For Quick Alerts
ALLOW NOTIFICATIONS  
For Daily Alerts

ಹೆರಿಗೆ ಅವಧಿಯಲ್ಲಿ ಅಪ್ಪಿತಪ್ಪಿಯೂ ಇಂತಹ ತಪ್ಪು ಮಾಡದಿರಿ!

By Arpitha
|

ಸಾಕಷ್ಟು ಮಹಿಳೆಯರು ನಾರ್ಮಲ್ ಡೆಲಿವರಿ ಆಗಬೇಕೆಂದು ಬಯಸುತ್ತಾರೆ. ಆದರೆ ಹರಿಗೆ ನೋವನ್ನು ಹೇಗೆ ತಡೆಯುವುದು ಎಂಬ ಆತಂಕ ಕಾಡುವುದು ಸಹಜ. ಹೆರಿಗೆ ನೋವು ಕಾಣಿಸಿಕೊಂಡಾಗ ನೋವನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆಯೇ ಎಂದು ಪ್ರತಿಯೊಬ್ಬ ಗರ್ಭಿಣಿಯೂ ಚಿಂತಿಸುತ್ತಾಳೆ.

ಇದರ ಜೊತೆಗೆ ಹೆರಿಗೆ ನೋವು ಇನ್ನಷ್ಟು ಹೆಚ್ಚಲು ಏನು ಕಾರಣ ಎಂಬುದನ್ನು ಕೂಡ ತಿಳಿದಿರಬೇಕಾಗುತ್ತದೆ. ಹೆರಿಗೆ ನೋವು ಆರಂಭವಾಗುವ ಮೊದಲು ಇದಕ್ಕೆ ಕಾರಣವನ್ನು ತಿಳಿದುಕೊಂಡರೆ ನೋವನ್ನು ತಡೆಯುವ ಶಕ್ತಿ ದೊರೆಯುತ್ತದೆ. ಪ್ರತಿಯೊಬ್ಬ ಮಹಿಳೆಯೂ ಭಿನ್ನ ಒಬ್ಬರಿಗೆ ಆದಂತೆ ಇನ್ನೊಬ್ಬರಿಗೆ ಆಗುವುದಿಲ್ಲ. ಗರ್ಭಿಣಿಯರೇ ಜೋಕೆ, ಮಲಗುವ ವಿಷಯದಲ್ಲಿ ಎಚ್ಚರ ತಪ್ಪದಿರಿ!

ಹೆರಿಗೆ ನೋವು ಅನುಭವಿಸುವುದು ಸುಲಭದ ಮಾತಲ್ಲ ಆದರೆ ಸಾಕಷ್ಟು ವರ್ಷಗಳಿಂದ ವೈದ್ಯರು ಹೆರಿಗೆ ನೋವನ್ನು ತಡೆದುಕೊಳ್ಳಲು ಬೇರಬೇರೆ ವಿಧಾನಗಳನ್ನು ಕಂಡುಹಿಡಿದಿದ್ದಾರೆ. ಎಪಿಡ್ಯುರಾಲ್ ಡ್ರಿಪ್ ತೆಗೆದುಕೊಳ್ಳುವುದರಿಂದ ಹೆರಿಗೆ ನೋವನ್ನು ಹತೋಟಿಯಲ್ಲಿಟ್ಟು ಮಗುವನ್ನು ಹೆರಲು ಸಹಕರಿಸುತ್ತದೆ.

ಹೆರಿಗೆ ನೋವನ್ನು ಕಡಿಮೆ ಮಾಡುವುದು ಅಥವಾ ತಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಮೊದಲು ಹೆರಿಗೆ ನೋವು ಅಧಿಕ ಎನಿಸಲು ಕಾರಣ ಏನು ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಸೂಕ್ತ. ಇದೇ ವಿಷಯವಾಗಿ ಸಾಕಷ್ಟು ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆಯುತ್ತಲೇ ಇವೆ. ಅಧ್ಯಯನದ ಪ್ರಕಾರ ಅಧಿಕ ಹೆರಿಗೆ ನೋವು ಜೀವಕ್ಕೂ ತೊಂದರೆ ತರಬಹುದು. ಈ ಕೆಳಗೆ ಹೆರಿಗೆ ನೋವು ಹೆಚ್ಚಲು ಕಾರಣಗಳ ಪಟ್ಟಿಮಾಡಲಾಗಿದೆ. ನೀವೂ ಓದಿ ತಿಳಿದುಕೊಳ್ಳಿ...

ಬೆನ್ನು ಒರಗಿ ಮಲಗಿಕೊಳ್ಳುವುದು

ಬೆನ್ನು ಒರಗಿ ಮಲಗಿಕೊಳ್ಳುವುದು

ಇದು ಸಾಮಾನ್ಯವಾಗಿ ಹೆರಿಗೆ ನೋವು ಕಾಣಿಸಿಕೊಂಡಾಗ ಮಾಡುವ ಮೊದಲ ತಪ್ಪು. ನೀವು ಬೆನ್ನನ್ನು ಸಂಪೂರ್ಣವಾಗಿ ಒರಗಿ ನೇರವಾಗಿ ಮಲಗಿಕೊಂಡರೆ ಮಗು ಬೆನ್ನುಹುರಿಯ ಭಾಗಕ್ಕೆ ಹೋಗಿ ರಕ್ತ ಸಂಚಲನಕ್ಕೆ ಅಡ್ಡಿಯಾಗುತ್ತದೆ. ಗುರುತ್ವಾಕರ್ಷಣೆ ಹೆಚ್ಚಿ ಮಗುವನ್ನು ಹೊರಗೆ ತರಲು ಕೂಡ ಕಷ್ಟವಾಗುತ್ತದೆ.

ಅತಿಯಾಗಿ ಹೆದರಿಕೊಳ್ಳುವುದು

ಅತಿಯಾಗಿ ಹೆದರಿಕೊಳ್ಳುವುದು

ಹೆರಿಗೆ ನೋವು ತಡೆದುಕೊಳ್ಳದಂತಾಗಲು ಹೆದರಿಕೆ ಕೂಡ ಒಂದು ಕಾರಣ. ಅತಿಯಾಗಿ ಹೆದರಿಕೊಂಡಾಗ ಉಸಿರಾಟದಲ್ಲಿ ಏರುಪೇರಾಗಿ ನೋವು ಅಧಿಕವಾಗುತ್ತದೆ. ಅಧ್ಯಯನದ ಪ್ರಕಾರ ಅತಿಯಾಗಿ ಹೆದರಿಕೊಳ್ಳುವುದರಿಂದ ಮಗುವಿಗೆ ಜನನ ನೀಡಲು ಕಷ್ಟವಾಗುತ್ತದೆ.ಆದ್ದರಿಂದ ಶಾಂತವಾಗಿರುವುದು ಮುಖ್ಯ.

ಒತ್ತಡದ ವಾತಾವರಣ

ಒತ್ತಡದ ವಾತಾವರಣ

ಹೆರಿಗೆ ನೋವು ಬಂದಾಗ ಸುತ್ತಲಿನ ವಾತಾವರಣ ಕೂಡ ಅಷ್ಟೇ ಮುಖ್ಯ. ಒತ್ತಡರಹಿತವಾದ ವಾತಾವರಣವಿರುವಂತೆ ನೋಡಿಕೊಳ್ಳಿ. ನೀವಿರುವ ವಾತಾವರಣ ಒತ್ತಡ ನೀಡುವಂತಿದ್ದರೆ ಹೆರಿಗೆ ಕೂಡ ಅಷ್ಟೇ ಕಷ್ಟವಾಗುತ್ತದೆ.

ವ್ಯಾಯಾಮದ ಕೊರತೆ

ವ್ಯಾಯಾಮದ ಕೊರತೆ

ಗರ್ಭಿಣಿಯಾದಾಗ ಆರೋಗ್ಯಯುತವಾದ ಜೀವನಶೈಲಿಯನ್ನು ಹೊಂದದಿದ್ದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ.ದೈಹಿಕವಾಗಿ ಚಟುವಟಿಕೆಯುತವಾಗಿ ಇರದಿರುವುದೂ ಕೂಡ ಹೆರಿಗೆ ಕಷ್ಟವಾಗಲು ಕಾರಣವಾಗುತ್ತದೆ.

ನೋವನ್ನು ತಡೆಯುವ ವಿಧಾನ

ನೋವನ್ನು ತಡೆಯುವ ವಿಧಾನ

ನೋವನ್ನು ತಡೆಯಲು ಸಂಗಾತಿಯ ನೆರವು ಕೂಡ ಅಷ್ಟೇ ಮುಖ್ಯವಾಗುತ್ತದೆ. ಉಸಿರಾಟದ ವ್ಯಾಯಾಮ ಇನ್ನಿತರ ವಿಧಾನದಿಂದ ನೋವನ್ನು ಕಡಿಮೆ ಮಾಡಬಹುದು.ವಾಟರ್ ಬರ್ತ್ ಕೂಡ ಕಡಿಮೆ ನೋವಿನಲ್ಲಿ ಸುಲಭವಾಗಿ ಹೆರಿಗೆಯಾಗಲು ಅನುಕೂಲವಾಗುತ್ತದೆ.

English summary

Things That Make Labour More Painful

Most women love to have a normal delivery. One of the main things that may come into your mind will be the pain that you have to go through. You may be searching for ideas to reduce pain during labour. On the other hand, you need to educate yourself on the things that make labour painful.
X
Desktop Bottom Promotion