For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಸ್ಕಿನ್ ಕೇರ್ ಬಗ್ಗೆ ಎಚ್ಚರ

By Super
|

ಗರ್ಭಿಣಿ ಮಹಿಳೆಯ ದೇಹವು ಹಲವಾರು ಗಮನಾರ್ಹ ಬದಲಾವಣೆಗಳನ್ನು ಹೊಂದುತ್ತದೆ. ಗರ್ಭಧಾರಣೆ ಎಂದರೆ ಮಹಿಳೆಯ ದೇಹದ ಎಲ್ಲಾ ಅಂಶಗಳ ಮರು ಜೋಡಣೆ ಇದ್ದಂತೆ. ದೇಹದಲ್ಲಿ ಹಾರ್ಮೋನ್ ಗಳ ಏರಿಳಿತದಿಂದ ಹೊರಗಿನ ಪದರವು (ಚರ್ಮ) ಅತ್ಯಂತ ದುರ್ಬಲವಾಗುವ, ಸೂಕ್ಷ್ಮವಾಗುವ ಸಂಭವವಿರುತ್ತದೆ. ಎಲ್ಲಾ ಸೌಂದರ್ಯವರ್ಧಕ ಉತ್ಪನ್ನಗಳು ಗರ್ಭಾವಸ್ಥೆಯಲ್ಲಿರುವ ಮಹಿಳೆಗೆ ಒಗ್ಗುವುದಿಲ್ಲ. ಮತ್ತು ಅವುಗಳಲ್ಲಿ ಬಳಸಿರುವ ಕೆಲವು ಅಂಶಗಳು ತಾಯಿಗೆ ಯಾ ಅಥವಾ ಅವಳ ಗರ್ಭದಲ್ಲಿನ ಮಗುವಿಗೆ ಹಾನಿಕಾರಕವಾಗಬಹುದು. ಆದ್ದರಿಂದ , ನಿಮ್ಮ ತ್ವಚೆಯ ರಕ್ಷಣೆಯ ಬಗೆಗೆ ಸ್ವಲ್ಪ ಎಚ್ಚರಿಕೆವಹಿಸಬೇಕು.

ಈ ಕೆಳಗಿನ ಪರಿಹಾರಗಳು ಗರ್ಭಿಣಿಯರಿಗೆ ಸುಲಭವಾಗಿ ಬರುವ ಚರ್ಮದ ಬಾದೆಗಳಿಂದ ರಕ್ಷಣೆ ನೀಡುತ್ತವೆ. ಅಲ್ಲದೇ ಇಲ್ಲಿ ಕೊಟ್ಟಿರುವ ಐದು ವಿಶೇಷ ಸಲಹೆಗಳು ಗರ್ಭಿಣಿಯರಿಗೆ ಚರ್ಮ ರಕ್ಷಣಾ ಉತ್ಪನ್ನಗಳ ಆಯ್ಕೆಯಲ್ಲಿ ಸಹಕಾರಿಯಾಗಬಲ್ಲವು.

ಆದಷ್ಟು ಬಿಸಿಲಿನಿಂದ ದೂರವಿರಿ

ಆದಷ್ಟು ಬಿಸಿಲಿನಿಂದ ದೂರವಿರಿ

ಗರ್ಭಿಣಿ ಮಹಿಳೆಯರಲ್ಲಿ ಹಾರ್ಮೋನ್ ಏರಿಳಿತದಿಂದಾಗಿ ಅವರ ಚರ್ಮ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಪರಿಣಾಮವಾಗಿ , ಅವರ ತ್ವಚೆ ಕಪ್ಪಾಗುತ್ತದೆ ಅಥವಾ ಅದರ ವರ್ಣದ್ರವ್ಯಳು ನಾಶವಾಗುತ್ತವೆ. ಹಾರ್ಮೋನುಗಳ ಅಸಮತೋಲನ ತಪ್ಪಿಸುವುದಂತೂ ಪ್ರಾಯೋಗಿಕವಾಗಿ ಅಸಾಧ್ಯದ ಮಾತು. ಆದರೆ ನೀವು ಖಂಡಿತವಾಗಿನಿಮ್ಮ ತ್ವಚೆ ನೇರವಾಗಿ ಸೂರ್ಯನ ರಶ್ಮಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬಹುದು. ಉರಿ ಬಿಸಿಲಿನಲ್ಲಿ ಹೊರಗೆ ಹೋಗದೆ, ಎಳೆಬಿಸಿಲಿನಲ್ಲೇ ಹೊರಗಿನ ಕೆಲಸಗಳನ್ನು ಮುಗಿಸಿಕೊಳ್ಳಿ. ಹೊರಗೆ ಹೋಗುವ ಸಂದರ್ಭ ಬಂದರೆ ಟೋಪಿ ಅಥವಾ ವೇಲ್ ತಲೆಗೆ ಹಾಕಿ.

ಸನ್ ಬ್ಲಾಕ್ ಕ್ರೀಮ್ ಬಳಸಿ

ಸನ್ ಬ್ಲಾಕ್ ಕ್ರೀಮ್ ಬಳಸಿ

ಸೂರ್ಯನ ಕಿರಣಗಳಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ . ನಿಮ್ಮ ಕಾರು ಮತ್ತು ಮನೆಯೊಳಗೆ ಕಿಟಕಿಗಳ ಮೂಲಕ ಫಿಲ್ಟರಾಗಿ ಬರುವ ಸೂರ್ಯನ ಕಿರಣಗಳೂ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡಬಹುದು . ಆದ್ದರಿಂದ ಚರ್ಮಶಾಸ್ತ್ರಜ್ಞರ ಶಿಫಾರಸ್ಸಿನ ಮೇರೆಗೆ ಕನಿಷ್ಠ SPF30++ ಅನ್ನು ಹೊಂದಿರುವ ಸೂರ್ಯನ ಬ್ಲಾಕ್ ಕ್ರೀಮ್ ಬಳಸಿ . SPF 30 ಎಂದರೆ UVB ಕಿರಣಗಳು ಹಾಗು ++ ಎಂದರೆ UVA ಕಿರಣಗಳಿಂದ ರಕ್ಷಣೆ ಎಂದರ್ಥ.ಸೂರ್ಯನ ಸೂಚಿಸುತ್ತದೆ . ಸೂರ್ಯನ ಈ ಎರಡೂ ರೀತಿಯ ಕಿರಣಗಳಿಂದ ವಿಶಾಲ ವ್ಯಾಪ್ತಿಯಲ್ಲಿ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳುವುದು ಅತಿ ಮುಖ್ಯ. ಯಾವುದೆ ಸನ್ ಬ್ಲಾಕ್ ಕ್ರೀಮ್ ತ್ವಚೆಯ ಮೇಲೆ ತನ್ನ ಕೆಲಸವನ್ನು ಪ್ರಾರಂಭಿಸಲು ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ . ಆದ್ದರಿಂದ ಮುಂಜಾನೆ ಸೂರ್ಯನ ಪ್ರಕಾಶ ಕಡಿಮೇ ಇರುವಾಗಲೆ ಕ್ರೀಮನ್ನು ಹಚ್ಚುವುದು ಒಳ್ಳೆಯದು. ಅಲ್ಲದೆ ನಂತರ ಪ್ರತಿ 3-4 ಗಂಟೆಗಳಿಗೊಮ್ಮೆ ಪುನಃ ಲೇಪಿಸುವದನ್ನು ಮರೆಯದಿರಿ. ಇದರಿಂದ ಸನ್ ಬ್ಲಾಕ್ ನ ಪರಿಣಾಮ ಕಡಿಮೆಯಾಗುವದನ್ನು ತಪ್ಪಿಸಬಹುದು.

ಮನೆಯಲ್ಲಿರುವ ರಾಸಾಯನಿಕಗಳಿಂದ ದೂರವಿರಿ

ಮನೆಯಲ್ಲಿರುವ ರಾಸಾಯನಿಕಗಳಿಂದ ದೂರವಿರಿ

ಗರ್ಭಿಣಿ ಮಹಿಳೆಯರಿಗೆ ಮತ್ತು ಅವರ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ರಾಸಾಯನಿಕಗಳಿಂದ ದೂರವಿರವುದು ಕಡ್ಡಾಯ. ನೀವು ಉಪಯೋಗಿಸುತ್ತಿರುವ ಉತ್ಪನ್ನಗಳಲ್ಲಿನ ಅಂಶಗಳನ್ನು ಸುರಕ್ಷಿತವಾಗಿವೆ ಮತ್ತು ಅವುಗಳಿಂಗ ನಿಮ್ಮ ಮಗುವಿನ ಮೇಲೆ ಯಾವುದೇ ಅಡ್ಡಪರಿಣಾಮ ಆಗುವುದುಲ್ಲ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ . HYDROQUINONE , ಸ್ಟೀರಾಯ್ಡ್ಗಳು ಮತ್ತು ಇತರೆ ಹಾನಿಕಾರಕ ಬ್ಲೀಚಿಂಗ್ ಏಜೆಂಟ್ ಗಳಿರುವ ಉತ್ಪನ್ನಗಳನ್ನು ಚರ್ಮರೋಗ ವೈದ್ಯ ನಿರ್ದೇಶನದ ಹೊರತು ಬಳಸಬೇಡಿ. ಇಂತಹ ಉತ್ಪನ್ನಗಳನ್ನು ಸಾಮಾನ್ಯವಾಗಿ ತ್ವಚೆಯ ಬಣ್ಣತಿಳಿಗೊಳಿಸಲು, ವೈದ್ಯರ ಮಾರ್ಗದರ್ಶನ ಇಲ್ಲದೇ ಖರೀದಿಸುವರು. ಇಂತಹ ಉತ್ಪನ್ನಗಳಿಂದ ಅಡ್ಡಪರಿಣಾಮಗಳ ಅಪಾಯವಿರುವುದರಿಂದ ಗರ್ಭಿಣಿಯರು ಎಚ್ಚರಿಕೆಯಿಂದ ಕೊಳ್ಳಬೇಕು.

ಆಲ್ಫಾ ಹೈಡ್ರಾಕ್ಸಿ ಆಸಿಡ್ಸ್ ಬಳಸಿ

ಆಲ್ಫಾ ಹೈಡ್ರಾಕ್ಸಿ ಆಸಿಡ್ಸ್ ಬಳಸಿ

ಆಲ್ಫಾ ಹೈಡ್ರಾಕ್ಸಿ ಆಸಿಡ್ಸ್ ಗರ್ಭಿಣಿಯರಲ್ಲಿ ವರ್ಣದ್ರವ್ಯಗಳ ಚಿಕಿತ್ಸೆಗಾಗಿ ಸುರಕ್ಷಿತವಾಗಿದೆ. ಅದರಲ್ಲಿರುವ ನೈಸರ್ಗಿಕ ಅಂಶಗಳಾದ ಗ್ಲೈಕೊಲಿಕ್ ಆಮ್ಲ ಮತ್ತು ಲ್ಯಾಕ್ಟಿಕ್ ಆಮ್ಲಗಳು ಅತ್ಯಂತ ಪ್ರಮುಖವಾದವು. ಗ್ಲೈಕೊಲಿಕ್ ಆಮ್ಲವನ್ನು ಕಬ್ಬಿನಿದಲೂ ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಹಾಲಿನಿಂದಲೂ ಪಡೆಯಲಾಗುತ್ತದೆ. ಇವು ವರ್ಣದ್ರವ್ಯಗಳ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಬಲ್ಲವು. ಆದರೆ ಈ ಚಿಕಿತ್ಸೆಯ ಜೊತೆ ಸೂರ್ಯ ರಶ್ಮಿ ರಕ್ಷಣಾ ಕವಚವನ್ನು ಬಳಸಬೇಕು . ಇವುಗಳ ಜೊತೆಗೆ ತ್ವಚೆಯಲ್ಲಿ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು , humectant ( moisturizer ) ಎಂದು ಕರೆಯಲ್ಪಡುವ ಗ್ಲೈಕೊಲಿಕ್ ಆಮ್ಲ ಮತ್ತು ಲ್ಯಾಕ್ಟಿಕ್ ಆಮ್ಲದ ಸಂಯೋಜನೆಯನ್ನು ಬಳಸಿ .

ಒಬ್ಬ ಚರ್ಮರೋಗ ವೈದ್ಯನನ್ನು ಭೇಟಿ

ಒಬ್ಬ ಚರ್ಮರೋಗ ವೈದ್ಯನನ್ನು ಭೇಟಿ

ಭವಿಷ್ಯದಲ್ಲಿ ತಾಯಿಯಾಗುತ್ತಿರುವ ನೀವು ಚರ್ಮದ ಯಾವುದೇ ಅಸಹಜ ಬೆಳವಣಿಗೆಗಳತ್ತ ಗಮನಹರಿಸುತ್ತಿರಬೇಕು. ಗುಳ್ಳೆಗಳು, ತುರಿಕೆಗಳಂತಹ ಬೆಳವಣಿಗೆಗಳು ಕಂಡರೆ ತಕ್ಷಣ ವೈದ್ಯಕೀಯ ಸಲಹೆಗಾಗಿ ಸರಿಯಾದ ಚರ್ಮರೋಗ ವೈದ್ಯರಲ್ಲಿಗೆ ಹೋಗಬೇಕು . ಇದರಿಂದ ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗೆ ಸಹಾಯವಾಗುತ್ತದೆ.

ಮೇಲೆ ಹೇಳಿರುವ ಸಲಹೆಗಳ ಉಪಯೋಗ ಪಡೆದು ನಿಮ್ಮ ತ್ವಚೆಯನ್ನು ಸಂರಕ್ಷಿಸಿಕೊಳ್ಳಿ.

English summary

Skin care tips for pregnant women

This Skin Solutions helps you get acquainted with the factors that may affect your pregnancy and lists five exclusive tips to select the right skin care product.
X
Desktop Bottom Promotion