For Quick Alerts
ALLOW NOTIFICATIONS  
For Daily Alerts

ಮಿದುಳಿನ ಮೇಲೆ ಗರ್ಭನಿರೋಧಕ ಮಾತ್ರೆಯ ಪ್ರಭಾವ

|

ಮಕ್ಕಳು ಬೇಡವೆಂದು ತೀರ್ಮಾನಿಸುವವರು ಸಾಮಾನ್ಯವಾಗಿ ಸಂತಾನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಾ ಅಥವಾ ಕೆಟ್ಟದಾ ಅನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬರುತ್ತವೆ.

ಗರ್ಭ ನಿರೋಧಕ ಮಾತ್ರೆಗಳನ್ನು ತೆಗದುಕೊಳ್ಳುವುದರಿಂದ ಅಡ್ಡ ಪರಿಣಾಮ ಉಂಟಾಗಬಹುದೆಂಬ ಅನೇಕ ಲೇಖನಗಳನ್ನು ಬೋಲ್ಡ್ ಸ್ಕೈ ಕೂಡ ಪ್ರಕಟಿಸಿದೆ. ಆದರೆ ಇದೀಗ ಗರ್ಭ ನಿರೋಧಕ ಮಾತ್ರೆಗನ್ನು ತೆಗೆದುಕೊಂಡರೆ ಮೆದುಳಿ ಸಾಮರ್ಥದಲ್ಲಿ ವ್ಯತ್ಯಾಸ ಕಂಡು ಬರುತ್ತದೆ ಎನ್ನುವುದು ಕೇಳಿಬರುತ್ತದೆ. ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿಯೋಣ:

Birth Control Pills Can Change Memory

ಈಗ ಬರುತ್ತಿರುವ ಗರ್ಭ ನಿರೋಧಕ ಮಾತ್ರೆಗಳನ್ನು progesterones ಎಂಬ ಅಂಶ ಬಳಸಿ ತಯಾರಿಸುವುದರಿಂದ ದೇಹದ ತೂಕ ಹೆಚ್ಚಾಗುವುದು, ಗರ್ಭ ಕೋಶಕ್ಕೆ ಹಾನಿ ಉಂಟಾಗುವುದು ಈ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಆದರೆ ಈ ಪಿಲ್ಸ್ ಮಿದುಳಿನ ಸಾಮರ್ಥ್ಯವನ್ನು ಬದಲಾಯಿಸುತ್ತದೆ ಅನ್ನುವುದು ಇದರ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಮಿದುಳಿನ ವಿಧ:
ಮಿದುಳಿನಲ್ಲಿ 2 ವಿಧ. 1. ಲಾಜಿಕ್ ಮೆದುಳು 2. ಎಮೋಷನಲ್ ಮೆದುಳು (ಭಾವನಾತ್ಮಕ ಮೆದುಳು). ಇದರಲ್ಲಿ ಲಾಜಿಕ್ ಮೆದುಳು ವಾಸ್ತವಾಂಶವನ್ನು ನೆನೆಪಿಸುತ್ತದೆ, ಇದು ಮಿದುಳಿನ ಬಲಭಾಗದಲ್ಲಿರುತ್ತದೆ. ಆದರೆ ನಡೆದ ವಿಷಯಗಳನ್ನು ನೆನೆಪಿಸುವ ಕೆಲಸವನ್ನು ಎಡ ಭಾಗದ ಮೆದುಳು ಮಾಡುತ್ತದೆ. ಮಿದಳಿನ ಬಗ್ಗೆ ವಿಜ್ಞಾನಿಗಳು ನಡೆಸಿದ ಅಧ್ಯಯನವು ಪುರುಷರು ಎಮೋಷನ್ ವಿಷಯಕ್ಕಿಂತ ವಾಸ್ತವ ವಿಷಯಗಳಿಗೆ ಹೆಚ್ಚು ಗಮನ ಕೊಡುತ್ತಾರೆ ಎಂದು ಹೇಳಿದೆ.

ಗರ್ಭ ನಿರೋಧಕ ಮಾತ್ರೆ ಯಾರ ಮಿದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ?
ಗರ್ಭ ನಿರೋಧಕ ಮಾತ್ರೆಗಳು ಮಹಿಳೆಯ ಮಿದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅವಳು ಎಮೋಷನ್ ಕ್ಕಿಂತ ಲಾಜಿಕ್ ಬಗ್ಗೆ ಹೆಚ್ಚು ಗಮನಕೊಡಲಾರಂಭಿಸುತ್ತಾಳೆ. ಅವಳು ಪುರುಷರಂತೆ ಯೋಚಿಸಲು ಪ್ರಾರಂಭಿಸುತ್ತಾಳೆ ಎಂದು ಕ್ಯಾಲಿಪೋರ್ನಿಯಾದಲ್ಲಿ ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಏಕೆ ಹೀಗಾಗುತ್ತದೆ?
ಮಹಿಳೆಯರು ಪುರುಷರಿಗಿಂತ ತುಂಬಾ ಭಾವನಾ ಜೀವಿಗಳಾಗಿರುತ್ತಾರೆ. ಆದ್ದರಿಂದ ಮಹಿಳೆಯರು ಸಣ್ಣ-ಪುಟ್ಟ ವಿಷಯಗಳನ್ನು ತುಂಬಾ ನೆನೆಪಿನಲ್ಲಿಟ್ಟು ಕೊಳ್ಳುತ್ತಾರೆ. ಆದರೆ ಪುರುಷರು ಸಣ್ಣ- ಪುಟ್ಟ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ.

ಗರ್ಭಧಾರಣೆಗೆ ತೊಂದರೆ:
ಈ ಮಾತ್ರೆಗಳು ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮುಂದೆ ಗರ್ಭಧಾರಣೆಯಲ್ಲಿ ತೊಂದರೆ ಕಂಡು ಬರಬಹುದು.

English summary

Birth Control Pills Can Change Memory | Birth Control Pills And Pregnancy | ಗರ್ಭ ನಿರೋಧಕ ಮಾತ್ರೆಗಳು ಮಿದುಳಿನ ಸಾಮರ್ಥ್ಯ ಬದಲಾಯಿಸುತ್ತದೆ | ಗರ್ಭ ನಿರೋಧಕ ಮಾತ್ರೆಗಳು ಮತ್ತು ಗರ್ಭಧಾರಣೆ

Contraceptives do not cause harmful impacts like weight gain or damage to the ovaries. But these pills are basically hormones and anything to do with hormones does effect you. It has been proved in a recent research that birth control pills change the course of human memory.
X
Desktop Bottom Promotion