For Quick Alerts
ALLOW NOTIFICATIONS  
For Daily Alerts

ಗರ್ಭಪಾತವಾದಾಗ ಅನುಸರಿಸಬೇಕಾದ ಡಯೆಟ್

|

ಗರ್ಭಪಾತವು ಹೆಣ್ನಿಗೆ ಅತ್ಯಂತ ನೋವುಕೊಡುವಂತದ್ದು. ಅದರಲ್ಲೂ ಗರ್ಭಪಾತವು ಭ್ರೂಣವು ಚೆನ್ನಾಗಿ ಬೆಳೆದ ನಂತರ ಘಟಿಸಿದರೆ ಅದು ತಾಯಿಯ ಜೀವಕ್ಕೆ ಅಪಾಯ ಒಡ್ಡುತ್ತದೆ. ಗರ್ಭಪಾತ ಕೇವಲ ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿ ಕೂಡ ಹೆಚ್ಚು ಆತಂಕವನ್ನು ಒಡ್ಡುವಂತದ್ದು. ನೀವು ರಕ್ತ ಕಳೆದುಕೊಳ್ಳುವಿರಿ ಮತ್ತಿದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಆದ್ದರಿಂದ ಗರ್ಭಪಾತವಾದಾಗ ದೈಹಿಕ ಮತ್ತು ಮಾನಸಿಕ ಆರೈಕೆ ಅತ್ಯಗತ್ಯ. ಈ ಸಮಯದಲ್ಲಿ ದೇಹವು ಕಳೆದುಕೊಂಡ ಪೌಷ್ಟಿಕಾಂಶಗಳನ್ನು ಮತ್ತೆ ಅದಕ್ಕೆ ಒದಗಿಸಬೇಕು. ಇದಕ್ಕಾಗಿ ಆರೋಗ್ಯಕಾರಿ ಡಯೆಟ್ ಅನುಸರಿಸುವುದು ಅತ್ಯಗತ್ಯ.

Diet Basics During A Miscarriage

ಇಂದು ನಾವಿಲ್ಲಿ ಗರ್ಭಪಾತವಾದಾಗ ಅನುಸರಿಸಬೇಕಾದ ಡಯೆಟ್ ನ ಕೆಲ ಮೂಲಭೂತ ಅಂಶಗಳನ್ನು ನೀಡುತ್ತಿದ್ದೇವೆ:

ಹಾಲು
ಗರ್ಭಧಾರಣೆಯು ನಿಮ್ಮ ದೇಹದಿಂದ ಅತಿಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತದೆ. ಗರ್ಭಪಾತದಿಂದಾಗಿ ದೇಹ ಹೀರಿಕೊಂಡ ಈ ಕ್ಯಾಲ್ಸಿಯಂ ವ್ಯರ್ಥವಾಗುತ್ತದೆ. ಹೆಂಗಸರ ಮೂಳೆಗಳು ಕ್ಯಾಲ್ಸಿಯಂ ಅನ್ನು ಸುಲಭವಾಗಿ ಕಳೆದುಕೊಳ್ಳುತ್ತವೆ. ಆದ್ದರಿಂದಲೇ ಹಾಲನ್ನು ನಿಯಮಿತವಾಗಿ ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಕನಿಷ್ಠ ಪಕ್ಷ 2-4 ಲೋಟ ಹಾಲು ಕುಡಿಯುವುದು ಒಳ್ಳೆಯದು. ಇದು ನಿಮಗೆ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಫಾಸ್ಪರಸ್ ಒದಗಿಸುತ್ತದೆ.

ಹಾಲಿನ ಉತ್ಪನ್ನಗಳು
ಹಲವರಿಗೆ ಹೆಚ್ಚು ಹಾಲನ್ನು ಕುಡಿಯುವುದು ಸಾಧ್ಯವಾಗುವುದಿಲ್ಲ. ನಿಮಗೆ ಹಾಲನ್ನು ಕುಡಿಯಲಾಗದಿದ್ದರೆ ಹಾಲಿನ ಉತ್ಪನ್ನಗಳಾದ ಬೆಣ್ಣೆ, ಮೊಸರು ಇತ್ಯಾದಿಗಳನ್ನು ಸೇವಿಸಿ. ಇದರಿಂದ ನಿಮ್ಮ ದೇಹ ಕ್ಯಾಲ್ಸಿಯಂ ಮರುಗಳಿಸಿಕೊಳ್ಳಲು ಸಹಾಯವಾಗುತ್ತದೆ.

ಹಸಿರೆಲೆ ತರಕಾರಿಗಳು
ನಿಮ್ಮ ದೇಹವು ರಕ್ತಸ್ರಾವದಿಂದಾಗಿ ಕಬ್ಬಿಣದಂಶವನ್ನು ಕಳೆದುಕೊಂಡಿರುತ್ತದೆ. ನೀವಿದನ್ನು ಮರುಗಳಿಸಿಕೊಳ್ಳಬೇಕು. ಆದ್ದರಿಂದ ಹಸಿರೆಲೆ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವಿಸುವುದು ಒಳ್ಳೆಯದು.

ಕೆಂಪು ಮಾಂಸ
ಕೆಂಪು ಮಾಂಸದಲ್ಲಿ ಕಬ್ಬಿಣದಂಶ ಹೆಚ್ಚಿರುತ್ತದೆ. ನೀವು ಗರ್ಭಪಾತದ ನಂತರ ಇವುಗಳನ್ನು ಸೇವಿಸುವುದರಿಂದ ಇದು ಮತ್ತೆ ನಿಮ್ಮ ದೇಹಕ್ಕೆ ದಕ್ಕುತ್ತದೆ. ನೀವು ಮಾಂಸಾಹಾರಿಯಾಗಿದ್ದಲ್ಲಿ ಮಾಂಸದ ಸೇವನೆಯಿಂದ ರಕ್ತಹೀನತೆಯಿಂದ ಬಳಲುವುದನ್ನು ತಪ್ಪಿಸಿಕೊಳ್ಳಬಹುದು.

ಮೊಟ್ಟೆಗಳು
ಗರ್ಭಪಾತದ ನಂತರ ದೇಹವು ನಿಶ್ಯಕ್ತವಾಗುತ್ತದೆ. ನೀವು ದೇಹಕ್ಕೆ ಶಕ್ತಿ ತುಂಬಬಲ್ಲ ಆಹಾರವನ್ನು ಸೇವಿಸಬೇಕು. ಮೊಟ್ಟೆ ಅಂತಹ ಒಂದು ಆಹಾರ. ಇದರಲ್ಲಿ ಕೊಬ್ಬು, ಪ್ರೊಟಿನ್ ಮತ್ತಿತರ ಅವಶ್ಯಕ ಪೌಷ್ಟಿಕಾಂಶಗಳಿರುತ್ತವೆ. ಆದ್ದರಿಂದ ನಿಶ್ಯಕ್ತಿಯನ್ನು ಹೋಗಲಾಡಿಸಲು ಇದೊಂದು ಉತ್ತಮ ಆಹಾರ.

ನಿಮಗಿಷ್ಟವಾದುದನ್ನು ತಿನ್ನಿ
ಗರ್ಭಪಾತದ ನಂತರ ನೀವು ನಿಶ್ಯಕ್ತರಾಗಿರುತ್ತೀರಿ. ನಿಮ್ಮ ಮನಸ್ಸಿಗೆ ಬೇಕೆನಿಸಿದ್ದು ನಾಲಿಗೆಗೆ ರುಚಿಸಿದ್ದನ್ನು ನೀವು ತಿನ್ನಬಹುದು. ಆಲೂಗಡ್ಡೆ ಚಿಪ್ಸ್ ಅಥವ ಫ್ರೈಡ್ ಚಿಕನ್ ಯಾವುದು ಬೇಕಾದರೂ ಆಗಬಹುದು. ಇವು ನಿಮ್ಮ ದೇಹಕ್ಕೆ ಪೌಷ್ಟಿಕಾಂಶ ಒದಗಿಸದರೆ ಹೋದರೂ ಕೂಡ ಮನಸ್ಸಿಗೆ ಸಂತೋಷನೀಡುತ್ತದೆ.

English summary

Diet Basics During A Miscarriage

A miscarriage is usually a traumatic experience for a woman. And if the miscarriage takes place at a later stage in pregnancy, it becomes all the more threatening.
Story first published: Friday, December 20, 2013, 12:45 [IST]
X
Desktop Bottom Promotion