For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ವೇಳೆ ಬರುವ ಸಂಬಂಧದ ಸಮಸ್ಯೆಗಳು

By Hemanth P
|

ಗರ್ಭಧಾರಣೆಯ ಆರಂಭದಿಂದಲೇ ಮಹಿಳೆ ಮಗುವಿನೊಂದಿಗೆ ವಿಶೇಷ ಬಂಧನ ನಿರ್ಮಿಸುತ್ತಾಳೆ ಮತ್ತು ತಾಯಿಯಾಗುವ ಸಂಭ್ರಮವನ್ನು ಎಂಜಾಯ್ ಮಾಡುತ್ತಿರುತ್ತಾಳೆ. ಆದರೆ ಪುರುಷರು ಮಾತ್ರ ಹಾಗಲ್ಲ, ಅವರು ಮಗುವಿನ ಜನನದ ಬಳಿಕವಷ್ಟೇ ತಂದೆಯಾದ ವಿಶೇಷ ಭಾವನೆಗೊಳಗಾಗುತ್ತಾರೆ. ಇದರಿಂದಾಗಿ ಹೆಚ್ಚಿನ ಪುರುಷರು ತಮ್ಮ ಸಂಗಾತಿಯ ಬದಲಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಇದರಿಂದಾಗಿ ಗರ್ಭಧಾರಣೆ ವೇಳೆ ಹಲವಾರು ರಿತಿಯ ಸಮಸ್ಯೆಗಳು ಉಂಟಾಗುತ್ತದೆ.

ಶೇ.20ರಷ್ಟು ಮಹಿಳೆಯರು ಗರ್ಭಿಣಿಯಾಗಿರುವ ವೇಳೆ ಭಾವನಾತ್ಮಕ ಕ್ಷೋಭೆ ಹಾಗೂ ಸಂಬಂಧದ ಸಮಸ್ಯೆಗೆ ಒಳಗಾಗುತ್ತಾರೆ. ಇದೇ ವೇಳೆ ಪೋಷಕತ್ವವು ತುಂಬಾ ಸವಾಲು ಮತ್ತು ಸಂಭ್ರಮವನ್ನುಂಟುಮಾಡುತ್ತದೆ. ಗರ್ಭಧಾರಣೆ ವೇಳೆ ಸಂಬಂಧದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಹಲವಾರು ರೀತಿಯ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ನೀವು ಕಲಿತುಕೊಂಡರೆ ಆಗ ಗರ್ಭಧಾರಣೆಯನ್ನು ಆನಂದಿಸಬಹುದು.

ಮಗುವಿನ ಜನನವಾಗುವ ತನಕ ಅದು ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುತ್ತದೆ. ಈ ವೇಳೆ ನಿಮ್ಮಲ್ಲಿ ಹಲವಾರು ರೀತಿಯ ದೈಹಿಕ ಬದಲಾವಣೆಗಳಾಗಿ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ. ಇದರಿಂದ ಕೆಲವೊಂದು ದೈಹಿಕ ಹಾಗೂ ಮಾನಸಿಕ ಲಕ್ಷಣಗಳು ಕಾಣಿಸುತ್ತದೆ. ಗರ್ಭಧಾರಣೆ ವೇಳೆ ಉಂಟಾಗುವ ಸಂಬಂಧದ ಸಮಸ್ಯೆ ಕೆಟ್ಟ ರೂಪ ಪಡೆಯುವ ಮೊದಲು ಹೆಚ್ಚಿನ ಆರೈಕೆ ಮತ್ತು ಭಾವನಾತ್ಮಕ ಬೆಂಬಲದಿಂದ ನಿವಾರಿಸಬಹುದು. ಗರ್ಭಧಾರಣೆ ವೇಳೆ ಉಂಟಾಗಬಹುದಾದ ಕೆಲವೊಂದು ಸಾಮಾನ್ಯ ಸಂಬಂಧದ ಸಮಸ್ಯೆಗಳು ಇಲ್ಲಿವೆ.

ಬೆಂಬಲದ ಕೊರತೆ ಹಾಗೂ ಅರ್ಥಮಾಡಿಕೊಳ್ಳದಿರುವುದು

ಬೆಂಬಲದ ಕೊರತೆ ಹಾಗೂ ಅರ್ಥಮಾಡಿಕೊಳ್ಳದಿರುವುದು

ಖಿನ್ನತೆ ಮತ್ತು ಆತಂಕ ಗರ್ಭಧಾರಣೆ ವೇಳೆ ಸಂಗಾತಿಗಳ ನಡುವಿನ ಅಸಂತೋಷಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಿಮ್ಮ ಪತ್ನಿ ತುಂಬಾ ಖಿನ್ನತೆಗೆ ಒಳಗಾಗಿದ್ದರೆ ಆಗ ನೀವು ಆಕೆಯ ಸನಿಹಕ್ಕೆ ಬರಲು ಪ್ರಯತ್ನಿಸಿ.

ಸಂವಹನದ ಕೊರತೆ

ಸಂವಹನದ ಕೊರತೆ

ಸಂಗಾತಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವಿಫಲವಾದಾಗ ಹಾಗೂ ಪರಸ್ಪರರೊಂದಿಗೆ ಮಾತುಕತೆ ನಡೆಸದೆ ಇದ್ದಾಗ ಗರ್ಭಧಾರಣೆ ವೇಳೆ ಸಂಬಂಧದ ಸಮಸ್ಯೆಗಳು ಉಂಟಾಗುತ್ತದೆ. ಖಿನ್ನತೆಯ ಭಾವನೆಯಲ್ಲಿರುವಾಗ ಪತ್ನಿ ಜತೆ ಜಗಳವಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪುರುಷರು ಮಾತನಾಡುವುದನ್ನು ಕಡೆಗಣಿಸುತ್ತಾರೆ. ಈ ವೇಳೆ ಪತ್ನಿ ತನ್ನನ್ನು ಸಂಗಾತಿ ಕಡೆಗಣಿಸುತ್ತಿದ್ದಾರೆಂದು ಭಾವಿಸುತ್ತಾಳೆ.

ಭಾವನಾತ್ಮಕ ತೊಂದರೆಗಳು

ಭಾವನಾತ್ಮಕ ತೊಂದರೆಗಳು

ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ಪುರುಷರಿಗೆ ಅತೀ ದೊಡ್ಡ ಸವಾಲಾಗಿರುತ್ತದೆ. ಆದರೆ ಮಿಶ್ರ ಭಾವನೆಗಳನ್ನು ಪರಿಗಣಿಸಿ ಪತಿಯಂದಿರು ತಮ್ಮ ಸಂಗಾತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಗೌರವಿಸಬೇಕು. ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಮೂಡ್ ಬದಲಾಗುವುದು ಸಾಮಾನ್ಯ ಮತ್ತು ಗರ್ಭಧಾರಣೆ ವೇಳೆ ಉಂಟಾಗುವ ಹಾರ್ಮೋನ್ ಬದಲಾವಣೆಯಿಂದಾಗಿ ಹೀಗೆ ಆಗುತ್ತದೆ.

ಕುಟುಂಬದ ಬೆಸುಗೆಯ ಕೊರತೆ

ಕುಟುಂಬದ ಬೆಸುಗೆಯ ಕೊರತೆ

ಆತಂಕ, ಖಿನ್ನತೆ, ಒತ್ತಡ ಮತ್ತು ಅಹಿತಕರ ಭಾವನೆ ಉಂಟಾಗುವುದು ಗರ್ಭಧಾರಣೆ ವೇಳೆ ಉಂಟಾಗುವ ಸಂಬಂಧಿ ಸಮಸ್ಯೆಗಳು. ಗರ್ಭಧಾರಣೆ ವೇಳೆ ಇದು ಅತೀ ಗಂಭೀರ ಸಂಬಂಧಿ ಸಮಸ್ಯೆಯಾಗಬಹುದು.

ತಪ್ಪು ಗ್ರಹಿಕೆ

ತಪ್ಪು ಗ್ರಹಿಕೆ

ಗರ್ಭಧಾರಣೆ ವೇಳೆ ಸಂಬಂಧದ ಕೆಲವೊಂದು ಸಮಸ್ಯೆಗಳು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಇದು ಮದುವೆಯನ್ನೇ ಮುರಿದು ಹಾಕುತ್ತದೆ. ಸಂಗಾತಿಗಳಿಬ್ಬರ ನಡುವಿನ ತಪ್ಪುಗ್ರಹಿಕೆ ಬಗ್ಗೆ ಆರಂಭದಲ್ಲೇ ಚರ್ಚಿಸಬೇಕು ಮತ್ತು ಅದನ್ನು ಬಗೆಹರಿಸಬೇಕು.

ಖಿನ್ನತೆಯ ಸಂಗಾತಿ

ಖಿನ್ನತೆಯ ಸಂಗಾತಿ

ಮನಸ್ಥಿತಿ ಬದಲಾವಣೆ ಮತ್ತು ಖಿನ್ನತೆ ಬಗ್ಗೆ ನೀವು ಮೊದಲು ತಿಳಿದುಕೊಳ್ಳಬೇಕು. ಖಿನ್ನತೆ ದೊಡ್ಡ ಸಮಸ್ಯೆ ಮತ್ತು ಇದು ಆತ್ಮಹತ್ಯೆಗೂ ಕಾರಣವಾಗಬಹುದು. ಶೇ. 10ರಷ್ಟು ಗರ್ಭಿಣಿ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಇದನ್ನು ಕೌನ್ಸಿಲಿಂಗ್ ಮೂಲಕ ಸರಿಮಾಡಬಹುದು.

ವಾದ

ವಾದ

ಸಣ್ಣ ವಿಷಯಕ್ಕೂ ಖಿನ್ನತೆಗೊಳಗಾಗುವುದು ತುಂಬಾ ಸಾಮಾನ್ಯ. ಇದರಿಂದ ವಾದವನ್ನು ಕಡೆಗಣಿಸಿ ಹಾಗೂ ಆಕೆಯ ಭಾವನೆ ಅರ್ಥಮಾಡಿಕೊಳ್ಳಿ. ಆಕೆಗೆ ಕಡೆಗಣಿಸುತ್ತಿದ್ದಾರೆ ಮತ್ತು ಬೇಡವಾಗಿದ್ದಾಳೆಂಬ ಭಾವನೆ ಮೂಡದಂತೆ ಮಾಡಿ.

ನಿಮ್ಮ ಸಂಗಾತಿಯ ಬೆಂಬಲಿಸುವುದು ಹೇಗೆ?

ನಿಮ್ಮ ಸಂಗಾತಿಯ ಬೆಂಬಲಿಸುವುದು ಹೇಗೆ?

ನೀವು ಪರಸ್ಪರ ಹೇಗೆ ಪ್ರೋತ್ಸಾಹಿಸುತ್ತೀರಿ ಮತ್ತು ಸಂವಹನ ನಡೆಸುತ್ತೀರಿ ಎನ್ನುವುದರ ಮೇಲೆ ಗರ್ಭಧಾರಣೆ ವೇಳೆ ಉಂಟಾಗುವ ಸಂಬಂಧಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಸಂಗಾತಿಗಳು ಗರ್ಭಧಾರಣೆಯ ಸಮಯವನ್ನು ಇಬ್ಬರ ನಡುವಿನ ಬಂಧನ ಬಲಪಡಿಸಲು ಬಳಸಬೇಕು. ಗರ್ಭಧಾರಣೆಯಿಂದಾಗಿ ಸಂಗಾತಿಗಳಿಬ್ಬರು ಬೇರ್ಪಡಬಾರದು. ಗರ್ಭಧಾರಣೆಯು ನಿಮ್ಮ ವಿವಾಹ ಬಂಧನದ ಸಂಭ್ರಮಕ್ಕೆ ಕಾರಣವಾಗಬೇಕು.

English summary

Relationship Problems That Arise During Pregnancy.

From the moment of conception most women builds a special bond with her baby and she gradually starts to enjoy her new role as a mother. But it is not so in the case of man, he gets the special feeling of fatherhood only after the child is born.
Story first published: Wednesday, January 8, 2014, 15:08 [IST]
X
Desktop Bottom Promotion