For Quick Alerts
ALLOW NOTIFICATIONS  
For Daily Alerts

  ಗರ್ಭಿಣಿಯರ ಆರೋಗ್ಯಕ್ಕಾಗಿ ಕೆಲ ಸಲಹೆಗಳು

  |

  ಗರ್ಭಿಣಿ ಎಂದು ಗೊತ್ತದ ತಕ್ಷಣ ಆ ಮಹಿಳೆಗೆ ಮನೆಯವರು ಮತ್ತು ವೈದ್ಯರು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಗರ್ಭಿಣಿಯರು ಆಹಾರದ ಬಗ್ಗೆ ಎಚ್ಚರಿಕೆವಹಿಸಿಬೇಕು. ಹೆಚ್ಚು ಮಾನಸಿಕ ಒತ್ತಡ ತಂದುಕೊಳ್ಳಬಾರದು ಹಾಗೂ ತಿಂಗಳಿಗೆ ಸರಿಯಾಗಿ ವೈದ್ಯರ ಬಳಿ ಸರಿಯಾಗಿ ಪರೀಕ್ಷೆ ಮಾಡಿಸಬೇಕು ಈ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ.

  ಗರ್ಭಿಣಿಯಾಗಿರುವ ಸ್ತ್ರೀಯು ಮೊದಲ ಮೂರು ತಿಂಗಳು ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಬೇಕಾದುದು ಅತ್ಯಗತ್ಯ. ಈ ತಿಂಗಳುಗಳು ಗರ್ಭಾವಧಿಯಲ್ಲಿ ಅತ್ಯಂತ ಕಠಿಣ ಕಾಲವಾಗಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಗರ್ಭಿಣಿಯ ದೇಹದಲ್ಲಿ ತೀವ್ರತರದ ಬದಲಾವಣೆಗಳು ಕಂಡುಬರುತ್ತವೆ.

  ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಗೆ ಇನ್‍ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಆಕೆಯನ್ನು ಮತ್ತಷ್ಟು ಸೊರಗಿದಂತೆ ಕಾಣುವಂತೆ ಮಾಡುತ್ತದೆ. ಆಗಾಗ ಗರ್ಭಿಣಿ ಇರುವ ಸ್ಥಳವನ್ನು ಆದಷ್ಟು ಸ್ವಚ್ಛವಾಗಿಡಬೇಕು. ಆಕೆಯ ಸುತ್ತ ಒಂದು ನಿರ್ಮಲ ಮತ್ತು ನಿಶ್ಕಲ್ಮಷವಾದ ವಾತಾವರಣವನ್ನು ನಿರ್ಮಿಸಬೇಕಾದುದು ಅತ್ಯಾವಶ್ಯಕ. ನಿಮ್ಮ ಗರ್ಭಾವಧಿಯನ್ನು ಖುಷಿಯಿಂದ ಅನುಭವಿಸಿ. ನಿಮ್ಮ ಕುರಿತು ಉತ್ತಮ ಕಾಳಜಿಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ.

  ಗರ್ಭಿಣಿಯರ ಆರೋಗ್ಯಕ್ಕಾಗಿ ಕೆಲ ಸಲಹೆಗಳು

  Top pregnancy tips for normal delivery
   

  ದೇಹದ ತೂಕ

  ಗರ್ಭಿಣಿಯರು ದೇಹದ ತೂಕ ತುಂಬಾ ಹೆಚ್ಚಾಗದಂತೆ ಎಚ್ಚರಿಕೆವಹಿಸಿಬೇಕು. ಪ್ರತಿದಿನ ಅರ್ಧ ಗಂಟೆ ನಡೆಯಿರಿ. ಮನೆ ಕೆಲಸವನ್ನು ಮಾಡಿ, ಓಡಾಡಿ, ಮಧ್ಯಾಹ್ನ ಹೊತ್ತು ಮಲಗಬೇಡಿ ದೇಹದ ತೂಕ ಹೆಚ್ಚಾಗುವುದು.

  ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ

  ಗರ್ಭಿಣಿಯು ಧೂಮಪಾನವನ್ನು ಅಥವಾ ಮಧ್ಯಪಾನವನ್ನು ಸೇವಿಸುವುದರಿಂದ ದೂರವಿರಬೇಕು. ಈ ಎರಡು ಅಂಶಗಳು ಮಗುವಿಗೆ ತೀವ್ರತರದ ಹಾನಿಯನ್ನುಂಟು ಮಾಡುತ್ತವೆ. ಒಂದು ವೇಳೆ ತಾಯಿಯು ಮಧ್ಯಪಾನ ಸೇವಿಸಿದರೆ, ಮಗುವು ಇದರಿಂದ ಅತಿ ಅಪಾಯವನ್ನು ಎದುರಿಸಬೇಕಾಗುತ್ತದೆ. ಮಧ್ಯಪಾನವು ಹುಟ್ಟುವ ಮಗುವಲ್ಲಿ ಹಲವಾರು ನ್ಯೂನತೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ತಾಯಿಯು ತಾನು ಸೇವಿಸುವ ಅಂಶಗಳ ಬಗ್ಗೆ ಅತಿ ಜಾಗರೂಕಳಾಗಿರಬೇಕಾದುದು ಅತ್ಯಾವಶ್ಯಕ.

  ಔಷಧಿಗಳನ್ನು ತೆಗೆದುಕೊಳ್ಳಬೇಡಿ

  ನಿಮಗೆ ವಾಂತಿ ಮತ್ತು ಆಯಾಸವ ಇತ್ಯಾದಿಗಳು ಆಗುತ್ತಿದ್ದರೆ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಒಂದು ವೇಳೆ ನಿಮಗೆ ಔಷಧಿಯು ತೀರ ಅಗತ್ಯವಿದ್ದಲ್ಲಿ ಪ್ರಕೃತಿದತ್ತ ಔಷಧಿಗಳನ್ನು ಉಪಯೋಗಿಸಿ. ಅಲ್ಲದೆ ಇಂತಹ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.  ಗರ್ಭಿಣಿಯರು ಯಾವಾಗ ಡ್ರೈವ್ ಮಾಡಬಾರದು?

  ಆಹಾರ ಕ್ರಮ

  ಅಧಿಕ ಕೊಬ್ಬಿನಂಶದ ಆಹಾರಗಳನ್ನು ತಿನ್ನಬಾರದು. ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಊಟವನ್ನು ಮಿತಿಯಲ್ಲಿ ಮಾಡಬೇಕು. ಹಣ್ಣುಗಳನ್ನು ತಮ್ಮ ಆಹಾರಕ್ರಮದಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳಬೇಕು.

  ಬಾಯಿಯ ಶುದ್ಧತೆ

  ಗರ್ಭಿಣಿಯಾಗಿರುವಾಗ ಬಾಯಿಯ ಶುದ್ಧತೆ ಬಗ್ಗೆ ತುಂಬಾ ಎಚ್ಚರಿಕೆವಹಿಸಬೇಕು. ಸೊಂಕು ತಗುಲಿದರೆ ಬಾಯಿಯ ಒಸಡಿನಲ್ಲಿ ರಕ್ತ ಕಂಡು ಬರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ.

  ಸರಿಯಾಗಿ ನಿದ್ದೆ ಮಾಡಿ

  ಯಾವುದೇ ಮಾನಸಿಕ ಒತ್ತಡ ತೆಗೆದುಕೊಳ್ಳಬಾರದು. ಸಂಗೀತವನ್ನು ಕೇಳಿ. ದಿನದಲ್ಲಿ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ರಾತ್ರಿ ನಿದ್ದೆಗೆಡುವುದು, ನೈಟ್ ಶಿಫ್ಟ್ ಈ ರೀತಿಯ ಕಾರ್ಯಗಳನ್ನು ಮಾಡಬೇಡಿ.

  ವ್ಯಾಯಾಮದ ಬಗ್ಗೆ ವೈದ್ಯರ ಸಲಹೆ

  ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮುನ್ನ ವೈದ್ಯರನ್ನು ಕಂಡು ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ ಗರ್ಭಿಣಿಯಾಗಿರುವಾಗ ಜೋರಾಗಿ ಓಡುವ, ಭಾರ ಎತ್ತುವ ವ್ಯಾಯಾಮ ಒಳ್ಳೆಯದಲ್ಲ. ವ್ಯಾಯಾಮ ಮಾಡುವಾಗ ಸ್ಪೋರ್ಟ್ಸ್ ಬ್ರಾ ಮತ್ತು ಶೂ ಧರಿಸಿರಬೇಕು. ವ್ಯಾಯಾಮ ನಾರ್ಮಲ್ ಡೆಲಿವರಿಗೆ ಸಹಾಯ ಮಾಡುತ್ತದೆ.

  ಕೆಫೀನ್ ಅಂಶ

  ಕಾಫಿ, ಚಹಾ ಹೆಚ್ಚಾಗಿ ಕುಡಿಯಬಾರದು. ಮದ್ಯಪಾನ, ಧೂಮಪಾನದ ಅಭ್ಯಾಸವಿರುವವರು ಆ ಅಭ್ಯಾಸಗಳನ್ನು ಬಿಡಬೇಕು. ಇಲ್ಲದಿದ್ದರೆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

  ಒಳ್ಳೆಯ ಪುಸ್ತಕಗಳನ್ನು ಓದಿ

  ತಾಯಿಯಾಗುವ ಕನಸು ಕಾಣುತ್ತಿರುವ ಸ್ತ್ರೀಯು ಒಳ್ಳೆಯ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸುವ ಪುಸ್ತಕಗಳನ್ನು ಓದಬೇಕು. ಒಂದು ವೇಳೆ ನೀವು ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಿದ್ದಲ್ಲಿ ವಿಷಾದದಿಂದ ಕೂಡಿದ ಮತ್ತು ಖಿನ್ನತೆಯನ್ನುಂಟು ಮಾಡುವ ಪುಸ್ತಕಗಳನ್ನು ಓದಬೇಡಿ. ಮಕ್ಕಳ ಜನನ ಮತ್ತು ಬೆಳವಣಿಗೆಯ ಕುರಿತಾದ ಪುಸ್ತಕಗಳನ್ನು ಓದಿ. ಅಲ್ಲದೆ ನೀವು ಗರ್ಭಿಣಿಯರು ಓದಲು ಇರುವ ಹಲವಾರು ಪುಸ್ತಕಗಳನ್ನು ಓದಬಹುದು. ಇದರಿಂದ ನಿಮಗೆ ಗೊತ್ತಿಲ್ಲದ ಅನೇಕ ಮಾಹಿತಿ ಮತ್ತು ಜ್ಞಾನ ದೊರೆಯುತ್ತದೆ.

  English summary

  Top pregnancy tips for normal delivery

  As soon as a woman gets pregnant, she is bombarded with advice; granted that most of this advice comes from good intentions, it's still riddled with myths and half-truths.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more