For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಒತ್ತಡ ನಿಯಂತ್ರಣ ಕೆಲ ಟಿಪ್ಸ್

|

ಗರ್ಭಾವಸ್ಥೆಯ ಅವಧಿಯಲ್ಲಿ ಹೆಂಗಸರು ಎದುರಿಸುವ ಸಾಮಾನ್ಯ ಸಮಸ್ಯೆಯೆಂದರೆ ಒತ್ತಡ. ಗರ್ಭಿಣಿಯರು ಒತ್ತಡವುಂಟುಮಾಡುವ ಕೆಲಸಗಳನ್ನು ಮಾಡಬಾರದು. ಒತ್ತಡದಿಂದ ಭ್ರೂಣಕ್ಕೆ ತೊಂದರೆಗಳಾಗಬಹುದು. ಒತ್ತಡದಿಂದಾಗಿ ಮಗು ಹುಟ್ಟುವಾಗಲೇ ಆರೋಗ್ಯದ ಸಮಸ್ಯೆಗಳೊಂದಿಗೆ ಹುಟ್ಟಬಹುದು.

ಗರ್ಭಿಣಿಯಾಗಿದ್ದಾಗ ಮನಸ್ಸನ್ನು ಯಾವಾಗಲೂ ಶಾಂತವಾಗಿರಿಸಿಕೊಳ್ಳಬೇಕು. ತನ್ನ ಸುತ್ತಲು ನಡೆಯುವ ಅನಾವಶ್ಯಕವಾದ ಸಂಗತಿಗಳಿಗೆ ತಲೆಕೆಡಿಸಿಕೊಂಡು ಒತ್ತಡ ಮಾಡಿಕೊಳ್ಳುವುದರಿಂದ ಮಗುವಿನ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತದೆ. ಇದು ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಪರಿಣಿತರ ಪ್ರಕಾರ ಗರ್ಭಿಣಿಯರು ಒತ್ತಡಕ್ಕೆ ಒಳಗಾದರೆ ರಕ್ತದೊತ್ತಡ ಹೆಚ್ಚಿ ಹೃದಯ ಬಡಿತ ಜೋರಾಗುತ್ತದೆ ಮತ್ತು ಇದರಿಂದ ಗರ್ಭಕೋಶದೊಳಗಿರುವ ಮಗುವಿಗೆ ಉಸಿರಾಟವೇ ಕಷ್ಟವಾಗುತ್ತದೆ. ಗರ್ಭಿಣಿಯರು ಒತ್ತಡವನ್ನು ನಿಯಂತ್ರಿಸಲು ಮೊದಲು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ನೀವು ಒಂದು ವೇಳೆ ಕಛೇರಿಯಲ್ಲಿ ಅಥವ ಮನೆಯಲ್ಲಿ ಒತ್ತಡಕ್ಕೆ ಒಳಗಾಗುತ್ತಿದ್ದರೆ ಅದನ್ನು ನಿಯಂತ್ರಿಸುವುದನ್ನು ಕಲಿಯಬೇಕು.

ಆದ್ದರಿಂದ ಬೋಲ್ಡ್ ಸ್ಕೈ ನಿಮ್ಮ ಅನುಕೂಲಕ್ಕಾಗಿ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುವಂತಹ ಕೆಲವು ದಾರಿಗಳನ್ನು ಇಲ್ಲಿ ಸೂಚಿಸಿದೆ. ಇವು ನೀವು ಗರ್ಭಾವಸ್ಥೆಯನ್ನು ಆರೋಗ್ಯಕರವಾಗಿ ಮತ್ತು ಸುಖವಾಗಿ ಕಳೆಯಲು ನೆರವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಒತ್ತಡವನ್ನು ನಿಯಂತ್ರಿಸಲು ಕೆಲವು ಟಿಪ್ಸ್:

ಸದಾ ನಗುವಿರಲಿ

ಸದಾ ನಗುವಿರಲಿ

ನಗುವು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ಕಳೆಯಲು ಸಹಕಾರಿ. ಸಂತೋಷವಾಗಿರಲು ಮತ್ತು ಆರೋಗ್ಯವಾಗಿರಲು ನಗುತ್ತಿರಿ.

ಯೋಗಾಭ್ಯಾಸ ಮಾಡಿ

ಯೋಗಾಭ್ಯಾಸ ಮಾಡಿ

ಯೋಗ ನಿಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ. ಗರ್ಭಿಣಿಯರ ಆರೋಗ್ಯಕ್ಕಾಗಿಯೇ ಹಲವು ರೀತಿಯ ಆಸನಗಳಿವೆ.

ಸ್ನೇಹಿತರೊಂದಿಗಿರಿ

ಸ್ನೇಹಿತರೊಂದಿಗಿರಿ

ನೀವು ಗರ್ಭಿಣಿಯರಾಗಿದ್ದಾಗ ನಿಮ್ಮ ಸ್ನೇಹಿತರೊಂದಿಗೆ ಇರಿ. ಅವರು ನಿಮ್ಮಲ್ಲಿ ಧನಾತ್ಮಕ ಮನೋಭಾವವನ್ನು ಉದ್ದೀಪಿಸುತ್ತಾರೆ. ಇದು ನಿಮಗೆ ಒತ್ತಡವನ್ನು ನಿಯಂತ್ರಿಸಿಕೊಳ್ಳಲು ನೆರವು ನೀಡುತ್ತದೆ.

ಪುಸ್ತಕ ಓದಿ

ಪುಸ್ತಕ ಓದಿ

ಬೋರಾಗುವಂತಹ ಪುಸ್ತಕಗಳನ್ನು ದೂರವಿಟ್ಟು ಖುಷಿ ನೀಡುವಂತಹ ಪುಸ್ತಕಗಳನ್ನು ಓದಿ. ಇದರಿಂದ ನಿಮ್ಮಲ್ಲಿ ಖುಷಿಯಾಗುವಂತಹ ಆಲೋಚನೆಗಳು ಉದ್ದೀಪನಗೊಳ್ಳುತ್ತದೆ ಮತ್ತು ಇದರಿಂದ ನೀವು ಒತ್ತಡದಿಂದ ಮುಕ್ತರಾಗಿ ಖುಷಿಯಾಗಿರುತ್ತೀರಿ.

ಡೇಟಿಂಗ್ ಗೆ ಹೋಗಿಬನ್ನಿ

ಡೇಟಿಂಗ್ ಗೆ ಹೋಗಿಬನ್ನಿ

ಡೇಟಿಂಗ್ ನಿಮ್ಮ ಮೂಡನ್ನು ಬದಲಾಯಿಸಲು ಸಹಕಾರಿ. ನಿಮ್ಮ ಪ್ರಪಂಚದ ಇಬ್ಬರು ಮುಖ್ಯವ್ಯಕ್ತಿಗಳಾದ ಗಂಡ ಮತ್ತು ಮಗುವಿನೊಂದಿಗಿರುವುದರಿಂದ ನಿಮ್ಮ ಸಂತೋಷ ಇಮ್ಮಡಿಗೊಳ್ಳುತ್ತದೆ.

ಶಾಪಿಂಗ್ ಮಾಡಿ

ಶಾಪಿಂಗ್ ಮಾಡಿ

ನಿಮ್ಮಿಷ್ಟ ಬಂದಂತೆ ಶಾಪಿಂಗ್ ಮಾಡಿ. ನಿಮಗೆ ಮತ್ತು ಬರಲಿರುವ ಮಗುವಿಗೆ ಬೇಕಾದುದನ್ನು ಖರೀದಿಸಿ. ಇದು ಕೂಡ ಒತ್ತಡ ನಿಯಂತ್ರಣಕ್ಕೆ ಉತ್ತಮ ದಾರಿ.

ನಿಮ್ಮನ್ನು ನೀವೆ ಮುದ್ದು ಮಾಡಿ

ನಿಮ್ಮನ್ನು ನೀವೆ ಮುದ್ದು ಮಾಡಿ

ಮುದ್ದು ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಗಂಡನಿಗೆ ನಿಮ್ಮನ್ನು ಮುದ್ದು ಮಾಡಲು ತಿಳಿಸಿ.

ನಿಮಗೆ ಬೇಕಾದುದನ್ನು ತಿನ್ನಿ

ನಿಮಗೆ ಬೇಕಾದುದನ್ನು ತಿನ್ನಿ

ನಿಮಗೆ ಏನಾದರೂ ತಿನ್ನಬೇಕೆಂದು ಬಯಕೆಯಿದ್ದರೆ ಖಂಡಿತ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಿ. ಆದರೆ ಆರೋಗ್ಯಕರವಾದುದರ ಕಡೆ ಗಮನವಿರಲಿ. ನಿಮ್ಮ ಬಯಕೆಗಳ ಕಡೆ ಗಮನ ನೀಡಿದರೆ ಒತ್ತಡ ತಾನೇ ತಾನಾಗಿ ಹೊರಟು ಹೋಗುತ್ತದೆ.

ಮಸಾಜ್ ಮಾಡಿಸಿಕೊಳ್ಳಿ

ಮಸಾಜ್ ಮಾಡಿಸಿಕೊಳ್ಳಿ

ಮಸಾಜ್ ನಿಮ್ಮ ಒತ್ತಡವನ್ನು ಬಹಳಮಟ್ಟಿಗೆ ಕಡಿಮೆಗೊಳಿಸುತ್ತದೆ. ಇದು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಈಜು

ಈಜು

ಗರ್ಭಾವಸ್ಥೆಯಲ್ಲಿ ನಿಮ್ಮ ಚೈತನ್ಯವನ್ನು ಎತ್ತಿಹಿಡಿಯುವುದರಲ್ಲಿ ಈಜು ಸಹಕಾರಿ.

ಬಾಳೆಹಣ್ಣು

ಬಾಳೆಹಣ್ಣು

ಆರೋಗ್ಯಕರವಾದ ಆಹಾರ ಕ್ರಮ ಯಾವಾಗಲೂ ಒಳ್ಳೆಯದು. ಗರ್ಭಿಣಿಯರಿಗೆ ಒತ್ತಡದ ನಿರ್ವಹಣೆಗೆ ಬಾಳೆಹಣ್ಣು ನೆರವು ನೀಡುತ್ತದೆ. ಇದರಲ್ಲಿ ಪೊಟ್ಯಾಶಿಯಂ ಮತ್ತು ಮ್ಯಾಗ್ನೀಶಿಯಂ ಹೆಚ್ಚಿರುತ್ತದೆ.

ಮಗುವಿನ ಬಗ್ಗೆ ತಿಳಿದುಕೊಳ್ಳಿ

ಮಗುವಿನ ಬಗ್ಗೆ ತಿಳಿದುಕೊಳ್ಳಿ

ಮಗುವಿನ ಬಗೆಗಿನ ಪುಸ್ತಕಗಳನ್ನು ಓದಿ ಅಥವ ಇಂಟರ್ನೆಟ್ ಬಳಸಿ ನಿಮ್ಮೊಳಗೆ ಬೆಳೆಯುತ್ತಿರುವ ಮಗುವಿನ ಬಗ್ಗೆ ತಿಳಿದುಕೊಳ್ಳಿ.

ಮನೆಯನ್ನು ಮರು ಅಲಂಕರಿಸಿ

ಮನೆಯನ್ನು ಮರು ಅಲಂಕರಿಸಿ

ಮನೆಯನ್ನು ಬರಲಿರುವ ಹೊಸ ಅತಿಥಿಗಾಗಿ ಮರು ಸಿಂಗರಿಸಿ. ಇದು ನಿಮ್ಮ ಮನಸ್ಥಿಯನ್ನು ಧನಾತ್ಮಕವಾಗಿ ಮತ್ತು ಕ್ರಿಯಾಶೀಲವಾಗಿಡುತ್ತದೆ.

ಮಗುವಿನೊಂದಿಗೆ ಸಂಬಂಧ ಬೆಳೆಸಿಕೊಳ್ಳಿ

ಮಗುವಿನೊಂದಿಗೆ ಸಂಬಂಧ ಬೆಳೆಸಿಕೊಳ್ಳಿ

ಮಗುವಿನ ಜೊತೆ ಸಂಬಂಧ ಬೆಳೆಸಿಕೊಳ್ಳುವುದು ಒತ್ತಡ ನಿರ್ವಹಣೆಗೆ ಸಹಕಾರಿ. ಇದರಿಂದ ನೀವು ನಿಮ್ಮ ಮಗುವಿನೊಂದಿಗೆ ವಿಶೇಷವಾದ ಅನುಬಂಧ ಬೆಳೆಸಿಕೊಳ್ಳಲು ನೆರವಾಗುತ್ತದೆ.

ಒಳ್ಳೆಯ ಆಹಾರ ಸೇವಿಸಿ

ಒಳ್ಳೆಯ ಆಹಾರ ಸೇವಿಸಿ

ಒಳ್ಳೆಯ ಆಹಾರದಿಂದ ನಿಮ್ಮ ಮನಸ್ಥಿತಿ ಉತ್ತಮಗೊಳ್ಳುವುದು. ಈ ಸಮಯದಲ್ಲಿ ನೀವು ಏನನ್ನು ಇಷ್ಟಪಡುವಿರೋ ಅದನ್ನು ಖುಷಿಯಿಂದ ತಿನ್ನಿ.

ಫಿಲ್ಮಂ ನೋಡಿ

ಫಿಲ್ಮಂ ನೋಡಿ

ನಿಮ್ಮ ಸಂಗಾತಿಯೊಂದಿಗೆ ಚೆಂದದ ರೊಮ್ಯಾಂಟಿಕ್ ಫಿಲ್ಮ ನೋಡಿ. ಇದು ನಿಮ್ಮಿಬ್ಬರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇದು ನಿಮ್ಮ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.

ಸಾಮಾಜಿಕ ತಾಣಗಳಲ್ಲಿ ತೊಡಗಿಸಿಕೊಳ್ಳಿ

ಸಾಮಾಜಿಕ ತಾಣಗಳಲ್ಲಿ ತೊಡಗಿಸಿಕೊಳ್ಳಿ

ಸಾಮಾಜಿಕ ತಾಣಗಳು ನಿಮ್ಮ ಸಮಯವನ್ನು ಕಳೆಯಲು ಉತ್ತಮ ಮಾರ್ಗ. ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಇದು ನಿಮಗೆ ಹೆಚ್ಚಿನ ರೀತಿಯಲ್ಲಿ ನೆರವು ನೀಡುತ್ತದೆ.

ಕ್ಲಬ್ಬುಗಳಿಗೆ ಹೋಗಿಬನ್ನಿ

ಕ್ಲಬ್ಬುಗಳಿಗೆ ಹೋಗಿಬನ್ನಿ

ನಿಮ್ಮ ಗಂಡನೊಂದಿಗೆ ಕ್ಲಬ್ಬುಗಳಿಗೆ ಹೋಗಿಬನ್ನಿ. ಇದು ಕೂಡ ಒತ್ತಡ ನಿಯಂತ್ರಣಕ್ಕೆ ಸಹಕಾರಿ.

ಧನಾತ್ಮಕವಾಗಿ ಯೋಚಿಸಿ

ಧನಾತ್ಮಕವಾಗಿ ಯೋಚಿಸಿ

ಧನಾತ್ಮಕವಾಗಿ ಇರುವುದರಿಂದ ಮತ್ತು ಧನಾತ್ಮಕವಾಗಿ ಯೋಚಿಸುವುದರಿಂದ ನಿಮ್ಮ ಸುತ್ತಲ ವಾತಾವರಣವನ್ನು ನೀವು ಪ್ರಭಾವಿಸುತ್ತೀರಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಪ್ರೀತಿ ಮಾಡಿ

ಪ್ರೀತಿ ಮಾಡಿ

ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಇದು ಕೂಡ ನಿಮ್ಮ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.

English summary

Control Stress During Pregnancy: Tips

One of the most common problems women go through during pregnancy is stress. Women who are pregnancy should at any cost avoid doing the things which makes them stressed.
Story first published: Thursday, December 12, 2013, 10:08 [IST]
X
Desktop Bottom Promotion