For Quick Alerts
ALLOW NOTIFICATIONS  
For Daily Alerts

ಕೆಲಸದ ಒತ್ತಡ ಗರ್ಭಧಾರಣೆ ಮೇಲೆ ಪರಿಣಾಮಬೀರುವುದೇ?

By Super
|

ಹೊಸ ಜೀವವೊಂದಕ್ಕೆ ಜಗತ್ತನ್ನು ತೋರಿಸುವ ಕೆಲಸವನ್ನು ಮಹಿಳೆ ತನ್ನ ಗರ್ಭಧಾರಣೆಯ ವೇಳೆ ಮಾಡುತ್ತಾಳೆ. ಆಕೆಗೆ ಈ ವೇಳೆ ಹಲವಾರು ಸಮಸ್ಯೆಗಳಾದರೂ ತನ್ನ ಗರ್ಭದಲ್ಲಿರುವ ಮಗುವಿನೊಂದಿಗೆ ಮಾತನಾಡುತ್ತಾ ಇದೆಲ್ಲವನ್ನೂ ಮರೆಯುತ್ತಾಳೆ. ಏನೇ ಕಷ್ಟ ಬಂದರೂ ಆಕೆ ಅದನ್ನು ಸಹಿಸಿಕೊಂಡು ತನ್ನ ಮಗುವಿಗಾಗಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾಳೆ.

ಗರ್ಭಧಾರಣೆ ಎನ್ನುವುದು ಹಲವಾರು ರೀತಿಯ ಭಾವನೆಗಳನ್ನು ಮೂಡಿಸಬಹುದು ಮತ್ತು ಒತ್ತಡವು ಗರ್ಭಿಣಿ ಮಹಿಳೆಯಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುತ್ತಿರುವ ಕಾರಣದಿಂದಾಗಿ ಮಹಿಳೆ ಒತ್ತಡಕ್ಕೆ ಒಳಗಾಗುವುದು ಸಹಜ. ಆದರೆ ಇದೇ ಒತ್ತಡವು ಮುಂದುವರಿದು ಅದನ್ನು ಕಡೆಗಣಿಸಲು ಸಾಧ್ಯವೇ ಇಲ್ಲವೆಂದಾದರೆ ಆಗ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹೆಚ್ಚಿನ ಮಹಿಳೆಯರಲ್ಲಿ ಗರ್ಭಧಾರಣೆ ವೇಳೆ ಒತ್ತಡ ಮತ್ತು ಖಿನ್ನತೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಒತ್ತಡವು ತಾಯಿ ಹಾಗೂ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು ಎನ್ನುವುದನ್ನು ಅಧ್ಯಯನಗಳು ಹೇಳಿವೆ. ಹಲವಾರು ಗಂಟೆಗಳ ಕಾಲ ನಿಂತುಕೊಂಡು ಕೆಲಸ ಮಾಡುವಂತಹ ಮಹಿಳೆಯರಲ್ಲಿ ಅಕಾಲಿಕ ಹೆರಿಗೆಯಾಗುವ ಸಾಧ್ಯತೆಯಿದೆ. ತಾಯಿಯ ಒತ್ತಡ ಗರ್ಭಕ್ಕೂ ಅಪಾಯವನ್ನು ಉಂಟುಮಾಡಬಹುದು. ಕೆಲಸದ ಒತ್ತಡ ಗರ್ಭಧಾರಣೆ ಮೇಲೆ ಯಾವೆಲ್ಲಾ ಪರಿಣಾಮ ಬೀರಬಹುದು ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳುವ. ಹದಿಹರೆಯದಲ್ಲಿ ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳೇನು?

Can Work Stress Affect Pregnancy?

ಮೆದುಳಿನ ಮೇಲೆ ಹಾನಿಕರ ಪರಿಣಾಮ
ಮಗುವಿನ ಆರೋಗ್ಯದ ದೃಷ್ಟಿಯಿಂದ ನೀವು ಏನು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ ಎನ್ನುವ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳುವುದು ಸಾಮಾನ್ಯ. ಆದರೆ ನೀವು ವಾರದಲ್ಲಿ 32 ಗಂಟೆಗಳ ಕಾಲ ಒತ್ತಡದ ಕೆಲಸವನ್ನು ಮಾಡುತ್ತಲಿದ್ದರೆ ಆಗ ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದ್ದೀರಿ ಎಂದರ್ಥ.
ನೀವು ತಾಯ್ತನದ ಸವಾಲುಗಳಿಗೆ ತಯಾರಾಗಿದ್ದೀರಾ ಎನ್ನುವುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.ಮಹಿಳೆಯರು ಅನುಭವಿಸುವಂತಹ ಒತ್ತಡವು ಗರ್ಭಧಾರಣೆಯಾದ 17 ವಾರಗಳ ತನಕ ತನ್ನ ಪ್ರಭಾವವನ್ನು ಉಳಿಸಿಕೊಂಡಿರುತ್ತದೆ. ಇದರಿಂದಾಗಿ ಮಗುವಿನ ಮೆದುಳು ಮತ್ತು ಬೆಳವಣಿಗೆ ಮೇಲೆ ಅದರ ಪರಿಣಾಮ ಉಂಟಾಗಿರುವ ಸಾಧ್ಯತೆಯಿರುತ್ತದೆ.

ಮಗುವಿನ ತೂಕ ಕಡಿಮೆಯಾಗುವುದು
ಗರ್ಭಧಾರಣೆ ವೇಳೆ ನಿಮ್ಮ ದೇಹವು ಹಲವಾರು ರೀತಿಯ ಬದಲಾವಣೆಗಳನ್ನು ಕಾಣುತ್ತದೆ ಮತ್ತು ಹಾರ್ಮೋನುಗಳ ಬದಲಾವಣೆಯಿಂದಾಗಿ ನಿಮ್ಮ ಭಾವನೆಗಳು ಬದಲಾಗುತ್ತದೆ. ಅತಿಯಾದ ಒತ್ತಡದಿಂದಾಗಿ ನಿದ್ರೆ ಕಡಿಮೆಯಾಗುವುದು ಮತ್ತು ಹಸಿವು ಇಲ್ಲದಂತಾಗುತ್ತದೆ. ಇದು ಮಗುವಿನ ಬೆಳವಣಿಗೆಗೆ ಅಪಾಯಕಾರಿ. ಗರ್ಭಾವಸ್ಥೆಯಲ್ಲಿ ನಿರ್ಲಕ್ಷ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ


ಅತಿಯಾದ ಒತ್ತಡವು ರಕ್ತದೊತ್ತಡವನ್ನು ಹೆಚ್ಚು ಮಾಡುವುದರಿಂದ ಅಕಾಲಿಕ ಹೆರಿಯಾಗುವ ಸಂಭವವು ಇದೆ. ಅತಿಯಾದ ಒತ್ತಡವು ಗರ್ಭಧಾರಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಹುಟ್ಟುವ ಮಗುವಿನ ತೂಕ ಕಡಿಮೆಯಾಗುವ ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ಹೇಳಿವೆ.

ಗರ್ಭಪಾತ
ಒತ್ತಡದಿಂದಾಗಿ ಮೆದುಳು ಗುಪ್ತವಾಗಿ ಕಾರ್ಟಿಕೊಟ್ರೊಫಿನ್ ಎನ್ನುವ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಒತ್ತಡದಿಂದಾಗಿ ತಾಯಿಯಲ್ಲಿ ಕಾರ್ಟಿಸೊಲ್ ಎನ್ನುವ ಹಾರ್ಮೋನು ಉತ್ಪತ್ತಿಯಾಗುವ ಸಾಧ್ಯತೆಗಳು ಅಧಿಕವಾಗಿದೆ ಎನ್ನುವುದನ್ನು ಅಧ್ಯಯನಗಳು ಹೇಳಿವೆ.


ಈ ಎರಡು ರೀತಿಯ ಹಾರ್ಮೋನುಗಳಿಂದ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಗರ್ಭಪಾತವಾಗುವ ಸಾಧ್ಯತೆಯಿದೆ. ಕೆಲಸದ ಒತ್ತಡದವು ಗರ್ಭಧಾರಣೆ ಮೇಲೆ ಯಾವೆಲ್ಲ ಪರಿಣಾಮ ಬೀರಬಹುದು ಎನ್ನುವುದನ್ನು ಈ ಮೇಲಿನ ವಿಷಯಗಳಿಂದ ತಿಳಿದುಕೊಳ್ಳಬಹುದು.
English summary

Can Work Stress Affect Pregnancy?

Pregnancy is absolutely a blissful time. Yet, bringing a new being into this world is never an uncomplicated task. Pregnancy can create different feelings and it is usually quite difficult to quantify stress. Sometimes stress can be normal but it does interfere during pregnancy. Here are a few things to note about how work stress affects pregnancy.
Story first published: Friday, August 7, 2015, 14:12 [IST]
X
Desktop Bottom Promotion