For Quick Alerts
ALLOW NOTIFICATIONS  
For Daily Alerts

ಅಬಾರ್ಷನ್ ಪಿಲ್ಸ್ ದೇಹಕ್ಕೆ ಒಳ್ಳೆಯದೆ ?

By Super
|
Abortion Pills
ಅನೇಕ ದಂಪತಿಗಳು ಬೇಗನೆ ಮಗು ಬೇಡ ಎಂದು ತೀರ್ಮಾನಿಸಿರುವಾಗ ಗರ್ಭಧಾರಣೆ ಆದರೆ ಅದನ್ನು ಗರ್ಭಪಾತವಾಗುವ ಮಾತ್ರೆಗಳನ್ನು ಸೇವಿಸುತ್ತಾರೆ.

ಆದರೆ ಹೀಗೆ ಮಾತ್ರೆಯನ್ನು ಸೇವಿಸುವಾಗ ಅದರ ಒಳಿತು ಕೆಡಕುಗಳ ಬಗ್ಗೆ ತಿಳಿದುಕೊಳ್ಳದೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಅಬಾರ್ಷನ್ ಮಾತ್ರೆ ದೇಹದ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ತಿಳಿದುಕೊಳ್ಳುವುದು ಒಳ್ಳೆಯದು.

1. ಮಿಫೆಪ್ರಿಸ್ಟೋನ್ ಮತ್ತು ಮಿಸೊಪ್ರೋಸ್ಟಲ್ ಅಂಶವಿರುವ ಮಾತ್ರೆಯನ್ನು ಗರ್ಭ ಧರಿಸಿದ 9 ವಾರಗಳ ಒಳಗೆ ಸೇವಿಸಿದರೆ ಗರ್ಭಪಾತವಾಗುವುದು.

2. ಆದರೆ ಮಧುಮೇಹ, ರಕ್ತದೊತ್ತಡ ಮತ್ತು ಅಸ್ತಮಾ ರೋಗಿಗಳು ಇಂತಹ ಮಾತ್ರೆಗಳನ್ನು ಸೇವಿಸಬಾರದು.

3. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ರೀತಿಯ ಮಾತ್ರೆಯು ಇತರ ಗರ್ಭಪಾತದ ದಾರಿಗಳಿಗಿಂತ ಸುರಕ್ಷಿತವಾದದು. ಇದರಿಂದಾಗಿ ಸತ್ತವರ ಸಂಖ್ಯೆ ಇತರ ಗರ್ಭಪಾತದ ವಿಧಾನಗಳಿಂದ ಸತ್ತವರ ಸಂಖ್ಯೆಗಿಂತ ಕಡಿಮೆ ಇದೆ.

4. ಈ ಮಾತ್ರೆಯ್ನು ಸೇವಿಸಿದ ಬಳಿಕ ವಿಪರೀತ ರಕ್ತಪಾತವಾಗುವುದರಿಂದ ಸೋಂಕುವಾಗು ಸಾಧ್ಯತೆ ಹೆಚ್ಚು.

5. ಈ ರೀತಿ ಮಾತ್ರೆಯನ್ನು ತೆಗೆದುಕೊಂಡರೆ ಸಹಿಸಲು ಅಸಾಧ್ಯವಾದ ನೋವು ಉಂಟಾಗಿ ಇದರಿಂದ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ವೈದ್ಯರನ್ನು ಸಂಪರ್ಕಿಸದಿದ್ದರೆ ಸಾವು ಕೂಡ ಸಂಭವಿಸಬಹುದು.

6. ಏಡ್ಸ್, ಹೃದ್ರೋಗಿಗಳು, ಧೂಮಪಾನ ಮಾಡುವರು ಮತ್ತು ಇತರ ತೀವ್ರವಾದ ಕಾಯಿಲೆಯಿಂದ ಬಳಲುವರು ಈ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

7. ಈ ರೀತಿ ಮಾತ್ರೆ ಸೇವಿಸಿದರೆ ಮುಂದಕ್ಕೆ ಗರ್ಭಧಾರಣೆಯಾಗುವಾಗ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಕೆಲವೊಮ್ಮೆ ಮುಂದಕ್ಕೆ ಮಕ್ಕಳನ್ನು ಪಡೆಯುವ ಭಾಗ್ಯವನ್ನು ಸಹ ಕಳೆದು ಕೊಳ್ಳಬೇಕಾಗುತ್ತದೆ.

English summary

Effect Of Abortion Pills | Health Risky From Abortion Pills | ಗರ್ಭಪಾತ ಮಾತ್ರೆಯಿಂದ ಆಗುವ ಪರಿಣಾಮ | ಗರ್ಭಪಾತ ಮಾತ್ರೆಯಿಂದ ದೇಹಕ್ಕೆ ಆಗುವ ತೊಂದರೆಗಳು

Many women who suffer from unplanned pregnancy always try to go for easier options to get rid of the problem. They think taking of abortion pills but are totally unaware of the pros and cons of the pill effects.Take a look.
Story first published: Wednesday, January 18, 2012, 13:42 [IST]
X
Desktop Bottom Promotion