For Quick Alerts
ALLOW NOTIFICATIONS  
For Daily Alerts

40ರ ನಂತರ ಫಲವಂತಿಕೆ ಹೆಚ್ಚಿಸಿಕೊಳ್ಳುವ ಮಾರ್ಗ

|

ಇತ್ತೀಚಿನ ದಿನಗಳಲ್ಲಿ ತಡವಾದ ಗರ್ಭಧಾರಣೆ ಸಾಮಾನ್ಯವಾದ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ತಾವು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವವರೆಗೆ ಮಕ್ಕಳನ್ನು ಹೊಂದಲು ಪೋಷಕರು ಇಷ್ಟಪಡುತ್ತಿಲ್ಲ. ಈ ಕಾರಣಗಳಿಂದಾಗಿ ಗರ್ಭಧಾರಣೆಯು 30-40ರ ಹರೆಯಕ್ಕೆ ಬಂದು ನಿಂತಿದೆ. ಈ ವಯಸ್ಸಿನಲ್ಲಿ ಗರ್ಭಧರಿಸುವುದು ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.

40ರಲ್ಲಿ ಗರ್ಭಧರಿಸಬೇಕೆನ್ನುವವರು ಎದುರಿಸುವ ಬಹುದೊಡ್ಡ ಸವಾಲು ಫಲವಂತಿಕೆಯದು. 30ರ ನಂತರ ಹೆಣ್ಣಿನಲ್ಲಿ ಫಲವಂತಿಕೆಯು ಕಡಿಮೆಯಾಗುತ್ತಾ ಸಾಗುತ್ತದೆ. ಇದಕ್ಕೆ ಅನಿಯಮಿತ ಋತುಚಕ್ರ, ಗರ್ಭಕೋಶದಲ್ಲುಂಟಾಗುವ ತೊಂದರೆಗಳು ಇತ್ಯಾದಿ ಕಾರಣಗಳಿರುತ್ತವೆ.

Simple Ways To Increase Fertility After 40

ಆದರೆ ಫಲವಂತಿಕೆಯನ್ನು ಈ ವಯಸ್ಸಿನಲ್ಲಿ ಕೂಡ ಹೆಚ್ಚಿಸಿಕೊಳ್ಳಲು ಹಲವು ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಈ ಮಾರ್ಗಗಳ ಯಾವುದು ಎಂದು ನೋಡಿ;

ನೀವು ಏನು ತಿನ್ನುವಿರಿ ಅದನ್ನು ಗಮನಿಸಿ:
ಯಾವುದೇ ರೀತಿಯ ಚಿಕಿತ್ಸೆಯನ್ನು ಅಂಧರಂತೆ ಅನುಸರಿಸಬೇಡಿ. ನ್ಯೂಟ್ರಿಶಿನಿಸ್ಟ್ ಅನ್ನು ನಿಮ್ಮ ಡಯೆಟ್ ಕುರಿತಂತೆ ಸಲಹೆ ಕೇಳಿ. ಇದರಿಂದ ಸಹಜವಾಗಿ ಫಲವಂತಿಕೆ ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳಬಹುದು. ಪೌಷ್ಟಿಕಾಂಶ ತಜ್ಞರು ವಯಸ್ಸಾದ ಹೆಂಗಸರಿಗೆ ಯಾವುದರ ಕೊರತೆಯಿದೆ, ಏನು ಅಗತ್ಯ ಎಂದು ಗುರುತಿಸಿ ಹೇಳುತ್ತಾರೆ.

ತೂಕ:
ತೂಕ ಹೆಚ್ಚಾಗುವುದು ಕೂಡ ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಿನೊಂದಿಗೆ ಹೆಂಗಸರು ಹೆಚ್ಚು ತೂಕವನ್ನು ಗಳಿಸಿಕೊಳ್ಳುತ್ತಾರೆ. ಇದು ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ.

ಒತ್ತಡವನ್ನು ಕಡಿಮೆ ಮಾಡಿ:
ಒತ್ತಡವು ಫಲವಂತಿಕೆ ಮಟ್ಟದ ಮೇಲೆ ನೇತ್ಯಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ 40ರ ನಂತರ ಮಗುವನ್ನು ಪಡೆಯಲು ಬಯಸಿದಲ್ಲಿ ಒತ್ತಡದಿಂದ ದೂರವಿರಿ. ಆಪ್ತಸಮಾಲೋಚಕರ ಸಹಾಯ ಪಡೆದುಕೊಳ್ಳಿ, ಧ್ಯಾನವನ್ನು ಅಭ್ಯಾಸ ಮಾಡಿ, ಒಂದು ದೀರ್ಘವಾದ ವಾಕ್ ಹೋಗಿಬನ್ನಿ. ಇವೆಲ್ಲ ನಿಮ್ಮ ಒತ್ತಡವನ್ನು ಕಡಿಮೆಗೊಳಿಸುತ್ತದೆ.

ನಿಯಮಿತವಾಗಿ ಲೈಂಗಿಕಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ:
40ರ ಹರೆಯದ ಮಹಿಳೆಯರು ಗರ್ಭಧರಿಸಬೇಕೆಂದರೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಗಂಡಸರಲ್ಲಿನ ದ್ರವವು ಹೆಂಗಸರ ಫಲವಂತಿಕೆಯನ್ನು ಹೆಚ್ಚಿಸುವ ಸಾಧ್ಯತೆಗಳಿರುತ್ತವೆ.

ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ:
ನಿಮಗೆ ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳಿದ್ದರೆ ಅವುಗಳನ್ನು ಬಿಟ್ಟುಬಿಡಿ. ಇವು ನಿಮ್ಮ ಫಲವಂತಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಈ ಸರಳ ವಿಧಾನಗಳನ್ನು ಪಾಲಿಸಿ ನಿಮ್ಮ ಫಲವಂತಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ನೀವು ಆರೋಗ್ಯಕರ ಮಗುವನ್ನು ಪಡೆಯಬಹುದು.

English summary

Simple Ways To Increase Fertility After 40

Late pregnancy is becoming the order of the day. Nowadays a number of women are putting off having children till they are ready to take up the responsibility of a child emotionally, financially as well as psychologically.
Story first published: Thursday, December 19, 2013, 11:41 [IST]
X
Desktop Bottom Promotion