For Quick Alerts
ALLOW NOTIFICATIONS  
For Daily Alerts

ಪ್ರೀತಿಯ ಭಾವನೆಗಳನ್ನು ಕೆರಳಿಸುವ ಆಹಾರಗಳು

By Super
|

ಕ್ಯಾಸನೋವ, ಕ್ಲಿಯೋಪಾತ್ರ ಮತ್ತು ಕಾದಂಬರಿಕಾರ ಅಲೆಗ್ಸಾಂಡರ್ ದುಮಾಸ್ನ ನಡುವಿನ ಸಾಮ್ಯತೆ ಏನು ಗೊತ್ತೆ? ಅವರೆಲ್ಲರೂ ತಮ್ಮ ಲೈಂಗಿಕಾಸಕ್ತಿ ಮತ್ತು ಲೈಂಗಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ನೈಸರ್ಗಿಕ ಕಾಮೋತ್ತೇಜಕಗಳನ್ನು ಬಳಸುತ್ತಿದ್ದರು. ಪುರಾತನ ಕಾಲದಿಂದಲೂ ವಿವಿಧ ರೀತಿಯ ಆಹಾರಗಳನ್ನು ಫಲವಂತಿಕೆ ಮತ್ತು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಳಸಲಾಗುತ್ತದೆ. ಆಫ್ರೋಡಿಸಿಯಾಕ್ ಎನ್ನುವುದು ಗ್ರೀಕ್ ಪ್ರೇಮ ದೇವತೆ ಆಫ್ರೋಡೈಟೆ ಎನ್ನುವುದರಿಂದ ಬಂದಿದೆ. ಆಹಾರದ ಆಕಾರ, ರುಚಿ ಮತ್ತು ವಾಸನೆಯನ್ನು ಆಧರಿಸಿ ಅದನ್ನು ಪ್ರೀತಿಗೆ ಸಂಬಂಧಿಸಿದ ಆಹಾರಗಳ ವರ್ಗಕ್ಕೆ ಸೇರಿಸಲಾಗುತ್ತದೆ. ಬಹುಪಾಲು ಇಂತಹ ಆಹಾರಗಳು ಮಾನವ ಜನನಾಂಗದ ಆಕಾರದಲ್ಲಿರುತ್ತವೆ. ಈ ಬಗೆಯ ಆಹಾರ ನೀಡುವ ಸಾಮರ್ಥ್ಯದ ಬಗೆಗೆ ಬಹುದೊಡ್ಡ ಚರ್ಚೆಯಿದೆ.

ಇವುಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವುದು ಇಂದಿಗೂ ಸಂಶಯಾಸ್ಪದವಾಗಿದೆ. ಆದರೆ ಕೆಲವು ನೈಸರ್ಗಿಕ ಅಂಶಗಳು ಮನುಷ್ಯನ ಲೈಂಗಿಕ ಶಕ್ತಿಯನ್ನು ಪ್ರಚೋದಿಸುತ್ತದೆ ಎಂದು ಪುರಾತನ ಕಾಲದಿಂದಲೂ ನಂಬಲಾಗಿದೆ. ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ. ಇದು ನಿಮ್ಮ ಲೈಂಗಿಕ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬಹುದು.

ವೈನ್

ವೈನ್

ವೈನ್ ಕುಡಿಯುವುದು ಪ್ರಚೋದನಕಾರಿ ಪ್ರಕ್ರಿಯೆ. ಇದನ್ನು ಕುಡಿಯುವುದರಿಂದ ವ್ಯಕ್ತಿಗಳು ಹೆಚ್ಚು ರಿಲ್ಯಾಕ್ಸ್ ಆಗುತ್ತಾರೆ. ಪೋರ್ಚುಗಲ್ಲಿನ ಪೋರ್ಟ್ ವೈನ್ ಈ ರೀತಿಯಲ್ಲಿ ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತದೆ. ವೈನ್ ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಕಾಮವನ್ನು ಪ್ರಚೋದಿಸುತ್ತದೆ. ಡಾ,ಶೇಟ್ ಅವರ ಪ್ರಕಾರ " ಇದು ಆಫ್ರೋಡೈಸಿಕ್ ಆಗಲು ಕಾರಣವೆಂದರೆ ಮಹಿಳೆಯರಲ್ಲಿ ಇದು ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಆಕೆ ತನ್ನ ಸಂಗಾತಿಗೆ ಶರಣಾಗುವಂತೆ ಮಾಡುತ್ತದೆ". ಆದರೆ ಒಂದು ಎಚ್ಚರಿಕೆ ಅಗತ್ಯ. ಯಾವುದೇ ಬಗೆಯ ಆಲ್ಕೋಹಾಲ್ ಹೆಚ್ಚಾಗಿ ಸೇವಿಸಿದರೆ ಅದು ನಿಮ್ಮನ್ನು ನಿದ್ರೆಗೆ ತಳ್ಳುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಇದು ಆಕಾರದಿಂದ ಮಾತ್ರವಲ್ಲ ತನ್ನಲ್ಲಿನ ಹಲವು ಲಾಭದಾಯಕ ಗುಣಗಳಿಂದಲೂ ಇದು ಮುಖ್ಯವಾದದ್ದು. ಬಾಳೇಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಮತ್ತು ಪೊಟ್ಯಾಶಿಯಂ ಇದೆ. ವಿಟಮಿನ್ ಬಿ ಮತ್ತು ಪೋಟಾಶಿಯಂ ಎರಡೂ ದೇಹದಲ್ಲಿ ಲೈಂಗಿಕ ಹಾರ್ಮೋನು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಬ್ರೊಮೆಲೈನ್ ಇದ್ದು ಇದು ಟೆಸ್ಟೊಸ್ಟೆರೊನ್ ಹೆಚ್ಚಿಸುತ್ತದೆ. ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಿದ್ದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

ಮೃದ್ವಂಗಿಗಳು

ಮೃದ್ವಂಗಿಗಳು

ಗ್ರೀಕ್ ದೇವತೆ ಆಫ್ರೋಡೈಟೆ ಸಮುದ್ರದಲ್ಲಿ ಒಯ್ಸೆಟರ್ನಿಂದ ಬಂದಿದ್ದು ತನ್ನ ಮಗನಾದ ಎರೋಸ್ಗೆ ಜನ್ಮನೀಡಿದಳಂತೆ. ಅಂದಿನಿಂದ ಇದನ್ನು ಆಫ್ರೋಡೈಸಿಯಾಕ್ ಎಂದು ಹೇಳಲಾಗುತ್ತದೆ. ಅಲ್ಲದೆ ಇದು ಸ್ತ್ರೀ ಜನನಾಂಗದ ಆಕಾರದಲ್ಲಿದೆ. ಆದರೆ ಇದರ ಹಿಂದಿನ ವೈಜ್ಞಾನಿಕ ಕಾರಣವೆಂದರೆ ಇದರಲ್ಲಿ ಜಿಂಕ್ ಪ್ರಮಾಣವು ಅಧಿಕವಾಗಿದೆ. ಟೆಸ್ಟೋಟೆರೇನ್ ಉತ್ಪಾದನೆಗೆ ಇದು ಅತ್ಯಗತ್ಯ. ಅಲ್ಪ ಪ್ರಮಾಣದ ಜಿಂಕ್ ನಿರ್ವೀರ್ಯತೆಗೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಯಾವುದೇ ತೊಂದರೆಯಿಲ್ಲ. ಕ್ಯಾಸನೋವ ಒಂದು ದಿನಕ್ಕೆ 50ಕ್ಕೂ ಹೆಚ್ಚು ಒಯ್ಸಟರ್ಗಳನ್ನು ತಿನ್ನುತ್ತಿದ್ದನಂತೆ. ಇದರ ಪರಿಣಾಮಗಳು ನಮಗೆ ತಿಳಿದೇ ಇದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಇರುವ ಅಲೈಸಿನ್ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಜನನಾಂಗಗಳಲ್ಲಿ ಸೂಕ್ತ ರೀತಿಯಲ್ಲಿ ರಕ್ತ ಪರಿಚಲನೆ ಇದ್ದಲ್ಲಿ ಜನನಾಂಗ ಉದ್ರೇಕಗೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಅಧ್ಯಯನಗಳ ಪ್ರಕಾರ ಈ ಉದ್ರೇಕಕ್ಕೆ ಕಾರಣವಾಗುವ ನೈಟ್ರಿಕ್ ಆಕ್ಸೈಡ್ ಅನ್ನು ಇದು ಉತ್ಪಾದಿಸುತ್ತದೆ. ಗಂಡಸಿನ ಹೃದಯಕ್ಕೆ ದಾರಿ ಹೊಟ್ಟೆಯ ಮೂಲಕ ಎಂದು ಹೇಳುತ್ತಾರೆ. ಆದ್ದರಿಂದ ಮುಂದಿನ ಸಾರಿ ನೀವು ಅಡುಗೆ ಮಾಡಿದಾಗ ಬೆಳ್ಳುಳ್ಳಿಯನ್ನು ಸ್ವಲ್ಪ ಹೆಚ್ಚಿಗೆ ಬಳಸಿ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಇದು ಹೆಣ್ಣು ಮತ್ತು ಗಂಡು ಇಬ್ಬರ ಲೈಂಗಿಕತೆಗೆ ಸಂಬಂಧಿಸಿದ ಹಣ್ಣು. ಇದು ನೋಡಲು ಹೆಣ್ಣಿನ ಜನನಾಂಗದ ಆಕಾರದಲ್ಲಿದ್ದರೂ ಕೂಡ ಮರದಲ್ಲಿ ನೇತಾಡುವಾಗ ಗಂಡಿನ ಅಂಗವನ್ನು ಹೋಲುತ್ತದೆ ಎಂದು ಹೇಳುತ್ತಾರೆ. ಅಜ್ಟೆಕ್ಸ್ರು ಅವಕ್ಯಾಡೋ ಮರವನ್ನು ಟೆಸ್ಟಿಕಲ್ ಮರವೆಂದೇ ಕರೆಯುತ್ತಾರೆ. ಇದರಲ್ಲಿ ಕ್ಯಾರೋಟಿನ್, ಮೆಗ್ನೀಷಿಯಂ, ವಿಟಮಿನ್ ಇ, ಪೋಟ್ಯಾಶಿಯಂ ಮತ್ತು ಪ್ರೋಟೀನ್ ಗಳು ಹೆಚ್ಚಿದ್ದು ಇವು ನಿಮ್ಮ ಲೈಂಗಿಕಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಫಿಗ್(ಅಂಜೂರ)

ಫಿಗ್(ಅಂಜೂರ)

ಇದನ್ನು ಉದ್ದವಾಗಿ ಕತ್ತರಿಸಿದಾಗ ಇದು ಸ್ತ್ರೀ ಜನನಾಂಗವನ್ನು ಹೋಲುತ್ತದೆ. ಹಿಂದಿನಿಂದಲೂ ಇದು ಫಲವಂತಿಕೆಯೊಂದಿಗೆ ಗುರುತಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಎ, ಬಿ1, ಬಿ2, ಕ್ಯಾಲ್ಸಿಯಂ, ಐರನ್, ಫಾಸ್ಫರಸ್, ಮ್ಯಾಂಗನೀಸ್ ಮತ್ತು ಪೋಟ್ಯಾಶಿಯಂ ಇದೆ. ಇವು ಲೈಂಗಿಕ ನಿಶ್ಯಕ್ತಿಯನ್ನು ತಗ್ಗಿಸುತ್ತದೆ. ಇದು ಕ್ಲಿಯೋಪಾತ್ರಳ ಅಚ್ಚುಮೆಚ್ಚಿನ ಹಣ್ಣಾಗಿದ್ದರಲ್ಲಿ ಅಚ್ಚರಿಯಿಲ್ಲ.

ಆ್ಯಸ್ಪರಾಗಸ್

ಆ್ಯಸ್ಪರಾಗಸ್

19ನೇ ಶತಮಾನದಲ್ಲಿ ಫ್ರಾನ್ಸನಲ್ಲಿ ಮದುವೆಯ ಮುನ್ನಾ ದಿನ ವರನಿಗೆ ಮೂರು ಹೊತ್ತು ಇದನ್ನು ನೀಡಲಾಗುತ್ತಿತಂತೆ. ಇದರಲ್ಲಿ ಪೋಟ್ಯಾಶಿಯಂ, ವಿಟಮಿನ್ ಬಿ6, ಎ, ಸಿ, ತೈಯಮಿನ್ ಮತ್ತು ಫೋಲಿಕ್ ಆ್ಯಸಿಡ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಫೋಲಿಕ್ ಆ್ಯಸಿಡ್ ಹಿಸ್ಟಮೈನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗಂಡು, ಹೆಣ್ಣಿನ ಲೈಂಗಿಕ ತೃಪ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಹುಟ್ಟಿನ ಅಂಗವೈಕಲ್ಯವನ್ನು ತಗ್ಗಿಸಲು ಸಹ ನೆರವಾಗುತ್ತದೆ. ಆದ್ದರಿಂದ ಇದು ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯ ಆಹಾರ. ಇದು ರಕ್ತ ಪರಿಚಲನೆಯನ್ನು ಸಹ ಹೆಚ್ಚು ಮಾಡುತ್ತದೆ.

ಚಾಕಲೇಟ್

ಚಾಕಲೇಟ್

ಇದನ್ನು ‘ದೇವತೆಗಳ ಆಹಾರ' ಎಂದು ಕರೆಯಲಾಗುತ್ತದೆ. ಇದು ಪ್ರೀತಿಯೊಂದಿಗೆ ಯಾವಾಗಲೂ ಸಂಬಂಧ ಹೊಂದಿದೆ. ಚಾಕಲೇಟಿನಲ್ಲಿರುವ ಫೆನೈಲೆತೈಲಮೈನ್ ಮತ್ತು ಸೆರೋಟೋನಿನ್ ನಮ್ಮ ಮೆದುಳಿನಲ್ಲಿ ಸಹ ಇರುತ್ತದೆ. ಇದು ನಮ್ಮಲ್ಲಿನ ಶಕ್ತಿ ಹಾಗೂ ಉತ್ಸಾಹದ ಮಟ್ಟವನ್ನು ಹೆಚ್ಚಿಸುತ್ತದೆ. ಚಾಕೊಲೇಟ್ ತಿಂದಾಗ ನಮ್ಮ ಮೂಡ್ ಸಹಜವಾಗಿ ಉಲ್ಲಸಿತವಾಗಿ ಹೆಚ್ಚಾಗುತ್ತದೆ. ಇದು ಲೈಂಗಿಕ ತೃಪ್ತಿಯ ಮಟ್ಟ ತಲುಪಲು ನೆರವಾಗುತ್ತದೆ.

ತುಳಸಿ

ತುಳಸಿ

ತುಳಸಿ ಲೈಂಗಿಕ ಆಸಕ್ತಿ ಮತ್ತು ಫಲವಂತಿಕೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಇದರಲ್ಲಿ ಮೆಗ್ನಿಶಿಯಂ, ಐರನ್, ವಿಟಮಿನ್ ಎ,ಸಿ ಮತ್ತು ಕೆ ಇದೆ. ಇದು ರಕ್ತ ನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದರಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ. ತುಳಸಿ ಎಲ್ಲ ಬಗೆಯ ತಲೆನೋವುಗಳನ್ನು ವಾಸಿ ಮಾಡುತ್ತದೆ. ಆದ್ದರಿಂದ ಬೆಸಿಲ್ನ ಬಳಕೆ ಒಳ್ಳೆಯದು ಮುಂದಿನ ಸಾರಿ ಇದರ ಬಳಕೆ ಮಾಡುವುದನ್ನು ಮರೆಯದಿರಿ.

ಮೆಣಸಿನಕಾಯಿ

ಮೆಣಸಿನಕಾಯಿ

ಮೆಣಸಿನಕಾಯಿಯಲ್ಲಿನ ‘ಹಾಟ್' ಗುಣದಿಂದಾಗಿ ಇದನ್ನು ಆಫ್ರೋಡೈಸಿಯಾಕ್ ಎಂದು ಗುರುತಿಸಲಾಗುತ್ತದೆ. ಮೆಣಸು ಮತ್ತು ಕೆಂಪು ಮೆಣಸಿನಕಾಯಿಗಳು ಇದರಲ್ಲಿ ಮುಖ್ಯವಾದದ್ದು. ಇದರಲ್ಲಿ ಕ್ಯಾಸೈಸಿನ್ ಇದ್ದು ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಹೃದಯ ಬಡಿತವನ್ನು ಹೆಚ್ಚಿಸುತ್ತದೆ, ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ಬೆವರನ್ನು ಉತ್ಪಾದಿಸುತ್ತದೆ. ಈ ಎಲ್ಲ ಲಕ್ಷಣಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಕಾಣಿಸಿಕೊಳ್ಳುವುದರಿಂದ ಇದನ್ನು ಆಫ್ರೋಡೈಸಿಕ್ ಎಂದು ಕರೆಯಲಾಗುತ್ತದೆ. ಇದು ಎಂಡೊರ್ಫಿನ್ಸ್ನ ಬಿಡುಗಡೆಗೊಳಿಸುತ್ತದೆ ಮತ್ತು ನರಗಳನ್ನು ಪ್ರಚೋದಿಸುವ ಮೂಲಕ ನಾಡಿ ಬಡಿತವನ್ನು ಹೆಚ್ಚಿಸಿ ದೇಹವನ್ನು ಸೂಕ್ಷ್ಮಗೊಳಿಸುತ್ತದೆ.

ಯಾವುದನ್ನಾದರೂ ಆಫ್ರೋಡೈಸಿಯಾಕ್ ಎಂದು ನಂಬುವುದರಿಂದಲೇ ವ್ಯಕ್ತಿಯಲ್ಲಿ ಲೈಂಗಿಕಾಸಕ್ತಿ ತೀವ್ರವಾಗುತ್ತದೆ ಮತ್ತು ಆತನಲ್ಲಿ ಕಾಮಾಸಕ್ತಿ ಹೆಚ್ಚಿ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಮರ್ಥವಾಗಿ ತೊಡಗಿಸಿಕೊಳ್ಳುತ್ತಾನೆ ಎಂದು ನಂಬಲಾಗುತ್ತದೆ. ಈ ಆಹಾರಗಳನ್ನು ಬಳಸುವುದರಿಂದ ಯಾವುದೇ ತೊಂದರೆಗಳಿಲ್ಲ. ಆದರೆ ನೆನಪಿರಲಿ ಅತಿಯಾದರೆ ಅಮೃತವೂ ವಿಷವಾಗುತ್ತದೆ.

English summary

10 foods that seduce

Since time immemorial a variety of food has been associated with increasing fertility and sexual appetite.here is a list of such foods that may help in bringing a positive change in your sex life.
X
Desktop Bottom Promotion