈ ಸಮಸ್ಯೆಯನ್ನು ನಿವಾರಿಸಬಹುದು. ಎಳ್ಳಿನ ಸೇವನೆಯಿಂದ ಸಾಮಾನ್ಯವಾಗಿ ಮೂತ್ರವು ಹೊರಹೋಗುವಂತೆ ಮಾಡುವುದು.
ಶಕ್ತಿ ಹೆಚ್ಚಳ
ಎಳ್ಳು ನೈಸರ್ಗಿಕವಾಗಿ ಶಕ್ತಿವರ್ಧಕವಾಗಿದೆ. ಇದು ಸ್ನಾಯುಗಳು ಮತ್ತು ನರಗಳ ಶಕ್ತಿಯನ್ನು ವೃದ್ಧಿಸುವುದು. ಇದು ದೇಹವು ಫಿಟ್ ಮತ್ತು ಶಕ್ತಿಯನ್ನು ಪಡೆಯುವುದು. ಇದು ಮಾನಸಿಕ ದೌರ್ಬಲ್ಯವನ್ನು ನಿವಾರಿಸುವುದು.



Click it and Unblock the Notifications


