For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿರುವ ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತದೆಯಂತೆ!

|

ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಕ್ಕಳ ಬೆಳವಣಿಗೆ ಕುರಿತು ಸಾಕಷ್ಟು ಕುತೂಹಲವನ್ನು ಇರಿಸಿಕೊಂಡಿರುತ್ತಾರೆ. ಗರ್ಭಿಣಿಯರು ಈ ಕುರಿತಾಗಿ ಹಲವಾರು ಪ್ರಶ್ನೆಗಳನ್ನು ಇರಿಸಿಕೊಂಡಿರುತ್ತಾರೆ. ಮಗು ಎಷ್ಟು ಬೆಳೆದಿದೆ, ಮಗುವಿನ ಬೆಳವಣಿಗೆಯಲ್ಲಿ ಏನೆಲ್ಲ ಗಮನಾರ್ಹ ಬದಲಾವಣೆಗಳು ಕಂಡು ಬರುತ್ತಿವೆ ಎಂಬಂತಹ ಪ್ರಶ್ನೆಗಳು ಅವರನ್ನು ಕಾಡುತ್ತ ಇರುತ್ತವೆ. ಗರ್ಭಿಣಿಯರೇ ವೈದ್ಯರಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಲು ಮುಚ್ಚುಮರೆ ಯಾಕೆ?

ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಕುರಿತು ಹಲವಾರು ಕುತೂಹಲಕಾರಿ ವಿಚಾರಗಳು ಇವೆ. ಅವುಗಳಲ್ಲಿ ಬಹುತೇಕವು ನಿಮಗೆ ತಿಳಿದಿಲ್ಲ. ಗರ್ಭಾವಧಿಯ ಅವಧಿಯಲ್ಲಿ ಪ್ರತಿಯೊಂದು ಹಂತದಲ್ಲಿ, ಪ್ರತಿ ವಾರವು ಮಗುವಿನಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ. ಪ್ರತಿ ಬಾರಿ ನೀವು ವೈದ್ಯರ ಬಳಿಗೆ ಭೇಟಿ ನೀಡಿದಾಗ, ನೀವು ಕುತೂಹಲ ಮತ್ತು ಉದ್ವೇಗದಿಂದ ಇರುತ್ತೀರಿ.

ನಿಮ್ಮ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಕುರಿತಾದ ವಿಚಾರವನ್ನು ತಿಳಿಯಲು ನೀವು ಆಸಕ್ತಿವಹಿಸುತ್ತೀರಿ. ಬನ್ನಿ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಕುರಿತಾದ ಕುತೂಹಲವನ್ನು ತಣಿಸಲು ನಾವು ಈ ಅಂಕಣವನ್ನು ತಂದಿದ್ದೇವೆ, ಮುಂದೆ ಓದಿ ಆನಂದ ಪಡಿ.....

ಕಣ್ಣು ಮತ್ತು ಕಿವಿಗಳ ಬೆಳವಣಿಗೆ

ಕಣ್ಣು ಮತ್ತು ಕಿವಿಗಳ ಬೆಳವಣಿಗೆ

ಗರ್ಭಧಾರಣೆಯಾದ ಎಂಟನೆ ವಾರದಲ್ಲಿ ನಿಮ್ಮ ಮಗುವಿಗೆ ಸಣ್ಣ ಕಿವಿ ಮತ್ತು ಕಣ್ಣುಗಳು ಬೆಳೆಯಲು ಆರಂಭಿಸುತ್ತವೆ. ಈ ಅವಧಿಯಲ್ಲಿ ಮಗುವು ಅಡಿಯಿಂದ ಮುಡಿಯವರೆಗೆ ಎರಡು ಸೆಂಟಿ ಮೀಟರ್ ಉದ್ದವಿರುತ್ತದೆ.ಈ ಅವಧಿಯಲ್ಲಿ ಮುಖ ಸಹ ಬೆಳೆಯಲು ಆರಂಭವಾಗುತ್ತದೆ.

ಬಾಹ್ಯ ಜನನಾಂಗಗಳು

ಬಾಹ್ಯ ಜನನಾಂಗಗಳು

ಮಗುವಿನ ಜನನಾಂಗಗಳು ಯಾವಾಗ ಬೆಳೆಯುತ್ತವೆ? ನಿಮ್ಮ ಮಗುವಿನ ಜನನಾಂಗಗಳು ಗರ್ಭ ಧರಿಸಿ ಒಂಬತ್ತು ವಾರವಾದ ಮೇಲೆ ಬೆಳೆಯುತ್ತವೆ. 12 ವಾರದ ನಂತರವಷ್ಟೇ ಈ ಜನನಾಂಗಗಳು ಗಂಡೋ, ಹೆಣ್ಣೋ ಎಂದು ತೀರ್ಮಾನಿಸಲು ಸಾಧ್ಯವಾಗುತ್ತದೆ. ಇದು ಮಗುವಿನ ಕುರಿತಾದ ಒಂದು ಕುತೂಹಲಕಾರಿ ಅಂಶವಾಗಿರುತ್ತದೆ.

ಸಂಪೂರ್ಣ ದೇಹ ಬೆಳೆಯುತ್ತದೆ

ಸಂಪೂರ್ಣ ದೇಹ ಬೆಳೆಯುತ್ತದೆ

12 ವಾರದಲ್ಲಿ ನಿಮ್ಮ ಮಗು ಅಡಿಯಿಂದ ಮುಡಿಯವರೆಗೆ 5 ಸೆಂ.ಮೀ ಬೆಳೆದಿರುತ್ತದೆ. ಈ ಅವಧಿಯಲ್ಲಿ ಕಣ್ಣು, ಉಗುರು, ಬೆರಳು ಮತ್ತು ಕಿವಿ ಹೀಗೆ ಎಲ್ಲಾ ಅಂಗಗಳು ಮಗುವಿಗೆ ಬೆಳೆದಿರುತ್ತವೆ.

ನಿಮ್ಮ ಮಗು ಹುಟ್ಟುವಾಗ ಅರ್ಧದಷ್ಟು ಬೆಳೆದಿರುತ್ತದೆ

ನಿಮ್ಮ ಮಗು ಹುಟ್ಟುವಾಗ ಅರ್ಧದಷ್ಟು ಬೆಳೆದಿರುತ್ತದೆ

20 ನೇ ವಾರದಲ್ಲಿ ನಿಮ್ಮ ಮಗು ಅಡಿಯಿಂದ ಮುಡಿಯವರೆಗೆ 18 ಸೆಂ.ಮೀ ಬೆಳೆದಿರುತ್ತದೆ. ಈ ಅವಧಿಯಲ್ಲಿ ಮಗು ಹೊಟ್ಟೆಯ ಒಳಗೆ ಚಲಿಸಲು ಆರಂಭಿಸುತ್ತದೆ. ಈ ಅವಧಿಯಲ್ಲಿ ಉಗುರುಗಳು ಮತ್ತು ಕಣ್ಣು ಹುಬ್ಬುಗಳು ಸಹ ಬೆಳೆಯುತ್ತವೆ.

ಮಗುವಿಗೆ ಕೇಳುವಿಕೆ ಸಾಮರ್ಥ್ಯ ಬರುತ್ತದೆ

ಮಗುವಿಗೆ ಕೇಳುವಿಕೆ ಸಾಮರ್ಥ್ಯ ಬರುತ್ತದೆ

24ನೇ ವಾರದಲ್ಲಿ ನಿಮ್ಮ ಮಗು ಗರ್ಭದ ಹೊರಗೆ ಆಗುವ ಶಬ್ದಗಳು ಕೇಳುತ್ತವೆ. ಅದಕ್ಕೆ ಅದು ಪ್ರತಿಕ್ರಿಯಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಮಗುವಿನ ಮುಖ ಮತ್ತು ಅಂಗಗಳು ಸಹ ಬೆಳವಣಿಗೆಯಾಗಿರುತ್ತವೆ. ಈ ಅವಧಿಯಲ್ಲಿ ಮಗುವಿನ ತ್ವಚೆಯು ತೆಳುವಾಗಿರುತ್ತದೆ ಮತ್ತು ಅಂಟು ಅಂಟಾಗಿರುತ್ತದೆ.

English summary

Interesting Facts About A Baby In Womb

Pregnant mothers are very curious to know about their baby's growth inside the womb. Few common questions that all pregnant women want to be answered are, how much the baby have grown, are there any remarkable changes in the baby's development etc.
X
Desktop Bottom Promotion