For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದೇ?

By Deepu
|

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂಬ ಹಾಡು ತಾಯ್ತನದ ಮಹತ್ವವನ್ನು ತಿಳಿಸುತ್ತದೆ. ಹೌದು ತಾಯಿಯಾಗುವುದು ಪ್ರತಿಯೊಂದು ಹೆಣ್ಣಿಗೂ ಇರುವ ಮಹತ್ವಾಕಾಂಕ್ಷೆ. ಆಕೆಯ ಜೀವನವನ್ನು ಪರಿಪೂರ್ಣವಾಗಿಸುವ ಒಂದು ಸುಂದರ ಅನುಭವ. ಆದರೂ ಈ ಅವಧಿಯಲ್ಲಿ ಗರ್ಭಿಣಿಯರು ತೀವ್ರ ತೆರನಾದ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಸಮಯದಲ್ಲಿ ಅನಿರೀಕ್ಷಿತವಾಗಿ ನಡೆಯುವ ಸಣ್ಣ-ಪುಟ್ಟ ತಪ್ಪುಗಳು ಸಹ ಅವರು ತಾಯಿಯಾಗುವ ಅವಕಾಶಗಳನ್ನು ಕದಿಯಬಹುದು. ಅಂತಹ ತಪ್ಪುಗಳಲ್ಲಿ ಒಂದು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಸಹ ಸಂಭವಿಸಬಹುದು...! ಗರ್ಭಿಣಿಯರ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಯ ಹಂಗೇಕೆ?

ಏಕೆಂದರೆ ಬಿಸಿ ನೀರು ಗರ್ಭಿಣಿಯರ ರಕ್ತ ನಾಳಗಳನ್ನು ಹಿಗ್ಗಿಸಬಹುದು. ಇದರಿಂದ ಮಗುವಿಗೆ ಸರಬರಜಾಗುವ ರಕ್ತವು ಕಡಿಮೆಯಾಗಬಹುದು. ಅಷ್ಟೇ ಅಲ್ಲದೆ ಇದರಿಂದಾಗಿ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ವೇಳೆ ಮಗುವು ತಾಯಿಯಿಂದ ಕಡಿಮೆ ರಕ್ತವನ್ನು ಪಡೆದರೆ, ಅದರಿಂದ ಮಗುವಿನ ಬೆಳವಣಿಗೆಯು ಸಹ ಕುಂಠಿತವಾಗಬಹುದು. ಇದಲ್ಲದೆ ಗರ್ಭಿಣಿಯಾಗಿರುವಾಗ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಗರ್ಭಿಣಿಯರಲ್ಲಿ ಜನನಾಂಗದ ಇನ್‌ಫೆಕ್ಷನ್ ಸಹ ಉಂಟಾಗುವುದರ ಜೊತೆಗೆ ರಕ್ತ ಸ್ರಾವ ಮತ್ತು ಅಮ್ನಿನಿಯೊಟಿಕ್ ದ್ರವದ ಸೋರಿಕೆ ಸಹ ಉಂಟಾಗುತ್ತದೆ. ಅಲ್ಲದೆ ಹಲವಾರು ಸಮಸ್ಯೆಗಳಿಗೆ ತಾವೇ ಅಹ್ವಾನ ನೀಡಿದಂತೆಯಾಗಬಹುದು. ಹಾಗಾಗಿ ಗರ್ಭಿಣಿಯರಾದವರು ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಬನ್ನಿ ಗರ್ಭಿಣಿಯರಿಗೆ ಬಿಸಿ ನೀರಿನ ಸ್ನಾನದಿಂದ ಸಂಭವಿಸುವ ಹಾನಿಗಳ ಕುರಿತಾಗಿ ತಿಳಿದುಕೊಳ್ಳೋಣ...

ಬಿಸಿ ನೀರಿನ ಸ್ನಾನವನ್ನು ಗರ್ಭಿಣಿಯರು ಮಾಡಬಹುದೇ?

ಬಿಸಿ ನೀರಿನ ಸ್ನಾನವನ್ನು ಗರ್ಭಿಣಿಯರು ಮಾಡಬಹುದೇ?

10 ನಿಮಿಷಕ್ಕಿಂತ ಹೆಚ್ಚು ಕಾಲ ಬಿಸಿ ನೀರಿನಲ್ಲಿ ಇರುವುದು ಮಗುವಿನ ಜೀವಕ್ಕೆ ಹಾನಿಯುಂಟು ಮಾಡಬಹುದು. ಇದು ಮಗುವಿಗೆ ಸರಬರಾಜಾಗುವ ರಕ್ತವನ್ನು ತಡೆಯುತ್ತದೆ. ಇದು ಮಗುವಿನ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಿಸಿ ನೀರಿನ ಸ್ನಾನವನ್ನು ಗರ್ಭಿಣಿಯರು ಮಾಡಬಹುದೇ?

ಬಿಸಿ ನೀರಿನ ಸ್ನಾನವನ್ನು ಗರ್ಭಿಣಿಯರು ಮಾಡಬಹುದೇ?

ಇದಲ್ಲದೆ ಈ ಬಿಸಿ ನೀರಿನಿಂದ ಗರ್ಭಿಣಿಯರ ಜನನಾಂಗದಲ್ಲಿ ಇನ್‌ಫೆಕ್ಷನ್‌ಗೆ ಕಾರಣವಾಗಬಹುದು. ಆದರೂ ವೈದ್ಯರ ಸಲಹೆಯ ಮೇರೆಗೆ ಸ್ವಲ್ಪ ಸಮಯದಲ್ಲಿ ಅಥವಾ ಕಿರು ಅವಧಿಯಲ್ಲಿ ಉಗುರು ಬೆಚ್ಚನೆಯ ಬಿಸಿ ನೀರಿನ ಸ್ನಾನ ಮಾಡುವುದು ಒಳ್ಳೆಯದು.

ಸ್ನಾನ ಮಾಡಲು ಸರಿಯಾದ ಸಮಯವನ್ನು ಆರಿಸಿ

ಸ್ನಾನ ಮಾಡಲು ಸರಿಯಾದ ಸಮಯವನ್ನು ಆರಿಸಿ

ಗರ್ಭಿಣಿಯಾಗಿರುವಾಗ ನಿಮ್ಮ ದೇಹವು ತೀರಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸಲು ಆರಂಭಿಸುತ್ತದೆ. ಮುಂಜಾನೆ ಮತ್ತು ತಡ ರಾತ್ರಿ ಸ್ನಾನ ಮಾಡುವುದು ಗರ್ಭಿಣಿಯರಿಗೆ ಒಳ್ಳೆಯದಲ್ಲ. ಜೊತೆಗೆ ಅವರ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗು ಸಹ ಇದರಿಂದ ಒಳ್ಳೆಯದಾಗುವುದಿಲ್ಲ. ಇದು ನಿಮ್ಮ ಮಗುವಿನ ದೇಹದ ತಾಪಮಾನವನ್ನು ಗಣನೀಯವಾಗಿ ಹೆಚ್ಚಿಸಬಹುದು ಮತ್ತು ಹಲವಾರು ಇನ್‌ಫೆಕ್ಷನ್‌ಗಳನ್ನು ಮಗುವಿಗೆ ಉಂಟು ಮಾಡಬಹುದು. ಅದಕ್ಕಾಗಿ ನಿಮಗೆ ಮತ್ತು ನಿಮ್ಮ ಮಗುವಿಗೆ ಸರಿಹೊಂದುವ ಸ್ನಾನದ ಸಮಯವನ್ನು ನಿರ್ಧರಿಸಿಕೊಳ್ಳಿ.

ಹಾಟ್ ಟಬ್‌ನಲ್ಲಿ ಸ್ನಾನ ಮಾಡಬೇಡಿ

ಹಾಟ್ ಟಬ್‌ನಲ್ಲಿ ಸ್ನಾನ ಮಾಡಬೇಡಿ

ಸೌನ ಅಥವಾ ಹಾಟ್ ಟಬ್‌ನಲ್ಲಿ ಸ್ನಾನ ಮಾಡಬೇಡಿ. ಇದು ಗರ್ಭದ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಜೊತೆಗೆ ಜನನಾಂಗದ ರಕ್ತಸ್ರಾವವನ್ನು ಉಂಟು ಮಾಡುತ್ತದೆ ಅಥವಾ ಅಮ್ನಿಯೊಟಿಕ್ ದ್ರವದ ಸೋರಿಕೆಗೆ ಕಾರಣವಾಗಬಹುದು.

ಊಟವಾದ ತಕ್ಷಣ ಸ್ನಾನ ಮಾಡಬೇಡಿ

ಊಟವಾದ ತಕ್ಷಣ ಸ್ನಾನ ಮಾಡಬೇಡಿ

ಊಟವಾದ ತಕ್ಷಣ ಸ್ನಾನ ಮಾಡಲು ಹೋಗಬೇಡಿ. ಇದು ಸಹ ರಕ್ತ ನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ರಕ್ತ ಸಂಚಾರದಲ್ಲಿ ವ್ಯತ್ಯಯವುಂಟಾಗುತ್ತದೆ. ಅಲ್ಲದೆ ದೇಹದ ಕೆಳ ಭಾಗದಲ್ಲಿರುವ ಅಂಗಗಳಿಗೆ ರಕ್ತ ಪೂರೈಕೆಯು ಇದರಿಂದ ಕುಂಠಿತಗೊಳ್ಳುತ್ತದೆ. ಆಗ ಮಗುವಿಗೆ ಇದರಿಂದ ಪ್ರತಿಕೂಲ ಪರಿಣಾಮಗಳು ಎದುರಾಗುತ್ತವೆ. ಇದಲ್ಲದೆ ಹೀಗೆ ಮಾಡುವುದರಿಂದ ನಿಮ್ಮ ಜೀರ್ಣ ಕ್ರಿಯೆಯು ಸಹ ಕುಂಠಿತಗೊಳ್ಳುತ್ತದೆ.

English summary

Is Bathing In Hot Water Dangerous During Pregnancy?

During pregnancy, women have to take care of little things, as ignoring one little thing can prove to be dangerous for both the mother and baby. Sometimes, the midwife tales about pregnancy has a medical logic behind them and pregnant women must take care of these little things. One among the things is bathing during pregnancy, especially when the water is hot. It is said that you have to take care regarding bathing in hot water during pregnancy.
Story first published: Friday, December 18, 2015, 13:16 [IST]
X
Desktop Bottom Promotion