For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಸಂದರ್ಭದಲ್ಲಿ ಯೋನಿ ವಿಸರ್ಜನೆ ಬಗ್ಗೆ ಕೇಳಿದಿರಾ?

By Manohar Shetty
|

ಯೋನಿ ವಿಸರ್ಜನೆ ಎಂದರೆ ನಿತ್ಯವೂ ಯೋನಿ ಸ್ರವಿಸುವ ಬಿಳಿ ಬಣ್ಣದ ವಾಸನೆಯಿಲ್ಲದ ದ್ರವವಾಗಿದೆ. ಇದು ಗರ್ಭಕಂಠ ಮತ್ತು ಗರ್ಭಾಶಯದ ಗೋಡೆಗಳಿಂದ ಹಳೆಯ ನಾಶವಾಗಿರುವ ಜೀವಕೋಶಗಳನ್ನು ಒಳಗೊಂಡಿರುತ್ತದೆ. ನಿಮ್ಮ ಯೋನಿಯಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ಕೂಡ ಇದು ಒಳಗೊಂಡಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಯೋನಿ ವಿಸರ್ಜನೆ ಇದ್ದಕಿದ್ದಂತೆ ಹೆಚ್ಚಾಗಿರುತ್ತದೆ.

ಈ ಬದಲಾವಣೆಯನ್ನು ತಡೆಯಲು ಏನೂ ಮಾಡಲೂ ಸಾಧ್ಯವಿಲ್ಲ. ಗರ್ಭಾವಸ್ಥೆಯ ಸಂದರ್ಭದಲ್ಲಿ ನೀವು ರಕ್ತ ವಿಸರ್ಜನೆಯನ್ನು ನೋಡದ ಹೊರತು, ನೀವು ಗಾಬರಿಯಾಗಬೇಕಾದ ಅಗತ್ಯವಿಲ್ಲ.

ನಿಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಯೋನಿ ವಿಸರ್ಜನೆಯ ಕೆಲವೊಂದು ಪ್ರಮುಖ ಅಂಶಗಳನ್ನು ನಾವು ಇಲ್ಲಿ ತಿಳಿಸುತ್ತಿದ್ದು ನೀವು ಇದನ್ನು ತಿಳಿದುಕೊಳ್ಳಲೇಬೇಕು. ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿನ ವಿಶೇಷಗಳನ್ನು ತಡೆಗಟ್ಟಲು ಈ ಮಾಹಿತಿಗಳನ್ನು ನೀವು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

ನೀವರಿಯಬೇಕಾದ ಗರ್ಭಾವಸ್ಥೆಯ ಚಿಕನ್‌ಫಾಕ್ಸ್ ಅಪಾಯಗಳು!

ಗರ್ಭಾವಸ್ಥೆಯ ಪೂರ್ವ ಸೂಚನೆ

ಗರ್ಭಾವಸ್ಥೆಯ ಪೂರ್ವ ಸೂಚನೆ

ಹೆಚ್ಚಿದ ಯೋನಿ ವಿಸರ್ಜನೆ ಗರ್ಭಾಸ್ಥೆಯ ಪೂರ್ವ ಸೂಚನೆಯಾಗಿದೆ. ನೀವು ಗರ್ಭಿಣಿಯಾದಾಗ ಹಾರ್ಮೋನ್ ಉತ್ಪಾದನೆ ಹೆಚ್ಚಾಗಿರುವುದರಿಂದ ಇದು ಸಂಭವಿಸುತ್ತದೆ.

ಹೆಚ್ಚಿನ ರಕ್ತ ಹರಿವು

ಹೆಚ್ಚಿನ ರಕ್ತ ಹರಿವು

ಗರ್ಭಾಸ್ಥೆಯ ಸಂದರ್ಭದಲ್ಲಿ, ಯೋನಿ ಪ್ರದೇಶಕ್ಕೆ ಬರುವ ರಕ್ತದ ಹರಿವು ಹೆಚ್ಚಾಗಿರುತ್ತದೆ. ಇದರಿಂದಾಗಿ ನಿಮ್ಮಲ್ಲಿ ಯೋನಿ ವಿಸರ್ಜನೆ ವಿಪರೀತವಾಗಿರುತ್ತದೆ.

ಹಾರ್ಮೋನ್‌ ಪಾತ್ರ

ಹಾರ್ಮೋನ್‌ ಪಾತ್ರ

ನಿಮ್ಮ ದೇಹದಲ್ಲಿರುವ ಹೆಚ್ಚಿನ ಪ್ರಮಾಣದ ಹಾರ್ಮೋನ್‌ಗಳಿದ್ದಂತೆ ಹೆಚ್ಚು ಯೋನಿ ವಿಸರ್ಜನೆಯ ಅನುಭವ ನಿಮಗುಂಟಾಗುತ್ತದೆ. ಗರ್ಭಿಣಿಯಾದ ಸಂದರ್ಭದಲ್ಲಿ, ಹಾರ್ಮೋನ್‌ಗಳಾದ ಈಸ್ಟ್ರೋಜನ್ ಮತ್ತು ಪೋಸ್ಟ್ರೋಜನ್‌ನಲ್ಲಿ ಸ್ರವಿಸುವಿಕೆ ಹೆಚ್ಚಾಗಿರುವುದರಿಂದ ವಿಸರ್ಜನೆ ನಿಮ್ಮಲ್ಲಿ ಅಧಿಕವಾಗಿರುತ್ತದೆ.

ಹೆರಿಗೆಯ ಸೂಚನೆ

ಹೆರಿಗೆಯ ಸೂಚನೆ

ನಿಮ್ಮ ಗರ್ಭಾವಸ್ಥೆಯ ಕೊನೆಯಲ್ಲಿ, ನೀವು ಹೆಚ್ಚು ಪ್ರಮಾದ ಯೋನಿ ವಿಸರ್ಜನಾ ಅನುಭವಕ್ಕೆ ಒಳಗಾಗುತ್ತೀರಿ. ಹಾಗಿದ್ದರೆ ಇದು ಹೆರಿಗೆಯ ಸೂಚನೆಯಾಗಿರುತ್ತದೆ. ನೀವು ಹೆರಿಗೆಯ ಹಂತಕ್ಕೆ ತಲುಪಿದ್ದೀರಿ ಎಂದಾದಲ್ಲಿ ನಿಮ್ಮ ರಕ್ತ ವಿಸರ್ಜನೆಯನ್ನು ಪರಿಶೀಲಿಸಿಕೊಳ್ಳಿ.

ಲೋಳೆ ಅಂಶ

ಲೋಳೆ ಅಂಶ

ಗರ್ಭಾಸ್ಥೆಯಲ್ಲಿ ಲೋಳೆ ಅಂಶಗಳು ಗರ್ಭಕೋಶಗಳನ್ನು ಸೀಲ್ ಮಾಡುವುದರಿಂದ ಬಿಳಿ ಸ್ರವಿಸುವಿಕೆಯ ಅಂಶಗಳೊಂದಿಗೆ ಇದು ರಚನೆಗೊಂಡಿರುತ್ತದೆ. ಅದಾಗ್ಯೂ ಇದು ನೋಡಲು ಭಿನ್ನವಾಗಿರುತ್ತದೆ. ಈ ಲೋಳೆ ಅಂಶ ನೋಡಲು ಮೊಟ್ಟೆಯ ಬಿಳಿ ಬಣ್ಣದಂತಿರುತ್ತದೆ. ಗರ್ಭಕಂಠ ದಪ್ಪ ಮತ್ತು ಸಡಿಲಗೊಂಡಾಗ ನಿಮ್ಮ ಮ್ಯೂಕಸ್ ಅಂಶಗಳನ್ನು ನೀವು ಕಳೆದುಕೊಳ್ಳಬಹುದು.

ರಕ್ತ ವಿಸರ್ಜನೆ

ರಕ್ತ ವಿಸರ್ಜನೆ

ಭ್ರೂಣದ ಸೇರುವಿಕೆಯ ಸಂದರ್ಭದಲ್ಲಿ ರಕ್ತ ವಿಸರ್ಜನೆ ಸಾಮಾನ್ಯವಾಗಿರುತ್ತದೆ. ಗರ್ಭಾಸ್ಥೆಯ ಸಮಯದಲ್ಲಿ ಉಂಟಾಗುವ ಯಾವುದೇ ರಕ್ತ ಸ್ರಾವ ಸಾಮಾನ್ಯವಾಗಿರುವುದಿಲ್ಲ. ನೀವು ನಿಮ್ಮ ವೈದ್ಯರನ್ನು ಕೂಡಲೇ ಸಂದರ್ಶಿಸುವುದು ಅಗತ್ಯವಾಗಿರುತ್ತದೆ. ನೀವು ಗರ್ಭಿಣಿಯಾಗಿರುವಾಗ ನಿಮ್ಮ ತಲೆಯಲ್ಲಿ ನೀವು ಅತ್ಯವಶ್ಯಕವಾಗಿ ಇರಿಸಿಕೊಳ್ಳಬೇಕಾದ ಅಗತ್ಯ ಮಾಹಿತಿಗಳು ಇದಾಗಿದೆ.


English summary

Vaginal Discharge During Pregnancy Facts

Vaginal discharge is the white coloured normally odourless liquid that comes out of your vagina on a regular basis. Here are some very important facts about vaginal discharge during pregnancy that you might want to know. To prevent any surprises during your pregnancy, read up all you need to know.
X
Desktop Bottom Promotion