For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಪ್ರಾಣ ಹಿಂಡುವ ಮೂತ್ರ ಸೋಂಕಿನ ನಿವಾರಣೆ ಹೇಗೆ?

By Arpitha Rao
|

ಮೂತ್ರದ ಸೋಂಕು ಸಾಕಷ್ಟು ಮಹಿಳೆಯರಲ್ಲಿ ಕಂಡು ಬರುತ್ತದೆ. ಆದರೆ ಇದು ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತದೆ. ಸ್ತ್ರೀಯು ಗರ್ಭಧಾರಣೆ ಹೊಂದಿದಾಗ ಹಾರ್ಮೋನುಗಳ ಬದಲಾವಣೆಯ ಜೊತೆಗೆ ಮೂತ್ರದ ಟ್ರ್ಯಾಕ್ ನಲ್ಲಿ ಕೂಡ ಏರುಪೇರಾಗುತ್ತದೆ. ಗರ್ಭಕೋಶ ಬೆಳೆಯಲು ಪ್ರಾರಂಭಿಸಿದಂತೆ ಇದು ಮೂತ್ರಕೋಶದ ಮೇಲೆ ಒತ್ತಡ ಹೆಚ್ಚಿಸುತ್ತದೆ. ಮೂತ್ರಕೋಶಗಳಲ್ಲೇ ಉಳಿದುಬಿಡುವ ಮೂತ್ರದಿಂದಾಗಿ ಸೋಂಕು ತಗುಲುತ್ತದೆ. ಹಾಗಾಗಿ ಇದಕ್ಕೆ ಆರಂಭಿಕ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಕಿಡ್ನಿಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇಂತಹ ಸೊಂಕನ್ನು ಹೋಗಲಾಡಿಸಲು ಮನೆಯಲ್ಲಿಯೇ ಮನೆಯಲ್ಲಿಯೇ ಶುಶ್ರೂಷೆಯನ್ನು ಮಾಡಿಕೊಳ್ಳಬಹುದು.

Burning Urination Problem? Home Remedies

ಬ್ಲೂ ಬೆರ್ರಿ ಹಣ್ಣು

ಬ್ಲೂ ಬೆರ್ರಿ ಹಣ್ಣಿನಲ್ಲಿ ಬ್ಯಾಕ್ಟೀರಿಯ ನಾಶಪಡಿಸುವ ಗುಣವಿದೆ. ಇತ್ತೀಚಿಗೆ ನಡೆಸಿದ ಅಧ್ಯಯನದ ಪ್ರಕಾರ ಬ್ಲೂ ಬೆರ್ರಿ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ ಗರ್ಭಿಣಿ ಮಹಿಳೆಯರಲ್ಲಿ ಕಂಡು ಬರುವ ಮೂತ್ರಕೋಶದ ಸೋಂಕನ್ನು ತಡೆಯಬಹುದು. ಬೆಳಗ್ಗಿನ ತಿಂಡಿಯ ಜೊತೆಗೆ ಬ್ಲೂ ಬೆರ್ರಿ ಹಣ್ಣಿನ ಜ್ಯೂಸ್ ಸೇವಿಸಬಹುದು. ಪ್ರಥಮ ಹೆರಿಗೆಯ ಬಳಿಕ ಕಂಡುಬರುವ ಮುಟ್ಟಿನ ಲಕ್ಷಣಗಳೇನು?

ಅನಾನಸ್

ಮೂತ್ರ ಕೋಶದ ಸೋಂಕನ್ನು ಹೋಗಲಾಡಿಸಲು ಅನಾನಸ್ ಅಥವಾ ಪರಂಗಿ ಹಣ್ಣು ಬಹಳ ಪರಿಣಾಮಕಾರಿ. ಇದರಲ್ಲಿರುವ ಬ್ರೋಮೆಲೈನ್ ಎಂಬ ಕಿಣ್ವ ಸೋಂಕನ್ನು ಹೋಗಲಾಡಿಸುವಲ್ಲಿ ಸಹಕರಿಸುತ್ತದೆ. ನೀವು ಬೆಳಗ್ಗಿನ ತಿಂಡಿ ಅಥವಾ ಮಧ್ಯಾಹ್ನದ ಊಟದ ನಂತರ ಈ ಹಣ್ಣನ್ನು ಸೇವಿಸಬಹುದು. ಇದರ ಜ್ಯೂಸ್ ಮಾಡಿ ಕೂಡ ಸೇವಿಸಬಹುದು.

ವಿಟಮಿನ್ ಸಿ

ಮೂತ್ರಕೋಶದ ಸೋಂಕಿನಿಂದ ಬಳಲುವವರಿಗೆ ವೈದ್ಯರು ವಿಟಮಿನ್ ಸಿ ತೆಗೆದುಕೊಳ್ಳುವಂತೆ ಹೇಳುತ್ತಾರೆ. ವಿಟಮಿನ್ ಸಿ ಸೇವಿಸುವುದರಿಂದ ಮೂತ್ರ ಕೋಶದ ಸೋಂಕು ಬರುವುದಿಲ್ಲ. ವಿಟಮಿನ್ ಸಿ ಹೇರಳವಾಗಿ ಬಳಸುವುದರಿಂದ ಅಪಾಯಕಾರಿ ಬ್ಯಾಕ್ಟೀರಿಯಗಳು ಅತಿಕ್ರಮಿಸುವುದನ್ನು ತಡೆಯಬಹುದು. ಮೂತ್ರ ಕೋಶವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಲು ಸಾಕಷ್ಟು ವಿಟಮಿನ್ ಸಿ ಬಳಸಬೇಕು.

ಭಾರತೀಯ ನೆಲ್ಲಿಕಾಯಿ

ಮೂತ್ರಕೋಶದ ನಿವಾರಣೆಗಾಗಿ ನೀವು ಭಾರತೀಯ ನೆಲ್ಲಿಕಾಯಿಯನ್ನು ಹಸಿಯಾಗಿ ಇಲ್ಲವೇ ಉಪ್ಪಿನಕಾಯಿಯ ರೂಪದಲ್ಲಿಯೂ ಸಹ ಸೇವಿಸಬಹುದು. ಭಾರತೀಯ ನೆಲ್ಲಿ ತಳಿಯು ಒ೦ದು ಪ್ರಾಕೃತಿಕ ರಕ್ತ ಶುದ್ಧಕಾರಕವಾಗಿದ್ದು, ಮೂತ್ರಕೋಶದ ಸೋಂಕಿಗೆ ಕಾರಣವಾಗಬಹುದಾದ ಯಾವುದೇ ತೆರನಾದ ಸೋ೦ಕು ರೋಗವನ್ನು ನಿವಾರಿಸಬಲ್ಲದು. ಶೀಘ್ರ ಗರ್ಭಧಾರಣೆಗೆ ಸಹಾಯಕವಾಗಿರುವ 20 ಆಹಾರಗಳು

ಸರಿಯಾಗಿ ನೀರನ್ನು ಕುಡಿಯಿರಿ

ನೀವು ಪ್ರತಿದಿನ ಕನಿಷ್ಟ ಪಕ್ಷ 8 ರಿ೦ದ 10 ಲೋಟಗಳಷ್ಟಾದರೂ ನೀರನ್ನು ಕುಡಿಯಬೇಕು. ನೀರು ಸಹಜವಾದ ರೀತಿಯಲ್ಲಿ ಹಾನಿಕಾರಕ ವಿಷಪದಾರ್ಥಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ನಿಮ್ಮ ದೇಹದಿ೦ದ ಹೊರಹಾಕುತ್ತವೆ ಅ೦ತೆಯೇ ನಿಮ್ಮ ಚಯಾಪಚಯ ಕ್ರಿಯೆಯನ್ನೂ ಸಹ ಸುಧಾರಿಸುತ್ತದೆ. ನಿಮ್ಮ ದೇಹದ ಹೆಚ್ಚುವರಿ ಸಕ್ಕರೆಯ ಅ೦ಶವನ್ನೂ ಸಹ ನೀರು ಸ್ವಚ್ಛಗೊಳಿಸಲು ನೆರವಾಗುತ್ತದೆ.

English summary

Burning Urination Problem? Home Remedies

Most of the women do suffers from the urinary tract infection. But, it becomes very common among the pregnant women. When the woman conceives, the pregnancy hormone develops inside the body which makes changes to the urinary tract of the lady.
Story first published: Wednesday, January 7, 2015, 23:09 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X