For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಏರೋಬಿಕ್ಸ್ ವ್ಯಾಯಾಮದ ಬಗ್ಗೆ ಕೇಳಿದಿರಾ?

By Poornima
|

ಗರ್ಭಧಾರಣೆ, ಮಹಿಳೆಯ ಜೀವನದ ಒಂದು ಅತ್ಯುತ್ತಮ ಸಮಯ! ಇದು ಆಕೆ ತನ್ನ ಜೀವನದಲ್ಲಿಯೇ ಅತ್ಯಂತ ಸಂತೋಷವನ್ನು ಅನುಭವಿಸುವ ಕಾಲ. ತಾಯಿಯ ಪ್ರತಿಯೊಂದು ಚಟುವಟಿಕೆ, ಆಕೆಯ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಅತ್ಯಂತ ಜಾಗರೂಕರಾಗಿರಬೇಕಾದುದು ಅತ್ಯಗತ್ಯ .

ಮಹಿಳೆಯರು ಗರ್ಭಾವಸ್ಥೆಯಲ್ಲಿ ಅವರ ಆರೋಗ್ಯದ ಬಗ್ಗೆ ಜಾಗೃತರಾಗಿರುವುದು ಸಹಜ. ಇದಕ್ಕೆ ಜೊತೆಯಾಗಿ ಸ್ವಲ್ಪ ದೈಹಿಕ ಚಟುವಟಿಕೆಯೂ ಕೂಡ ತಾಯಿ ಮತ್ತು ಮಗುವಿನ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದು. ಆಕೆ ಒಂದು ಹೊಸ ಜೀವವನ್ನು ಹೊಸ ಜೀವನಕೊಟ್ಟು ಭೂಮಿಗೆ ತರುವುದು ತಮಾಷೆಯ ವಿಷಯವಲ್ಲ! ಇದು ಒಂದು ಸಂತೋಷ ಮತ್ತು ನಿಧಿಯಿದ್ದಂತೆ. ಪೌಷ್ಟಿಕ ಆಹಾರದ ಜೊತೆಗೆ ಸಂಯೋಜಿಸಲ್ಪಟ್ಟ ಸ್ವಲ್ಪ ವ್ಯಾಯಾಮ ತಾಯಿ ಮತ್ತು ಮಗುವಿನ ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ.

ಹೆರಿಗೆಯ ಬಳಿಕ ಹೆಚ್ಚಿದ ತೂಕ ಕಮ್ಮಿ ಮಾಡಲು ಟಿಪ್ಸ್

ಈಜಾಡುವುದು
ಈಜುವುದು ಮೋಜು ಮತ್ತು ತುಂಬಾ ಆರೋಗ್ಯಕರವೂ ಹೌದು. ಈಜುವ ಸಮಯದಲ್ಲಿ, ನೀರು ದೇಹದ ಚಲನೆಗಳಿಗೆ ಸಾಕಷ್ಟು ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ. ಈ ಗರ್ಭಧಾರಣೆ ಸಮಯದಲ್ಲಿ ಮಾಡಬಹುದಾದ ಅತ್ಯುತ್ತಮ ಏರೋಬಿಕ್ಸ್ ಗಳಲ್ಲಿ ಒಂದಾಗಿದೆ. ಈಜುವುದು ಮಾತ್ರವಲ್ಲದೇ, ನೀರಿನಲ್ಲಿ ನೀವು ಹಲವು ವ್ಯಾಯಾಮಗಳನ್ನು ಮಾಡಬಹುದು. ನೀವು ಮತ್ಸ್ಯಕನ್ಯೆ ಪ್ಯಾಡಲ್ ವ್ಯಾಯಾಮವನ್ನು ಪ್ರಯತ್ನಿಸಬಹುದು ಅಥವಾ ಈಜುಕೊಳದ ಮೂಲೆಯಲ್ಲಿ ನಿಂತು ನಿಮ್ಮ ಕಾಲುಗಳ ಕೆಲವು ವ್ಯಾಯಾಮಗಳನ್ನು ಮಾಡಬಹುದು. ಈ ಗರ್ಭಿಣಿ ಮಹಿಳೆಯರಿಗೆ ಶಿಫಾರಸ್ಸು ಮಾಡುವ ಉತ್ತಮ ಏರೋಬಿಕ್ಸ್. ಈಜುವುದು ನಿಮ್ಮ ಚಿತ್ತಕ್ಕೆ ವಿಶ್ರಾಂತಿಯನ್ನೂ ನೀಡುತ್ತದೆ. ಗರ್ಭಧಾರಣೆ ಸಮಯದಲ್ಲಿ ಮಾಡಬಹುದಾದ ಏರೋಬಿಕ್ಸ್ ಗಳು ಅನೇಕ ಇರಬಹುದು ಆದರೆ ನೀವು ನಿಮಗೆ ಸರಿಹೊಂದುವ ವ್ಯಾಯಾಮವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಯಾವ ವಿಧದ ವ್ಯಾಯಾಮವನ್ನು ಆರಿಸಿಕೊಳ್ಳಬೇಕು ಎಂಬುದರ ಬಗ್ಗೆ ನಿಮ್ಮ ವೈದ್ಯರೊಂದಿಗೂ ಮಾತನಾಡಬಹುದು.

Aerobics for pregnant women

ನಡೆಯುವುದು (ವಾಕಿಂಗ್)
ಈಜುವಿಕೆಯ ನಂತರ, ಗರ್ಭಿಣಿಯರಿಗೆ ಸುಲಭವಾದ ಏರೋಬಿಕ್ಸ್ ವಾಕಿಂಗ್. ನಡೆಯುವುದು ಸುಲಭವಾದ ಆದರೆ ಉತ್ತಮವಾದ ವ್ಯಾಯಾಮ. ನೀವು ವಾಕಿಂಗ್ ಹೋಗಲು ಬಯಸಿದರೆ ಸರಿಯಾದ ವಾಕಿಂಗ್ ಶೂಗಳನ್ನು ಖರೀದಿಸಿ. ನೀವು ಒಬ್ಬರೇ ವಾಕಿಂಗ್ ಹೋಗಲು ಇಷ್ಟಪಡದಿದ್ದರೆ ನಿಮ್ಮ ಜೊತೆ ಯಾರನ್ನಾದರೂ ಕರೆದುಕೊಂಡು ಹೋಗಿ. ನಿಮ್ಮ ಸಂಗಾತಿಯ ಜೊತೆ ನಡೆಯುವುದು ಸಹ ಉತ್ತಮ ಅನುಭವ ಆಗಬಹುದು. ಗರ್ಭಧಾರಣೆ ಸಂದರ್ಭದಲ್ಲಿ ಏರೋಬಿಕ್ಸ್ ನ್ನು ನಿಯಮಿತವಾಗಿ ಮಾಡುವ ಅಗತ್ಯವಿದೆ. ಇದು ಬೃಹತ್ ಪ್ರಯೋಜನಗಳನ್ನು ನೀಡುತ್ತದೆ. ನಡೆಯುವುದೂ ಕೂಡ ಗರ್ಭಿಣಿ ಮಹಿಳೆಯರಿಗೆ ಉತ್ತಮ ಏರೋಬಿಕ್ಸ್ ಎಂದು ಪರಿಗಣಿಸಲಾಗಿದೆ.

ಗರ್ಭಿಣಿಯರೇ ಈ ಅಂಶಗಳು ತಿಳಿದಿರಲಿ

ಸ್ಟೇಷನರಿ ಬೈಕ್
ನೀವು ವಾಕಿಂಗ್ ಗೆ ಹೊರಗೆ ಹೋದಾಗ ಅಲ್ಲಿನ ಹವಾಮಾನದ ಬಗ್ಗೆ ಚಿಂತೆ ಉಂಟಾಗಬಹುದು. ಆದರೆ, ಸ್ಟೇಷನರಿ ಬೈಕ್ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಇದು ಗರ್ಭಧಾರಣೆ ಸಮಯದ ಉತ್ತಮ ಏರೋಬಿಕ್ಸ್ ಗಳಲ್ಲಿ ಒಂದಾಗಿದೆ. ಸ್ಟೇಷನರಿ ಬೈಕ್ ನ ಮುಖ್ಯ ಪ್ರಯೋಜನವೆಂದರೆ ಇದನ್ನು ನೀವು ನಿಮಗೆ ಬೇಕಾದ ಕಡೆ ಅಳವಡಿಸಬಹುದು. ನಿಮ್ಮ ಮನೆಯಲ್ಲಿರುವ ದೂರದರ್ಶನದ ಎದುರು ಅಥವಾ ಮಲಗುವ ಕೋಣೆಯಲ್ಲಿರಬಹುದು. ಗರ್ಭಿಣಿ ಮಹಿಳೆಯರು ಈ ಏರೋಬಿಕ್ಸ್ ನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ನೀವು ಸ್ಟೇಷನರಿ ಬೈಕ್ ಬಳಸುವಾಗ ಆರಂಭದಲ್ಲಿ ಕಡಿಮೆ ವೇಗ ಮತ್ತು ನಂತರದಲ್ಲಿ ನಿಧಾನವಾಗಿ ವೇಗವನ್ನು ಹೆಚ್ಚಿಸಿ ಪೆಡಲ್ ತುಳಿಯಬಹುದು.

ಮಗುವಿಗೆ ಕಾಡುವ ತುರಿಕೆಗೆ ಪರಿಣಾಮಕಾರಿ ಚಿಕಿತ್ಸೆ

ಸ್ಟೆಪ್-ಅಪ್ ಮತ್ತು ಡೌನ್ (ಮೆಟ್ಟಿಲನ್ನು ಹತ್ತುವುದು ಮತ್ತು ಇಳಿಯುವುದು)
ಇದು ಉತ್ತಮ ಲಾಭಗಳನ್ನು ನೀಡಬಹುದಾದ ಗರ್ಭಧಾರಣೆ ಸಮಯದ ಏರೋಬಿಕ್ಸ್ ಗಳಲ್ಲಿ ಒಂದಾಗಿದೆ. ಒಂದು ಗಟ್ಟಿಮುಟ್ಟಾದ ಸ್ಟೂಲ್ ಬಳಸಿ ಅದರ ಮೇಲೆ ಹೆಜ್ಜೆ ಇಟ್ಟು ತೆಗೆಯುವ ವ್ಯಾಯಾಮವನ್ನು ಕೆಲವು ಬಾರಿ ಮಾಡಿ. ಒಂದು ದಿನದಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಈ ಚಟುವಟಿಕೆಯನ್ನು ಪುನರಾವರ್ತಿಸಿ. ಇದು ಗರ್ಭಿಣಿ ಮಹಿಳೆಯರು ಮಾಡಬಹುದಾದ ಆರೋಗ್ಯಕರ ಏರೋಬಿಕ್ಸ್ ಆಗಿದೆ. ನೀವು ನಿಧಾನಗತಿಯ ಈ ಚಟುವಟಿಕೆಯನ್ನು ನಂತರ ಸ್ಪಲ್ವ ವೇಗವನ್ನು ಹೆಚ್ಚಿಸಬಹುದು. ಗರ್ಭಧಾರಣೆ ಸಮಯದಲ್ಲಿ ಏರೋಬಿಕ್ಸ್ ಮಾಡುವಾಗ ನೀವು ಅಧಿಕ ವೇಗವಾಗಿ ಮಾಡದೇ ಇರುವುದು ಬಹಳ ಮುಖ್ಯ.

ಈ ಮೇಲಿನ ಏರೋಬಿಕ್ ವ್ಯಾಯಾಮಗಳು ನಿಮಗೆ ಚೇತನ ಮತ್ತು ಉತ್ಸಾಹವನ್ನು ನೀಡುತ್ತವೆ ಎಂದು ಭಾವಿಸುತ್ತೇವೆ! ಈ ವ್ಯಾಯಾಮಗಳನ್ನು ಪ್ರಯತ್ನಿಸಿ ಮತ್ತು ಸಂತೋಷ ಗರ್ಭಧಾರಣೆಯನ್ನು ಪ್ರಯತ್ನಿಸಿ !

English summary

Aerobics for pregnant women

It is natural for women to become conscious about their health during pregnancy. A little physical activity is good for the mind and the body of the mom and the child. A little exercise combined with nutritious food will make the mom and child healthy.
X
Desktop Bottom Promotion