For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ಶೀತ-ಕೆಮ್ಮಿಗೆ ಫಲಪ್ರದ ಸಲಹೆ

By Arshad
|

ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಸುಂದರ ಕನಸು. ಆ ಕನಸು ನನಸಾಗುವ ಅವಧಿಯಲ್ಲಿ ಶರೀರ ಹಲವು ಬದಲಾವಣೆಗಳಿಗೆ ಒಳಪಡುತ್ತದೆ. ಇದಕ್ಕೆ ಅನುಸಾರವಾಗಿ ಆರೋಗ್ಯದಲ್ಲಿ ಏರುಪೇರು ಸಹಾ ಸಹಜ. ಅಂತೆಯೇ ಆರೋಗ್ಯದ ಬಗ್ಗೆ ಈ ಹೊತ್ತಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಒಂಬತ್ತು ತಿಂಗಳ ಗರ್ಭಾವಸ್ಥೆಯನ್ನು ತ್ರೈಮಾಸಿಕವಾಗಿ ವಿಭಾಜಿಸುವ ವೈದ್ಯರು ಪ್ರತಿ ತ್ರೈಮಾಸಿಕಕ್ಕೂ ಪ್ರತ್ಯೇಕ ಪರೀಕ್ಷೆ ಮತ್ತು ಔಷಧಿಗಳನ್ನು ಸಲಹೆ ಮಾಡುತ್ತಾರೆ.

ಅದರಲ್ಲೂ ಮೂರನೆಯ ತ್ರೈಮಾಸಿಕ ಬಹು ಮುಖ್ಯವಾಗಿದ್ದು ಮಗುವಿನ ಬೆಳವಣಿಗೆ ಈಗ ಗುರುತರವಾಗಿದ್ದು ದೇಹ ಹೆಚ್ಚಿನ ಆದ್ಯತೆಯನ್ನು ಇದಕ್ಕೆ ನೀಡುವ ಕಾರಣ ಉಳಿದ ಕೆಲಸಗಳಿಗೆ ಕೊಂಚ ವಿರಾಮ ನೀಡಲಾಗುತ್ತದೆ. ಈ ಕಾರಣಕ್ಕೆ ಮೂರನೆಯ ತ್ರೈಮಾಸಿಕದ ಅವಧಿಯಲ್ಲಿಯೇ ನಿಮ್ಮ ರೋಗ ನಿರೋಧಕ ಶಕ್ತಿ ಕೊಂಚ ಕುಂಠಿತವಾಗುತ್ತದೆ. ಆದ್ದರಿಂದ ಶೀತ, ಕೆಮ್ಮು ನೆಗಡಿಗಳು ಇತರ ಹೊತ್ತಿಗಿಂತ ಬೇಗನೇ ಆವರಿಸುತ್ತವೆ. ಆದ್ದರಿಂದ ಆರನೆಯ ತಿಂಗಳಿನಿಂದ ಹೆರಿಗೆಯಾಗುವವರೆಗೆ ತಾಯಿಯಾಗುವವಳು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಗರ್ಭಿಣಿಯರಿಗೆ ಕಾಡುವ ವಾಂತಿಯ ಸಮಸ್ಯೆ: ಫಲಪ್ರದ ಮನೆಮದ್ದು

ರೋಗ ನಿರೋಧಕ ಶಕ್ತಿ ಉಡುಗಿರುವ ಕಾರಣ ಗಾಳಿಯ ಮೂಲಕ ಹರಡಲ್ಪಡುವ ಶಿಲೀಂಧ್ರದ ಸೋಂಕು, ಮೂತ್ರನಾಳದ ಸೋಂಕು, ಕೆಮ್ಮು, ನೆಗಡಿ, ಶೀತ ಮೊದಲಾದವು ಸುಲಭವಾಗಿ ಆವರಿಸಿಬಿಡುತ್ತವೆ. ಅದರಲ್ಲೂ ಶೀತ ಮತ್ತು ಕೆಮ್ಮು ಸಾಮಾನ್ಯ. ಇದನ್ನು ಎದುರಿಸಲು ಉತ್ತಮ ಮನೆಮದ್ದುಗಳಿವೆ. ಆಲೋಪಥಿಯ ತೀಕ್ಷ್ಣ ಔಷಧಿಗಳನ್ನು ಬಳಸಿದರೆ ಈಗಾಗಲೇ ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳಿಗೆ ಇವು ವ್ಯತಿರಿಕ್ತವಾಗಿ ಪರಿಣಾಮ ಬೀರಬಹುದು.

ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವ ಕಾರಣ ಮನೆಮದ್ದೇ ಇದಕ್ಕೆ ಸೂಕ್ತ ಪರಿಹಾರವಾಗಿದೆ. ಇತರ ಔಷಧಿಗಳಿಗಿಂತ ಇವು ಕೊಂಚ ನಿಧಾನವಾಗಿ ಪರಿಣಾಮ ಬೀರುತ್ತವಾದರೂ ನಿಮಗೆ ಮತ್ತು ಬೆಳೆಯುತ್ತಿರುವ ಕಂದನಿಗೆ ಇವು ಹೆಚ್ಚು ಸೂಕ್ತವಾಗಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ:

ಕಟ್ಟಿರುವ ಮೂಗಿಗೆ ಉಪ್ಪುನೀರಿನ ಚಿಕಿತ್ಸೆ

ಕಟ್ಟಿರುವ ಮೂಗಿಗೆ ಉಪ್ಪುನೀರಿನ ಚಿಕಿತ್ಸೆ

ಸಾಮಾನ್ಯವಾಗಿ ಶೀತದಿಂದ ಮೂಗು ಕಟ್ಟಿಬಿಡುತ್ತದೆ. ಇದಕ್ಕೆ ಉಪ್ಪುನೀರಿನ ದ್ರಾವಣ ಉತ್ತಮ ಪರಿಹಾರವಾಗಿದೆ. ಇದು saline nasal drops ಎಂಬ ಹೆಸರಿನಲ್ಲಿ ಔಷಧಿ ಅಂಗಡಿಗಳಲ್ಲಿ ಲಭ್ಯವಿದೆ. ಇದು ಒಂದು ಸುರಕ್ಷಿತ ವಿಧಾನವಾಗಿದ್ದು ಮಗುವಿಗೂ ಯಾವುದೇ ಅಪಾಯವಿಲ್ಲ.

ಹಬೆಯ ಚಿಕಿತ್ಸೆ

ಹಬೆಯ ಚಿಕಿತ್ಸೆ

ಶೀತದ ಕಾರಣ ಮೂಗು ಕಟ್ಟಿಕೊಂಡಿದ್ದರೆ ಹಬೆಯ ಉಪಚಾರವೂ ನಿಮಗೆ ಉತ್ತಮವಾಗಿದೆ. ಆದರೆ ಇದಕ್ಕೆ ಕೆಲವರು ವಿಕ್ಸ್ ಮೊದಲಾದ ದ್ರಾವಣ ಅಥವಾ ಎಣ್ಣೆಗಳನ್ನು ಸೇರಿಸಿ ಹೆಚ್ಚಿನ ಪರಿಣಾಮ ಅಪೇಕ್ಷಿಸುತ್ತಾರೆ. ಇದು ನಿಮಗೆ ಸರ್ವಥಾ ಸಲ್ಲದು. ನಿಮ್ಮ ಆರೋಗ್ಯಕ್ಕೆ ಕೇವಲ ನೀರಿನ ಹಬೆ ಮಾತ್ರ ಸಾಕು. ಒಂದು ವೇಳೆ ಅಗತ್ಯವೆನಿಸಿದರೆ ನಿಮ್ಮ ವೈದ್ಯರೇ ಇದಕ್ಕೆ ಏನು ಸೇರಿಸಬೇಕೆಂದು ಸಲಹೆ ನೀಡುತ್ತಾರೆ.

ಸಾಕಷ್ಟು ವಿಶ್ರಾಂತಿ ಪಡೆಯಿರಿ

ಸಾಕಷ್ಟು ವಿಶ್ರಾಂತಿ ಪಡೆಯಿರಿ

ಮೂರನೆಯ ತ್ರೈಮಾಸಿಕದಲ್ಲಿ ಆವರಿಸುವ ಶೀತ ಹೆಚ್ಚು ಆಯಾಸವನ್ನುಂಟುಮಾಡುತ್ತದೆ. ಅದರಲ್ಲೂ ನೀವು ಉದ್ಯೋಗಸ್ಥೆಯಾಗಿದ್ದರೆ ಕೆಲಸದ ಸಮಯದಲ್ಲಿ ಆರಾಮ ತೆಗೆದುಕೊಳ್ಳಲೂ ಸಾಧ್ಯವಾಗದಿರಬಹುದು. ಆದರೆ ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಆರಾಮದ ಅವಶ್ಯಕತೆ ಇದ್ದು ವಿರಾಮ ಹೆಚ್ಚು ತೆಗೆದುಕೊಳ್ಳಲು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಶುಂಠಿ ಬೆರೆಸಿದ ಟೀ ಕುಡಿಯಿರಿ

ಶುಂಠಿ ಬೆರೆಸಿದ ಟೀ ಕುಡಿಯಿರಿ

ಹಸಿಶುಂಠಿಯ ರಸ ಬೆರೆಸಿದ ಟೀ ಈ ಅವಧಿಯಲ್ಲಿ ಶೀತ ಮತ್ತು ಕೆಮ್ಮು ಕಡಿಮೆಮಾಡಲು ಉತ್ತಮವಾದ ಆಯ್ಕೆಯಾಗಿದೆ. ನಿತ್ಯ ಮೂರರಿಂದ ನಾಲ್ಕು ಕಪ್ ಹಾಲು ಬೆರೆಸದ ಶುಂಠಿಯ ಚಹಾ ಸೇವಿಸುವ ಮೂಲಕ ಮೂರು ಅಥವಾ ನಾಲ್ಕು ದಿನಗಳಲ್ಲಿಯೇ ಶೀತ ಮತ್ತು ಕೆಮ್ಮು ಹತೋಟಿಗೆ ಬರುತ್ತದೆ.

 ಜೇನು ಸೇರಿಸಿದ ಟೀ ಸೇವಿಸಿ

ಜೇನು ಸೇರಿಸಿದ ಟೀ ಸೇವಿಸಿ

ಬಹಳ ಹಿಂದಿನಿಂದಲೂ ಜೇನನ್ನು ಶೀತ ಮತ್ತು ಕೆಮ್ಮಿನ ಪರಿಹಾರವಾಗಿ ಬಳಸಲಾಗುತ್ತಾ ಬರಲಾಗಿದೆ. ನಿಮ್ಮ ನಿತ್ಯದ ಟೀ (ಹಾಲಿಲ್ಲದಿದ್ದರೆ ಉತ್ತಮ) ಕಪ್ ನಲ್ಲಿ ಒಂದು ಚಮಚ ಶುದ್ಧವಾದ ಜೇನುತುಪ್ಪವನ್ನು ಕದಡಿ ದಿನಕ್ಕೆ ನಾಲ್ಕಾರು ಬಾರಿ ಕುಡಿಯುವ ಮೂಲಕವೂ ಕೆಮ್ಮು ಮತ್ತು ಶೀತ ಕಡಿಮೆಯಾಗುತ್ತದೆ. ಅದರಲ್ಲೂ ಕಫ ಕಟ್ಟಿಕೊಂಡಿದ್ದರೆ ಒಂದು ಲೋಟ ಬರೆಯ ಬಿಸಿನೀರಿಗೆ ಒಂದು ಚಮಚ ಜೇನು ಸೇರಿಸಿ ಎಷ್ಟು ಸಾಧ್ಯವೋ ಅಷ್ಟು ಬಿಸಿಯಾಗಿ ಕುಡಿಯಿರಿ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದಿದ್ದು ಮಗುವಿಗೂ ನಿರಪಾಯಕಾರಿಯಾಗಿದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Ways To Treat Cough And Cold During Pregnancy

Pregnancy is the most exciting phase in the life of any woman. While experiencing many things that are new to your womanhood, it is equally important to take good care of your health. By the sixth month of your pregnancy, you complete the second trimester and enter the crucial third trimester. Be careful to keep your baby safe during that period. Since you are carrying a new life in your womb, your body tends to suppress the immune system to a certain level to keep the baby safe.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X