For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ತರಕಾರಿ-ಹಣ್ಣುಗಳಿಗೆ ಹೆಚ್ಚಿನ ಆದ್ಯತೆ ನೀಡಿ

|

ಸ್ತ್ರೀಯೋರ್ವಳ ಜೀವನದಲ್ಲಿ ಗರ್ಭಿಣಿಯಾಗುವುದಕ್ಕಿ೦ತಲೂ ಅಪೂರ್ವವಾದ ರೋಚಕ ಕ್ಷಣವು ಬೇರೆ ಯಾವುದು ತಾನೇ ಇರಬಹುದು ಹೇಳಿ? ಗರ್ಭಿಣಿಯಾಗಿರುವಾಗ ಸ್ತ್ರೀಯೋರ್ವಳು ಕೇವಲ ತನ್ನ ದೇಹಾರೋಗ್ಯದ ಕಡೆಗಷ್ಟೇ ಗಮನವನ್ನಿಟ್ಟರೆ ಸಾಲದು, ಜೊತೆಗೆ ಆಕೆಯು ತನ್ನ ಹೊಟ್ಟೆಯಲ್ಲಿ ಹೊತ್ತಿರುವ ಆ ಪುಟ್ಟ ಮಗುವಿನ ಆರೋಗ್ಯದ ಕುರಿತಾದ ಕಾಳಜಿಯೂ ಆಕೆಗೆ ಅತ್ಯ೦ತ ಅಗತ್ಯವಾಗಿ ಇರಲೇಬೇಕು ಅಲ್ಲವೇ..?

ಗರ್ಭಿಣಿ ಎಂದು ಗೊತ್ತದ ತಕ್ಷಣ ಆ ಮಹಿಳೆಗೆ ಮನೆಯವರು ಮತ್ತು ವೈದ್ಯರು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಗರ್ಭಿಣಿಯರು ಹೆಚ್ಚು ಮಾನಸಿಕ ಒತ್ತಡ ತಂದುಕೊಳ್ಳಬಾರದು ಹಾಗೂ ತಿಂಗಳಿಗೆ ಸರಿಯಾಗಿ ವೈದ್ಯರ ಬಳಿ ಸರಿಯಾಗಿ ಪರೀಕ್ಷೆ ಮಾಡಿಸಬೇಕು ಈ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ.

ಇದರ ಜೊತೆಗೆ ಗರ್ಭಿಣಿಯರು ನಿಮ್ಮ ಆಹಾರಕ್ರಮದಲ್ಲಿ ಸರಿಯಾದ, ಸತ್ವಯುತ ಪದಾರ್ಥಗಳನ್ನು ಸೇರಿಸಿಕೊoಡಿರಬೇಕು ಹಾಗೂ ಯಾವಾಗಲೂ ಆರೋಗ್ಯದಾಯಕ ವಸ್ತುಗಳನ್ನೇ ಸೇವಿಸಬೇಕು, ಎಂಬುದನ್ನು ಮಾತ್ರ ಮರೆಯಬಾರದು.. ಬನ್ನಿ ಗರ್ಭಿಣಿಯರಿ ಸೂಕ್ತವಾದ ಆಹಾರಕ್ರಮಗಳನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ...

ಹಸುವಿನ ಹಾಲು
 

ಹಸುವಿನ ಹಾಲು

ಹಸುವಿನ ಹಾಲಿನಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಲಭ್ಯವಿದ್ದು ಮಗುವಿನ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿದೆ. ಅಲ್ಲದೇ ಮಾನಸಿಕವಾಗಿ ಶಾಂತವಾಗಿರಲು ಹಾಗೂ ಉದ್ವೇಗಗೊಳ್ಳದೇ ಇರಲು ರಕ್ತದಲ್ಲಿ ಸೆರೋಟೋನಿನ್ ಎಂಬ ಕಿಣ್ವ ಉತ್ಪತ್ತಿಯಾಗಲೂ ಹಾಲು ಸಹಕಾರಿಯಾಗಿದೆ. ಹಾಗಾಗಿ ಗರ್ಭಿಣಿ ಮಹೆಳೆಯರು ಹಸುವಿನ ಹಾಲಿಗೆ ಸಕ್ಕರೆ ಹಾಕದೇ ಬಿಸಿ ಮಾಡಿ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಆರೋಗ್ಯಕ್ಕೆ ಸಹಕಾರಿಯಾಗಲಿದೆ

ಒಣದ್ರಾಕ್ಷಿ

ಒಣದ್ರಾಕ್ಷಿ

ಒಡಲ ಕಂದನಿಗೆ ಅಗತ್ಯವಿರುವ ಆಹಾರ ಮತ್ತು ತ್ಯಾಜ್ಯಗಳು ತಾಯಿಯ ಮೂಲಕವೇ ಆಗಬೇಕಾದುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ವಾಯುಗಳು ಉತ್ಪನ್ನವಾಗಿ ಉರಿ ತರಿಸುತ್ತದೆ. ಜೊತೆಗೇ ಅನ್ನನಾಳದ ಮೂಲಕ ಈ ವಾಯು ಹೊರಬರಲು ಪ್ರಯತ್ನಿಸುವ ಕಾರಣ ವಾಕರಿಕೆ, ಹುಳಿತೇಗು ಮೊದಲಾದವು ಪ್ರಾರಂಭವಾಗುತ್ತವೆ. ಒಣದ್ರಾಕ್ಷಿಯಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶ ಹೇರಳವಾಗಿರುವುದರಿಂದ ಈ ತೊಂದರೆಯನ್ನು ಸಮರ್ಥವಾಗಿ ನಿವಾರಿಸಬಹುದು. ಹಾಗಾಗಿ ಗರ್ಭಿಣಿಯರು ತಮ್ಮ ದಿನ ನಿತ್ಯ ಆಹಾರಕ್ರಮದಲ್ಲಿ ಕೆಲವು ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು

ಸೀಬೆ ಹಣ್ಣಿನ ಕರಾಮತ್ತು

ಸೀಬೆ ಹಣ್ಣಿನ ಕರಾಮತ್ತು

ಗರ್ಭಿಣಿ ಸ್ತ್ರೀಯರಲ್ಲಿ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಲ್ಲಿರಬೇಕಾದುದು ಅತೀ ಮುಖ್ಯವಾಗಿರುತ್ತದೆ. ಏಕೆ೦ದರೆ, ಗರ್ಭಿಣಿ ಸ್ತ್ರೀಯರ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಿ೦ದಿದ್ದಲ್ಲಿ, ಅದು ಅವರಿಗೆ ನಾನಾ ತೆರನಾದ ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಯು ಸಮೃದ್ಧವಾಗಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅದನ್ನು ಬಲಯುತಗೊಳಿಸುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷವಾಗಬಹುದು, ಎನ್ನುವ ಗಾದೆ ಮಾತಿನಂತೆ ಯಾವುದೇ ಹಣ್ಣಿನ ಅತಿಯಾದ ಸೇವನೆಯು ಗರ್ಭಿಣಿ ಸ್ತ್ರೀಯ ಪಾಲಿಗೆ ಹಾನಿಕರವೆಂಬುದನ್ನು ಮರೆಯದಿರಿ

ಬಸಳೆಸೊಪ್ಪು
 

ಬಸಳೆಸೊಪ್ಪು

ಗರ್ಭಾವಸ್ಥೆಯಲ್ಲಿ ಎಲ್ಲ ಬಗೆಯ ಹಸಿರು ಸೊಪ್ಪುಗಳು ಅವಶ್ಯಕವಾದರೂ ಬಸಳೆಸೊಪ್ಪಿನ ಮಹತ್ವವೇ ವಿಭಿನ್ನವಾದುದು. ಇದರಲ್ಲಿರುವ ಅತ್ಯಧಿಕ ವಿಟಮಿನ್ ಎ ಗರ್ಭಿಣಿಯರ ಆರೋಗ್ಯಕ್ಕೆ ಮಾತ್ರವಲ್ಲದೆ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಪುಟ್ಟ ಕಂದಮ್ಮನ ಆರೋಗ್ಯಕ್ಕೂ ಅತ್ಯವಶ್ಯಕವಾಗಿದೆ. ಇದರಲ್ಲಿರುವ ಫಾಲಿಕ್ ಆಮ್ಲ ರಕ್ತದ ಹೊಸ ಕೋಶಗಳು ಬೆಳೆಯಲು ಸಹಾಯ ಮಾಡುವುದರಿಂದ, ಮುಂದೆ ಹೆರಿಗೆ ಸಮಯದಲ್ಲಿ ಇದು ಸ್ತನದಲ್ಲಿ ಹಾಲು ಉತ್ಪತ್ತಿಯಾಗಲೂ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಬಸಳೆಸೊಪ್ಪಿನಲ್ಲಿರುವ ಮ್ಯಾಂಗನೀಸ್ ಅಂಶ ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರ ಮೂಳೆಯ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತುಳಸಿ ಚಹಾ

ತುಳಸಿ ಚಹಾ

ತನ್ನ ಮತ್ತು ಮಗುವಿನ ಆರೋಗ್ಯವನ್ನು ಕುರಿತು ಹೆಚ್ಚಿನ ಕಾಳಜಿಯ ಬಗ್ಗೆ ಮುತುವರ್ಜಿಯನ್ನು ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಕೂಡ ವಹಿಸಬೇಕಾಗುತ್ತದೆ. ತಮ್ಮ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಬೀರುವ ಕೆಲವೊಂದು ಪಾನೀಯಗಳು ಮತ್ತು ಆಹಾರವನ್ನು ತೆಗೆದುಕೊಳ್ಳುವುದು ಕೂಡ ಹಾನಿಕರವಾಗಿರುತ್ತದೆಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಗರ್ಭಿಣಿ ಸ್ತ್ರೀಗೆ ಹೆಚ್ಚು ಶಿಫಾರಸು ಮಾಡಿದ ಪಾನಿಯವೆಂದರೆ ಗಿಡಮೂಲಿಕಾಯುಕ್ತ ತುಳಸಿ ಚಹಾ.

ಹಾಗಾಗಿ ಒಂದು ಕಪ್‌ನಷ್ಟು ತುಳಸಿ ಚಹಾವನ್ನು ತಯಾರಿಸುವುದು ಕಷ್ಟದ ಕೆಲಸವೇನಲ್ಲ. ಕೆಲವರ ಮನೆಯಲ್ಲಿ ಧಾರ್ಮಿಕ ನಂಬಿಕೆಗಳಿಗಾಗಿ ಪೂಜೆ ಪುನಸ್ಕಾರಕ್ಕಾಗಿ ತುಳಸಿ ಗಿಡವನ್ನು ಬೆಳೆಸಿರುತ್ತಾರೆ. ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ, ತದನಂತರ ತಾಜಾ ತುಳಸಿ ಒಂದು ಎರಡು ಎಲೆಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ, ಎರಡು ನಿಮಿಷದ ಬಳಿಕ ಬಿಸಿ ಬಿಸಿಯಾಗಿ ದಿನನಿತ್ಯ ಸೇವಿಸಿರಿ

ಸೀತಾಫಲ ಹಣ್ಣು

ಸೀತಾಫಲ ಹಣ್ಣು

ಪೋಷಕಾ೦ಶಗಳನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿರುವುದರಿ೦ದ ಸೀತಾಫಲವು ಗರ್ಭಿಣಿ ಸ್ತ್ರೀಯರ ಪಾಲಿಗೆ ಸ೦ಜೀವಿನಿಯ೦ತಿದೆ. ಸೀತಾಫಲವು ಖನಿಜಗಳು, ವಿಟಮಿನ್, ಪ್ರೋಟೀನ್‌ಗಳು, ನಾರಿನ೦ಶ, ಶರ್ಕರಪಿಷ್ಟಗಳು, ಹಾಗೂ ಅವಶ್ಯಕ ಕೊಬ್ಬಿನಾ೦ಶಸಗಳ ರೂಪದಲ್ಲಿ ನಾನಾ ಪೋಷಕ ತತ್ವಗಳನ್ನು ಒಳಗೊ೦ಡಿರುತ್ತದೆ. ಶರೀರಕ್ಕೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಎಲ್ಲಾ ಪೋಷಕ ತತ್ವಗಳು ಯಾವುದಾದರೂ ಒ೦ದು ಹಣ್ಣಿನಲ್ಲಿ ಅಡಕಗೊ೦ಡಿರುವುದೇ ಹೌದೆ೦ದಾದರೆ ಆ ಹಣ್ಣು ಸೀತಾಫಲವಲ್ಲದೇ ಬೇರಾವುದೂ ಅಲ್ಲ.

English summary

Tips healthy eating during pregnancy

During your pregnancy there are a few things that might stress you out, but eating shouldn't be one of them. Unfortunately, all of the advice you hear -- from friends, family, and yes, even total strangers -- about what is and isn't safe during pregnancy is enough to confuse anyone, so during the months of pregnancy can make this difficult, try to eat a well-balanced foods and take prenatal vitamins. Here are some recommendations to keep you and your baby healthy.
Story first published: Wednesday, October 21, 2015, 9:15 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more